ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ಹೆಗ್ದೆ ಪಂಚ್: ಒಂದೂರಿನಲ್ಲಿ ಒಬ್ಬ 'ಮಹಾ ಬುದ್ಧಿವಂತನಿದ್ದ'..

ಪ್ರಕಾಶ್ ಹೆಗ್ದೆ

ಇಟ್ಟಿಗೆ ಸಿಮೆಂಟು

ಒಂದಲ್ಲಾ…. ಒಂದೂರಿನಲ್ಲಿ ಒಬ್ಬ “ಮಹಾ ಬುದ್ಧಿವಂತನಿದ್ದ”….   ತನ್ನ ಮಹಾ ಬುದ್ಧಿವಂತಿಕೆಯಿಂದಾಗಿ ಆತ ಬಹಳ ಪ್ರಸಿದ್ಧನಾಗಿದ್ದ.,.. ತನ್ನ “ಬುದ್ಧಿವಂತಿಕೆ”ಯಿಂದಾಗಿ ಆತನಿಗೆ ತನ್ನ ಮೇಲೆ ಬಹಳ ಗರ್ವ ಇತ್ತು….   ಒಮ್ಮೆ ಆ ಬುದ್ಧಿವಂತನಿಗೆ “ಹತ್ತು” ರುಪಾಯಿ ಸಿಕ್ಕಿತು… ಆಗಿನ ಕಾಲದಲ್ಲಿ ಹತ್ತು ರುಪಾಯಿ ಅಂದರೆ ಹತ್ತು ಕೋಟಿಗೆ ಸಮನಾಗಿತ್ತು….! ಈ ಹತ್ತು ರುಪಾಯಿ ಎಲ್ಲಿ ಅಡಗಿಸಿಡಬೇಕು? ಮನೆಯಲ್ಲಿ “ಒಗ್ಗರಣೆ ಡಬ್ಬಾ” ಹಿಂದುಗಡೆ…? ಅದೆಲ್ಲ ಎಲ್ಲ ಕಳ್ಳರಿಗೂ ಗೊತ್ತಿರುವ ಜಾಗ…. ಷೂ… ಚಪ್ಪಲ್ಲು ಇಡುವ ಜಾಗ? ಅದೂ ಸಹ ಕಳ್ಳರಿಗೆ ಗೊತ್ತು…. ಛೇ…!! ಎಲ್ಲಿಡಲಿ?   ಎಷ್ಟೆಂದೆರೂ ಮಹಾ ಬುದ್ಧಿವಂತ… ಆತ ಬಹಳ ತಲೆ ಕೆಡಿಸಿಕೊಂಡ… ತನ್ನ ಮನೆಯ ಮುಂದಿನ ತೆಂಗಿನ ಮರದ ಕೆಳಗಡೆ ಹೂತಿಟ್ಟರೆ ಹೇಗೆ? ಸರಿ… ಅಲ್ಲಿ ಸಣ್ಣ ಹೊಂಡ ಮಾಡಿ ಅಲ್ಲಿ ಹತ್ತು ರುಪಾಯಿ ಬಚ್ಚಿಟ್ಟ…   ಸ್ವಲ್ಪ ಹೊರಗೆ ಬಂದು ನೋಡಿದ… ಯಾರಾದರೂ ತನ್ನಂಥಹ ಬುದ್ಧಿವಂತರು ಅಲ್ಲಿ ನೋಡಿ…. “ಎಲ್ಲ ಕಡೆಗಿಂತ ಇಲ್ಲಿ ಮಾತ್ರಾ ಅಗೆದಿದ್ದಾರೆ…. ಯಾಕೆ ಅಂತ ನೋಡಿ ಬಿಟ್ಟರೆ …? ತನ್ನ ಹತ್ತು ರುಪಾಯಿ ಕಳೆದುಹೋಗುತ್ತದಲ್ಲಾ…..!   ಅಲ್ಲಿಂದ ಹತ್ತುರುಪಾಯಿ ವಾಪಸ್ ತೆಗೆದ… ಹೊಲದ ಕಡೆ ಹೋದ… ಅಲ್ಲಿಯೂ ಅಂಥಹ ಪ್ರಶಸ್ತವಾದ ಜಾಗ ಸಿಗಲಿಲ್ಲ…   ವಾಪಸ್ ಮನೆಗೆ ಬಂದ… ತಲೆ ಕೆರೆದು ಕೊಂಡ… ತನ್ನ ಮನೆಯ ಮಣ್ಣಿನ ಗೋಡೆ ಕಾಣಿಸಿತು…. ತಕ್ಷಣ ಅಲ್ಲಿ ಕೆರೆದು ಜಾಗ ಮಾಡಿ… ಹತ್ತು ರೂಪಾಯಿ ಅಡಗಿಸಿಟ್ಟು… ಮತ್ತೆ ವಾಪಸ್ ಮಣ್ಣನ್ನು ಚೆನ್ನಾಗಿ ಪ್ಲಾಸ್ಟರ್ ಮಾಡಿಟ್ಟ….   ಆ ಜಾಗ ಮತ್ತೆ ನೋಡಿದ… ಛೇ…. “ಉಳಿದ ಜಾಗಕ್ಕಿಂತ ಹತ್ತುರುಪಾಯಿ ಇಟ್ಟ ಜಾಗ “ಪ್ರತ್ಯೇಕವಾಗಿ” ಕಾಣಿಸುತ್ತಿತ್ತು….”   ಅದಕ್ಕಾಗಿ ಇನ್ನೊಂದು ಉಪಾಯ ಮಾಡಿದ… ಲಗುಬಗೆಯಿಂದ ಅಲ್ಲಿ ಬರೆದ…. “ಇಲ್ಲಿ ಹತ್ತು ರೂಪಾಯಿಯನ್ನು ಇಟ್ಟಿಲ್ಲ….” !! !! ……………………………………… ಅತೀ…. ಬುದ್ಧಿವಂತರಿಗೂ…. ಮಹಾ ಮೂರ್ಖರಿಗೂ …. ಕೆಲವೊಮ್ಮೆ ಜಾಸ್ತಿ ವ್ಯತ್ಯಾಸವಿರುವದಿಲ್ಲ…. !  ]]>

‍ಲೇಖಕರು G

12 May, 2012

4 Comments

  1. prakash hegde

    ಪ್ರೀತಿಯ “ಅವಧಿ”ಗೆ ಧನ್ಯವಾದಗಳು……………..!
    Thank you very much !

  2. premkumar

    fine

  3. apoorva

    haha nice one.. Pedduthanada paramavadhiyannu nodi yenu helodo tilidilla.. naguvonde baruthide..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading