ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಡಿಸೆಂಬರ್ 4 ರಿಂದ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ
ರಾಷ್ಟ್ರೀಯ ನಾಟಕೋತ್ಸವ – 2020

ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪ್ರಜಾವಾಣಿ, ಇದೀಗ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಸಹಯೋಗದಲ್ಲಿ ಡಿಸೆಂಬರ್ 4 ರಿಂದ 13ರ ವರೆಗೆ ಕನ್ನಡದ ಮೇರು ನಾಟಕಗಳ ಸಿಂಹಾವಲೋಕನದ ರಾಷ್ಟ್ರೀಯ ನಾಟಕೋತ್ಸವ 2020 ಆಯೋಜಿಸುತ್ತಿದೆ.

10 ದಿನಗಳ ಪ್ರಜಾವಾಣಿ ದಸರಾ ಸಂಗೀತೋತ್ಸವ,
15 ದಿನಗಳ ಪ್ರಜಾವಾಣಿ ನುಡಿ ಹಬ್ಬ ಬಳಿಕ,
ಕೋವಿಡ್ ದುರಿತದ ಕಾಲದಲ್ಲಿ ನೊಂದ ಮನಗಳಿಗೆ ಮನೋಲ್ಲಾಸ ನೀಡುವ ಕಾರ್ಯಕ್ರಮದ ಸರಣಿ ಮುಂದುವರಿದಿದೆ.

ಪ್ರಜಾವಾಣಿ ಫೇಸ್ ‌ಬುಕ್ ಪುಟದಲ್ಲಿ ಡಿ. 4ರಿಂದ ಪ್ರತಿ ದಿನ ಸಂಜೆ 6 ಗಂಟೆಯಿಂದ ನಾಟಕಗಳು ಪ್ರಸಾರವಾಗಲಿವೆ.

ರಂಗಕರ್ಮಿಗಳಾದ ಶ್ರೀನಿವಾಸ್ ಜಿ ಕಪ್ಪಣ್ಣ ಮತ್ತು ಸಿ ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ಆಯೋಜನೆಯಲ್ಲಿ
ಶಶಿಧರ ಬಾರಿಘಾಟ್, ಸಿ ಕೆ ಗುಂಡಣ್ಣ ಸಂಚಾಲಕತ್ವದಲ್ಲಿ ಈ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಕಾರ್ಯಕ್ರಮದ ವಿವರ:

ಡಿ. 4 ಶುಕ್ರವಾರ ಸಂಜೆ 6ಕ್ಕೆ
ಸಿರಿ (2 ಗಂಟೆ)
ಜಾನಪದ ಮೂಲ, ರಂಗರೂಪ: ಡಾ ನಾ ದಾಮೋದರ ಶೆಟ್ಟಿ
ನಿರ್ದೇಶನ: ಡಾ. ಬಿ ಜಯಶ್ರೀ

ಡಿ. 5 ಶನಿವಾರ ಏಂಜೆಲ್‌ ಸಂಜೆ 6ಕ್ಕೆ
ವೀರಗಾಸೆ – ನೀರ ಒಡಪು (1 ಗಂ. 25 ನಿ.)
ದೊಂಬಿದಾಸರ ಜಾನಪದ ಕಥೆ ಆಧಾರಿತ
ನಿರ್ದೇಶನ: ಗೋಪಾಲಕೃಷ್ಣ ನಾಯರಿ

ಸಂಜೆ 7.30ಕ್ಕೆ
ಯಕ್ಷಗಾನ ಆಧಾರಿತ ಊರು ಭಂಗ (50 ನಿ.)
ನಿರ್ದೇಶನ: ಸಂಜೀವ ಸುವರ್ಣ

ಡಿ. 6 ಭಾನುವಾರ ಸಂಜೆ 6ಕ್ಕೆ
ಬೆರಳ್‌ಗೆ ಕೊರಳ್ (55 ನಿ.)
ರಚನೆ: ಕುವೆಂಪು
ನಿರ್ದೇಶನ: ಪ್ರಸನ್ನ ರಾಮಸ್ವಾಮಿ

ಸಂಜೆ 7ಕ್ಕೆ
ಸೀತಾ ಸ್ವಯಂವರ (1 ಗಂ. 10 ನಿ.)
ರಚನೆ: ಮಹಾಕವಿ ರಾಜಶೇಖರ/ಎಂ.ಎ.ಹೆಗಡೆ
ನಿರ್ದೇಶನ: ಚಿದಂಬರ ರಾವ್ ಜಂಬೆ

ಡಿ. 7 ಸೋಮವಾರ ಸಂಜೆ 6ಕ್ಕೆ
ಮಾರೀಚನ ಬಂಧುಗಳು (1 ಗಂ. 50 ನಿ.)
ರಚನೆ: ಅರುಣ್ ಮುಖ್ಯೋಪಾಧ್ಯಾಯ, ಕನ್ನಡಕ್ಕೆ: ಬಿಂಡಿಗನವಿಲೆ ನಾರಾಯಣಸ್ವಾಮಿ
ನಿರ್ದೇಶನ: ವಾಲ್ಟರ್ ಡಿಸೋಜ

ಡಿ. 8 ಮಂಗಳವಾರ ಸಂಜೆ 6ಕ್ಕೆ
ಗುಳ್ಳಕಾಯಜ್ಜಿ (50 ನಿ.)
ರಚನೆ: ಡಾ.ಚಂದ್ರಶೇಖರ ಕಂಬಾರ
ನಿರ್ದೇಶನ: ಮಾಲತೇಶ್ ಬಡಿಗೇರ

ಡಿ. 9 ಬುಧವಾರ ಸಂಜೆ 6ಕ್ಕೆ
ಕರಿಯ ದೇವರ ಹುಡುಕಿ (1 ಗಂ.30 ನಿ.)
ರಚನೆ: ಪ್ರೊ.ಶಂಕರ ಪಿಳ್ಳೈ, ಡಾ.ನಾ.ದಾಮೋದರ ಶೆಟ್ಟಿ
ನಿರ್ದೇಶನ: ಚಂದ್ರದಾಸನ್

ಡಿ. 10 ಗುರುವಾರ ಸಂಜೆ 6ಕ್ಕೆ
ಕುರ್ತಿ ಮತ್ತು ಆ… ನಂತರ (50 ನಿ.)
ಕನ್ನಡ, ತಮಿಳು, ತೆಲುಗು, ಮಲಯಾಳಂ ಕಥಾರಂಗ
ನಿರ್ದೇಶನ: ದೇವೇಂದ್ರರಾಜ್ ಅಂಕುರ್

ಡಿ. 11 ಶುಕ್ರವಾರ ಸಂಜೆ 6ಕ್ಕೆ
ಅನಿಮಲ್ ಫಾರ್ಮ್ (1 ಗಂ. 30 ನಿ.)
ರಚನೆ: ಜಾರ್ಜ್ ಆರ್ವೆಲ್. ರೂಪಾಂತರ: ಪ್ರೊ. ಸತ್ಯಬ್ರತ್ ರೌತ್, ಕನ್ನಡಕ್ಕೆ: ಸಿ ಬಸವಲಿಂಗಯ್ಯ
ನಿರ್ದೇಶನ: ಪ್ರೊ. ಸತ್ಯಬ್ರತ್ ರೌತ್

ಡಿ. 12 ಶನಿವಾರ ಸಂಜೆ 6ಕ್ಕೆ
ಗುಣಮುಖ (2 ಗಂಟೆ)
ರಚನೆ: ಪಿ.ಲಂಕೇಶ್
ನಿರ್ದೇಶನ: ಬಸವಲಿಂಗಯ್ಯ

ಡಿ. 13 ಭಾನುವಾರ ಸಂಜೆ 6ಕ್ಕೆ
ಹಯವದನ, ನಾಗಮಂಡಲ, ಅಗ್ನಿ ಮತ್ತು ಮಳೆ (50 ನಿ.)
ರಚನೆ: ಗಿರೀಶ್ ಕಾರ್ನಾಡ್
ನಿರ್ದೇಶನ: ಸಿ ಬಸವಲಿಂಗಯ್ಯ

ಸಂಜೆ 7ಕ್ಕೆ
ಕುಸುಮಬಾಲೆ
(2 ಗಂ. 20 ನಿ.)
ರಚನೆ: ದೇವನೂರು ಮಹಾದೇವ
ನಿರ್ದೇಶನ: ಸಿ.ಬಸವಲಿಂಗಯ್ಯ

‍ಲೇಖಕರು Avadhi

December 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: