ಪ್ರಜೋದಯ ಪ್ರಕಾಶನದಿಂದ ಎರಡು ಹೊಸ ಪುಸ್ತಕಗಳು


 

ಪುಸ್ತಕದ ಒಂದು ಅಧ್ಯಾಯ ’ಅವಧಿ’ ಓದುಗರಿಗಾಗಿ :
ನಾವು ರೆಡ್ಡಿಯವರನ್ನು ತೋಟದ ಮನೆಯಲ್ಲಿ ಬಂದ್ ಮಾಡಿ ಬಂದು ಕ್ಯಾಂಪ್ ಸೇರಿದ 2 ದಿನಗಳ ನಂತರ ಚಕ್ರವತರ್ಿಯವರ ಸೂಚನೆ ಮೇರೆಗೆ ಚಿಕ್ಕಮಗಳೂರಿಗೆ ಹೋಗಬೇಕಾಗಿ ಬಂತು. ಅಲ್ಲಿನ ಎಸ್ಪಿ ಆಫೀಸ್ಗೆ ಹೋಗಿ ಫೈಲ್ ಒಂದನ್ನು ತೆಗೆದುಕೊಂಡು ಕಾರ್ಕಳ ಕ್ಯಾಂಪ್ಗೆ ತಲುಪಿಸುವಂತೆ ಹೇಳಿದ್ದರು.
ಹಾಗೆ ಚಿಕ್ಕಮಗಳೂರಿಗೆ ಹೋದ ನನಗೆ ಕುತೂಹಲ ತಡೆಯಲು ಸಾಧ್ಯವಾಗದೆ ರೆಡ್ಡಿಯವರನ್ನು ಕೂಡಿಟ್ಟಿದ್ದ ತೋಟದ ಮನೆಗೆ ಹೋದೆ. ಅಲ್ಲಿ ಕಾವಲಿಗಿದ್ದ ಸಿಬ್ಬಂದಿ ನಾನು ಬರುವ ನಿರೀಕ್ಷೆಯಿಲ್ಲದ್ದರಿಂದ ಬಮರ್ುಡಾ ಹಾಗೂ ಟೀ ಶಟರ್್ ಧರಿಸಿಕೊಂಡು ಕುಳಿತು ಹರಟೆಯಲ್ಲಿ ಲೀನರಾಗಿದ್ದರು. ನನ್ನ ಜೀಪ್ ಸದ್ದು ಕೇಳಿದ ತಕ್ಷಣ ಎದ್ದು ನಿಂತ ರಾದರೂ ಬಟ್ಟೆ ಬದಲಿಸಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ತಲೆ ಬಗ್ಗಿಸಿಕೊಂಡು ನಿಂತಿದ್ದರು. ಔಪಚಾರಿಕವೆಂಬಂತೆ ಅವರ ಸೆಲ್ಯೂಟ್ ಸ್ವೀಕರಿಸಿ, ‘ಏನ್ರಪ್ಪ ಬರೀ ಹರಟೆ ಹೊಡಿತಿದ್ದೀರೋ ಹೆಂಗೆ?’ ಎಂದೆ.
ಯಾರೂ ತಿರುಗಿ ಮಾತನಾಡಲಿಲ್ಲ. ನೇರವಾಗಿ ರೆಡ್ಡಿಯವರನ್ನು ಕೂಡಿ ಹಾಕಿದ್ದ ಕೋಣೆಯ ಬೀಗ ತೆಗಿಸಿ ಒಳಗೆ ಹೋದೆ.
ಹಾಸಿಗೆ ಮೇಲೆ ಮಲಗಿದ್ದ ರೆಡ್ಡಿ ಎದ್ದು ಕುಳಿತರು. ಒಳಗೆ ಸಾಕಷ್ಟು ಬೆಳಕಿತ್ತು.
‘ಗುಡ್ ಮಾರ್ನಿಂಗ್ ಸರ್, ಹೇಗಿದ್ದೀರಿ?’ ಎಂದೆ.
ಮುಖ ಗಂಟು ಹಾಕಿಕೊಂಡ ರೆಡ್ಡಿ, ‘ವಾಟ್ ಆನ್ಸರ್ ಡು ಯು ಎಕ್ಸ್ಪೆಕ್ಟ್ ಆಫೀಸರ್?’ ಎಂದು ಒರಟಾಗಿ ಪ್ರತಿಕ್ರಿಯಿಸಿದರು.
ನನಗೆ ಸಿಟ್ಟು ಬಂದಿತಾದರೂ ತೋರ್ಪಡಿಸಿಕೊಳ್ಳಲಿಲ್ಲ. ‘ಹೋಗ್ಲಿ ಬಿಡಿ, ಹೌ ಕುಡ್ ಯು ಬಿ ಫೈನ್’ ಎಂದು ನಕ್ಕು ಅವರನ್ನು ಹಂಗಿಸಿದೆ.
ಇದಕ್ಕೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ‘ತಿಂಡಿ ತಿಂದ್ರಾ ಸಾರ್…?’ ಎಂದು ಕಾಳಜಿಯಿಂದ ಕೇಳಿದೆ.
‘ನಂದಾಯ್ತು ರೀ ಸಾಹೇಬ್ರ… ನನ್ನ ಯಾವಾಗ ಬಿಡೋರದೀರಿ?’ ಎನ್ನುತ್ತಾ ಎದ್ದು ನಿಂತರು.
‘ನೀವು ಯಾವಾಗ ಹೋಗ್ಬೇಕು ಅನ್ನೋದು ನೀವೇ ಡಿಸೈಡ್ ಮಾಡ್ಬೇಕು.’
‘ನಾನು ಈಗ್ಲಾ ಹೋಕ್ತೇನಿ. ಬಾಗಿಲು ತೆಗಿದು ಬಿಡ್ರೋಪ್ಪಾ.’
‘ಅಂದ್ರೆ ನೀವು ಯಾವಾಗ ನಿಜ ವಿಷಯ ಬಾಯಿ ಬಿಡ್ತೀರೋ ಆವಾಗ ಇಲ್ಲಿಂದ ಹೋಗ್ಬಹುದು ಅಂತ ಅರ್ಥ ಮೇಷ್ಟ್ರೇ.’
‘ಅಯ್ಯೋ ನಾ ಏನ್ ಇತ್ತೋ ಅದನ್ನ ಆವತ್ತಾ ಹೇಳೀನಲ್ಲ?’
‘ಅದು ಪೂರ್ತಿ ಸತ್ಯ ಅಲ್ವಲ್ಲ?’
‘ಅಯ್ಯೋ ಅದೇ ಸತ್ಯಾ… ನೀವ್ ನಂಬೋದಿಲ್ಲ ಅಂದ್ರಾ ನಾ ಮಾಡೊದೇನೈತಿ. ಆತು ಕೂಡಾಕೋರಿ ಸ್ವಾಮಿ, ನಾನು ನೋಡಾ ಬಿಡ್ತೀನಿ. ಅನ್ನ, ನೀರು ನೀಡೋದು ಖರೇ ಐತಿ. ತಿನ್ಕೊಂತಾ ಆರಾಮ್ ಬಿದ್ದಿರ್ತೇನಿ’ ಎನ್ನುತ್ತಾ ರೆಡ್ಡಿ ಹಾಸಿಗೆ ಮೇಲೆ ಮಲಗಿ ತಮ್ಮ ಕಾಲಿನ ಮೇಲೆ ಕಾಲು ಹಾಕಿಕೊಂಡರು.
‘ರೀ ಮೇಷ್ಟ್ರೇ ನಿಮಗೆ ಮರ್ಯಾದೆ ಜಾಸ್ತಿ ಆಯ್ತು. ಮುಕುಳಿ ಮೇಲೆ ಒದ್ರೆ ಬುದ್ಧಿ ಬರುತ್ತೆ. ಏಯ್ ತರ್ರೋ ಇಲ್ಲಿ ಲಾಠಿ ಈ ಬಡ್ಡಿ ಮಗ ಮಲುಕ್ಕೊಂದು ತಿವಾಸ್ ತೋರಿಸ್ತಾನೆ’ ಎಂದು ಅರಚಿದೆ. ಅದನ್ನು ಕೇಳಿಸಿಕೊಂಡ ಪಿಸಿಯೊಬ್ಬರು ಲಾಠಿ ಹಿಡಿದು ಬಂದೇ ಬಿಟ್ಟರು.
ಅಲ್ಲಿವರೆಗೂ ಕಾಲಿನ ಮೇಲೆ ಕಾಲು ಹಾಕಿಕೊಂಡು ನನ್ನನ್ನೇ ಅಣಕಿಸುತ್ತಿದ್ದ ರೆಡ್ಡಿ, ಥಟ್ಟನೆ ಎದ್ದು ಕೈ ಮುಗಿದುಕೊಂಡು ನಿಂತರು. ‘ಅಯ್ಯಾ… ಸರ್, ಹೊಡಿಬ್ಯಾಡ್ರಿ…’ ಎಂದು ಅಂಗಲಾಚಿದರು.
‘ಅಯ್ಯಾ ನಿನ್ಗೆ ಮರ್ಯಾದೆ ಕೊಟ್ರೆ ಉಳಿಸ್ಕೊಳ್ಳೋಕೆ ಬರಲ್ಲ ಈಡಿಯಟ್’ ಎಂದು ಪೊಲೀಸ್ ದರ್ಪ ಮೆರೆದೆ. ರೆಡ್ಡಿ ಸಂಪೂರ್ಣ ಮೆತ್ತಗಾದಂತೆ ಕಾಣಿಸಿತು.
‘ನಮ್ ಸಾಹೇಬ್ರು ಆವತ್ತು ಕೇಳಿದ ಕ್ವಶ್ಚನ್ಗಳಿಗೆ ಸರಿಯಾಗಿ ಆನ್ಸರ್ ಮಾಡಿದ್ರೆ ಯಾವತ್ತೋ ಇಲ್ಲಿಂದ ಕಳುಚ್ಕೋಬೋದಿತ್ತು. ಈವಾಗ ನೋಡಿ ನೀವು ಹೊರೆ ಅಂತ ಅನ್ನಿಸಿದ್ರೆ ಇಲ್ಲೇ ಕಾಡಲ್ಲಿ ಗುಂಡು ತಿಂದು ಬೀಳ್ತೀರಿ. ಹೆಂಗಿದ್ರೂ ಒಂದು ವಾರದಿಂದ ನಾಪತ್ತೆಯಾಗಿದ್ದ ಮೇಷ್ಟ್ರು ನಕ್ಸಲೈಟ್ಸ್ ಜತೆ ಸೇರ್ಕೊಂಡಿದ್ರು ಅಂತ ಕತೆ ಕಟ್ತೀವಿ. ಅಲ್ಲಿಗೆ ದಿ ಎಂಡ್ ಅಷ್ಟೆ’ ಎಂದು ಇನ್ನಷ್ಟು ಹೆದರಿಸಿದೆ.
ಮೊದಲೇ ನಾಲ್ಕೈದು ದಿನದಿಂದ ಏಕಾಂತ ವಾಸ, ಆತಂಕಗಳಿಂದ ನಲುಗಿ ಹೋಗಿದ್ದ ರೆಡ್ಡಿ ಇನ್ನಷ್ಟು ನಡುಗಿದಂತೆ ಕಾಣಿಸಿತು.
‘ಸರಿ ಸಾರ್, ನಾನು ಬರ್ತೀನಿ’ ಎಂದು ರೂಂನ ಬಾಗಿಲು ಕಡೆಗೆ ನಡೆದೆ. ಅಷ್ಟರಲ್ಲಿ ಹಿಂದಿನಿಂದ ಓಡಿ ಬಂದ ರೆಡ್ಡಿ ನನ್ನ ಭುಜ ಹಿಡಿದು ‘ಸರ್ ಒಂದ್ನಿಂಷ’ ಎಂದು ತಡೆದು ನಿಲ್ಲಿಸಿದರು.
‘ನೋಡ್ರಿ ನಾ ಏನೇ ಆಗಿದ್ರೂ ಅದು ಹೊರ ಪ್ರಪಂಚದಾಗೆ ಮಾತ್ರ. ಇಲ್ಲಿ ನಿಮ್ದಾ ಪ್ರಪಂಚ ಅನ್ನೋದು ನಂಗಾ ಗೊತ್ತಿದೆ. ನಾ ಖರೇ ಹೇಳ್ತೀನಿ ಕೇಳ್ರಿ. ನಂಗೂ ನಕ್ಸಲೈಟ್ಸಿಗೂ ಏನೂ ಸಂಬಂಧ ಇಲ್ರಿ. ಅಂವ ಮೂರ್ತಿ ಜೈಲಾಗಿದ್ದಾನಲ್ಲ, ಅಂವ ನನ್ ಶಿಷ್ಯಾ ಅದಾನ… ಒಂದೆರಡ್ ಬಾರಿ ನಮ್ಮನಿಗೂ ಬಂದಾನ. ನಾ ಇಲ್ಲಂತ ಹೇಳೋ ಹಂಗಿಲ್ಲ. ಆದ್ರಾ ನಾ ಅವರ್ಜೋಡಿ ಶಾಮೀಲಾಗಿಲ್ರಿ’ ಎಂದು ನನ್ನ ಮನವೊಲಿಸುವ ಧಾಟಿಯಲ್ಲಿ ಮಾತು ಆರಂಭಿಸಿದರು.
‘ನಿಮ್ ಜತೆ ಸಂಬಂಧ ಇಲ್ಲ ಅಂದ್ರೆ ಅವನ್ಯಾಕೆ ನಿಮ್ ಹತ್ರ ಬರ್ತಿದ್ದ?’
‘ಅವ್ನಿಗೆ ನಾ ಕಲಿಸೇನಿ. ಗುರು ಅಂಬೋ ಭಾವದಾಗ ಬಂದಾನ. ಅದಕ್ಕಾ ನನ್ನಾ ನಕ್ಸಲ್ ಅಂದ್ರಾ ಹೆಂಗ್ರಿ? ನೋಡ್ರೀ ಸರ್ ನಾನು ಮಾರ್ಕ್ಸ್ ವಾದನೂ ಹೇಳ್ತೀನಿ, ಮಾವೋ ವಾದನೂ ಹೇಳ್ತೀನಿ ಕ್ಲಾಸ್ನಾಗ. ಅವು ಸೈಂಟಿಫಿಕ್ ಇಸಂ ಅದಾವ. ಸ್ಟೂಡೆಂಟ್ಸ್ ಶ್ಯಾಣ್ಯಾ ಇರ್ತಾರ. ಈವತ್ತು ಎಲೈತ್ರಿ ಈಕ್ವಾಲಿಟಿ. ಎಲ್ಲಿ ನೋಡಿದ್ರೂ ಕರೆಪ್ಷನ್, ಬಡತನ ತಾಂಡವ ಆಡ್ತಾವು. ನೋಡಿ ರೊಚ್ಚಿಗೆದ್ದ ಬಡವರ್ ಮನಿ ಮಕ್ಳಾ ಕಾಡು ಸೇರಿ ಹೋರಾಟ ಶುರು ಹಚ್ಕೊತಾರು. ಅದಕ್ಕಾ ನನ್ನಾ ಯಾಕ್ ಲಿಂಕ್ ಮಾಡೇರಿ?’
‘ಬಡವ್ರು ಮನೆ ಮಕ್ಳು ಅಂತೀರಿ. ಅವರಿಗೆ ಪಾಠ ಮಾಡಿ ರೊಚ್ಚಿಗೆಬ್ಬಿಸ್ತೀರಿ. ಇಸಂ ಸೈಂಟಿಫಿಕ್ ಅಂತೀರಿ. ನೀವ್ಯಾಕೆ ಮತ್ತೆ ಗೌಮರ್ೆಂಟ್ ಸಂಬಳ ತಿನ್ಕೊಂಡು, ಫಾರಿನ್ ಟ್ರಿಪ್ ಹೊಡ್ಕೊಂಡು ಓಡಾಡ್ತೀರಿ. ನೀವೇ ಯಾಕೆ ಹೋರಾಟ ಮಾಡೋಕೆ ಹೋಗಿಲ್ಲ?’
‘ಅಯ್ಯೋ ಬ್ರಾಹ್ಮಣ ಮದ್ವಿ ಆಗು ಅಂದ್ರಾ ನೀನಾ ನನ್ ಹೆಣ್ತಿ ಆಗೂ ಅಂದಾಗಾತು… ಅಲ್ರಿ ನನ್ ಕೆಲ್ಸ ನನ್ ಧರ್ಮ ಅದಾ. ಪುಸ್ತಕ್ದಾಗಿರೋದು ಬೋಧಿಸ್ತೇನೂ… ಅದು ಬ್ಯಾಡಾಂದ್ರೆ ಆ ಟೆಕ್ಸ್ಟ್ ಬ್ಯಾನ್ ಮಾಡಾಕ್ರುಲಾ… ನನ್ ಕೆಲ್ಸ ನಾ ಎಫಿಷಿಯೆಂಟ್ ಮಾಡ್ತಿನಿ. ಅದಾ ನನ್ ಡ್ಯೂಟಿ, ಹೋರಾಟ ಮಾಡೋದಲ್ರಿ ಸರ್ರ.’
‘ಅಲ್ರಿ ಆ ಕಾಡು ಬಿದ್ದು ಸಾಯೋ ಬಡ್ಡಿಮಕ್ಳಿಗೆ ಎಲ್ಲಾದ್ರೂ ನಿಮ್ಮಂಗೆ ಒಂದು ಕೆಲ್ಸ ಕೊಡ್ಸಿ ಅನ್ನ ತಿನ್ನೋ ದಾರಿ ಮಾಡ್ಕೊಡೋದು ಬಿಟ್ಟು ಅವರು ಕಾಡು ಬೀಳೋ ಹಂಗೆ ಮಾಡ್ತೀರಲ್ಲ?’ ನಾನು ಸ್ವಲ್ಪ ಖಾರವಾಗಿಯೇ ಪ್ರಶ್ನಿಸಿದೆ.
‘ನೋಡ್ರಿ ಸಾಹೇಬ್ರೆ… ನಾ ನಕ್ಸಲಿಸಂ ಸಿಂಫಥೈಸರ್ ಇದ್ದೀನಿ ಖರೆ. ಆದ್ರಾ ನಾ ನಕ್ಸಲೈಟ್ ಅಲ್ರಿ. ಬೇಕಾದ್ದು ಮಾಡ್ಕೊರ್ರಿ… ಹ್ಯಾಂಗ್ ಮಾಡ್ರಿ ಬೇಕಾದ್ರಾ…’ ರೆಡ್ಡಿಯವರ ಧ್ವನಿ ದೃಢವಾಗಿತ್ತು.
‘ಥೂ ಬ್ಲಡಿ ಸಿಂಪಥೈಸರ್ಸ್… ಇದೊಂದು ಪದ ಇದೆ ನೋಡಿ ನಿಮ್ಮಂತೋರಿಗೆ’ ಎಂದು ಅಸಹ್ಯದಿಂದ ಹೇಳಿ, ಪ್ರತಿಕ್ರಿಯೆಗೂ ಕಾಯದೇ ಹೊರ ಬಂದೆ.
‘ಇವ್ನಿಗೆ ದಿನಕ್ಕೆ 2 ಇಡ್ಲಿ ಕೊಡಿ ಸಾಕು. ಬದ್ಕಿದ್ರೆ ಬದ್ಕಿಲರ್ಿ’ ಎಂದು ನಮ್ಮ ಸಿಬ್ಬಂದಿಗೆ ಹೇಳಿ ಹೊರ ಬಂದು ಕೆರೆಕಟ್ಟೆ ಹಾದಿ ಹಿಡಿದೆ. ಅಲ್ಲಿಂದ ಕಾರ್ಕಳಕ್ಕೆ ಹೋಗಿ ಚಕ್ರವತರ್ಿಯವರಿಗೆ ಫೈಲ್ ಕೊಟ್ಟು ರಾತ್ರಿ ಕ್ಯಾಂಪ್ಗೆ ವಾಪಸ್ಸಾದೆ.
ಬೆಳಗ್ಗೆ ಎದ್ದವನು ಎಕ್ಸಸೈಜ್ ಮುಗಿಸಿದ ನಂತರ ಹಾಗೆ ಅಡ್ಡಾಡಿಕೊಂಡು ಕ್ಯಾಂಪ್ನಿಂದ ಹೊರ ಬಂದೆ. ಎದುರಿನಲ್ಲಿದ್ದ ಟೂರಿಸ್ಟ್ ಹೋಟೆಲ್ನಲ್ಲಿ ಒಂದು ಟೀಗೆ ಆರ್ಡರ್ ಮಾಡಿ ಕುಳಿತೆ. ನನ್ನೊಬ್ಬನನ್ನು ಬಿಟ್ಟು ಹೋಟೆಲ್ನಲ್ಲಿ ಯಾರೂ ಇರಲಿಲ್ಲ. ಇನ್ನೂ ತಿಂಡಿ ಸಮಯವಾಗದ ಕಾರಣ ಹೋಟೆಲ್ ಮಾಲಕಿ ತಿಂಡಿ ಸಿದ್ಧತೆಯಲ್ಲಿ ತೊಡಗಿದ್ದರು.
ಯಾವುದೋ ನ್ಯೂಸ್ ಚಾನೆಲ್ ಬರುತ್ತಿತ್ತು. ಪ್ರೊಫೆಸರ್ ರೆಡ್ಡಿ ಕಿಡ್ನಾಪ್ ಅನ್ನೋದು ಬರೀ ನಾಟಕವಾ? ಕಾಡು ಸೇರಿ ನಕ್ಸಲೈಟ್ ಆದ್ರಾ ಮೇಷ್ಟ್ರು? ನೋಡಿ ಈ ಸ್ಟೋರಿ ಎಂದು ಆ್ಯಂಕರ್ ಹೇಳಿದ್ದು ಕೇಳಿ ಕುತೂಹಲವಾದ್ದರಿಂದ ನಾನೇ ಎದ್ದು ಹೋಗಿ ಟಿವಿಯ ವಾಲ್ಯೂಮ್ ಹೆಚ್ಚಿಸಿದೆ.
‘ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿರುವ ಪ್ರೊ.ರೆಡ್ಡಿ ಕಿಡ್ನಾಪ್ ಪ್ರಕರಣದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಅಪಹರಣ ನಡೆದಿರುವುದೇ ಅನುಮಾನ ಎನ್ನಲಾಗಿದೆ. ಮೊದಲಿನಿಂದಲೂ ನಕ್ಸಲ್ ಪರವಾದ ಒಲವು ಹೊಂದಿದ್ದ ರೆಡ್ಡಿ ಅವರು ನಿಗೂಢವಾಗಿ ನಾಪತ್ತೆಯಾಗಿರುವುದು ಒಂದು ನಾಟಕ. ಅವರು ಕಾಡು ಸೇರಿ ಪಶ್ಚಿಮಘಟ್ಟದ ನಕ್ಸಲ್ ದಳಗಳನ್ನು ಕೂಡಿಕೊಂಡಿರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಿಡ್ನಾಪ್ ಪ್ರಕರಣ ನಡೆದು ವಾರವಾಗುತ್ತಾ ಬಂದರೂ ಕಿಡ್ನಾಪಸರ್್ ಅವರ ಕುಟುಂಬವನ್ನು ಸಂಪಕರ್ಿಸಲು ಯತ್ನಿಸದಿರುವುದು, ಬಂಧಿತ ನಕ್ಸಲ್ ಮೂರ್ತಿಯೊಂದಿಗಿನ ರೆಡ್ಡಿ ಅವರ ಸಂಬಂಧಗಳನ್ನು ಅಳೆದು ತೂಗಿ ನೋಡುತ್ತಿರುವ ಪೊಲೀಸರು ಹೊಸ ದಿಕ್ಕಿನಲ್ಲಿ ತನಿಖೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ’ ಎನ್ನುವ ವಾಯ್ಸ್ ಓವರ್ನೊಂದಿಗೆ ಸ್ಟೋರಿ ಮುಕ್ತಾಯವಾಯಿತು. ಕುತೂಹಲಕ್ಕಾಗಿ ಇನ್ನೂ ನಾಲ್ಕೈದು ಚಾನೆಲ್ ಬದಲಿಸಿದೆ. ಎಲ್ಲೆಡೆ ರೆಡ್ಡಿ ಸುದ್ದಿಯಾಗಿದ್ದರು. ಅದನ್ನು ನೋಡಿ ನನಗೆ ಒಳಗೊಳಗೆ ನಗು ಬಂದರೂ ತಡೆದುಕೊಂಡು ಸುಮ್ಮನಾದೆ. ಅಷ್ಟರಲ್ಲಿ ಹೋಟೆಲ್ನ ಮಹಿಳೆ ಟೇಬಲ್ ಮೇಲೆ ಟೀ ಕಪ್ ತಂದಿಟ್ಟರು. ಟಿವಿ ನೋಡುತ್ತಲೇ 2 ಸಿಪ್ ಟೀ ಕುಡಿದೆ. ಅಷ್ಟರಲ್ಲಿ ನನ್ನ ಮೊಬೈಲ್ ರಿಂಗ್ ಆಯಿತು.
ನಿರೀಕ್ಷಿಸಿದಂತೆ ಚಕ್ರವರ್ತಿಯವರು ಕಾಲ್ ಮಾಡಿದ್ದರು. ‘ಏನಪ್ಪಾ ರೆಡ್ಡಿ ಪ್ರೊಫೆಸರ್ ಕಾಡಿಗೋಗಿದ್ದಾನಂತಲ್ಲ… ಇನ್ವೆಸ್ಟಿಗೇಷನ್ ಮಾಡ್ರಪ್ಪ’ ಎಂದು ಮುಸಿಮುಸಿ ನಕ್ಕರು. ‘ಟಿವಿ ನೋಡ್ದೆ ಸರ್… ಆಯ್ತು ಕೂಂಬಿಂಗ್ ಸ್ಟಾರ್ಟ್  ಮಾಡ್ತೀವಿ ಸರ್’ ಎಂದು ಉತ್ತರಿಸಿದೆ. ಮತ್ತೆ ಮುಸಿಮುಸಿ ನಗುತ್ತಾ ಚಕ್ರವರ್ತಿಯವರು ಕಾಲ್ ಕಟ್ ಮಾಡಿದರು. ರೆಡ್ಡಿ ಹೆಸರು ಬದ್ನಾಮ್ ಮಾಡಲು ಚಕ್ರವರ್ತಿ ಈ ದಾರಿ ಹಿಡಿಯಬಹುದು ಎಂದು ಊಹಿಸಿಯೂ ಇರಲಿಲ್ಲ. ನಿನ್ನೆ ನನ್ನೆದುರು ಕೈಕಟ್ಟಿ ನಿಂತುಕೊಂಡಿದ್ದ ರೆಡ್ಡಿ ಚಿತ್ರ ಕಣ್ಮುಂದೆ ಬಂದು ಹೋಯಿತು. ಹೀಗೆ ಪ್ರೊಫೆಸರ್ ರೆಡ್ಡಿ ಜಾತಿಗೆಡಿಸಿದ ನಂತರ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ಇದಾದ ಮೂರು ದಿನಗಳ ನಂತರ ಅವರನ್ನು ಚಿಕ್ಕಮಗಳೂರಿಗೆ ಕರೆತಂದು ‘ಬುಕ್ಕಡಿಬೈಲು ಅರಣ್ಯದಲ್ಲಿ ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದ ಪ್ರೊ.ರೆಡ್ಡಿ ಅವರನ್ನು ಬಂಧಿಸಲಾಗಿದೆ. ನಕ್ಸಲ್ ತಂಡದ ಜತೆ ಓಡಾಡುವಾಗ ದಾರಿ ತಪ್ಪಿದ್ದರು’ ಎಂದು ಎಫ್ಐಆರ್ನಲ್ಲಿ ಕತೆ ಬರೆದು ಜೈಲಿಗೆ ಬಿಟ್ಟು ಬರಲಾಯಿತು.
ಕಠಿಣವಾದ ಕಾಯ್ದೆಗಳನ್ನು ಅವರ ವಿರುದ್ಧ ಹಾಕಿದ್ದರಿಂದ ಸುಮಾರು 1 ವರ್ಷ ಬೇಲ್ ಸಿಗುವ ಸಾಧ್ಯತೆಯಿಲ್ಲದ್ದರಿಂದ ನಾವು ನೆಮ್ಮದಿಯಾಗಿದ್ದೆವು.
ನಾನು ಗಮನಿಸಿದಂತೆ ನಕ್ಸಲಿಸಂ ಅಪ್ಪಿಕೊಂಡ ಬಹುತೇಕ ಯುವಕ, ಯುವತಿಯರು ಶಿಕ್ಷಿತರಾಗಿದ್ದರು. ತಮ್ಮ ಸಾವಿರ ಕಷ್ಟಗಳ ನಡುವೆ ಸ್ಕೂಲು, ಕಾಲೇಜು ಮೆಟ್ಟಿಲು ಹತ್ತಿದ್ದರು. ಅವರಿಗೆ ಸರಿಯಾದ ಉದ್ಯೋಗ ಸಿಗದೇ, ಇಲ್ಲವೇ ವಿದ್ಯಾಭ್ಯಾಸದ ಹಂತದಲ್ಲಿ ಬೆಳೆಯುವ ಸಿಡಿದೇಳುವ ಗುಣಗಳು ಅವರನ್ನು ನಕ್ಸಲ್ವಾದದೆಡೆಗೆ ಪ್ರಚೋದಿಸುತ್ತಿದ್ದವು. ಅವರು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದಾರೆಯೇ ಎಂದು ಪರಿಶೀಲಿಸುವ ಬುದ್ಧಿವಂತಿಕೆ ಅವರ ತಂದೆ-ತಾಯಿಗಿರುವುದಿಲ್ಲ. ನಾನು ನೋಡಿದ, ಕೇಳಿದ ಎಷ್ಟೋ ನಕ್ಸಲೀಯರು ಅವರ ಹೆತ್ತವರಿಗೆ ಒಂದು ತುತ್ತು ಅನ್ನ ಹಾಕುವ ಕರ್ತವ್ಯವನ್ನೂ ನಿಭಾಯಿಸಿಲ್ಲ. ಸಿದ್ಧಾಂತ, ಹೋರಾಟದ ನಶೆ ಅವರನ್ನು ಬಲಿ ಪಡೆದಿವೆ.

***

ಪ್ರಜೋದಯ ಪ್ರಕಾಶನ

ಗಂಧದ ಕೋಠಿ ಹಿಂಭಾಗ, ಗೋಕುಲ್ ಹೋಟೆಲ್ ರಸ್ತೆ,

ಕೆ.ಆರ್.ಪುರಂ, ಹಾಸನ-573201

[email protected]

8792276742

www.facebook.com/prajodayaprakashana

Online

www.payumoney.com/store/buy/prajodayaprakashana

 

‍ಲೇಖಕರು G

June 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: