ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪರಿಕಾರಗಳು…

ಜಹಾನ್ ಆರಾ ಕೋಳೂರು 

ನಿನ್ನ ಅಧರದಲ್ಲಿ ಎನ್ನ ಹೆಸರು ಉಲಿದರೆ
ಉಸಿರು ಉಸಿರಾಡುತ್ತದೆ ಮತ್ತೆ
ನಿನ್ನ ಕನಸಿಗಾಗಿ ಎನ್ನ ಕಣ್ಣು ನಿದ್ರಿಸಿದರೆ
ಕನಸುಗಳೂ ಕನಸು ಕಾಣುತ್ತವೆ ಮತ್ತೆ

ವಿರಹದ ಅಂತರ ಸುಳಿದಾಡದಿರಲಿ
ಪ್ರೇಮದ ಹೂಮಳೆ ಸುರಿಯುತ್ತಿರುವಾಗ,
ಯಾವ ಸಂಕೋಲೆ ಸಂಚಾರ ವಿರೋಧಿಸದಿರಲಿ
ನಿನ್ನ ಕೈ ಹಿಡಿದು ನಡೆಯುತ್ತಿರುವಾಗ

ಯಾವ ನಿಯಮಗಳ ಸೀಮೆಯ ಮುಳ್ಳಾಗದಿರಲಿ ಪ್ರೀತಿಸುತ್ತಿರುವವರು ಪ್ರೀತಿಸುತ್ತಲೇ ಇರಲಿ
ನಿಜ ಪ್ರೇಮದ ಇತಿಹಾಸ ಬರೆಯುತ್ತಲೇ ಇರಲಿ
ನಮ್ಮ ಹೊಸ ರಿವಾಜು ಪ್ರೇಮಾಲಯದ ಆವಾಜ್ ಆಗಲಿ

ಆಕಾಶದ ಒಂಟಿತನಕ್ಕೆ ಮುತ್ತು ಕಳಿಸಿ ಮುದ್ದಾಡುವ ಮೋಡಗಳ ಮರೆಗೆ ನಿಲ್ಲಿಸಿ ನಿರ್ಮಲಾನಂದದ ಮಳೆ ತರುವ ಚುಕ್ಕಿ ತಾರೆಗಳ ನೃತ್ಯಕ್ಕೆ ಗಾಳಿಯ ಸಂಗೀತವಿರಿಸಿ
ಬಾ ಮತ್ತೆ ಪ್ರೀತಿಯನ್ನು ಭುವಿಗೆ ತರುವ

‍ಲೇಖಕರು Admin

3 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading