ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶಕರ ಸಂಘದ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ

ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ ಪ್ರದಾನ ಹಾಗೂ 8 ಕೃತಿಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಗಾಂಧಿ ಭವನದಲ್ಲಿ ಸಂಘ ಪ್ರತೀ ವರ್ಷ ನೀಡುವ ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಸಾಹಿತ್ಯ ಸಾಧನೆಗಾಗಿ ಜೋಗಿ ಅವರಿಗೆ, ಯುವ ಲೇಖಕಿ ಮಂಜುಳಾ ಹಿರೇಮಠ್‌, ಬಹುರೂಪಿ ಪ್ರಕಾಶನದ ಸಾಧನೆಗಾಗಿ ಜಿ ಎನ್‌ ಮೋಹನ್‌, ಮುದ್ರಣ ಲೋಕಕ್ಕೆ ನೀಡಿದ ಕೊಡುಗೆಗಾಗಿ ಬಿ ಆರ್‌ ಅಶೋಕ್‌ ಕುಮಾರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಡಿ ಸಿ ನಾಗೇಶ್‌, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ್‌, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌, ಪ್ರಕಾಶಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿಗಳಾದ ಆರ್‌ ದೊಡ್ಡೇಗೌಡ ವೇದಿಕೆಯಲ್ಲಿದ್ದರು.

ಪತ್ರಕರ್ತ ಶರಣು ಹುಲ್ಲೂರು ಅವರು ಬಿಡುಗಡೆಗೊಂಡ ಕೃತಿಗಳನ್ನು ಪರಿಚಯಿಸಿದರು. ಸ್ನೇಹ ಪ್ರಕಾಶನದ ಪರಶಿವಪ್ಪ ಅವರು ವಂದಿಸಿದರು. ಚಿತ್ರ ನಟಿ ವತ್ಸಲಾ ಮೋಹನ್ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Admin

18 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading