ಒಂಟಿ ಚಪ್ಪಲಿ
-ಬಿ ಎಂ ಹನೀಫ್
ಪುಟ್ಟಪಾದದ ಒಂಟಿ ಚಪ್ಪಲಿಯೊಂದು
ನಡುರಸ್ತೆಯಲಿ ಬಿದ್ದಿದೆ ಅನಾಥ
ಕಾರಿನವನೊಬ್ಬ ನಿಧಾನಿಸಿ
ಮೈಯೆಲ್ಲ ಕಣ್ಣಾಗಿ ದಾಟಿದ
ಚಕ್ರ ಹಾಯದಂತೆ
ಹಿಂದಿನ ಗಾಜಿನ ಮೇಲೆ
ಬೇಬಿ ಆನ್ ಬೋರ್ಡ್
ಸಿಗ್ನಲ್ಲಿನಲ್ಲಿ ಸೊಂಟಕ್ಕೆ ಕಟ್ಟಿಕೊಂಡ
ಹಸುಕಂದನ ಹಸಿದ ಕಣ್ಣು
ಕಾನ್ವೆಂಟಿನ ದೊಡ್ಡ ಗೇಟಿನೊಳಗಿಂದ
ಸ್ವಾಮಿ ದೇವನೆ ಲೋಕಪಾಲನೆ
ಒಂಟಿ ಚಪ್ಪಲಿ ಕಾಯುತಿದೆ
ಲೋಕಕ್ಕೆ ಅದರ ಪರಿವೆಯೇ ಇಲ್ಲ
ಹೆಬ್ಬಾವಿನಂತೆ ಬಿದ್ದುಕೊಂಡಿರುವ
ರಸ್ತೆಗೂ ಒಂದು ನಾಲಿಗೆಯಿಲ್ಲ
ಪ್ಲೀಸ್
ರಸ್ತೆ ಬದಿಯಲ್ಲಿ ನೆರಳಿದೆ
ಯಾರಾದರೂ ಅದನ್ನು
ಬದಿಗೆ ಸರಿಸಬಾರದೇ
ನೀವಾದರೂ






0 Comments