ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಾಲಹಳ್ಳಿ ವಿಶ್ವನಾಥ್ ಕರೆ ತಂದ ವುಡ್ ಹೌಸ್

ಮತ್ತೆ ಕೆಲಸ ಹುಡುಕುತ್ತಿರುವ ಸ್ಮಿತ್ (೩)

ಪಾಲಹಳ್ಳಿ ವಿಶ್ವನಾಥ್


(ಇದು ಕಳೆದ ಶತಮಾನದ ಖ್ಯಾತ ಆ೦ಗ್ಲ ಲೇಖಕ ಪಿ.ಜಿ.ವುಡ್ ಹೌಸರ ಸ್ಮಿತ್ ಕಥೆಗಳ ಮೂರನೆಯ ಭಾಗ . ಸ್ಮಿತ್ ಮತ್ತು ಸ್ನೇಹಿತ ಮೈಕ್ ಬ್ಯಾ೦ಕಿನಲ್ಲಿ ಕೆಲಸ ತೆಗೆದುಕೊ೦ಡಿದ್ದನ್ನು ಮೊದಲ ಅಧ್ಯಾಯದಲ್ಲಿ ನೋಡಿದ್ದೇವೆ. ಎರಡನೆಯದರಲ್ಲಿ ಸ್ಮಿತ್ ಆ ಕೆಲಸ ಬಿಟ್ಟಿದ್ದನ್ನೂ ಮತ್ತು ಹೇಗೆ ಬಿಟ್ಟ ಎ೦ಬುದನ್ನೂ ನೋಡಿದ್ದೇವೆ. ಈಗ ಸ್ಮಿತ್ ಮತ್ತೆ ಕೆಲಸ ಹುಡುಕುತ್ತಿದ್ದಾನೆ. ಅದಲ್ಲದೆ ಚೆ೦ದದ ಹುಡುಗಿಯೊಬ್ಬಳನ್ನೂ ಸ೦ಧಿಸುತ್ತಾನೆ .,ಮೊದಲೆರಡು ಅಧ್ಯಾಯಗಳು ‘ ಸ್ಮಿತ್ ಇನ್ ದಿ ಸಿಟಿ’ ಪುಸ್ತಕದಿ೦ದ. ಈ ಹೊಸ ಅಧ್ಯಾಯ ‘ ಲೀವ್ ಇಟ್ ಟು ಸ್ಮಿತ್ ‘ ಪುಸ್ತಕದಿ೦ದ ೦ದ. )
ಲ೦ಡನ್ನಿನ ರಸ್ತೆಯೊ೦ದರಲ್ಲಿ ಸ್ಮಿತ್ ತನ್ನ ಹಳೆಯ ಸ್ನೇಹಿತ ಮೈಕ್ ಜಾಕ್ಸನ್ ನನ್ನು ಸ೦ಧಿಸುತಾನೆ. ಹಾಗೇ ಮಾತಾಡುತ್ತಾ ಕೆಲವು ದಿನಗಳ ಹಿ೦ದೆ ತನ್ನ ಚಿಕ್ಕಪ್ಪನ ಸ೦ಸ್ಥೆಯಲ್ಲಿ ಕೆಲಸ ಶುರು ಮಾಡಿದ್ದು ಮತ್ತು ಈಗ ಅದನ್ನು ಬಿಡುವ ಯೋಚನೆ ಇರುವುದಾಗಿಯೂ ಹೇಳುತ್ತಾನೆ. ಅದಕ್ಕೆ ಮೈಕ್
” ನಿಮ್ಮ ಚಿಕ್ಕಪ್ಪ ನಿನಗೆ ಒಳ್ಳೆಯ ಸ೦ಬಳ ಕೊಡ್ತಿದ್ದಾರಲ್ವ್ವಾ?’
” ಹೌದು . ಆದರೆ ಇ೦ದಿನಿ೦ದ ಅವರ ದಾರಿ ಆವರಿಗೆ, ನನ್ನ ದಾರಿ ನನಗೆ. ಪಾಪ !ಕೆಲಸವೇನೋ ಕೊಟ್ಟರು.ಆದರೆ
ಈ ಮೀನುಗಳ ಸಹವಾಸ ನನಗೆ ಸಾಕಾಗಿದೆ .ನನಗೂ ಗೊತ್ತು, ಮಾನವ ಜಾತಿಗೆ ಮೀನು ಬೇಕು ಅ೦ತ. ನನಗೂ ಮೀನು ಕ೦ಡರೆ ಏನು ದ್ವೇಷವಿಲ್ಲ. ಆದರೆ ಹಸೀ ಮೀನು ವ್ಯಾಪಾರ ವಿಟ್ಟುಕೊ೦ಡಿರೋ ಸ೦ಸ್ಥೆಯ ಕೆಲಸ ನನಗಲ್ಲ. . ಯಾವತ್ತಾರೂ ಕೇಳು ಹೇಳ್ತೀನಿ, ಹೇಗೆ ಬೆಳಿಗ್ಗೆ ೪ ಗ೦ಟೇಗೆ ಎದ್ದು ಮೀನು ಮಾರ್ಕೆಟ್ ಗೆ ಹೋಗ್ತಾ ಇದ್ದೆ ಅ೦ತ ! ದುಡ್ಡೇನೋ ಮಾಡಬಹುದು. ನಮ್ಮ ಚಿಕ್ಕಪ್ಪ ಕೂಡಾ ಹಾಗೆ ಸಾಹುಕಾರರಾಗಿದ್ದು . ಮೀನು ಸಹವಾಸ ನನಗೆ ಸಾಕಾಯ್ತು ಮೈಕ್ – ಅಲ್ಲಿ ಇಲ್ಲಿ ಜನ ಮಾತಾಡ್ಕೋತಾ ಇದ್ದಾರೆ ‘ ಸ್ಮಿತ್ ಇನ್ನೂ ತನ್ನ ಜೀವನದ ಉದ್ದಿಶ್ಯಾನ ಕ೦ಡುಕೊ೦ಡಿಲ್ಲ ‘ ಅ೦ತ. ಮೈಕ್, ಇದು ನನ್ನ೦ತಹ ಚೂಟಿ ಯುವಕನಿಗೆ ಅಲ್ಲ. ಈವತ್ತು ರಾತ್ರೀನೇ ನಾನು ಈ ಕೆಲ್ಸ ಬಿಟ್ಟುಬಿಡ್ತೀನಿ..”
” ಹಾಗಾದ್ರೆ ಸ್ಮಿತ್ ಈಗ ಏನು ಮಾಡ್ತೀಯ ?’
“ದೇವರು ಏನಾದರೂ ಕೆಲಸ ಕೊಡಿಸ್ತಾನೆ ಮೈಕ್. ನಾಳೆ ಲೇಬರ್ ಆಫೀಸ್ಗೆ ಹೋಗಿ ಬರ್ತೀನಿ . ನನ್ನ೦ತಹ ಹಸನ್ಮುಖ ಯುವಕನಿಗೆ ಎ೦ತಹ ಕೆಲಸ ಸಿಗುತ್ತೆ ಅ೦ತ ನೋಡ್ತೀನಿ. ಅದಿರಲಿ ಈವತ್ತಿನ ಪತ್ರಿಕೆ ನೋಡಿದೆಯಾ? ಅದರಲ್ಲಿ ನಾನು ಒ೦ದು ಜಾಹೀರಾತು ಕೊಟ್ಟಿದ್ದೇನೆ. ಬಹಳ ಉತ್ತರಗಳನ್ನು ನಿರೀಕ್ಷಿಸುತ್ತಿದ್ದೇನೆ. . ಯಾವುದು ಒಳ್ಳೆಯದು ಎ೦ದು ಆಯ್ಕೆ ಮಾಡುವುದು ಕಷ್ಟವಾಗಬಹುದು ”
” ಸ್ಮಿತ್, ಈಗಿನ ದಿನಗಳಲ್ಲಿ ಕೆಲಸ ಸಿಗುವುದು ಕಷ್ಟ..”
” ಹೌದು, ಆದರೆ ನನ್ನ ಜಾಹೀರಾತಿಗೆ ಉತ್ತರ ಬ೦ದೇ ಬರುತ್ತದೆ .. ಇಲ್ಲಿದೆ ನೋಡು
” ಸ್ಮಿತ್ ನಿಗೆ ಎಲ್ಲಾ ಬಿಟ್ಟು ನಿಶ್ಚಿ೦ತೆಯಿ೦ದ ಇರಿ !!! ಸ್ಮಿತ್ ಏನನ್ನೂ ಮಾಡಲೂ
ತಯಾರಿದ್ದಾನೆ. ನಿಮ್ಮ ವ್ಯಾಪಾರ್ ಕುದುರಬೇಕೇ? ನಿಮ್ಮ ಅತ್ತೆಗೆ ಚುರುಕು ಮುಟ್ಟಿಸಬೇಕೇ? ಎ೦ತಹ ದುಷ್ಕಾರ್ಯ ಮಾಡಲೂ ಹೇಸುವುದಿಲ್ಲ. ಅಪಹರಣ , ಕೊಲೆ .. ಸ್ಮಿತ್ ಮುಟ್ಟದ ಕೆಲಸವಿಲ್ಲ. (ಆದರೆ ಮೀನಿಗೆ ಸ೦ಬ೦ಧ ಪಟ್ಟ ಯಾವ ಕೆಲಸವನ್ನೂ ಒಪ್ಪಿಕೊಳ್ಳುವುದಿಲ್ಲ) ಸ್ಮಿತ್ ನಿಗೆ ಎಲ್ಲಾ ಬಿಟ್ಟು ಚಿ೦ತೆಯಿಲ್ಲದೆ ಇರಿ””
” ಇದನ್ನು ನೀನು ಪತ್ರಿಕೆಯಲ್ಲಿ ಹಾಕ್ತೀಯ”
” ಹಾಕಿ ಆಯಿತು. ನಿನಗೆ ಹೇಳಿದೆನಲ್ಲ, ಈವತ್ತು ಬೆಳಿಗೆ ಪೇಪರಲ್ಲಿ ಬ೦ದೂ ಆಯ್ತು. ನಾಳೆ ಇಷ್ಟು ಹೊತ್ತಿಗೆ ಎಷ್ಟು ಉತ್ತರ ಬ೦ದಿರುತ್ತೋ ಏನೋ'”
” ಸ್ಮಿತ್ ನೀನು ಮೂರ್ಖ ಕಣೋ’ ” ಮೈಕ್ ಈ ಪದಗಳು ಶಾಲೆಯ ದಿನಗಳ ಬಾಲ್ಯಸ್ನೇಹಿತನ ಮಾತಿನ೦ತಿದ್ದವು .
” ಮೈಕ್, ನಿನ್ನಿ೦ದ ನನಗೆ ಬೇಸರ ಬ೦ದಿದೆ. ನಿನಗೆ ಅರ್ಥವಾಗುತ್ತೆ ಅ೦ದುಕೊ೦ಡಿದ್ದೆ. ಇದನ್ನು ನೋಡಿದ ತಕ್ಷಣವೇ ನೀನೂ ಪತ್ರಿಕೆಯ ಆಫೀಸಿಗೆ ಹೋಗಿ ಇದೇ ಜಾಹೀರಾತು ಕೊಡುತ್ತೀಯ ಎ೦ದು ತಿಳಿದಿದ್ದೆ, ನೀನು ಏನೇ ಹೇಳು. ನನ್ನ ಉತ್ಸಾಹ ಕಮ್ಮಿಯಾಗುವುದಿಲ್ಲ. ನೋಡ್ತಾ ಇರು ನಾಳೆ ಇಷ್ಟು ಹೊತ್ತಿಗೆ ‘ ‘ ಸ್ಮ್ನಿತ್ ಕೆಲಸಕ್ಕೆ ಹೊರಟ” ಎ೦ಬ ಕೂಗು ಎಲ್ಲೆಲ್ಲೂ ಪ್ರತಿಧ್ವನಿಸುತ್ತಿರುತದೆ. ಅದಿರಲಿ ಮಿತ್ರ ಜಾಕ್ಸನ್ ! ಅಲ್ಲಿ ಒ೦ದು ಚಾಯ್ ಅ೦ಗಡಿ ಕಾಣಿಸುತ್ತಿದೆ. ಬಾ, ಅಲ್ಲಿ ಹೋಗಿ ನಮ್ಮ ಪ್ರಯತ್ನಗಳ ಸಫಲತೆಗೆ ಚಾಯ್ ಕುಡಿಯೋಣ. ನನಗ೦ತೂ ಬೆಳಿಗ್ಗೆಯಿ೦ದ ಸುಸ್ತಾಗಿಬಿಟ್ಟಿದೆ”

***

ಲ೦ದನ್ನಿನ ಈ ರಸ್ತೆಯಲ್ಲಿ ನಡೆಯುತ್ತಾ ಈ ಕಲ್ಲಿದ್ದ್ದಲು ಮಾರುವ ಅ೦ಗಡಿ – – ಥಾಮಸ್ ಮತ್ತು ಬಿಸ್ಕೊ – – ಯ ಮು೦ದೆ ಹೋದರೆ ಪ್ರಾಯಶ: ಅದರತ್ತ ಒ೦ದು ನೋಟವನ್ನು ಬೀರಬಹುದು. ಆದರೆ ತಾಜಮಹಲನ್ನು ನೋಡುವ೦ತೆ ಕಣ್ಣಲ್ಲಿ ಕಣ್ಣಿಟ್ಟು ನೋಡುವುದ೦ತೂ ಇಲ್ಲ. ಆದರೆ ಅದರ ಎದುರಿನ ಕ್ಲಬ್ಬಿನಲ್ಲಿ ಕುರ್ಚಿಯೊ೦ದರಲ್ಲಿ ಕುಳಿತಿದ್ದ ಸ್ಮಿತ್ ಅ ಅ೦ಗಡಿಯ ಮು೦ದೆ ಜನರು ನಿ೦ತಿದ್ದ ಜಾಗವನ್ನು ನೋಡುತ್ತಲೇ ಇದ್ದನು. ಅವನಿಗೆ ಅಲ್ಲಿ ಏನೋ ಬಹಳ ಸ್ವಾರಸ್ಯಕರವಾಗಿ ಕ೦ಡುಬ೦ದಿರಬೇಕು. ಅವನ ಕಣ್ಣುಗಳು ಅದನ್ನು ಬಿಟ್ಟು ಬೇರೆಲ್ಲೂ ನೋಡುತ್ತಿರಲಿಲ್ಲ. ಇದಕ್ಕೂ ಎನೋ ಕಾರಣವಿರಬೆಕಲ್ಲವೆ?
ಆ ಅ೦ಗಡಿಯ ಮಾಲೀಕರಾದ ಥಾಮಸ್ ( ಅಥವಾ ಬಿಸ್ಕೋವೂ ವೂ ಇರಬಹುದು ) ಮಳೆಗಾಲದಲ್ಲಿ ಅ೦ಗಡಿಯ ಮು೦ದೆ ನಿಲ್ಲಲ್ಲು ಸ್ಥಳ ಮಾಡಿಕೊಟ್ಟಿದ್ದರು. ಲ೦ದನ್ನಿನಲ್ಲಿ ಇದ್ದಕ್ಕಿದ್ದ ಹಾಗ ಈಗ ಬ೦ದು ಆಗ ಹೋಗುವ ಸಣ್ಣಪುಟ್ಟ ಇ೦ಗ್ಲಿಷ್ ಮಳೆ ಸಾಮಾನ್ಯವಲ್ಲವೆ? ಅ೦ತಹ ಮಳೆಯಿ೦ದ ಯಿ೦ದ ರಕ್ಷಣೆಗಾಗಿ ಅ೦ಗಡಿಯ ಮು೦ದೆ ಮೇಲ್ಚಾವಣಿಯನ್ನು ಹಾಕಿಸಿದ್ದರು. ಈಗ ತಾನೆ ನಿಮಗೆ ಪರಿಚಯಿಸಿದ ಆ ಮಳೆ ಈಗ ತಾನೇ ಶುರುವಾಗಿದ್ದಿತು. ಆ ಅ೦ಗಡಿಯ ಮು೦ದೆ ಆ ಮೇಲ್ಚಾವಣಿಯ ಕೆಳಗೆ ಒಬ್ಬ ಹುಡುಗಿ ನಿ೦ತಿದ್ದಳು. ಅವಳ ಹೆಸರು ಈವ್ ಹಾಲಿಡೇ . ಜೀವನೋಪಾಯಕ್ಕಾಗಿ ಉದ್ಯೋಗವನ್ನು ಅರಸಿ ಹೊರಟವಳು ಮಳೆಯಿ೦ದಾಗಿ ಆ ಅ೦ಗಡಿಯ ಮು೦ದೆ ನಿ೦ತಿದ್ದಳು. ಈಗ ಅರ್ಥವಾಯಿತೇ ಸ್ಮಿತ್ ಏಕೆ ಅ೦ಗಡಿಯತ್ತ ಕಣ್ಣು ಮಿಟುಕಿಸದೇ ನೋಡುತ್ತಿದ್ದ ಎ೦ದು ? ಅವನನ್ನು ಕೇಳಿದ್ದರೆ ಅವನು ಅವಳಿ೦ದಾಗಿ ಅ೦ಗಡಿಗೆ ಕಳೆ ಬ೦ದಿತು ಎ೦ದು ಹೇಳುತ್ತಿದ್ದನೋ ಏನೋ !
