ಪ್ರತಿಭಾ ನಂದಕುಮಾರ್ ಹೊಸ ಕವಿತೆ- ಬುಲ್ಡೋಜರ್ ಬೇಕಾಗಿತ್ತು…

ಪ್ರತಿಭಾ ನಂದಕುಮಾರ್ 

ಐದು ವರ್ಷದ ಹುಡುಗ
ಅಳುತ್ತಾ ಬಂದು ಕೇಳಿದ
ಬುಲ್ಡೋಜರ್ ಬೇಕು
ಅವನು ನನ್ನ ಚಾಕಲೇಟು ಕದ್ದ

ಶಾಕ್ ಮಾಚುತ್ತಾ ಕೇಳಿದೆ
ಅದರ ಬದಲು ಪೊಲೀಸರಿಗೆ
ದೂರು ಕೊಡೋಣವೇ?

ಅವರಪ್ಪ ಪೊಲೀಸು
ಎಂದು ಕೈ ನಿವಾಳಿಸಿದ ಹುಡುಗ

ಮತ್ತೂ ಯತ್ನಿಸುತ್ತಾ ಹೇಳಿದೆ
ಪತ್ರಿಕೆಯಲ್ಲಿ ಬರೆಸೋಣವೇ?

ಸೋರುತ್ತಿದ್ದ ಮೂಗು ಒರೆಸುತ್ತಾ
ಕೆಟ್ಟ ನೋಟ ಬೀರಿ ಮಾತು ಕಕ್ಕಿದ
ಅವರಮ್ಮ ಜರ್ನಲಿಸ್ಟು

ಬಾಯಿ ತೆಗೆಯುವ ಮೊದಲೇ
ಬಂದು ಮಾಡಿಸಿದ
ಅವರಂಕಲ್ ಲಾಯರು

ಕೊನೆಗೆ ಧೈರ್ಯ ತಂದುಕೊಂಡು ಎದ್ದೆ
ನಡಿ ನಾನೇ ಬರುವೆ
ನನ್ನ ಹಿಂದೆ ಬರಲಿಲ್ಲ ಅವನು

ಬುಲ್ಡೋಜರ್ ಅಂಗಡಿ ಆ ಕಡೆಯಿಲ್ಲ
ಈಕಡೆ ಬನ್ನಿ ನಿನ್ನೆ ಪಕ್ಕದ ಮನೆ ಕೆಡವಿದ್ದು
ಇಲ್ಲೇ ನಿಂತಿದೆ. ಕೇಳಿ ಸ್ವಲ್ಪ ಕೊಡಿಸಿ.

ನನಗಿಂತ ಮೊದಲೇ ಹೋಗಿ ತಾನೇ ಕೇಳಿದ
ಸ್ವಲ್ಪ ಬುಲ್ಡೋಜರ್ ಬೇಕಾಗಿತ್ತು
ಡ್ರೈವರ್ ಹೇಳಿದ ಮೀಸೆ ತಿರುವುತ್ತಾ
ಇನ್ನು ಇಲ್ಲೇ ಠಿಕಾಣಿ, ಬೇಕಾದಾಗ ಬಂದು ಕಾಣಿ.

‍ಲೇಖಕರು Admin

April 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: