ಯಶ್(ಸ್ವಿ) ಚೋಪ್ರಾ
-ನಾ ದಿವಾಕರ
ಭಾರತೀಯ ಚಿತ್ರರಂಗದ ನೂರು ವರ್ಷಗಳ ಇತಿಹಾಸವನ್ನು ನೆನಪಿಸಿಕೊಳ್ಳುವಾಗ ಕೆಲವು ಹೆಸರುಗಳನ್ನು ಉಲ್ಲೇಖಿಸದೆ ಇರಲಾಗುವುದಿಲ್ಲ. ಅಂತಹ ಮಹನೀಯರ ಪೈಕಿ ಒಬ್ಬರಾದ ಪ್ರಣಯ ರಾಜ, ಭಾವನೆಗಳ ಒಡೆಯ, ಸೌಂದರ್ಯೋಪಾಸಕ, ಸುಂದರ ತಾಣಗಳ ಅರಾಧಕ ಯಶ್ ಚೋಪ್ರಾ ತಮ್ಮ 80ನೆಯ ವಯಸ್ಸಿನಲ್ಲಿ ಇಹಲೋಕದ ಪಯಣವನ್ನು ಮುಗಿಸಿ ಒಂದು ಅದ್ಭುತ ಅಧ್ಯಾಯಕ್ಕೆ ಅಂತ್ಯ ಹಾಡಿದ್ದಾರೆ. ಹಲವಾರು ಅತ್ಯುತ್ತಮ ಪ್ರಣಯಭರಿತ , ಸಂಗೀತಮಯ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ ಛೋಪ್ರಾ ತಮ್ಮ ಚಿತ್ರಗಳ ಮೂಲಕ ದೇಶದ ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದು ನೆಲೆಸಿದ ಸಿಖ್ ಜನಾಂಗದ ಕಥಾನಕವನ್ನೂ ಪರದೆಯ ಮೇಲೆ ಬಿಂಬಿಸಿ ವಿಜೃಂಭಿಸಿದ್ದಾರೆ. ಯುವ ಪೀಳಿಗೆಯವರಿಗೆ ಛೋಪ್ರಾ ನೆನಪಾಗುವುದು ಸ್ವತಃ ಅವರೇ ನಿದರ್ೇಶಿಸಿದ ಚಾಂದ್ನಿ, ದಿಲ್ ತೊ ಪಾಗಲ್ ಹೈ, ವೀರ್ಝರಾ ಚಿತ್ರಗಳ ಮೂಲಕ ಅಥವಾ ಅವರ ಪುತ್ರ ಆದಿತ್ಯ ನಿದರ್ೇಶಿಸಿದ ದಿಲ್ವಾಲೆ ದುಲ್ಹನಿಯಾ ಲೇಜಾಯೇಂಗೆ ಚಿತ್ರದ ಮೂಲಕ. ಆದರೆ ಯಶ್ ಚೋಪ್ರಾ ಅವರ ಪ್ರತಿಭೆ ಮತ್ತು ಸಾಮಥ್ರ್ಯದ ಸಮಗ್ರ ಪರಿಚಯ ಮಾಡಿಕೊಳ್ಳಲು ಐದು ದಶಕಗಳಷ್ಟು ಹಿಂದೆ ಪಯಣಿಸಬೇಕಾಗುತ್ತದೆ.
ಸೆಪ್ಟಂಬರ್ 27 1932ರಲ್ಲಿ ಜನಿಸಿದ ಚೋಪ್ರಾ ಒಬ್ಬ ಇಂಜಿನಿಯರ್ ಆಗಲು ಬಯಸಿದ್ದರೂ ಕೊನೆಗೆ ತಮ್ಮ ಭವಿಷ್ಯವನ್ನು ಕಂಡುಕೊಂಡಿದ್ದು ಹಿಂದಿ ಚಿತ್ರರಂಗದಲ್ಲಿ. ಆರಂಭದಲ್ಲಿ ಐ.ಎಸ್.ಜೋಹರ್ ಅವರ ಬಳಿ ಸಹನಿದರ್ೇಶಕರಾಗಿ ದುಡಿದ ಚೋಪ್ರಾ ನಂತರ ತನ್ನ ಸೋದರ ಬಿ.ಆರ್. ಚೋಪ್ರಾ ಗರಡಿಯಲ್ಲೂ ಪಳಗಿದ್ದರು. 1959ರಲ್ಲಿ ಧೂಲ್ ಕಾ ಫೂಲ್ ಚಿತ್ರದ ಮೂಲಕ ಸ್ವಂತ ನಿದರ್ೇಶಕನಾಗಿ ಪಾದಾರ್ಪಣೆ ಮಾಡಿದ ಚೋಪ್ರಾ ನಂತರ ಧರ್ಮಪುತ್ರ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ್ದರು. ದೇಶದ ವಿಭಜನೆಯ ನಂತರದಲ್ಲಿ ದೇಶದಲ್ಲಿನ ಎಲ್ಲ ಮುಸ್ಲಿಮರನ್ನೂ ಹೊರಗೋಡಿಸುವ ಕಟ್ಟಾ ಆರೆಸ್ಸೆಸ್ ಕಾರ್ಯಕರ್ತನಾಗಿರುವ
ಧರ್ಮಪುತ್ರ ಚಿತ್ರದ ನಾಯಕ ಕೊನೆಯಲ್ಲಿ ತಾನೂ ಜನ್ಮತಃ ಮುಸ್ಲಿಂ ಎಂದು ಅರಿವಾದಾಗ ಅನುಭವಿಸುವ ಮಾನಸಿಕ ಯಾತನೆಯನ್ನು ಈ ಚಿತ್ರದಲ್ಲಿ ಯಶ್ ವಿಹಂಗಮವಾಗಿ ವ್ಯಕ್ತಪಡಿಸಿದ್ದಾರೆ. ಚಿತ್ರ ಯಶಸ್ವಿಯಾಗದಿದ್ದರೂ ಚೋಪ್ರಾ ಅವರ ನಿದರ್ೇಶನ ಮೆಚ್ಚುಗೆ ಗಳಿಸಿತ್ತು. 1965ರಲ್ಲಿ ಬಲರಾಜ್ ಸಹಾನಿ, ಶಶಿಕಪೂರ್, ಸುನಿಲ್ದತ್, ರಾಜ್ಕುಮಾರ್ ಅವರನ್ನೊಳಗೊಂಡ ಮಲ್ಟಿ ಸ್ಟಾರರ್ ಚಿತ್ರ ವಕ್ತ್ ನಿಮರ್ಿಸುವ ಮೂಲಕ ಯಶ್ ಚೋಪ್ರಾ ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮವನ್ನೇ ನೀಡಿದ್ದರು.
ಚಿಕ್ಕಂದಿನಲ್ಲೇ ಹೆತ್ತವರಿಂದ ಬೇರಾಗುವ ಮಕ್ಕಳು, ಛಿದ್ರವಾಗುವ ಕುಟುಂಬ, ಮಕ್ಕಳ ವಿಭಿನ್ನ ಧೋರಣೆ ಮತ್ತು ಜೀವನ ಶೈಲಿ ಮತ್ತು ಕುಟುಂಬದ ಒಂದಾಗುವಿಕೆ ಈ ಕಥಾವಸ್ತು ಇಂದಿಗೂ ಬಹುಪಾಲು ಚಿತ್ರಗಳಲ್ಲಿ ಕಂಡುಬಂದರೆ ಅದರ ಬುನಾದಿ ಇರುವುದು ವಕ್ತ್ ಚಿತ್ರದಲ್ಲೇ ಎಂದು ಹೇಳಬೇಕಿಲ್ಲ. ಬಾಲಿವುಡ್ ಚಿತ್ರರಂಗದಲ್ಲಿ ಮಲ್ಟಿ ಸ್ಟಾರರ್ ಚಿತ್ರಗಳ ಪರಂಪರೆ ಆರಂಭವಾಗಿದ್ದೂ ಈ ಚಿತ್ರದಿಂದಲೇ. ಆಧುನಿಕ ಯುವ ಪೀಳಿಗೆಯನ್ನು ಆಕಷರ್ಿಸುವಂತಹ ಚಿತ್ರಗಳನ್ನು ನಿಮರ್ಿಸುತ್ತಿದ್ದ ಯಶ್ ಚೋಪ್ರಾ ಎಂದಿಗೂ ಅಶ್ಲೀಲತೆ, ಅಬ್ಬರ, ಅಸಭ್ಯತೆಗೆ ಮೊರೆ ಹೋದವರಲ್ಲ. ಈ ಅಂಶ ಸಾಬೀತಾಗುವುದು 1970ರಲ್ಲಿ ಅವರು ನಿಮರ್ಿಸಿದ ಕೆಲವು ಅತ್ಯುತ್ತಮ ಚಿತ್ರಗಳಿಂದ. 1973ರಲ್ಲಿ ತಮ್ಮದೇ ಆದ ಯಶ್ ರಾಜ್ ಫಿಲಂಸ್ ಸಂಸ್ಥೆಯನ್ನು ಆರಂಭಿಸಿ 1973ರಲ್ಲಿ ದಾಗ್ ಎಂಬ ಪ್ರಣಯ ಭರಿತ ಚಿತ್ರ ನಿದರ್ೇಶಿಸಿದ್ದರು. ಈ ಚಿತ್ರದ ಯಶಸ್ಸಿನ ನಂತರ ಹಿಂದಿರುಗಿ ನೋಡದ ಚೋಪ್ರಾ 1970ರ ಆಕ್ಷನ್ ಹೀರೋ ಅಮಿತಾಬ್ ಬಚ್ಚನ್ಗೆ ಒಂದು ಹೊಸ ಆಯಾಮ ಒದಗಿಸಿಕೊಟ್ಟ ನಿದರ್ೇಶಕರೆಂದರೆ ಅತಿಶಯೋಕ್ತಿಯೇನಲ್ಲ.
1969ರಲ್ಲಿ ಆದ್ಮಿ ಔರ್ ಇನ್ಸಾನ್ ಚಿತ್ರದ ಮೂಲಕ ಧಮೇಂದ್ರನಿಗೆ ಜನಪ್ರಿಯತೆ ನೀಡಿದ ಯಶ್ ನಂತರ ಇತ್ತೇಫಾಕ್ ಚಿತ್ರದಲ್ಲಿ ರಾಜೇಶ್ ಖನ್ನಾ ಅವರಿಗೂ ಅವಕಾಶ ಒದಗಿಸಿದ್ದರು. ಮಧ್ಯಂತರ ಇಲ್ಲದೆ, ಹಾಡುಗಳು ಇಲ್ಲದೆ ನಿಮರ್ಿಸಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಇತ್ತೇಫಾಕ್ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ಒಂದು ಮೈಲಿಗಲ್ಲು ನಿಮರ್ಿಸಿದ್ದಂತೂ ಸತ್ಯ. ವಕ್ತ್ ಚಿತ್ರದ ನಂತರ ಈ ಚಿತ್ರಕ್ಕೂ ಫಿಲಂಫೇರ್ ಪ್ರಶಸ್ತಿ ಗಳಿಸಿದ್ದರು. 1975ರಲ್ಲಿ ದೀವಾರ್ ಚಿತ್ರದ ಮೂಲಕ ಅಮಿತಾಬ್ ಬಚ್ಚನ್ ಅಪ್ರತಿಮ ನಾಯಕರಾಗಿ ಹೊರಹೊಮ್ಮಿದ್ದರೆ ಅದರ ಶ್ರೇಯ ಸಲ್ಲಬೇಕಾದುದು ಯಶ್ ಚೋಪ್ರಾ ಅವರಿಗೆ ದೀವಾರ್ ನಂತರ ತ್ರಿಶೂಲ್, ಕಭೀಕಭೀ, ಕಾಪಾ ಪತ್ಥರ್, ಸಿಲ್ಸಿಲಾ ಮೊದಲಾದ ಚಿತ್ರಗಳನ್ನು ನಿಮರ್ಿಸಿ ನಿದರ್ೇಶಿಸುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ದೀವಾರ್ ಚಿತ್ರಕ್ಕೆ ಮತ್ತೊಮ್ಮೆ ಫಿಲಂಫೇರ್ ಪ್ರಶಸ್ತಿ ದೊರೆತಿತ್ತು. ಕಾಲಾಪತ್ಥರ್ ಚಿತ್ರದಲ್ಲಿ ಕಲ್ಲಿದ್ದಲು ಗಣಿ ಕಾಮರ್ಿಕರ ಬವಣೆ, ಮಾಫಿಯಾಗಳ ಅಧಿಪತ್ಯ ಮತ್ತು ನೌಕಾದಳ ಕ್ಯಾಪ್ಟನ್ ಆಗಿ ಒಂದು ಹಡಗು ಮುಳುಗಿದಾಗ ಪ್ರಯಾಣಿಕರನ್ನು ರಕ್ಷಿಸದೆ ಪರಾರಿಯಾದ ವ್ಯಕ್ತಿ ಗಣಿ ಕಾಮರ್ಿಕರನ್ನು ಸಾವಿನ ದವಡೆಯಿಂದ ಪಾರು ಮಾಡುವ ನಾಯಕನ ವ್ಯಕ್ತಿತ್ವವನ್ನು ಚೋಪ್ರಾ ಅದ್ಭುತವಾಗಿ ಚಿತ್ರಿಸಿದ್ದರು. ಇಂದಿಗೂ ಕಾಲಾಪತ್ಥರ್ ಭಾರತೀಯ ಚಿತ್ರರಂಗದ ಒಂದು ಅತ್ಯದ್ಭುತ ಚಿತ್ರವಾಗಿ ನಿಲ್ಲುತ್ತದೆ.
1980ರ ದಶಕದಲ್ಲಿ ಸಿಲ್ಸಿಲಾ, ಮಶಾಲ್ ಮತ್ತು ವಿಜಯ್ ಚಿತ್ರಗಳು ಸಾಕಷ್ಟು ಯಶಸ್ಸು ಕಾಣದೆ ಹೋದರೂ 1989ರಲ್ಲಿ ಚಾಂದ್ನಿ ಚಿತ್ರದ ಮೂಲಕ ಯಶ್ ಚೋಪ್ರಾ ಮತ್ತೊಮ್ಮೆ ತಮ್ಮ ನೆಲೆ ಕಂಡುಕೊಂಡಿದ್ದರು. 1991ರಲ್ಲಿ ಚೋಪ್ರಾ ನಿದರ್ೇಶಿಸಿದ ಲಮ್ಹೆ ಸೂಪರ್ ಹಿಟ್ ಆಗಿದ್ದೇ ಅಲ್ಲದೆ ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿತ್ತು. ನಂತರ ಶಾರುಖ್ ಖಾನ್ ನಾಯಕರಾಗಿ ನಟಿಸಿದ ಡರ್ರ್ , ದಿಲ್ ತೋ ಪಾಗಲ್ ಹೈ, ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೇ, ವೀರ್ಝರಾ ಚಿತ್ರಗಳು ಗಲ್ಲಾಪೆಟ್ಟಿಯಲ್ಲಿ ಯಶಸ್ವಿಯಾಗಿದ್ದೇ ಅಲ್ಲದೆ ಯಶ್ ಚೋಪ್ರಾ ಅವರನ್ನು ಒಬ್ಬ ಯಶಸ್ವಿ ನಿದೇಶಕರಾಗಿ ರೂಪಿಸಿದ್ದವು. ನವಂಬರ್ನಲ್ಲಿ ಬಿಡುಗಡೆಯಾಗಲಿರುವ ಜಬ್ ತಕ್ ಹೈ ಜಾನ್ ಅವರ ಕೊನೆಯ ಚಿತ್ರವಾಗಿದೆ.
ಐದು ದಶಕಗಳಲ್ಲಿ ಐವತ್ತು ಚಿತ್ರಗಳನ್ನು ನಿದರ್ೇಶಿಸಿ ಒಬ್ಬ ಯಶಸ್ವಿ ನಿದರ್ೇಶಕರಾಗಿ ಅಚ್ಚಳಿಯದ ಹೆಸರು ಮಾಡಿದ ಯಶ್ ಚೋಪ್ರಾ ಗಳಿಸಿದ ಪ್ರಶಸ್ತಿಗಳು ಅನೇಕ. ಆರು ರಾಷ್ಟ್ರೀಯ ಪ್ರಶಸ್ತಿಗಳು, 11 ಫಿಲಂಫೇರ್ ಪ್ರಶಶ್ತಿಗಳು, ಅವುಗಳ ಪೈಕಿ ನಾಲ್ಕು ಅತ್ಯುತ್ತಮ ನಿದರ್ೇಶಕ ಪ್ರಶಸ್ತಿಗಳು ಯಶ್ ಚೋಪ್ರಾ ಬತ್ತಳಿಕೆಯಲ್ಲಿವೆ. 2001ರಲ್ಲಿ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ಪಡೆದ ಚೋಪ್ರಾ 2005ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ದೀವಾರ್, ತ್ರಿಶೂಲ್ ಮತ್ತು ಕಭೀಕಭೀ ಚಿತ್ರಗಳ ನಂತರ ಗ್ಲಾಮರ್ ಚಿತ್ರಗಳಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ, ಪ್ರೇಕ್ಷಕರನ್ನು ಮೂರು ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳುವ ತಮ್ಮ ಸಾಮಥ್ರ್ಯವನ್ನು ಕಳೆದುಕೊಂಡಂತೆ ತೋರಿದರೂ, ಯಶ್ ಚೋಪ್ರಾ ತಮ್ಮ ಚಿತ್ರಗಳಲ್ಲಿನ ಇಂಪಾದ ಸಂಗೀತ, ಅತ್ಯುತ್ತಮ ಹೊರಾಂಗಣ ಚಿತ್ರೀಕರಣ ಮತ್ತು ನಾಯಕ ನಾಯಕಿಯರ ನಟನೆಯ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಇದು ಒಬ್ಬ ಶ್ರೇಷ್ಠ ನಿದರ್ೇಶಕನ ಲಕ್ಷಣವಲ್ಲವೇ ?
ಐದು ದಶಕಗಳ ಪಯಣದಲ್ಲಿ ಪೀಳಿಗೆಯಿಂದ ಪೀಳಿಗೆಗೆ ತಮ್ಮ ಚಿತ್ರಗಳ ಮೂಲಕ ಸ್ಪಷ್ಟ ಸಂದೇಶಗಳನ್ನು ನೀಡುತ್ತಾ ಬಂದ ಯಶ್ ಚೋಪ್ರಾ ಬಾಕ್ಸ್ ಆಫೀಸ್ ದೃಷ್ಟಿಯಿಂದ ಹಲವು ವೈಫಲ್ಯಗಳನ್ನು ಕಂಡಿದ್ದರೂ ಚಿತ್ರಗಳ ಕಥಾವಸ್ತು ಮತ್ತು ಮನರಂಜನೆಯ ದೃಷ್ಟಿಯಿಂದ ಸೋಲಿಲ್ಲದ ಸರದಾರರಾಗಿಯೇ ಮೆರೆದು ಕಣ್ಮರೆಯಾಗಿದ್ದಾರೆ. ತಮ್ಮ ನಾಮಧೇಯದಲ್ಲೇ ಯಶಸ್ಸಿನ ಸಂಕೇತ ಹೊಂದಿರುವ ಚೋಪ್ರಾ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿರುವುದಂತೂ ಸ್ಪಷ್ಟ. ಕಭೀ ಕಭೀ ಹಮಾರೆ ದಿಲ್ ಮೆ ಯಶ್ ಜಿ ಕಾ ಖಯಾಲ್ ಆತಾ ಹೈ, ಆನಾ ಹೀ ಚಾಹಿಯೇ !






Bhavapoorna Shraddanjali – very nice
Good write up…ಆದ್ರೆ ನಿರ್ದೇಶಕ, ನಿರ್ಮಾಣ, ಕಾರ್ಮಿಕ…ಹೀಗೆ ಆರ್ಕಾವತ್ತು ಬರುವ ಪದಗಳುನ್ನು ಸರಿಯಾಗಿ ಟೈಪ್ ಮಾಡದೆ ಓದಲು ಕಿರಿಕಿರಿಯಾಗುತ್ತದೆ…
ಇದು ಪ್ರಕಟಣೆಯ ಸಂದರ್ಭದಲ್ಲಾಗುವ ಲೋಪ. ಟೈಪಿಂಗ್ ಅಲ್ಲ. ಬಹುಶಃ ತಂತ್ರಾಂಶದ ಬದಲಾವಣೆ ಕಾರಣ ಇರಬಹುದು. ಇಲ್ಲಿ ಯುನಿಕೋಡ್ ಬಳಕೆಯಾಗುತ್ತದೆ. ಓದಲು ಕಿರಿಕಿರಿ ಆಗುವುದು ಸಹಜ. ಸಂಪಾದಕರು ಗಮನಿಸಬೇಕು. ಧನ್ಯವಾದ.
ನಾ ದಿವಾಕರ