ಡಾ ಪ್ರತೀಭಾ ಕಾಗೆ
ಬಣ್ಣಗಳ ಭಾವ
ಬಣ್ಣಗಳೆಷ್ಟೊ ಕುಂಚದಿ
ಮೂಡಿದವು ಹತ್ತು
ಮೂಡಲಾರದವು ಇನ್ನು
ಮತ್ತೆಷ್ಟೊ ಇಹವು
ಕಡುಕೆಂಪು ಬಣ್ಣ
ಅತಿಗಾಢವೆಂದೆನಿಸಿತೋ

ಮೂಡಿಸಿತು ಕಲೆಗಳ
ಮಾಸದ ಗಾಯಗಳ
ಮೂಡಿಸಿತ್ತು.
ಕಪ್ಪು ಬಣ್ಣವೇಕೊ ಇನ್ನು
ಕಪ್ಪಾಗಿಹುದು ಬಿಳಿ
ಬಣ್ಣವ ಸೇರಿದರೂ
ಬಿಳಿಯಾಗದು.
ಗಾಢ ಅಂಧಕಾರವ ತೊರುತಿಹುದು
ತಿಳಿಯಾಗುವ ಭರವಸೆ
ಕಾಣದು.
ಬಿಳಿದಾಗಿಹುದು ಯಾವತ್ತಿಗೂ
ಶುಭ್ರ ,
ಶಾಂತಿಯ ತೋರುತಿಹುದು,
ಸದಾ ಹಸಿರನು ತೋರುವ
ಹಸಿರು ಬಣ್ಣದಲಿ
ಕಾಣುತಿಹುದು ಅಭಿವೃಧ್ಧಿ
ಫಲವತ್ತತೆಯ ಸಾರಿ,ಸಾರಿ
ಹೇಳುತಿಹುದು.






0 Comments