ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ದಿನ ಆಚರಣೆ, ಸನ್ಮಾನದ ಫೋಟೋ ಆಲ್ಬಂ

ಕರ್ನಾಟಕ ಪ್ರಕಾಶಕರ ಸಂಘದ ವತಿಯಿಂದ ‘ವಿಶ್ವ ಪುಸ್ತಕ ದಿನ’ವನ್ನು ಆಚರಿಸಲಾಯಿತು.

ಬಿ ಎಂ ಶ್ರೀ ಪ್ರತಿಷ್ಟಾನದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು

ನಂಜನಗೂಡು ತಿರುಮಲಾಂಬ ಪುಸ್ತಕ ಪ್ರಕಾಶನ ಪ್ರಶಸ್ತಿಯನ್ನು ರೂಪಾ ಮತ್ತೀಕೆರೆ ಹಾಗೂ ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ನಿಂಗರಾಜು ಚಿತ್ತಣ್ಣನವರ್ ಅವರಿಗೆ ನೀಡಿ ಗೌರವಿಸಲಾಯಿತು.

ಹಿರಿಯ ಲೇಖಕರಾದ ಡಾ ಕೆ ಎನ್ ಗಣೇಶಯ್ಯ, ಸಾಂಸ್ಕೃತಿಕ ಚಿಂತಕರಾದ ಡಾ ಎಂ ಎಸ್ ಆಶಾದೇವಿ, ಬಿ ಎಂ ಶ್ರೀ ಪ್ರತಿಷ್ಟಾನದ ಅಧ್ಯಕ್ಷರಾದ ಬೈರಮಂಗಲ ರಾಮೇಗೌಡ ಅವರು ಅತಿಥಿಗಳಾಗಿದ್ದರು.

ಸಂಘದ ಉಪಾಧ್ಯಕ್ಷರಾದ ಡಾ ವಸುಂಧರಾ ಭೂಪತಿ ಹಾಗೂ ಅಧ್ಯಕ್ಷರಾದ ಪ್ರಕಾಶ್ ಕಂಬತ್ತಳ್ಳಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಅಭಿನವ ರವಿಕುಮಾರ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ಬಿ ಎಸ್ ವಿದ್ಯಾರಣ್ಯ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಸೃಷ್ಟಿ ನಾಗೇಶ್ ವಂದಿಸಿದರು. ಖಜಾಂಚಿ ಬಿ ಎಸ್ ವಿದ್ಯಾರಣ್ಯ ಸ್ವಾಗತಿಸಿದರು. ಪ್ರಭಾ ಕಂಬತ್ತಳ್ಳಿ ಅವರ ಕಾವ್ಯ ವಾಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು.

‍ಲೇಖಕರು avadhi

23 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading