
ಪ್ರತೀ ವರ್ಷ ಹುಟ್ಟಿದ ದಿನ ಮನೆಯಲ್ಲಿ ಕುಟುಂಬದವರೊಂದಿಗೆ ಆರಾಮಾಗಿ ದಿನ ಕಳೆಯುತ್ತಿದ್ದವಳಿಗೆ ಈ ವರ್ಷ ಬಹಳ ವಿಭಿನ್ನವೆನಿಸುತ್ತಿದೆ. ಬೆಳಿಗ್ಗೆನೇ ಹೊರಟು ರಾಜೇಂದ್ರ ಪ್ರಸಾದ ಜೊತೆ ಕೂತು ಪುಸ್ತಕದ ಅಂತಿಮ ಹಂತದ ಕೆಲಸ ಮುಗಿಸಿದ್ದು ಏನೊ ಒಂದು ಸಾರ್ಥಕತೆ ಒಂದು ರೀತಿಯ ನಿರಾಳ ಭಾವ..
ಅಂದಹಾಗೆ ಇದೇ ಸುಸಂದರ್ಭವೆನ್ನಿಸುತ್ತಿರುವುದರಿಂದ ಪುಸ್ತಕದ ವಿಚಾರವನ್ನು ಈ ಮೂಲಕ ಪ್ರಕಟಪಡಿಸಲು ಇಚ್ಛಿಸುತ್ತೇನೆ.
ಇಲ್ಲಿಯವರೆಗೆ ಸಣ್ಣ ಪುಟ್ಟ ಲೇಖನಗಳು, ಬರಹಗಳು, ಅನುವಾದಗಳಿಗೆ ನನ್ನನ್ನು ಸೀಮಿತಗೊಳಿಸಿಕೊಂಡಿದ್ದವಳು, ಒಬ್ಬಳು ವಿಮರ್ಶಕಿಯಾಗಿ, ಮಾತುಗಾರ್ತಿಯಾಗಿ, ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ವಿಶ್ಲೇಷಕಿಯಾಗಿ ಪರಿಚಯಿಸಿಕೊಂಡಿದ್ದವಳು ಈಗ ಆತ್ಮಕಥನವೊಂದನ್ನು ಕನ್ನಡಕ್ಕೆ ಅನುವಾದಿಸಿ ನಿಮ್ಮ ಮುಂದಿಡುತ್ತಿದ್ದೇನೆ.
ಪುಸ್ತಕವನ್ನು ‘ಸಂಕಥನ’ ಹೊರತರುತ್ತಿದ್ದು, ಬರಹಗಾರ್ತಿಯಾಗಿ, ಲೇಖಕಿಯಾಗಿ ಇದು ನನ್ನ ಚೊಚ್ಚಲ ಪ್ರಯತ್ನ.
ಇದರ ಕುರಿತು ಮತ್ತಷ್ಟು ವಿವರಗಳು ಶೀಘ್ರದಲ್ಲೇ ತಿಳಿಸುತ್ತೇನೆ… ನಿಮ್ಮೆಲ್ಲರ ಪ್ರೋತ್ಸಾಹ, ಹಾರೈಕೆಯ ನಿರೀಕ್ಷೆಯೊಂದಿಗೆ….
-ಪಲ್ಲವಿ ಇಡೂರ್






ಲೇಖಕಿಯಾಗಿ, ಬರಹಗಾರ್ತಿಯಾಗಿ ಸಂಕಲನ ಹೊರತರುತ್ತಿರುವ ನಿಮ್ಮ ಪುಸ್ತಕ ಜೊಲಾಂಟಾ (ಆತ್ಮಕಥನ) ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