ಪುಸ್ತಕ ತುಂಬಿಕೊಂಡ ಮೊದಲ ಲಾರಿ ಬಂತು

ಅವಿರತ ಪುಸ್ತಕಗಳ ತುಂಬಿಕೊಂಡ ಮೊದಲ ವಾಹನ ಬಂತು

ನನ್ನ ಶಾಲೆ ನನ್ನ ಹೆಮ್ಮೆ.

ಸ್ನೇಹಿತರೆ,

ಮರಳಿ ಗೂಡಿಗೆ ಎನ್ನುವುದು ಅವಿರತಕ್ಕೆ “ಮರಳಿ ಶಾಲೆಗೆ”. ಜೂನ್-ಜುಲೈ ತಿಂಗಳು ಬಂದರೆ ಸಾಕು ಅವಿರತಕ್ಕೆ ಅದು ಸುಗ್ಗಿಯ ಕಾಲ. ಹೌದು, ಮಹಾ ಸುಗ್ಗಿಯೇ. ಮಕ್ಕಳು ತಿರುಗಿ ಶಾಲೆಗೆ ಬರುವ ಸಮಯ. ಸಾವಿರಾರು ಮಕ್ಕಳ್ಕ ನಿರೀಕ್ಷೆಗೆ ಪೂರ್ಣ ವಿರಾಮವಿಡುವ, ಕನಸುಗಳಿಗೆ ಬಣ್ಣ ಹಚ್ಚುವ, ನಗುವಿಗೆ ಮಿಂಚು ತುಂಬುವ ಮತ್ತು ಕಲಿಕೆಗೆ ಉತ್ಸಾಹದ ಕೈ ಚಾಚುವ ಅರ್ಥಪೂರ್ಣ ಕೆಲಸವನ್ನು ಅವಿರತವು ಕಳೆದ ೮ ವರುಷಗಳಿಂದ ಮಾಡುತ್ತಾ ಬಂದಿದೆ.

ಶಿಕ್ಷಣವು ಅವಿರತದ ಪ್ರಮುಖ ಕಾರ್ಯಕ್ಷೇತ್ರಗಳಲ್ಲೊಂದು. ಪ್ರತಿವರ್ಷ ಸರಕಾರಿ ಶಾಲೆಯ, ಅತಿ ಹೆಚ್ಚಾಗಿ ಹಳ್ಳಿಯ ಮಕ್ಕಳಿಗೆ ಆಯಾ ಶೈಕ್ಷಣಿಕ ವರ್ಷಕ್ಕೆ ಸಾಕಾಗುವಷ್ಟು ನೋಟ್ ಪುಸ್ತಕಗಳನ್ನು “ನನ್ನ ಶಾಲೆ ನನ್ನ ಹೆಮ್ಮೆ” ಎಂಬ ಯೋಜನೆಯಲ್ಲಿತಪ್ಪದೇ ವಿತರಿಸುತ್ತಾ ಹೆಜ್ಜೆ ಹಾಕುತ್ತಿದೆ. ಆರ್ಥಿಕವಾಗಿ ಕಷ್ಟಪಡುತ್ತಿರುವ ನಮ್ಮವರಿಗೆ ಒಂದು ಚಿಕ್ಕ ಸಹಾಯ, ಮಕ್ಕಳನ್ನು ಮತ್ತೆ ಶಾಲೆಯೆಡೆಗೆ ಮುಖಮಾಡಿಸುವ ಚಿಕ್ಕ ಯತ್ನ ಹಾಗೂ ಶಿಕ್ಷಣವನ್ನು ಬೆಂಬಲಿಸುವ ಕಿರು ಆಸೆ, ನಮ್ಮ ಅವಿರತಕ್ಕೆ.
ನೀವೂ ನಮ್ಮ ಕೈ ಜೋಡಿಸಿ, ನಮ್ಮಿಂದ ನಮ್ಮವರಿಗಾಗಿ ಒಂದು ಚಿಕ್ಕ ನೆರವಿಗಾಗಿ. ಮಾಹಿತಿಗಾಗಿ ಅವಿರತದ ಯಾವುದೇ ಸದಸ್ಯರನ್ನು ಸಂಪರ್ಕಿಸಿ.

ಬನ್ನಿ, ಸಂತಸವನ್ನು ಹಂಚೋಣ..

ಅವಿರತ ಪ್ರತಿಷ್ಟಾನ.

13346968_10154317449229456_4990628220963475612_n

13406923_10154322410564456_339637756299244465_n

13418958_10154317454849456_4662307752007972260_n

13442265_10154322417084456_5736014349471745265_n

‍ಲೇಖಕರು Admin

June 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: