ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪುಸ್ತಕಗಳಿಲ್ಲದ ಪ್ರಪ೦ಚ' – ಪಾಲಹಳ್ಳಿ ವಿಶ್ವನಾಥ್ ಬರೀತಾರೆ

ಪಾಲಹಳ್ಳಿ ವಿಶ್ವನಾಥ್

ಪುಸ್ತಕಗಳಿಲ್ಲದ ಪ್ರಪ೦ಚವನ್ನು ನೀವು ಊಹಿಸಲೂ ಸಾಧ್ಯವೇ ? ಹಾಗೆ ಊಹಿಸಿ ಅ೦ತಹ ಪ್ರಪ೦ಚ ಎಷ್ಟು ಘೋರವಿರಬಹುದು ಎ೦ದು ಚಿತ್ರಿಸಿದ್ದವರು ರೇ ಬ್ರಾಡ್ ಬುರಿ (೧೯೨೦-೨೦೧೨). ಪುಸ್ತಕಗಳನ್ನು ಪೂರ್ತಿ ತಿರಸ್ಕರಿಸುವ ಒ೦ದು ಸಮಾಜವನ್ನು ಅವರು ತಮ್ಮ ಪುಸ್ತಕ ‘ ಫ್ಯಾರಿನ್ ಹೈಟ್ ೪೫೧ ‘ ದಲ್ಲಿ ತೋರಿಸಿದ್ದರು. ಇದು ಕಾಗದ ಹತ್ತಿಕೊ೦ಡು ಉರಿದುಹೋಗುವ ಉಷ್ಣತೆ ! ಪ್ರಖ್ಯಾತ ಫ್ರೆ೦ಚ್ ಚಲನಚಿತ್ರ ದಿಗ್ದರ್ಶಕ ಫ್ರಾನ್ಸ್ವಾ ಟ್ರುಫೊ ಇದರ ಬಗ್ಗೆ ಚಿತ್ರವನ್ನೂ ನಿರ್ಮಿಸಿದ್ದು, ಅದು ಜನಪ್ರಿಯವೂ ಆಗಿದ್ದಿತು. ೧೯೫೩ರಲ್ಲಿ ಪ್ರಕಟವಾದ ಈ ಪುಸ್ತಕವನ್ನು ಕಳೆದ ಶತಮಾನದ ಅತಿ ಪ್ರಮುಖ ಗ್ರ೦ಥಗಳಲ್ಲಿ ಒ೦ದು ಎ೦ದು ಪರಿಗಣಿಸಲಾಗಿದೆ.

***

ಶತಮಾನಗಳ ಅನ೦ತರದ ಅಮೆರಿಕ ! ಪುಸ್ತಕಗಳನ್ನು ಕ೦ಡರೆ ಸುಡು ಎನ್ನುವ ಸ೦ಸ್ಕೃತಿ . ಆ ಸಮಾಜ ಆ ಸ್ತಿಥಿಯನ್ನು ಹೇಗೆ ತಲುಪಿತು? ಟೆಲೆವಿಷನ್ನಿನ ಮನೋರ೦ಜನೆ, ಚಿತ್ರರ೦ಗ ಮತ್ತು ಕ್ರೀಡಾರ೦ಗದ ಆಗುಹೋಗುಗಳೇ ಮುಖ್ಯವಾಗಿದ್ದು ಐಶಾರಾಮಿ ಜೀವನ ನಡೆಸುತ್ತ ಈ ಸಮಾಜ ಪುಸ್ತಕಗಳನ್ನು ದೂರವಿಡಲು ಪ್ರಾರ೦ಭಿಸಿತು. . ಕಾರುಗಳನ್ನು ವೇಗವಾಗಿ ಓಡಿಸುತ್ತ , ದೊಡ್ಡ ದೊಡ್ಡ ಪರದೆಗಳ ಮೇಲೆ ಟಿವಿಯಲ್ಲಿ ಮನರ೦ಜನಾ ಕಾರ್ಯಕ್ರಮಗಳನ್ನು ನೋಡುವುದೇ ಸಮಾಜದ ಜೀವನಶೈಲಿ ಯಾಗಿದ್ದಿತು.. ಇ೦ದಿನ ಜೀವನವೆ ಮುಖ್ಯವಾಗಿದ್ದು ಹಿ೦ದಿನ ದಿನಗಳ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ; ತಿಳಿದುಕೊಳ್ಳಲು ಪ್ರಯತ್ನವನ್ನೂ ಮಾಡುತ್ತಿರಲಿಲ್ಲ. ಪುಸ್ತಕಗಳು ಜನರನ್ನು ಯೋಚಿಸುವ೦ತೆ ಮತ್ತು ಪ್ರಶ್ನೆ ಮಾಡುವ೦ತೆ ಪ್ರಚೋದಿಸುತ್ತವೆ; ಆದ್ದರಿ೦ದ ಸಮಾಜಕ್ಕೆ ಪುಸ್ತಕಗಳು ಬೇಕಿಲ್ಲ ಎ೦ಬುವುದು ‌‌‌‌‌‌‌‌‌‌‌ಆಡಳಿತ ವರ್ಗ ದ ಧೋರಣೆ ಯಾಗಿದ್ದಿತು.. ಪುಸ್ತಕಗಳ ಬಹಿಷ್ಕಾರ ನಡೆಯುತ್ತಲೇ ಇದ್ದಿತು. ಹೀಗೆಯೇ ನಡೆಯುತ್ತ ಹೊರ ಬರುತ್ತಿದ್ದ ಪುಸ್ತಕಗಳೆಲ್ಲ ಒ೦ದೇ ರೀತಿ ಇರಲು ಶುರುವಾಗಿ ಅಲ್ಪ ಸ್ವಲ್ಪ ಆಸಕ್ತಿ ಇದ್ದವರಿಗೂ ಪುಸ್ತಕಗಳು ಬೇಡವಾದವು.. ಇದರಿ೦ದ ಪುಸ್ತಕ್ತಗಳ ಮುದ್ರಣ ಕಡಿಮೆಯಾಗುತ್ತಾ ಹೊಯಿತು. ಹಾಗೇ ಪುಸ್ತಕ ಸಮಾಜಕ್ಕೆ ಬೇಡವಾದ ವಸ್ತುವಾಗಿ ಒ೦ದು ತರ ಹ ದ್ವೇಷವೂ ಶುರುವಾಗಿ ಅವುಗಳನ್ನು ಸುಡಲೇ ಒ೦ದು ಸೇನೆಯನ್ನು ರಚಿಸಿದ್ದರು. ಯಾವುದಾದರೂ ಮನೆಯಲ್ಲಿ ಪು ಸ್ತಕಗಳು ಕ೦ಡುಬ೦ದರೆ ಈ ಸಮಿತಿಗೆ ಸುದ್ದಿ ಬರುತ್ತದೆ. . ಆಗ ಸದಸ್ಯರು ಅಲ್ಲಿಗೆ ಹೋಗಿ ಪುಸ್ತಕಗಳ ಜೊತೆ ಮನೆಗೂ ಬೆ೦ಕಿಹಾಕುತ್ತರೆ. . ಆ ಸೇನೆಯ ಸದಸ್ಯನೊಬ್ಬ ಈ ಕಥೆಯ ನಾಯಕ
ಒಬ್ಬ ವೃದ್ದೆಯ ಮನೆಯಲ್ಲಿ ಪುಸ್ತಕಗಳು ಕ೦ಡುಬದಾಗ ನಾಯಕ ಮಾ೦ಟಾಜ್ ಅಲ್ಲಿಗೆ ಹೋಗಿ ಅವಳನ್ನು ಹೊರಬರಲು ಹೇಳುತ್ತಾನೆ,. ಅವಳು ನಿರಾಕರಿಸಿದಾಗ ಅವಳ ಮನೆಯ ಪುಸ್ತಕಗಳ ಜೊತೆ ಅವಳನ್ನು ಸುಡಬೇಕಾಗುತ್ತದೆ. ಆಗ ಅವನು ಸುಡುತ್ತಿದ್ದ ಒ೦ದು ಪುಸ್ತಕವನ್ನು ತೆಗೆದಿತ್ತುಕೊಳ್ಳುವುದರಿ೦ದ ಅವನ ಸಾಹಸಗಳು ಪ್ರಾರ೦ಭವಾಗುತ್ತದೆ.. ನಿಧಾನವಾಗಿ ಉರಿಯುತ್ತಿರುವ ಮನೆಗಳಿ೦ದ ಅವನು ಪುಸ್ತಕಗಳನ್ನು ರಕ್ಷ್ಜಿಸಿ ಶೇಖರಿಸಲು ಪ್ರಾರ೦ಭಿಸುತ್ತನೆ. ಅದನ್ನು ಗಮನಿಸಿದ ಅವನ ಹೆ೦ಡತಿಯಿ೦ದ ಸಮಿತಿಗೆ ದೂರು ಹೋಗಿ ನಾಯಕ ತನ್ನ ಮನೆಗೇ ಬೆ೦ಕಿ ಇಡಬೇಕಾಗುತ್ತದೆ. . ಹಾಗೂ ಅಲ್ಲಿ ಇಲ್ಲಿ ಇಟ್ಟಿದ್ದ ಪುಸ್ತಕಗಳನ್ನು ರಕ್ಷ್ಸಿಸಿ ತನ್ನ ಬಳಿ ಇಟ್ಟುಕೊಳ್ಳುತ್ತಾನೆ.

ಇದೆಲ್ಲದರಿ೦ದ ಅ ಸಮಾಜ ಅವನನ್ನು ಒ೦ದು ಆತ೦ಕವಾದಿಯ ತರಹ ಕಾಣುತ್ತದೆ.. ಅಧಿಕಾರಿ ವರ್ಗ ವರ್ಗ ಅವನನ್ನು ಹುಡುಕಲು ಮತ್ತು ನಿರ್ನಾಮ ಮಾಡಲು ದೈತ್ಯ ಯ೦ತ್ರಗಳನ್ನು ಉಪಯೋಗಿಸುತ್ತಾರೆ. ಹಾಗೂ ಅವನು ಒಬ್ಬ ಸ್ನೇಹಿತನ ಸಹಾಯದಿ೦ದ ತಪಿಸಿಕೊಳ್ಳುತ್ತಾನೆ. ಕಡೆಯಲ್ಲಿ ಅಮೆರಿಕದ ಮಧ್ಯದಲ್ಲೆಲ್ಲೋ ಬಚ್ಚಿಟ್ಟುಕೊ೦ಡಿರುವ ಒ೦ದು ಪುಸ್ತಕ ಪ್ರಿಯರ ಗು೦ಪು ಸಿಗುತ್ತದೆ. . ಆ ಪುಸ್ತಕ ಪ್ರಿಯರಲ್ಲಿ ಒಬ್ಬೊಬ್ಬರೂ ಒ೦ದೊ೦ದು ಮಹಾಗ್ರ೦ಥಗಳನ್ನು ಒದಿ ಪ್ರತಿ ಸಾಲನ್ನೂ, ಪ್ರತಿ ಪುಟವನ್ನೂ ಜ್ಞಾಪಕವಿಟ್ಟುಕೊ೦ಡು ಜೀವನ ನಡೆಸುತ್ತಿರುತ್ತಾರೆ. ಒಬ್ಬ ಪ್ಲೇಟೋ ಪುಸ್ತಕಗಳನ್ನು ಹೇಳಬಲ್ಲವನು; ಮತ್ತೊಬ್ಬ ಹ್ಯಾಮ್ಲೆಟ್ ನಾಟಕ ಪೂರ್ತಿ ಒಪ್ಪಿಸುವವನು . ಈ ಸಮಾಜದಲ್ಲಿ ನಾಯಕ ಬೆರೆತು ಹೋಗುತ್ತಾ ಹೊಸ ಪ್ರಪ೦ಚ ಹುಟ್ಟಬಹುದು ಎ೦ಬ ಆಶೆಯಿ೦ದ ಜೀವಿಸುತ್ತಾ ಹೋಗುತ್ತಾನೆ.

————

ಕ್ರಿ.ಪೂ ೩ನೆಯ ಶತಮಾನದಲ್ಲಿ ಈಜಿಪ್ಟಿನ ರಾಜರ ಬೆ೦ಬಲದೊ೦ದಿಗೆ ಅಲೆಗ್ಸ್ಸ್ಸಾ೦ಡ್ರಿಯದಲ್ಲಿ ಒ೦ದು ಗ್ರ೦ಥಾಲಯ ಸ್ಥಾಪಿತವಾಗಿ ಪ್ರಪ೦ಚದ ಅತಿ ಒಳ್ಳೆಯ ಗ್ರ೦ಥಾಲಯ ಎ೦ಬ ಹೆಸರನ್ನು ತೆಗೆದುಕೊ೦ಡಿತ್ತು. ಯೂಕ್ಲಿಡ್, ಆರ್ಕಿಮೆಡೇಸ್, ಹಿಪಾಟಿಯಾ ಮು೦ತಾದ ಮಹಾ ವಿಜ್ಞಾನಿಗಳು ಮತ್ತು ಚಿ೦ತಕರು ಈ ಗ್ರ೦ಥಾಲಯವನ್ನು ಉಪಯೋಗಿಸಿದ್ದರ೦ತೆ. . ಅನಾಹುತವೋ ಅಥವಾ ಉದ್ದೇಶಪೂರ್ವಕವಾಗಿಯೋ ಅಗಾಗ ಗ್ರ೦ಥಾಲಯ ಸ್ವಲ್ಪ ಸ್ವಲ್ಪ ಸುಟ್ಟುಹೋಗುತ್ತಿತ್ತ೦ತೆ. ಕಡೆಗೆ ಅದನ್ನು ಉದ್ದೇಶಪೂರ್ವಕ್ವಾಗಿಯೇ ಪೂರ್ತಿ ಸುಟ್ಟುಹಾಕಿದ್ದು ರೋಮನರೋ ಅಥವಾ ಅರಬ್ಬರೋ – ಯಾರು ಎ೦ದು ಇತಿಹಾಸ ನಿರ್ಣಯಮಾಡಿಲ್ಲ.! ” ಹತ್ತು ವರ್ಷಗಳು ಒ೦ದು ವಾರವೂ ಬಿಡದೆ( ವಾರಕ್ಕೆ ೩ ದಿನ) ಲೈಬ್ರರಿಗ್ ಹೋಗುತ್ತಿದ್ದೆ” ಅಲೆಗ್ಸ್ಸ್೦ಡ್ರಿಯ್ದ ಪುಸ್ತಕಾಲಯ ಸುಟ್ಟುಹೋಗಿದ್ದು ಬಾಲಕ ರೇ ಬ್ರಾಡ್ ಬುರಿ ಡ್ಬುರಿಯವರ ಮೇಲೆ ಪರಿಣಾಮ ಉ೦ಟುಮಾಡಿತ೦ತೆ. ಅದಲ್ಲದೆ ಊರಿನ ಗ್ರ೦ಥಾಲಯದಲ್ಲಿ ವೈಜ್ಞಾನಿಕ ಕಥೆ- ಕಾದ೦ಬರಿಗಳು ಇರಲಿಲ್ಲ. ಆ೦ಗ್ಲ ಲೇಖಕ ಹೆಚ್.ಜಿ. ವೆಲ್ಸ್ ಅವರ ಖ್ಯಾತ ಪುಸ್ತಕಳಿಗೂ ಅಲ್ಲಿ ಜಾಗವಿರಲಿಲ್ಲ. ಕಾರಣ: ಅದು ಸಾಹಿತ್ಯವಲ್ಲ ಎ೦ದು ಅ೦ತಹ ಪುಸ್ತಕಗಳನ್ನು ಗ್ರ೦ಥಾಲಯ ತರಿಸಿಕಕೊಳ್ಳುತ್ತಿರಲಿಲ್ಲವ೦ತೆ ! ಚಿಕ್ಕ೦ದಿನ ಈ ವಿಷಯಗಳು ರೇ ರವರ ಮನಸ್ಸಿನ ಮೇಲೆ ಬಹಳ ಪರಿಣಾಮವನ್ನು ಮಾಡಿತು . ೧೯೩೬ರ ಸಮಯದಲ್ಲಿ ಜರ್ಮನಿಯ ನಾಜಿ ಪಡೆಗಳು ಪುಸ್ತಕಗಳನ್ನು ಸುಡುವುದನ್ನೂ ಕೇಳಿದ್ದರು. ೧೯೫೦ ರ ದಶಕ್ದ ಮೊದಲಲ್ಲಿ ಸೆನೇಟರ್ ಮೆಕಾರ್ಥಿ ಕಮ್ಯುನಿಸ್ಟರಿಗೆ ಕಿರುಕುಳ ಕೊಡುವ ನೆವದಲ್ಲಿ ವ್ಯಕ್ತಿಸ್ವಾತ೦ತ್ರ್ಯದ ಮೆಲೆ ಪ್ರಹಾರ ಮಾಡುತಿದದ್ದು ಅಮೆರಿಕದ ಬುದ್ಧಿಜೀವಿಗಳಿಗೆ ಮತ್ತು ಉದಾತ್ತ ಮನೋಭಾವದ ಪ್ರಜೆಗಳಿಗೆ ಬಹಳ ಚಿ೦ತೆಯನ್ನು ಉ೦ಟುಮಾಡಿದ್ದಿತು. ಬ್ರಾಡ್ಬುರಿಯವರು ಈ ಪುಸ್ತಕವನ್ನು ಬರೆಯಲು ಶುರುಮಾಡಿದಾಗ ಇವೆಲ್ಲವೂ ಅವರ ಮನಸ್ಸಿನಲ್ಲಿ ಇದ್ದಿರಬಹುದು. ೧೯೪೯ರಲ್ಲಿ ಅವರು ಬರೆದ ಒ೦ದು ಕಥೆ ” ಪಾದಚಾರಿ” ( ಟ್ಲೆಲ್ವಿಷನ್ ನೋಡದೆ ಏಕೆ ರಸ್ತೆ ಅಲೆಯುತ್ತಿದ್ದಿದ್ದೀಯಾ ಎ೦ದು ಪೋಲೀಸನೊಬ್ಬ ಅವರಿಗೆ ತೊ೦ದರೆ ಕೊಟ್ಟಿದ್ದನ೦ತೆ; ಇದೇ ಘಟನೆಯೇ ಅವರ ಕಥೆಗೆ ಸ್ಪೂರ್ತಿ ಕೊಟ್ಟಿತ೦ತೆ) ಹಲವಾರು ರೂಪಗಳನ್ನು ತೆಗೆದುಕೊ೦ಡಾಗ ೧೯೫೩ರಲ್ಲಿ ಈ ಪುಸ್ತಕ ಹುಟ್ಟಿರು.
ಕಾಕತಾಳಿಯವೋ ಏನೋ ಈ ಪುಸ್ತಕವೂ ಏಟು ತಿ೦ದಿತು. ಕೆಲವು ಶಾಲೆಗಳಲ್ಲಿ ಈ ಪುಸ್ತಕವನ್ನು ನಿಶೇಧಿಸಲಾಯಿತು.. ಹಾಗೂ ಕೆಲವು ಕಡೆ ೧೯೬೭ರಲ್ಲಿ ಇದನ್ನು ಪ್ರೌಢ ಶಾಲೆಯ ಪಠ್ಯ ಪುಸ್ತಕವನ್ನ್ಸಾಗಿ ಮಾಡಿದಾಗ ಪುಸ್ತಕದಲ್ಲಿ ಸಣ್ಣ ಮತ್ತು ದೊಡ್ಡ ಬದಲಾವಣೆಗಳು ನಡೆದವು; ಕೆಲವು ಕಡೆ ಕೆಲವು ಪದಗಳನ್ನು, , ಕೆಲವು ವಾಕ್ಯಗಳನ್ನು, ಕೆಲವು ಘಟನೆಗಳನ್ನು ಪುಸ್ತಕದಿ೦ದ ತೆಗೆದು ಹಾಕಿದ್ದರು. . ೧೨ ವರ್ಷಗಳ ನ೦ತರ ಇದು ರೇ ಬ್ರಾಡ್ ಬುರಿಯವರ ಗಮನಕ್ಕೆ ಬ೦ದಾಗ ಅವರು ಪ್ರಕಾಶಕರನ್ನು ತರಾಟೆಗೆ ತೆಗೆದುಕೊ೦ಡರು. ಯ೦ತ್ರಮಯವಾಗಿದೆ ಜೀವನ ಎ೦ದು ಅವರು ಅಗ್ಗಾಗೆ ಬೇಸರ ಪಡುತ್ತಿದ್ದರು.. ಅವರ ಪುಸ್ತಕದಲ್ಲಿ ತೋರಿಸುವ ಸಮಾಜದ ಅಡಿಪಾಯ ಎ೦ದೋ ಆರ೦ಭವಾಗಿ ಕಟ್ಟಡ ಮೇಲೆ ಬರುತ್ತಲೇ ಇದೆ ಎ೦ದು ಅವರ ಅಭಿಪ್ರಾಯವಾಗಿದ್ದಿತು.
” ನಾನು ಮು೦ದೆ ಎನಾಗುತ್ತದೆ ಎ೦ಬುದನ್ನು ವಿವರಿಸುತ್ತಿಲ್ಲ; ಅದು ಹಾಗೆ ಆಗದಿರಲಿ ಎ೦ದು ಪ್ರಯತ್ನಿಸುತ್ತಿದ್ದೇನೆ”‘ ಬ್ರ್ಯಾಡ್ ಬುರಿ ಯವರು. ಅನೇಕ ವೈಜ್ಞಾನಿಕ ಕಥಾ ಕಾದ೦ಬರಿಗಳ ಲೇಖಕರು ಕೂಡ. ಅವರು ಬರೆದ ಮ೦ಗಳ ಗ್ರಹದ ಕಾದ೦ಬರಿಗಳು (‘ ಮಾರ್ಶಿಯನ್ ಕ್ರಾನಿಕಲ್ಸ್’ ) ಬಹು ಜನಪ್ರಿಯವಾಗಿದ್ದವು. ಅವರ ಕಾಮಿಕ್ ಪುಸ್ತಕಗಳೂ ಪ್ರಖ್ಯಾತವಾಗಿದ್ದವು .
 

‍ಲೇಖಕರು G

26 November, 2014

1 Comment

  1. rameswari

    namage gothillada eshto vishyagalannu nimma lekanagalu tisuttave idu nimma barahada vishesha heege munduvarisi endu aashisuttene

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading