ಪಿ ಪಿ ಉಪಾಧ್ಯ
35
ಹಣೆಬರಹವನ್ನು ಹಳಿಯ ಹತ್ತಿದರು…
ಕಮಲಮ್ಮನಿಗೆ ಒಂದು ಕಡೆಯಿಂದ ನೆಮ್ಮದಿ ಈಗ. ಅತ್ತ ಅನಂತ ಮನೆಯ ಸಂಬ೦ಧ ಕಳಚಿಕೊಳ್ಳುತ್ತಿದ್ದಾನೆ ಎನ್ನುವ ಆತಂಕವಿದ್ದಿದ್ದರೂ ಅಂತ್ಯನ ಬರುವಿಕೆ ಅರ್ಧ ನೋವನ್ನು ಕಡಿಮೆ ಮಾಡಿತ್ತು. ಆ ಮಟ್ಟಿಗೆ ಆದಿಯ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗಿದೆ. ಅದನ್ನು ತಡೆದುಕೊಳ್ಳಲಾರದೇ ಇದ್ಯಾವುದನ್ನೂ ಹಂಚಿಕೊಳ್ಳದ ಗಂಡನೊ೦ದಿಗೆ ಹೇಳಿದ್ದರು. `ನೀವು ಯಾವುದನ್ನೂ ತಲೆಗೆ ಹಾಕಿಕೊಳ್ಳುವುದಿಲ್ಲ. ಮನೆಯಲ್ಲಿ ಈಗೀಗ ಏನು ನಡೆಯುತ್ತಿದೆಯೆಂದೂ ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ ನಿಮಗೆ’ ಮಾಮೂಲಿ ಮೂದಲಿಕೆಯ ಮಾತೆಂದು ಅದನ್ನು ತಳ್ಳುತ್ತ ಶಾಮಣ್ಣನವರು `ಅಲ್ಲ ಕಮಲ… ನೀನಿದ್ದೀಯ… ಆದಿ ಇದ್ದಾನೆ… ಇನ್ನಾದರೂ ನಾನು ಸ್ವಲ್ಪ ಆರಾಮವಾಗಿದ್ದು ಬಿಡುತ್ತೇನೆ ಆಗದಾ..’
`ಏನೋ ಜೀವನವಿಡೀ ಮನೆಗೋಸ್ಕರ ಜೀವ ತೇಯ್ದವರಂತೆ ಮಾತನಾಡುತ್ತಿದ್ದೀರಲ್ಲ. ನಮ್ಮ ಮದುವೆಯಾದ ಮೇಲೂ ಹತ್ತು ಹನ್ನೆರಡು ವರ್ಷ ಮಾವ ಇದ್ದರು. ಅವರೇ ನೋಡಿಕೊಳ್ಳುತ್ತಿದ್ದರು. ಅಷ್ಟೊತ್ತಿಗೆ ವ್ಯವಹಾರ ಕಲಿತ ನಾನು ಅವರ ಕೈಯ್ಯಿಂದ ನಾನೇ ಜವಾಬ್ದಾರಿ ತೆಗೆದುಕೊಂಡೆ. ಮತ್ತೆ ಏಳೆಂಟು ವರ್ಷಕ್ಕೆ ಆದಿ ತಯಾರಾದ. ಆವತ್ತಿನಿಂದ ಇವತ್ತಿನ ವರೆಗೆ ಅವನೇ ತಾನೇ ನೋಡಿಕೊಳ್ಳುತ್ತಿದ್ದುದು. ಇಷ್ಟು ವರ್ಷವೂ ಆರಾಮವಾಗಿಯೇ ಇದ್ದಿರಿ. ಇನ್ನು ಮುಂದೆಯೂ ಹಾಗೆಯೇ. ಇವತ್ತಿನದ್ದೇನು ವಿಶೇಷ…’ ಕಮಲಮ್ಮನ ಮೂದಲಿಕೆ ಸಾಗಿಯೇ ಇತ್ತು. ಆಕಳಿಸುತ್ತಿದ್ದ ಶಾಮಣ್ಣನವರು ಕುಳಿತಿದ್ದ ಅವರ ಮಾಮೂಲಿನ ಈಸೀ ಚಯರ್ನಲ್ಲೇ ಮಲಗಿಬಿಡುತ್ತಾರೇನೋ ಎನ್ನುವ ಹೆದರಿಕೆ ಹುಟ್ಟಿದ ಕಮಲಮ್ಮ `ಅಲ್ಲ ಅಂತ್ಯ ಮನೆಗೆ ಬಂದಿದ್ದ. ಆದಿ ಅವನಿಗೆ ಬೈಕೂ ತೆಗೆಸಿ ಕೊಟ್ಟಿದ್ದಾನೆ. ಇನ್ನು ಮೇಲಿಂದ ವಾರ ವಾರವೂ ಬರುತ್ತಾನೆ. ಇವತ್ತು ಮಧ್ಯಾಹ್ನ ಒಟ್ಟಿಗೇ ಕುಳಿತು ಊಟ ಮಾಡುವಾಗಲಾದರೂ ಕೇಳುತ್ತೀರೇನೋ ಎಂದುಕೊ೦ಡೆ. ಅದನ್ನೂ ಗಮನಿಸಲಿಲ್ಲ’
`ಆಗಲಿ ಆಗಲಿ ಎಲ್ಲರೂ ಒಂದಾದರಲ್ಲ. ಅದೇ ಸಂತೋಷ’ ಅವರ ನಿರ್ಲಿಪ್ತ ಉತ್ತರ ಕಮಲಮ್ಮನಿಗೆ ಸಮಾಧಾನ ತರದಿದ್ದರೂ ತಾನು ಹೇಳಬೇಕಿದ್ದುದನ್ನು ಹೇಳಿದೆನಲ್ಲ ಎಂದುಕೊಳ್ಳುತ್ತ ಎದ್ದು ಹೋದರು. ಆದರೆ ಮನಸ್ಸನ್ನು ಇನ್ನೂ ಕುಟುಕುತ್ತಿದ್ದ ಅನಂತನ ಬಗ್ಗೆ ಮಾತ್ರ ಹೇಳಲೇ ಇಲ್ಲ.
ಅನಂತ ಮನೆಯಿಂದ ಆ ರಾತ್ರಿ ದುರ್ದಾನ ತೆಗೆದುಕೊಂಡವನ೦ತೆ ಹೋದವ ಮತ್ತೆ ಸ್ವಲ್ಪ ದಿನಗಳ ವರೆಗೆ ಮನೆಯತ್ತ ಬರಲೇ ಇಲ್ಲ. ಕಮಲಮ್ಮನಿಗೆ ಆತಂಕವಾದರೂ ಆ ದಿನದ ಅವನ ನಡವಳಿಕೆ ಹಚ್ಚಿದ ಒಡಲೊಳಗಿನ ಕಿಚ್ಚು ಇನ್ನೂ ಆರಿರಲಿಲ್ಲವಾದ್ದರಿಂದ ಸುಮ್ಮನೇ ಇದ್ದರು. ಇಲ್ಲದಿದ್ದರೆ ಆದಿಯೊಡನೆಯಾದರೂ ನೆನಪಾದಾಗಲೆಲ್ಲ `ಅನಂತನದು ಸುದ್ದಿಯೇ ಇಲ್ಲ. ನಿನಗೇನಾದರೂ ತಿಳಿಯಿತಾ..’ ಆದಿಯೊಡನೆ ಅವನು ಏನೂ ಹೇಳಲಾರ ಎಂದು ತಿಳಿದೂ ಕೇಳುತ್ತಿದ್ದರು. ಆದರೆ ಈ ಸಲ ಮಾತ್ರ ತಪ್ಪಿಯೂ ಅವನ ಸುದ್ದಿ ಎತ್ತಲಿಲ್ಲ. ಮನಸ್ಸು ಅಷ್ಟು ಮುರಿದಿತ್ತು. ಮಗ ಎನ್ನುವ ವಾಂಛೆ ಕೆಲವೊಮ್ಮೆ ಆ ಮುರಿದ ಮನಸ್ಸನ್ನು ನೇರ್ಪುಗೊಳಿಸಲು ಎಳೆಸಿದರೂ ಒಡಹುಟ್ಟಿದವನೊಂದಿಗೇ ಕಾರಣವಿಲ್ಲದೆ ಈ ತೆರನ ದ್ವೇಷ ಸಾಧಿಸುತ್ತಿದ್ದಾನಲ್ಲ ಎನ್ನಿಸಿದಾಗ ಅದೇ ಮನಸ್ಸು ರೊಚ್ಚಿಗೇಳುತ್ತಿತ್ತು.
ಆದರೆ ಮನೆಯಿಂದ ಹಿಂತಿರುಗಿ ಹೋದ ಅನಂತನ ಮನಸ್ಸಿನಲ್ಲಿ ತನ್ನ ವರ್ತನೆಯ ಬಗ್ಗೆ ಯಾವುದೇ ತೆರನ ಆತಂಕ ಅಥವಾ ಪಶ್ಚಾತ್ತಾಪ ಇದ್ದಿರಲಿಲ್ಲ. ಕಾಲೇಜಿನ ವಠಾರದೊಳಗೆ ಕಾಲಿಟ್ಟೊಡನೆಯೇ ಎಲ್ಲವನ್ನು ಮರೆತು ಓದಿನಲ್ಲಿ ತೊಡಗಿಸಿಕೊಂಡಿದ್ದ. ಹೈಸ್ಕೂಲು ಕಲಿಯುತ್ತಿದ್ದಾಗ ಕಾಡುತ್ತಿದ್ದ `ಆ ಆದಿಯೆಲ್ಲಾದರೂ ಬಂದರೆ’ ಎನ್ನುವ ಮುಜುಗರ ಇಲ್ಲಿ ಕಾಡುತ್ತಿರಲಿಲ್ಲವಲ್ಲ.