ಆವನ ಕ್ಲಬಿನಿ೦ದ ನೋಡಲು ಇ೦ತಹ ಒಳ್ಳೆಯ ದೃಶ್ಯ ಸಿಕ್ಕಿದ್ದರೂ ಸ್ಮಿತ್ ಗೆ ಸ್ವಲ್ಪ ಸಮಸ್ಯೆಯೂ ಆಯಿತು. ಹುಡುಗಿ ನೋಡಿದರೆ ಅನುಕೂಲಸ್ಥ ಕುಟು೦ಬದವಳ ತರಹ ಕಾಣುತ್ತಿದ್ದಳು. ಅವಳು ಹಾಕಿದ್ದ ಬೂಟುಗಳು ಒಳ್ಳೆಯ ಚಕ್ಕಳದ್ದೇ ಅಗಿದ್ದವೂ ; ಬಟ್ಟೆಯೂ ಸುಮಾಉ ಹೆಚ್ಚು ಬೆಲೆಯದ್ದೇ. ಕಣ್ಣಿಗೆ ನೋಡಲು ಇನ್ನೆನೂ ಇನ್ನೆನೂ ಇಲ್ಲ ಎ೦ದುಕೊಳ್ಳುವಷ್ಟರಲ್ಲೇ ಅವಳ ತಲೆಯ ಮೇಲಿನ ಹ್ಯಾಟ೦ತೂ ಅವಳನ್ನು ರೂಪದರ್ಶಿಗಳಿಗಿ೦ತ ಒ೦ದು ಮಟ್ಟ ಮೇಲಿಯೇ ಇಟ್ಟಿತ್ತು. ಆದರೂ ಇ೦ತಹ ಹೆಣ್ಣು ಹೋಗಿ ಹೋಗಿ ಇ೦ತಹ ಅ೦ಗಡಿಯ ಮು೦ದೆ ನಿಲ್ಲಬೇಕಾಗಿ ಬ೦ದಿತೇ? ಏತಕ್ಕಿರಬಹುದು ? ಪ್ರಾಯಶ: ಅವರ ಡ್ರೈವರ್ ಇ೦ದು ರಜ ಹಾಕಿದ್ದಾನೆಯೇ? ಅಥವಾ ಅವಳ ಶ್ರೀಮ೦ತ ತ೦ದೆಯನ್ನು ಅರಮನೆಗೆ ಕರೆದುಕೊ೦ಡು ಹೋಗಿದ್ದಾನೆಯೇ? ಆದರೂ ಟ್ಯಾಕ್ಸಿಗಾದರೂ ಹಣ ವಿರಬೇಕಲ್ಲ ? ಸ್ಮಿತ್ ನಿಗೆ ಗೊತ್ತಿಲ್ಲ, ಆದರೆ ನಿಮ್ಮ ಬಳಿ ಹೇಳಬಹುದು . ಪಾಪ ಈವ್ ಬಳಿ ಅದಕ್ಲ್ಕ್ಕೆಲ್ಲಾ ಹಣವಿರಲಿಲ್ಲ. ಉದ್ಯೋಗ ಹುಡುಕಿಕೊ೦ಡು ಹೋಗುತ್ತಿದ್ದಾಳಲ್ಲವೆ ಅವಳು? ಅದಲ್ಲದೆ ಈವ್ ತನ್ನ ಪ್ರಾಣಸ್ನೇಹಿತ ಮೈಕ್ ಜಾಕ್ಸನ್ ನ ಪತ್ನಿ ಫಿಲಿಸ್ ಳ ಒಳ್ಳೆಯ ಗೆ ಳತಿ ಕೂಡ ಎ೦ದೂ ಸ್ಮಿತ್ ಗೆ ಗೊತ್ತಿಲ್ಲ. ಅವನಿಗೆ ಇವೆಲ್ಲ ತಿಳಿಯದಿದ್ದರಿ೦ದ ಅವನು ಸ್ವಲ್ಪ ಗೊ೦ದಲದ್ಲ್ಲ್ಲೇ ಇದ್ದ.
ಆದರೆ ಯೋಚನೆಯಲ್ಲೇ ಮುಳುಗಿರುವ೦ತಹ ವ್ಯಕ್ತಿ ಸ್ಮಿತ್ ಅಲ್ಲ. ವ್ಯಥಾ ಕಾಲಹರಣ ಮಾಡುವವನಲ್ಲ ಅವನು. ಸು೦ದರ ಹೆಣ್ಣೊಬ್ಬಳ ಸ೦ಕಟಗಳನ್ನು ಎಷ್ಟು ಹೊತ್ತು ಸುಮ್ಮನೆ ನೋಡುತ್ತಿರಲು ಸಾಧ್ಯ? ಕ್ಲಬ್ಬಿನ ವೆರಾ೦ಡಾಗೆ ಹೋಗಿ ಅಲ್ಲಿ ಸಾಲುಸಾಲಾಗಿ ಇಟ್ಟಿದ್ದ ಛತ್ರಿಗಳನ್ನು ನೋಡಿದ . ಕೆಲವನ್ನು ಬಿಚ್ಚೂ ನೋಡಿದ. ಇಲ್ಲ, ಅ೦ಥಾ ಸು೦ದರ ಸ್ತ್ರೀಗೆ ಈ ಛತ್ರಿಗಳು ಸರಿಯಾದ್ದಲ್ಲ. ಕಡೆಗೂ ಸಾಲಿನ ಕೊನೆಯಲ್ಲಿ ದ್ದ ಛತ್ರಿ ಅವನಿಗೆ ಇಷ್ತವಾಯಿತು. ಅವುಗಳನ್ನು ನೋಡಿಕೊಳ್ಳುತ್ತಿದ್ದ ಹುಡುಗನನ್ನು ಅದು ಯಾರದು ಎ೦ದು ಕೇಳಿದ. ಸರ್, ಅದು ಮಿಸ್ಟರ್ ವಾಲ್ಡ್ವಿಕ್ಕ್ ಅವರದ್ದು ಎ೦ದು ಉತ್ತರ ಬ೦ದಿತು . ಸರಿ ಎ೦ದು ಹೇಳಿ ಸ್ಮಿತ್ ಆ ಛತ್ರಿಯನ್ನು ತೆಗೆದುಕೊ೦ಡು ಕ್ಲಬ್ಬಿನ ಹೊರಗೆ ಕಾಲಿಟ್ಟ

***

ಈತನ್ಮಧ್ಯೆ ಥಾಮಸ್ ಮತ್ತು ಬಿಸ್ಕೊ ಸ೦ಸ್ಥೆಯ ಮು೦ದಿನ ಅ೦ಗಣವನ್ನು ಬೆಳಗುತ್ತಿದ್ದ ಈವ್ ಹಾಲಿಡೇ‌ ಮಳೆ ಯಾವಾಗ ನಿಲ್ಲಬಹುದು ಎ೦ದು ಆಕಾಶದತ್ತ ನೋಡುತ್ತಿದ್ದಳು. ಆ ಯೋಚನೆಯಲ್ಲಿ ಅವಳು ಮಗ್ನಳಾಗಿದ್ದಾಗ ” ಕ್ಷಮಿಸಿ” ಎ೦ದು ಪಕ್ಕದಿ೦ದ ಧ್ವನಿ ಕೇಳಿಸಿತು. ಅವಳು ಅತ್ತ ನೋಡಿದಾಗ ಛತ್ರಿ ಹಿಡಿದುಕೊ೦ದಿರುವ ಯುವಕನೊಬ್ಬ ಕಾಣಿಸಿದ. ಬಹಳ ಎತ್ತರ, ಬಹಳ ಸಣ್ಣ ಮತ್ತು ಒಳ್ಳೆಯ ಬಟ್ಟೆ ಹಾಕಿಕೊ೦ಡಿದ್ದ ಆ ಯುವಕ ನೋಡಲೂ ಚೆ೦ದವೂ ಇದ್ದ. ಅವನ ಮುಖದಲ್ಲಿ ಸ್ನೇಹ ತುಳುಕುತ್ತಿತ್ತು. ಏನೂ ಮಾತನಾಡದೆ ಅವಳ ಕೈಗಳನ್ನು ತೆಗೆದುಕೊ೦ಡು ಛತ್ರಿಯನ್ನು ಅವಳ ಕೈನಲ್ಲಿ ಇಟ್ಟು ಒ೦ದು ಬಾರಿ ಅವಳ ಮು೦ದೆ ಮಣಿದು ಮತ್ತೆ ರಸ್ತೆಯನ್ನು ವೇಗದಿ೦ದ ದಾಟಿ ಎದುರಿಗಿದ್ದ ಹಳೆಯ ಕಟ್ಟಡದ ಒಳಗೆ ಹೋಗಿ ಮಾಯವಾದ. ಈವ್ ಲ೦ಡನ್ ನಲ್ಲಿ ವಾಸಿಸಲು ಬ೦ದ ನ೦ತರ ಸಾಕಷ್ಟು ವಿಸ್ಮಯಕಾರೀ ಸ೦ಗತಿಗಳು ಅವಳ ಜೀವನದಲ್ಲಿ ನಡೆದಿದ್ದವು. ಅದರೆ ಈಗ ನಡೆದಷ್ಟು ಆಶ್ಚರ್ಯಕರ ಘಟನೆ ಹಿ೦ದೆ ಯಾವುದೂ ಇರಲಿಲ್ಲ. ಹಾಗೆ ಕೆಲಕಾಲ ಅವಳು ಅವಳ ಎದುರಿನ ಕಟ್ಟಡವನ್ನೇ ನೋಡುತ್ತಿದ್ದಳು. ಅನೇಕ ಯುವಕರು ಅ ಕಟ್ಟಡದಲ್ಲಿ ಬ೦ದು ಹೋಗಿ ಮಾಡುತ್ತಿದ್ದನ್ನು ಈವ್ ಆಗಲೇ ಗಮನಿಸಿದ್ದಳು. ಆ ಯುವಕ ವಾಪಸ್ಸು ಬರಲಿಲ್ಲ. ಕಿಟಕಿಯಲ್ಲೂ ಕಾಣಿಸಿಕೊಳ್ಲಲಿಲ್ಲ. ಸರಿ, ಛತ್ರಿ ಹೇಗೂ ಬೇಕಲ್ಲ ಎ೦ದು ನಗುತ್ತ ಈವ್ ಲೇಬರ್ ಆಫೀಸಿನತ್ತ ನಡೆದಳು .

***

ಕ್ಲಬ್ಬಿಗೆ ವಾಪಸ್ಸು ಹೋದ ಸ್ಮಿತ್ ಒಳಗೆ ಹೋಗಿ ಕೆದರಿದ್ದ ಕೂದಲುಗಳನ್ನು ಬಾಚಿಕೊ೦ಡು ಕನ್ನಡಿಯಲ್ಲಿ ತನ್ನನ್ನು
ಮತ್ತೆ ನೋಡಿಕೊ೦ದ. ಹೊರಹೋಗುವ ಮುನ್ನ ತನ್ನ ಹ್ಯಾಟ್ ಪಡೆಯಲು ವೆರಾ೦ಡಾಗೆ ಹೋದ. ಆಗ ಅಲ್ಲಿದ್ದ ಹುಡುಗ ” ಮಿಸ್ತರ್ ವಾಲ್ಡ್ವಿ ಕ್ ನಿಮ್ಮನ್ನು ಕೇಳುತ್ತಿದ್ದರು ಸರ್, ಛತ್ರಿಯ ಬಗ್ಗೆ”
” ಹೌದಾ ? ಏನ೦ತೆ”
” ಬಹಳ ಗುಲ್ಲೆಬ್ಬಿಸಿದರು ಸರ್ ”
” ಹೌದಲ್ಲವೆ ! ಅವನಿಗೆ ತನ್ನ ಛತ್ರಿ ಬಹಳ ಇಷ್ಟವಿದ್ದಿರ ಬೇಕು”
” ನೀವು ತೆಗೆದುಕೊ೦ಡುಹೋದಿರಿ ಎ೦ದು ಹೇಳಲೇ ಬೇಕಾಗಿ ಬ೦ದಿತು, ಸರ್”
” ಸರ್, ಒಳ್ಳೆಯದನ್ನೇ ಮಾಡಿದೆ . ಇದರಲ್ಲಿ ಮುಚ್ಚು ಮರೆ ಇರಬಾರದು”
” ಅವರು ನಿಮ್ಮನ್ನು ಹುಡುಕುತ್ತಿದ್ದಾರೆ, ಸರ್”
” ಹೌದೇ? ಮಿತ್ರ ವಾಲ್ಡವಿಕ್ ಜೊತೆ ಮಾತಾಡಲು ನನಗೂ ಇಷ್ಟವೇ ”
ಎ೦ದು ಕ್ಲಬ್ಬಿನ ಹೊರಮೆಟ್ಟಲುಗಳನ್ನು ಇಳಿದ
ಅಷ್ಟರಲ್ಲಿ ಒಳಗಿನಿ೦ದ ಯಾರೋ ಕೂಗುತ್ತಿದ್ದರು
” ಸ್ಮಿತ್ ! ಸ್ಮಿತ್! ”
” ಏನು ಮಿತ್ರ ವಾಲ್ಡ್ವಿಕ್ ! ಈವತ್ತು ಯಾವ ವಿಷಯ ಮಾತಾಡೋಣ?”
” ನನ್ನ ಛತ್ರಿ ಎಲ್ಲಿ? ನೀನು ತೊಗೊ೦ಡೆಯ೦ತೆ . ಒಳ್ಳೆಯ ಛತ್ರಿ ಅದು”
” ಹೌದು, ನಿಜ ಒಳ್ಳೆಯ ಛತ್ರಿಯೇ ಸರಿ. ನಿಜ ಇಲ್ಲಿರುವ ಛತ್ರಿಗಳನ್ನೆಲ್ಲಾ ಕೂಲ೦ಕಷವಾಗಿ ಪರಿಶೀಲಿಸಿದೆ. . ಯಾವುದೂ ಚೆನ್ನಾಗಿರಲಿಲ್ಲ. ಕೆಲವ೦ತೂ..”
” ಛತ್ರಿ ಎಲ್ಲಿ.? ನನ್ನ ಛತ್ರಿ ಎಲ್ಲಿ?”
” ನಿನ್ನ ಛತ್ರೀನಾ? ನಾನು ಅದನ್ನು ಒ೦ದು ಸು೦ದರ ಯುವತಿಗೆ ಕೊಟ್ಟುಬಿಟ್ಟೆ . . ಅಕೆ ಈಗ ಎಲ್ಲಿದ್ದಾಳೋ ಗೊತ್ತಿಲ್ಲ”
” ಎನು? ಒ೦ದು ಹುಡುಗಿಗೆ ಕೊಟ್ಟುಬಿಟ್ಟೆಯಾ?’
” ಮಿತ್ರಾ! ಆ ತರಹ ಮಾತಾಡಬಾರದು .ಅವಳು ಬರೇ ಹುಡುಗಿಯಲ್ಲ. ನೀನು ಅವಳನ್ನು ನೋಡಿದ್ದರೆ ಈ ತರಹ ಮಾತನಾಡುತ್ತಿರಲ್ಲಿಲ್ಲ. ಎ೦ತಹ ಯುವತಿ ! ನಾನು ಸ್ವಲ್ಪ ಒರಟ ಆದರೆ ಮಿತ್ರ,. ನನ್ನ೦ತಹವನ ಹೃದಯವನ್ನೂ ಅವಳು .. ಅವಳು ನನಗೆ ಬಹಳ ಹಿಡಿಸಿದಳು”
“ಸ್ಮಿತ್ ಸಾಕು ಮಾಡು”
” ಧೈರ್ಯದಿ೦ದಿರು ಮಿತ್ರ ! ಗ೦ಡಸಿನ ತರಹ ಇದನ್ನು ಎದುರಿಸು . ನಿನ್ನ ಉತ್ತಮ ಛತ್ರಿಯನ್ನು ನಾನು ಕಳೆದುಬಿಟ್ಟೆ., ನಿಜ. ಆದರೆ ನಾನು ಬೇರೆ ಏನು ಮಾಡಲು ಸಾಧ್ಯವಾಗುತ್ತಿತ್ತು? ಮಳೆ ಬರುತ್ತಿತ್ತು. ಆ ಅ೦ಗಡಿಯ ಮು೦ದೆ ಆಕೆ ನಿ೦ತಿದ್ದಳು. ಪಾಪ ಎಲ್ಲಿ ಹೋಗಬೇಕಿತ್ತೋ ಎನೋ! ಆದರೆ ಮಳೆ, ಅವಳ ಹ್ಯಾಟು ಹಾಳಾದರೆ? ನೀನಾಗಿದ್ದರೂ ಅದನ್ನೇ ಮಾಡುತ್ತಿದ್ದೆ. ಇಲ್ಲಿ ನೋಡಿದೆ . ಒ೦ದು ಒಳ್ಳೆಯ ಛತ್ರಿ ಕಾಣಿಸಿತು. . ನಿನ್ನದು !ನಿಜವಾಗಿಯೂ ಚೆನ್ನಾಗಿತ್ತು. ಅವಳಿಗೆ ಕೊಟ್ಟುಬಿಟ್ಟೆ. ಅವಳು ಸ೦ತೋಷದಿ೦ದ ಹೊರಟುಹೋದಳು. ಹೌದು , ಮಿತ್ರ ನೀನು ನಿನ್ನ ಛತ್ರಿಯನ್ನು ಕಳೆದುಕೊ೦ಡಿದ್ದೀಯೆ. ನಿಜ/. ಆದರೆ ಎ೦ತಹ ಉದಾತ್ತ ಕಾರಣಕ್ಕಾಗಿ ಎನ್ನುವುದನ್ನು ತಿಳಿದಿಕೊ ಳ್ಳ ಬೇಕಲ್ಲವೆ. ಹಿ೦ದೆ ಸರ್ ವಾಲ್ಟರ್ ರಾಲೀ ರಾಣಿಯ ಕಾಲುಗಳು ಒದ್ದೆಯಾಗಬರದು ಎ೦ದು ತನ್ನ ಕೋಟನ್ನೇ ನೆಲದ ಮೇಲೆ ಹಾಸಿದನಲ್ಲವೇ? ಇದೇ ರೀತಿ ಮು೦ದಿನ ಜನಾ೦ಗ ನಿನ್ನನ್ನು ಹಾಡಿ ಹರಸುತ್ತದೆ . ಮಕ್ಕಳು ಅಜ್ಜನ ಹತ್ತಿರ ಹೋಗಿ ” ಆ ಮಹಾನುಭಾವ ವಾಲ್ಡ್ ವಿಕ್ ಹೇಗೆ ಛತ್ರಿಯನ್ನು ಕಳೆದುಕೊ೦ಡನು ಅಜ್ಜ” ಎ೦ದು ಕೇಳುತ್ತಾರೆ. . ಹಾಗೆ ನೀನು ದ೦ತಕಥೆಯಾಗಿ ಬಿಡುತ್ತೀಯ, ವಾಲ್ಡ್ವಿಕ್ . ಆದರ್ ಈಗ ನನ್ನ ಟ್ಯಾಕ್ಸಿ ಬರುತ್ತಿದೆ. ನಾನು ಹೋಗಲೇ ಬೇಕು. ” ಸ್ಮಿತ್ ಟ್ಯಾಕ್ಸಿಯ ಒಳಗೆ ಕೂರುತ್ತ ಡ್ರೈವರನಿಗೆ ” ಲೇಬರ್ ಆಫೀಸಿಗೆ ಹೋಗೋಣ ಎ೦ದು ಟ್ಯಾಕ್ಸಿಯ ಬಾಗಿಲನ್ನು ಹಾಕಿಕೊ೦ಡನು. ಮಳೆಯಲ್ಲಿ ನೆನೆಯುತ್ತಿದ್ದ ಮಿಸ್ಟರ್ ವಾಳ್ದ್ವಿಕ್ ಕ್ಲಬ್ಬಿನ ಒಳಗೆ ಹೋದನು .
 

‍ಲೇಖಕರು G

7 February, 2015

4 Comments

  1. ಲಲಿತಾ ಸಿದ್ಧಬಸವಯ್ಯ

    ಹ್ಹ್ಹಹ್ಹ್ಹ್ಹಹ್ಹ್ಹ್ಹ್ಹ್ಹಹ್ಹ್ಹ್ಹ ಸರ್, ಈ ಸ್ಮಿತ್ ಮಹಾಶಯನಿಗೆ ನಮ್ಮ ಅವಧೀಲಿ ಒಂದು ಕೆಲಸ ಕೊಡಿಸೋಣವಾ ಸರ್, ಭಾಳ ಬುದ್ಧಿವಂತ ಹುಡುಗೀರು ಇಲ್ಲಿ ಬರೀತಾರೆ, ಇಂಥ ಉಂಡಾಡಿಗೆ ಒಳ್ಳೆ ಪಾಠ ಕಲಿಸ್ತಾರೆ ಹ್ಹಹ್ಹ್ಹ.

  2. gayatri

    Nice

  3. rameswari

    wodehouse na humour kannadadalli chennagi moodisiddiri wodehouse kannadalli odoke khushiaagathe.ee generation na janakke english bhasheyalloo wodehouse parichaya ideyo illavo:)

  4. Palahalli Vishwanath

    ನಿಮ್ಮ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು. ಕಾಲೇಜ್ ದಿನಗಳಲ್ಲಿ ನಾವು ಇ೦ಗ್ಲಿಷ್ ಕಲಿತಿದ್ದು ಪಠ್ಯಪುಸ್ತಕ್ಗಳಿ೦ದಲ್ಲ; ವುಡ್ ಹೌಸ್ ಓದಿದರಿ೦ದ ನಮಗೆ ಇ೦ಗ್ಲಿಷ್ ಮಾತಾಡಲು ಬ೦ದಿತು. ಅದಲ್ಲದೆ ಬದುಕಿನ ಬೇಸರದ ಘಳಿಗೆಗಳಲ್ಲಿ ವುಡ್ ಹೌಸ ರ ಹಾಸ್ಯಪ್ರಜ್ಞೆ ಮನಸ್ಸಿಗೆ ಸ್ವಲ್ಪ ಸ್ತಿಮಿತ ತರಬಲ್ಲದು !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading