ಅಣ್ಣನಿಗೆ ಭೀಮಣ್ಣನೇ ಸಾಥ್.
ಎಲ್ಲ ವ್ಯಾಧಿಗಳಿಗೂ ಮೂಲ ಭ್ರಷ್ಟಾಚಾರ. ಭ್ರಷ್ಟಾಚಾರದಿಂದ ಬ್ಲ್ಯಾಕ್ ಮನಿ. ಬ್ಲ್ಯಾಕ್ಮನಿಯಿಂದ ಬೆಲೆ ಏರಿಕೆ ಅಥವಾ ಹೇರಿಕೆ.ಬೆಲೆಯೇರಿಕೆಯಿಂದ ಮತ್ತಷ್ಟು ಭ್ರಷ್ಟಾಚಾರ. ಕೃತಕ ಅಭಾವ- ಸಾಮಾನ್ಯರ ಬದುಕು ದುಸ್ತರ! ಲೀಡಿಂಗ್ ಟು ಅಪನಂಬಿಕೆ,ವಂಚನೆ, ಮೋಸ,ಕಡೆಗೆ ಕಳ್ಳತನ ದರೋಡೆ! ಹೀಗೆ ಒಳಗೊಳಗೇ ಉರಿಯುತ್ತದೆ- ಪೆಟ್ರೋಲ್ ಬೆಲೆಏರಿ ಉರಿಸುವಂತೆ ಜನಮನವ. ಇದೊಂದು (ಬೇ)ಚೈನ್ ರಿಯಾಕ್ಷನ್. ಇವೆಲ್ಲ ವೈಪರೀತ್ಯಗಳಿಗೆ ರಾಮಬಾಣದಂತೆ ಗೋಚರಿಸುತ್ತಿದೆ ಜನಲೋಕಪಾಲ್ ಬಿಲ್ಲು. ಒಂದು ಕಡೆ ಇಂತಹಾ ಬಿಲ್ಲನ್ನು ಹೆದೆಯೇರಿಸಿ ನಿಂತಿದ್ದಾನೆ ಒಬ್ಬ ಅಣ್ಣಾ- ತನ್ನ ಉಪವಾಸ ಬಲದಿಂದ! ಆ ಬಿಲ್ಲನ್ನು ನಿಶ್ಯಕ್ತಗೊಳಿಲು ಕವರ್ಟ್ ಆಗಿ ಪಣತೊಟ್ಟು ನಿಂತಂತಿದೆ UPAವೇಷದ ಹಜಾರ್ ಬಣ್ಣ – ಲೋಕಪಾಲ ಬಿಲ್ಲಿನ ಪರ ಜನಾಭಿಪ್ರಾಯದ ಸುನಾಮಿಯನ್ನು ಅವರ್ಟ್ ಮಾಡಲು? ಹೀಗಾಗಿ ಅಣ್ಣ ಉಪವಾಸ ಕೂತಾಗಲೆಲ್ಲಾ, ಬೀಸೋದೊಣ್ಣೆ ತಪ್ಪಿಸಿಕೊಳ್ಳಲೊಂದು ಭರವಸೆ ನೀಡುತ್ತ ಒಡಂಬಡಿಕೆಗೆ ರೀಚ್ ಆಗುವುದು, ನಂತರ b-reach ಮಾಡಿ, ಬುಡಬುಡಿಕೆ ಸದ್ದು ಹೊರಡಿಸುವುದು. ಸೊಸೈಟಿ ಸದಸ್ಯರನ್ನು ಟಾರ್-ಗೆಟ್ ಮಾಡಿ ಕಾಲೆಳೆಯುವುದು- ಕಾಲವನ್ನೂ ಸಹಾ ಎಳೆದು ಕಣ್ಣಾಮುಚ್ಚಾಲೆ ಆಡುವುದು. ಆದರೆ ಸ್ವಾತಂತ್ರ್ಯಾನಂತರ ಎಲ್ಲ ವಿದ್ಯಮಾನಗಳನ್ನು ಚೆನ್ನಾಗಿ ಅರಿತಿರುವ ಶ್ರೀ(ಅ) ಸಾಮಾನ್ಯರಿಗೆ- ಇದು ಇನ್ನು ಸಾಕು! ಅನ್ನಿಸಿದೆ. ಈ ಮಧ್ಯೆ ಬಲಿಷ್ಠ ಲೋಕಪಾಲಬಿಲ್ಲನ್ನು ರೂಪಿಸಲು ಎಲ್ಲ ಪ್ರಾಮಾಣಿಕ ಪ್ರಯತ್ನಗಳನ್ನು ಕೈಗೊಳ್ಳುವುದಾಗಿ ಸಂಸತ್ತಿನ ಸ್ಥಾಯಿ ಸಮಿತಿ ಅಧ್ಯಕ್ಷರು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಸುರ ಪೀಡಿತ ಪ್ರಜೆಗಳಿಗೆ ಲೋಕಪಾಲ ಮಸೂದೆ ಹೊಸವರ್ಷದ (೨೦೧೨) ಕೊಡುಗೆಯಾಗಿ ರೂಪುಗೊಳ್ಳಬೇಕಿದೆ. ಮಾಯನ್ ಕ್ಯಾಲೆಂಡರ್ ಮೇರೆಗೆ ೨೦೧೨ ರಲ್ಲಿ ಪ್ರಳಯವಾಗುವುದೋ ಇಲ್ಲವೋ, ಆದರೆ ಮುಟ್ಟಿದ್ದನ್ನೆಲ್ಲ ಮಾಯಮಾಡುವ, ಕಾಳ ಧನದ,ಪ್ರಳಯಾನ್ತಕಾರಿ ಭ್ರಷ್ಟಾಸುರರ ಕಬಂಧ ಬಾಹುಗಳನ್ನು ತುಂಡರಿಸುವ ಲೋಕಪಾಲ ಬಿಲ್ಲು ಜನರ ಕೈಗೆ ದೊರೆಯುವಂತಾದರೆ ಸಾಕು!
ನಾಗರೀಕ ಸೊಸೈಟಿಯೂ ಅಷ್ಟೇ, ಬಿಲ್ಲಿನಲ್ಲಿ ಒಮ್ಮೆಲೇ ಎಲ್ಲಾ ‘ ಹಾರ್ಡ್ ಅಂಡ್ ಫಾಸ್ಟ್’ ರೂಲುಗಳು ಬೇಕು ಅಂತಾ ಪಟ್ಟು ಹಿಡಿದು ‘ಫಾಸ್ಟ್’ ಕೂತರೆ ಸಮಸ್ಯೆ ಹಾರ್ಡನ್ ಆಗುವುದರಲ್ಲಿ ಅನುಮಾನವಿಲ್ಲ. ಅದಕ್ಕೇ, ಮೊದಲು ‘ಫಾಸ್ಟ್’ ಆಗಿ ಬಿಲ್ಲು ಜಾರಿಗೆ ಬರಲಿ. ಸಾಧ್ಯಾಸಾಧ್ಯತೆಗಳನ್ನು ಮನಗಂಡು, ಸೂಕ್ತ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಲು ಸಂವಿಧಾನದಲ್ಲೇ ಅವಕಾಶವಿದೆ. ಗಮನಿಸಬೇಕಾದ ಅಂಶವೆಂದರೆ , ಹಗರಣ ಅನ್ಯಾಯಗಳ ವಿರುದ್ಧ ನ್ಯಾಯಾಂಗವೇ ಟೊಂಕಕಟ್ಟಿ ನಿಂತಿರುವಾಗ ( judicial activism) ಜನಲೋಕಪಾಲ್ ಬಿಲ್ಲು ನ್ಯಾಯಾಂಗದ ಒರೆಗೆ ತಿಕ್ಕಲ್ಪಟ್ಟು ಕ್ರಮೇಣ ಬಲಿಷ್ಠವಾದ, ಜನಕ್ಕೆ ಬಲು ಇಷ್ಟವಾದ ಮಸೂದೆ ಆಗುವುದರಲ್ಲಿ ಸಂದೇಹವಿಲ್ಲ. ಒಂದು ಮಾತು: ಈ ಗುರುತರವಾದ ಜವಾಬ್ದಾರಿಯನ್ನು ಬಹು ಎಚ್ಚ್ಚರದಿಂದ ನಿರ್ವಹಿಸದೆ ಹೋದಲ್ಲಿ, ಲೋಕಪಾಲ್ ಹೋರಾಟ ಅಹಿಂಸಾತ್ಮಕ ಎಂದು ಎಷ್ಟೇ ಹೇಳಿದರೂ, ಈ ವಿಷಯವಾಗಿ ೭೪ರ ಅಣ್ಣಾ ಮತ್ತೆ ಉಪವಾಸ ಕೂರುವಂತಾದರೆ ಅದು ಆತಂಕದ ಸಂಗತಿಯೇ. ದೇಶದ ಜನತೆ ಮತ್ತೊಂದು ಮಾನಸಿಕ ಹಿಂಸೆಗೆ ಒಳಗಾಗುವುದನ್ನು ತಡೆಯಲೇಬೇಕು. ಹಾಗಾದಿರಲಿ, ಬಿಲ್ಲು ಈಗಾಗಲೇ ಅರವತ್ತು ವರ್ಷ old, ಮತ್ತೆ cold ಸ್ಟೋರೇಜ್ ಸೇರಿದರೆ, ಜನ scold ಮಾಡ್ದೆ ಬಿಡುವುದಿಲ್ಲ. ಅದ್ದರಿಂದ ನಮ್ಮ ಸಂಸದ ಬಂಧುಗಳು, ವಾಕೌಟ್, ಧರಣಿ ಇತ್ಯಾದಿ ‘ಅಬ್-ಸೆಷನ್ಸ್’ ನಿಂದ ಹೊರ ಬಂದು, ಚಳಿಗಾಲದ ಅಧಿ ವೇಷನದಲ್ಲೇ ಬೀಸಲಿ ಜನಲೋಕಪಾಲನ ಗರಂ ಹವಾ! ಲಾಸ್ಟ್ ಬಟ್ ನಾಟ್ ಲೀಸ್ಟ್: ಜನಲೋಕಪಾಲ ಮಸೂದೆಯ ಎಲ್ಲಾ ಪ್ರಕ್ರಿಯೆಗಳೂ ಭೀಮಣ್ಣನ ಬುಕ್ಕಿನ (constitution) ‘ನೆಲ’ಗಟ್ಟಿನ ಮೇಲೆಯೇ ಇರುವುದೊಳಿತು. ಗಾಳಿಗೋಪುರ
ವಾದರೆ, ನ್ಯಾಯಾಂಗದ ಆಸಿಡ್ ಟೆಸ್ಟಿನಲ್ಲಿ ಪಾಸಾಗುವುದಿಲ್ಲ. ಗಮನಿಸಬೇಕಾದ ಅಂಶವೆಂದರೆ, ಸ್ವಾತಂತ್ರ್ಯಾನಂತರ ದೊರೆತ ಅವಕಾಶಗಳು ಸಮಷ್ಟಿಗೆ ಸಿಗದೇ, ಕೆಲವೇ ಜನರ ಪಾಲದ್ದರಿಂದ ಈಕ್ವ್ಯಾಲಿಟಿ ಅನ್ನೋದು ಮರೀಚಿಕೆಯಾಯಿತು.
ಅಂದಮೇಲೆ ಭ್ರಾತ್ರುತ್ವವೂ ( fraternity) ಬಿಸಿಲ್ಗುದುರೆ ಆಗದಿದ್ದೀತೆ? ಆದ್ದರಿಂದ ಸಮ ಸ್ಕ್ರುತಿಯನ್ನು ಸಾರುವ, ಸಂಸ್ಕೃತಿಯ ಪ್ರತೀಕವಾದ ಸಂವಿಧಾನ, ಜನಲೋಕಪಾಲ ಮಸೂದೆಯ ಬುನಾದಿಯಾದರೆ ಮಾತ್ರ ಅನಾದಿಕಾಲದ ಭ್ರಷ್ಟಾಸುರ ಸಂಹಾರ ಸಾಧ್ಯ.
end ಗುಟುಕು
ಫಾಲೋ ವರ್ಸ್?
ಇತ್ತೀಚಿಗೆ ಖಾದಿ, ಕಾವಿ ನೆಲೆಗಳಲ್ಲಿ ಅಧಿಕವಾಗಿ ಕಂಡುಬರುತ್ತಿರುವ ದೃಶ್ಯಾ(ಹಾ)ವಳಿಗಳೆಂದರೆ, ಸಾರ್ವಜನಿಕವಾಗಿ ನಾಯಕರ, ಗುರು ಸನ್ಯಾಸಿಗಳ ಪಾದಕ್ಕೆ ಬೀಳುವ ಚಾಳಿ. ಬಹುಷಃ ಫಾಲೋವರ್ ಅಂದರೆ, ಎಷ್ಟು ಸಾಧ್ಯವೋ ಅಷ್ಟು fall lower ಎಂದಿದರ ಅರ್ಥವೇ?






ಮಾನ್ಯರೆ,
ಚರ್ಮ ರೋಗ ನಿವಾರಣೆಯಾಗುತ್ತದೆಂದು ಮಡೆಸ್ನಾನ ಮಾಡುವವರ ಮೌಢ್ಯವನ್ನು ಖಂಡಿಸುತ್ತಾರೆ.
ಈ ಫನ್ ಓ ಫನ್ ಇಂಗ್ಲಿಷ್ ಎಂಜಲಿನ ಮೇಲೆ ಹೊರಳಾಡಿ ಮಡೆ ಸ್ನಾನ ಮಾಡುವವರ ರೋಗ ವಾಸಿಯಾಗುವುದು ಯಾವಾಗ? ಕನ್ನಡದ ಸೂತ್ರ, ದಾರ ಎಲ್ಲ ಕಿತ್ತರೆ ಉಳಿಯುವುದು ಏನು?
ಪಂಡಿತಾರಾಧ್ಯ ಮೈಸೂರು
krura vaastavada neera nirupane. Fallower embudu “Fall lower“ aaguva kriye
nagu barisuttade.