ಮಾಮೂಲಿಯಂತೆ ಪಾಠದಲ್ಲಿ ಮುಂದೆ. ಪ್ರೊಫೆಸರರು ಎದುರೆದುರಿಗೇ ಹೊಗಳುತ್ತಿದ್ದರು. ಹೈಸ್ಕೂಲಿನಲ್ಲಿಯಾದರೆ ಮೇಷ್ಟರುಗಳು ಹೊಗಳುವಾಗ ಹಿಂದೆ ಮುಂದೆ ನೋಡುತ್ತಿದ್ದರು. ಎದುರಿಗೇ ಹೊಗಳಿದರೆ ಅದು ತಲೆಗೆ ಹತ್ತಿ ಮಕ್ಕಳನ್ನು ಹಾಳು ಮಾಡುತ್ತದೆ ಎನ್ನುವುದು ಒಂದಾದರೆ ಉಳಿದವರ ನೈತಿಕ ಸ್ಥೈರ್ಯ ಕುಸಿಯಬಹುದೆನ್ನುವ ಅವರದ್ದೇ ಹೆದರಿಕೆ. ಎಲ್ಲಕ್ಕಿಂತ ಹೆಚ್ಚಾಗಿ ಹಾಗೆ ಮಕ್ಕಳನ್ನು ಹೊಗಳಬಾರದು ಎನ್ನುವ ಅವರದ್ದೇ ಆದ ಹಳೇ ಫಿಲಾಸಫಿ. ಆದರೂ ಅನಂತನ ಮಟ್ಟಿಗೆ ತುಸುವೇ ಸಡಿಲಾಗಿದ್ದರು. ಆದರೆ ಇಲ್ಲಿ ಕಾಲೇಜಿನಲ್ಲಿ ಹಾಗಿಲ್ಲ. ಎಲ್ಲ ಬುದ್ಧಿ ಬಲಿತವರು. ಅದಕ್ಕಿಂತ ಹೆಚ್ಚಾಗಿ ಹೆಸರು ಮಾಡಿದ ಇಂತಹ ಕಾಲೇಜಿಗೆ ಎಲ್ಲರೂ ಕಲಿಯಲೆಂದೇ ಬರುವವರು. ಒಬ್ಬನನ್ನು ಹೊಗಳಿದರೆ ಉಳಿದವರು ಛಲದಿಂದಲಾದರೂ ಕಲಿಯುತ್ತಾರೆ. ಅಂತಹುದೇನೂ ಇಲ್ಲದಿದ್ದರೂ ಅನಂತನ ಬುದ್ಧಿವಂತಿಕೆಯನ್ನು ಹೊಗಳದೇ ಇರಲಾಗುತ್ತಿರಲಿಲ್ಲ. ಅಷ್ಟು ಮೇಧಾವಿ. ಒಂದು ದಿನ ದೇಶವೇ ಹೆಮ್ಮೆ ಪಡುವಂತಹ ವಿಜ್ಞಾನಿಯಾದರೂ ವಿಶೇಷವಿಲ್ಲ ಎನ್ನುತ್ತಿದ್ದರು. ಮುಂದೆ ಕಲಿಯಲು ಅವನಿಗೆ ಎಮ್ ಐ ಟಿ ಯೇ ಸರಿ ಎನ್ನುತ್ತಿದ್ದರು ಮತ್ತು ಆ ಆಸೆಯನ್ನು ಈಗಲೇ ಅವನ ಮನಸ್ಸಿನಲ್ಲಿ ಹುಟ್ಟು ಹಾಕಿ ಪೋಷಿಸತೊಡಗಿದ್ದರು. ಈ ಹೊಗಳುವಿಕೆ ಅವನ ಛಲವನ್ನು ಹೆಚ್ಚು ಮಾಡಿತ್ತು. ಬಹುಶಃ ಸುಪ್ತ ಮನಸ್ಸಿನಲ್ಲಿ ಈ ಮೂಲಕ ತಾನು ಅಣ್ಣ ಆದಿಯ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದೇನೆ ಎನ್ನುವುದೂ ಇದ್ದಿತ್ತೇನೋ. ಅಂತೂ ಕಾಲೇಜಿನಲ್ಲೇನು ವಿಶ್ವ ವಿದ್ಯಾನಿಲಯದಲ್ಲೇ ಹೆಸರು ಮಾಡುವಷ್ಟು ಪ್ರಬುದ್ಧ ಬೆಳವಣಿಗೆಯನ್ನು ತೋರಿಸತೊಡಗಿದ್ದ.ಸ್ಥೈಮಾಮೂಲಿಯಂತೆ ಪಾಠದಲ್ಲಿ ಮುಂದೆ. ಪ್ರೊಫೆಸರರು ಎದುರೆದುರಿಗೇ ಹೊಗಳುತ್ತಿದ್ದರು. ಹೈಸ್ಕೂಲಿನಲ್ಲಿಯಾದರೆ ಮೇಷ್ಟರುಗಳು ಹೊಗಳುವಾಗ ಹಿಂದೆ ಮುಂದೆ ನೋಡುತ್ತಿದ್ದರು. ಎದುರಿಗೇ ಹೊಗಳಿದರೆ ಅದು ತಲೆಗೆ ಹತ್ತಿ ಮಕ್ಕಳನ್ನು ಹಾಳು ಮಾಡುತ್ತದೆ ಎನ್ನುವುದು ಒಂದಾದರೆ ಉಳಿದವರ ನೈತಿಕ ರ್ಯ ಕುಸಿಯಬಹುದೆನ್ನುವ ಅವರದ್ದೇ ಹೆದರಿಕೆ. ಎಲ್ಲಕ್ಕಿಂತ ಹೆಚ್ಚಾಗಿ ಹಾಗೆ ಮಕ್ಕಳನ್ನು ಹೊಗಳಬಾರದು ಎನ್ನುವ ಅವರದ್ದೇ ಆದ ಹಳೇ ಫಿಲಾಸಫಿ. ಆದರೂ ಅನಂತನ ಮಟ್ಟಿಗೆ ತುಸುವೇ ಸಡಿಲಾಗಿದ್ದರು. ಆದರೆ ಇಲ್ಲಿ ಕಾಲೇಜಿನಲ್ಲಿ ಹಾಗಿಲ್ಲ. ಎಲ್ಲ ಬುದ್ಧಿ ಬಲಿತವರು. ಅದಕ್ಕಿಂತ ಹೆಚ್ಚಾಗಿ ಹೆಸರು ಮಾಡಿದ ಇಂತಹ ಕಾಲೇಜಿಗೆ ಎಲ್ಲರೂ ಕಲಿಯಲೆಂದೇ ಬರುವವರು. ಒಬ್ಬನನ್ನು ಹೊಗಳಿದರೆ ಉಳಿದವರು ಛಲದಿಂದಲಾದರೂ ಕಲಿಯುತ್ತಾರೆ. ಅಂತಹುದೇನೂ ಇಲ್ಲದಿದ್ದರೂ ಅನಂತನ ಬುದ್ಧಿವಂತಿಕೆಯನ್ನು ಹೊಗಳದೇ ಇರಲಾಗುತ್ತಿರಲಿಲ್ಲ. ಅಷ್ಟು ಮೇಧಾವಿ. ಒಂದು ದಿನ ದೇಶವೇ ಹೆಮ್ಮೆ ಪಡುವಂತಹ ವಿಜ್ಞಾನಿಯಾದರೂ ವಿಶೇಷವಿಲ್ಲ ಎನ್ನುತ್ತಿದ್ದರು. ಮುಂದೆ ಕಲಿಯಲು ಅವನಿಗೆ ಎಮ್ ಐ ಟಿ ಯೇ ಸರಿ ಎನ್ನುತ್ತಿದ್ದರು ಮತ್ತು ಆ ಆಸೆಯನ್ನು ಈಗಲೇ ಅವನ ಮನಸ್ಸಿನಲ್ಲಿ ಹುಟ್ಟು ಹಾಕಿ ಪೋಷಿಸತೊಡಗಿದ್ದರು. ಈ ಹೊಗಳುವಿಕೆ ಅವನ ಛಲವನ್ನು ಹೆಚ್ಚು ಮಾಡಿತ್ತು. ಬಹುಶಃ ಸುಪ್ತ ಮನಸ್ಸಿನಲ್ಲಿ ಈ ಮೂಲಕ ತಾನು ಅಣ್ಣ ಆದಿಯ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದೇನೆ ಎನ್ನುವುದೂ ಇದ್ದಿತ್ತೇನೋ. ಅಂತೂ ಕಾಲೇಜಿನಲ್ಲೇನು ವಿಶ್ವ ವಿದ್ಯಾನಿಲಯದಲ್ಲೇ ಹೆಸರು ಮಾಡುವಷ್ಟು ಪ್ರಬುದ್ಧ ಬೆಳವಣಿಗೆಯನ್ನು ತೋರಿಸತೊಡಗಿದ್ದ.
ಕಾಲೇಜಿನ ಕೊನೆಯ ಸೆಮಿಸ್ಟರಿನಲ್ಲಿರುವಾಗಲೇ ಪ್ರಾಧ್ಯಾಪಕರು ಮತ್ತು ಡೀನ್ರ ನೆರವಿನಿಂದ ದೇಶದ ಹೆಚ್ಚಿನ ಎಂಜಿನಿಯರುಗಳು ಹೊಟ್ಟೆಕಿಚ್ಚುಪಡುವಂತೆ ಅಮೆರಿಕಾದ ಎಮ್ ಐ ಟಿ ಯಲ್ಲಿ ಪ್ರವೇಶ ಗಿಟ್ಟಿಸಿಕೊಂಡ. ಯಾವುದೇ ಖರ್ಚಿಲ್ಲದ ಪೂರ್ಣ ಉಚಿತ ವಿದ್ಯಾಭ್ಯಾಸ ಮತ್ತು ಹಾಸ್ಟೆಲಿನ ಅನುಕೂಲತೆ. ಬೇಕೆನಿಸಿದರೆ ಮೇಲು ಸಂಪಾದನೆಯ ಸಲುವಾಗಿ ಅಲ್ಲೇ ಒಂದೆರಡು ತರಗತಿಗಳನ್ನು ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ ಯಾರಿಗೂ ಸಿಗದಂತಹ ಸೌಲಭ್ಯ. ಕೋರ್ಸು ಮುಗಿಯುವದೊಂದೇ ಬಾಕಿ. ನೀನು ಇಲ್ಲಿಗೆ ಬಂದು ಸೇರಿ ಬಿಡು ಎಂದಿದ್ದರು. ಇನ್ನೂ ನಾಲ್ಕೆöÊದು ತಿಂಗಳ ಕಾಲವಿದೆ. ಅಷ್ಟರಲ್ಲಿ ಒಂದೆರಡು ಬಾರಿ ಊರಿಗೂ ಹೋಗಿ ಬಂದ. ಆದರೆ ಯಾರಲ್ಲಿಯೂ ಆ ಬಗ್ಗೆ ಬಾಯಿ ಬಿಡಲಿಲ್ಲ. ಬಂದವ ಅಮ್ಮನೊಂದಿಗೆ ಮಾತ್ರ ಮಾತು. ಅದೂ ಲೋಕಾಭಿರಾಮ ಮಾತ್ರ. `ಹುಷಾರಿದ್ದೀಯ ಮಗೂ…’
`ಹೂಂ…’
`ಹಾಸ್ಟೆಲಿನಲ್ಲಿ ಊಟ ತಿಂಡಿ ಸರಿಯಾಗುತ್ತಿದೆಯೇ..’ ಪ್ರತೀ ಸಲ ಬಂದಾಗ ಕೇಳುವ ಮಾತು.
`ಹೌದು…’ ಅದೇ ಪ್ರತೀ ಸಲ ಅವನು ಹೇಳುವ ಉತ್ತರ.
`ಇನ್ನೊಮ್ಮೆ ಬರುವಾಗ ಒಂದು ನಾಲ್ಕು ದಿನ ಇದ್ದು ಹೋಗುವ ಹಾಗೆ ಬಾ’
`ನೋಡುತ್ತೇನೆ.. ಹಾಗೆಲ್ಲ ಹೆಚ್ಚು ರಜ ತೆಗೆದುಕೊಳ್ಳುವ ಹಾಗಿಲ್ಲ.. ಕ್ಲಾಸು ತಪ್ಪಿದರೆ ಕಷ್ಟ..’
`ಏನೋ ಮಗು. ಅಂತ್ಯ ಯಕ್ಷಗಾನದಲ್ಲಿಯೇ ಮುಂದುವರಿಯುವ ನಿರ್ಧಾರ ಮಾಡಿ ಆಗಿದೆ ಎಂದು ಕಾಣುತ್ತದೆ. ಆದಿ ಅದನ್ನೇ ಹೇಳುತ್ತಿದ್ದ’ ಅಂತ್ಯನ ಬಗ್ಗೆ ಪ್ರೀತಿಯೋ ಅಭಿಮಾನವೋ ಎಂದಲ್ಲ. ತಮ್ಮ ಎಂದು ಮಾತು ಮುಂದುವರಿಸುತ್ತಿದ್ದನೋ ಏನೋ. ಆದರೆ ಆದಿಯ ಹೆಸರು ಬಂದದ್ದೇ ಮಾತು ಅಲ್ಲಿಗೇ ನಿಲ್ಲುತ್ತಿತ್ತು.
ಅನಂತನಿಗೆ ಮನೆಯಲ್ಲಿ ಆದಿ ಇದ್ದದ್ದು ಇಲ್ಲದ್ದು ಒಂದು ಲೆಕ್ಕವೇ ಅಲ್ಲ. ತಮ್ಮ ಅಂತ್ಯನೊ೦ದಿಗ೦ತೂ ಯಾವತ್ತೂ ಬಳಕೆ ಮಾಡಿಕೊಂಡದ್ದೇ ಇಲ್ಲ. ಅಂತ್ಯನಿಗೂ ಅಷ್ಟೆ. ಇವನೊಬ್ಬ ಅಣ್ಣ ಎನಿಸಿದ್ದೂ ಇಲ್ಲ. ಹಾಗಾಗಿ ಅವ ಊರಿಗೆ ಬಂದಾಗ ಅಪ್ಪಿ ತಪ್ಪಿ ಅಂತ್ಯ ಅಲ್ಲೆಲ್ಲಿಯಾದರೂ ಮನೆಯಲ್ಲಿ ಇದ್ದರೆ ತಾನಾಗಿಯೇ ತಲೆ ತಪ್ಪಿಸಿಕೊಳ್ಳುತ್ತಿದ್ದ. ಮನೆಯ ಪಡುಬದಿಯಿದ್ದ ಗೇರು ಮರದ ಹಾಡಿಯಲ್ಲಿ ಮಾಯವಾಗುತ್ತಿದ್ದ. ಅಥವಾ ಕಡಲ ತೀರಕ್ಕೆ ಹೋಗುತ್ತಿದ್ದ. ಅಂತೂ ಅನಂತ ಮತ್ತು ಅಂತ್ಯನ ಭೇಟಿಯಾಗುತ್ತಿದ್ದದೇ ಅಪರೂಪ.
ಇಷ್ಟೆಲ್ಲ ಆಗಿಯೂ ಮನೆಯಿಂದ ತಿರುಗಿ ಹೋಗುವಾಗ ಬಸ್ಸಿನಲ್ಲಿ ಕುಳಿತುಕೊಂಡ ಅನಂತ ಕ್ರುದ್ಧನಾಗುತ್ತಾನೆ. ಅಮ್ಮ ಕೊಟ್ಟ ತರಹೇವಾರಿ ತಿಂಡಿಗಳ ಚೀಲ ಕಾಲುಗಳೆಡೆಯಲ್ಲಿ ಇಟ್ಟುಕೊಂಡದ್ದು ತಗಲುತ್ತಿದ್ದರೂ ಮನೆಯವರ ಮೇಲಿನ ಅಸಮಾಧಾನ ಕಡಿಮೆಯಾಗುತ್ತಿರಲಿಲ್ಲ. ಕಾಲೇಜಿನಲ್ಲಿ ಇಷ್ಟೊಂದು ಸಾಧನೆ ಮಾಡಿದ ತನ್ನನ್ನು ಮನೆಯವರು ಸರಿಯಾಗಿ ಗಮನಿಸಿಕೊಳ್ಳಲಿಲ್ಲ ಎನ್ನುವ ಸಂಕಟ ಬಾಧಿಸುತ್ತಲೇ ಇರುತ್ತದೆ. ಅಮ್ಮ `ಅಲ್ಲ ಅನಂತ… ಕಾಲೇಜು ವಿದ್ಯಾಭ್ಯಾಸ ಹೇಗೆ ಸಾಗುತ್ತಿದೆ… ಇನ್ನೊಂದು ನಾಲ್ಕೈದು ತಿಂಗಳಿಗೆ ಮುಗಿಯುತ್ತದಂತಲ್ಲ… ಆದಿ ಹೇಳುತ್ತಿದ್ದ..’ ಎಂದು ಕೇಳಿದರೆ ಆದಿಯ ಹೆಸರು ಆಕೆಯ ಬಾಯಿಯಲ್ಲಿ ಬಂದದ್ದೇ ಅಲ್ಲಿಯ ವರೆಗೆ ಅಮ್ಮ ಹೇಳುತ್ತಿದ್ದನ್ನು ಹೊಗಳಿಕೆಯೆಂದು ತೆಗೆದುಕೊಳ್ಳುತ್ತಿದ್ದವನಿಗೆ ಸಿಟ್ಟೇ ಬರುತ್ತಿತ್ತು. ಅದೇ ಸಿಟ್ಟಿನಲ್ಲಿ `ಅದೇನೂ ಇಲ್ಲ. ಹೇಗೋ ನಡೆಯುತ್ತಿದೆ’ ಎಂದು ಹಾರಿಕೆಯ ಉತ್ತರ ಕೊಟ್ಟು ಜಾರುತ್ತಿದ್ದ. ಅಂಥವ `ಮನೆಯಲ್ಲಿ ನನ್ನ ಬುದ್ಧಿವಂತಿಕೆಯನ್ನು ಗುರುತಿಸಿ ಹೊಗಳುವವರೇ ಇಲ’್ಲ ಎಂದುಕೊಳ್ಳುತ್ತ ಬಸ್ಸಿನಲ್ಲಿ ಒಬ್ಬನೇ ಕುಳಿತುಕೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುತ್ತಿದ್ದ.
ಹಾಗೆ ಕಲಿಯುತ್ತಿದ್ದಾಗ ಕೊನೆಯ ಬಾರಿಗೆ ಮನೆಗೆ ಬಂದು ಹೋದ ಅನಂತ ಮತ್ತೆ ತಿರುಗಿ ಬಂದದ್ದು ತಾನು ಅಮೆರಿಕಕ್ಕೆ ಹೋಗುತ್ತಿದ್ದೇನೆಂದು ಹೇಳಲೆಂದೇ. ಕಾಲೇಜಿನವರ ಸಹಾಯದಿಂದ ಎಲ್ಲ ವ್ಯವಸ್ಥೆ ಮುಗಿಸಿಕೊಂಡವ `ಮಾರನೆಯ ದಿನ ಮುಂಬಯಿಯಿ೦ದ ಪ್ಲೇನು ಹತ್ತಿ ಹೊರಡುತ್ತಿದ್ದೇನೆ’ ಎಂದು ಹೇಳಲು. ಕಮಲಮ್ಮ ಕಂಗಾಲು. ಅಲ್ಲ ಮಕ್ಕಳು ಹೀಗೂ ಇರಲಿಕ್ಕೆ ಸಾಧ್ಯವಿದೆಯೇ ಎಂದು. ಅವ `ನಾನು ಅಮೆರಿಕಕ್ಕೆ ಹೋಗುತ್ತಿದ್ದೇನೆ’ ಎಂದ ಧಾಟಿ ನೋಡಿದರೆ ಇನ್ನು ಎಂದೆ೦ದಿಗೂ ತಿರುಗಿ ಬರಲಾರೆ ಎನ್ನುವಂತೆ ಕಾಣಿಸುತ್ತಿತ್ತು. `ಖರ್ಚಿನ ವ್ಯವಸ್ಥೆಯೂ ಆಗಿದೆ. ಅಲ್ಲಿ ಯೂನಿವರ್ಸಿಟಿಯವರೇ ಎಲ್ಲ ನೋಡಿಕೊಳ್ಳುತ್ತಾರೆ’ ಎನ್ನುವಾಗ `ಇನ್ನು ಮುಂದೆ ನಿಮ್ಮ ಹಂಗೇನೂ ಇಲ’್ಲ ಎನ್ನುವ ಭಾವನೆ ಹೊಮ್ಮುತ್ತಿತ್ತು.. ಕೊನೆಯ ಮಾತನ್ನಾಡುವಾಗ ಆದಿ ಒಳಗೆ ಬಂದಿದ್ದ. ಅನಂತ ಖಂಡಿತವಾಗಿಯೂ ಹೇಳಲಾರ ಎಂದು ಗೊತ್ತಿದ್ದ ಕಮಲಮ್ಮನೇ ಹೇಳಿದ್ದರು `ಆದಿ, ಅನಂತ ಅಮೆರಿಕಕ್ಕೆ ಹೋಗುತ್ತಿದ್ದಾನಂತೆ… ಅದನ್ನೇ ಹೇಳಲಿಕ್ಕೆ ಬಂದಿದ್ದ೦ತೆ… ಒಂದೆರಡು ದಿನ ಟೈಮಾದರೂ ಇದ್ದಿದ್ದರೆ…’

ಅಷ್ಟರಲ್ಲಿ ಆದಿ ಸಂತೋಷ ತಡೆಯದೆ ಹಿಂದಿನ ಕಹಿ ಅನುಭವವನ್ನೆಲ್ಲ ಮರೆತು `ಅನಂತ… ನನಗೆ ಗೊತ್ತಿತ್ತು. ಒಂದು ದಿನ ನೀನು ಈ ಮಟ್ಟಕ್ಕೇರಿಯೇ ಏರುತ್ತಿ ಎಂದು..’ ಎನ್ನುತ್ತ ಅವನ ಕೈ ಕುಲುಕಲು ಮುಂದಾದರೆ ಕೈ ಮುಂದೆ ಮಾಡುವುದು ಹೋಗಲಿ. ಮುಂದಿದ್ದ ಕೈಯ್ಯನ್ನು ಹಿಂದಕ್ಕೆಳೆದುಕೊ೦ಡಿದ್ದ ಮತ್ತು ಅವನಾಡಿದ ಮಾತುಗಳು ಕೇಳಲೇ ಇಲ್ಲವೇನೋ ಎನ್ನುವಂತೆ ಅಮ್ಮನತ್ತ ತಿರುಗಿ ಹೊರಡುವ ಗಡಿಬಿಡಿ ತೋರಿಸಿದ್ದ. ಮುಖದ ಮೇಲೆ ಹೊಡೆದಂತಾದರೂ ಆದಿ ಅಮ್ಮ ಇದನ್ನು ಊರಿಗೆಲ್ಲ ಹೇಳುವುದು ಬೇಡವೇ… ಎರಡೇ ದಿನದಲ್ಲಿ ಎಲ್ಲರನ್ನೂ ಕರೆದು ಮನೆಯಲ್ಲೊಂದು ಊಟ ಹಾಕಿಸೋಣ. ವಿಶೇಷ ಔತಣವನ್ನೇ ಏರ್ಪಡಿಸಿ ಬಿಡೋಣ…’ ಎನ್ನುವಷ್ಟರಲ್ಲಿ `ಇದು ನನ್ನ ಸಾಧನೆ. ಅದಕ್ಕೆ ಊರವರೇನು ಮಾಡಿದ್ದಾರೆ. ಅವರಿಗೆಲ್ಲ ಹೇಳಬೇಕಾದರೂ ಯಾಕೆ. ಅದು ಬೇರೆ ನಾಳೆಯೇ ಹೊರಡಬೇಕು ನಾನು’ ಎಂದು ಅಮ್ಮನೊಂದಿಗೆ ಹೇಳುವವನಂತೆ ಹೇಳಿ ಚೀಲ ಬಗಲಿಗೇರಿಸಿಕೊಂಡು ಹೊರಟೇ ಬಿಟ್ಟಿದ್ದ.
ಅಮ್ಮ ಅವಾಕ್ಕಾಗಿ ನೋಡುತ್ತಲೇ ಇದ್ದಳು. `ಆದಿ, ತಾನು ಅಮೆರಿಕಾಕ್ಕೆ ಹೋಗುತ್ತಿದ್ದೇನೆ ಎನ್ನುವ ವಿಷಯ ಅನಂತನಿಗೆ ಇವತ್ತು ನಿನ್ನೆಯೇನೂ ಗೊತ್ತಾದದ್ದಲ್ಲ. ಸ್ವಲ್ಪ ಮೊದಲೇ ಬಂದು ನಮ್ಮೊಂದಿಗೆ ನಾಲ್ಕು ದಿನ ಕಳೆದು ಇಲ್ಲಿ ಎಲ್ಲರಿಗೂ ಹೇಳಿ ಹೋಗಿದ್ದರೆ ಎಷ್ಟು ಚನ್ನಾಗಿರುತ್ತಿತ್ತು ಅಲ್ಲವಾ..’ ಎಂದು ಅಮ್ಮ ಹೇಳುತ್ತಿದ್ದುದನ್ನು ಕೇಳುತ್ತಲೇ ಇದ್ದ ಆದಿ. ಅವನ ಬಗ್ಗೆ ಅಷ್ಟೊಂದು ಅಭಿಮಾನವಿಟ್ಟಿದ್ದ ಊರಿನ ಹೈಸ್ಕೂಲಿನ ಮೇಷ್ಟುçಗಳು ಈ ಬಗ್ಗೆ ಕೇಳಿದರೆ ಏನು ಉತ್ತರ ಕೊಡುವುದು ಎನ್ನುವುದರ ಬಗ್ಗೆಯೇ ಆಲೋಚಿಸುತ್ತಿದ್ದ.
ಅದು ಹಾಗೆಯೇ ಆಯ್ತು. ಅವನು ಅಮೆರಿಕಕ್ಕೆ ಹೋದ ಸುದ್ದಿಯನ್ನು ಹೊತ್ತು ತಂದ ಪತ್ರಿಕೆಗಳ ಪ್ರತಿಗಳನ್ನು ಹಿಡಿದುಕೊಂಡು ಹೈಸ್ಕೂಲಿನ ಅಧ್ಯಾಪಕರುಗಳ ದಂಡೇ ಇವರ ಮನೆಗೆ ಬಂದಿತ್ತು. ಇಂಜಿನಿಯರಿ೦ಗ್ ಕಾಲೇಜಿನ ಆಡಳಿತ ವರ್ಗ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿ ಕೊಟ್ಟ ಇಡೀ ಪುಟದ ಜಾಹೀರಾತುಗಳಲ್ಲಿ ದೊಡ್ಡದಾಗಿ ಅಚ್ಚು ಹಾಕಿಸಿದ ಫೋಟೋದಲ್ಲಿ ಅನಂತ ನಗುತ್ತಿದ್ದ. ಅವರೆಲ್ಲ ಅಭಿನಂದನೆಯ ಮಳೆಯನ್ನೇ ಸುರಿಸಿದ್ದರು. ನೋಡಿದ ಕಮಲಮ್ಮನಿಗೆ ಅಳುವೇ ಬಂದಿತ್ತು. ಆದಿಯೇ ಬಂದವರನ್ನು ಸುಧಾರಿಸಿದ್ದ. ಮನೆಯೊಳಗೆ ಯಾವಾಗಲೂ ಇರುತ್ತಿದ್ದ ಸಿಹಿಯನ್ನು ಹಂಚಿ `ಎಲ್ಲರಿಗೂ ಹೇಳಿ ನಿಮ್ಮ ಆಶೀರ್ವಾದ ತೆಗೆದುಕೊಂಡು ಹೊಗಬೇಕೆಂದೇ ಇದ್ದ. ಆದರೆ ನೋಡಿ ಅಮೆರಿಕನ್ ಯುನಿವರ್ಸಿಟಿಯವರು ಕೂಡಲೇ ಹೊರಟು ಬರಬೇಕು ಎಂದದ್ದರಿ೦ದ ಅದಕ್ಕೆಲ್ಲ ಸಮಯವೇ ಸಿಗಲಿಲ್ಲ. ಇನ್ನೊಮ್ಮೆ ದೇಶಕ್ಕೆ ಬಂದಾಗ ಖಂಡಿತವಾಗಿಯೂ ಎಲ್ಲ ಸೇರೋಣ’ ಎಂದು ಸಮಾಧಾನಪಡಿಸಿದ್ದ. ಮೇಷ್ಟುçಗಳಲ್ಲಿ ಹೆಚ್ಚಿನವರಿಗೆ ಸಮಾಧಾನವಾಗದಿದ್ದರೂ ಬೇರೆ ದಾರಿಯೇ ಇಲ್ಲದೆ ಆದಿ ಹೇಳಿದ್ದಕ್ಕೆ ತಲೆ ಅಲ್ಲಾಡಿಸುತ್ತ ಹೊರಟಿದ್ದರು. ಕೆಲವರಾದರೂ ಹಾಗೆ ಹೋಗುವಾಗ ಮನಸ್ಸು ತಡೆಯಲಾರದೆ `ಮೇಲೆ ಹತ್ತುವವರೆಗ ಮಾತ್ರ ಏಣಿಯ ಅಗತ್ಯವಿರುತ್ತದೆ. ಆ ಮೇಲೆ ಅದರ ಹಂಗೇ ಇರುವುದಿಲ್ಲ ಅಲ್ಲವೇ… ಅದನ್ನು ತುಳಿದೇ ಬಿಡುತ್ತಾರೆ’ ಎಂದು ಗೊಣಗುತ್ತಲೇ ಇದ್ದರು. `ತನ್ನ ಬಗ್ಗೆ ಹೇಳಿದ್ದೇ ಅಥವಾ ತಮ್ಮ ಬಗ್ಗೆಯೇ ಹೇಳಿಕೊಂಡರೋ’ ಎನ್ನುವುದು ತಿಳಿಯದೆ ಆದಿ ತಲೆ ತುರಿಸಿಕೊಂಡಿದ್ದ. ಆದರೆ ಅವರ ಮಾತಿನಲ್ಲಿದ್ದ ಸತ್ಯ ಮಾತ್ರ ಅವನನ್ನು ಆಳವಾಗಿ ತಟ್ಟಿತ್ತು.
ಇಲ್ಲಿ ಒಬ್ಬ ಮಗ ಸಿಕ್ಕಿದ ಹಾಗೇ ಅಲ್ಲಿ ಇನ್ನೊಬ್ಬ ಮಗನನ್ನು ಕಳೆದುಕೊಂಡೆ ಎಂದು ಅಸಹಾಯಕಳಾಗಿ ಅಲವತ್ತುಕೊಳ್ಳತೊಡಗಿದ ಕಮಲಮ್ಮ ಆ ವಿಧಿಯೂ ಹೀಗೆ ಲೆಕ್ಕಾಚಾರ ಹಾಕಲು ಸುರು ಮಾಡಿತೇ ಎಂದು ತನ್ನ ಹಣೆಬರಹವನ್ನು ಹಳಿಯ ಹತ್ತಿದರು.
| ಇನ್ನು ನಾಳೆಗೆ |






0 Comments