ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪನ್ ಟಾ stick….!

-ಸೂತ್ರಧಾರ ರಾಮಯ್ಯ

ಪನ್ ಟಾ stick….!

ಪೂರ್ವ-ಜನಿಗೆ ಪಶ್ಚಿಮನ – ಉತ್ತರ?
ಪೂರ್ವಾಭಾದ್ರ: ಭಾರತೀಯರು ನಾವು, ಸಂಸಾರದ ‘ಭಾರ ಅತಿ’ ಆದಷ್ಟೂ ಹೆಚ್ಚಿನ ಸಮಾಧಾನ, ತಾಳ್ಮೆಗಳಿಂದ ಬದುಕನ್ನು ಸಾಗಿಸುತ್ತೇವೆ.
‘ಅರ್ಧಾಂಗಿ’ ಅಂತಾ ಒಮ್ಮೆ ಒಬ್ಬಾಕೆಯನ್ನು ಕೈ ಹಿಡಿದೆವು ಅಂದ್ರೆ ಮುಗೀತು. ಆಕೆ ಜೊತೆಗೇ ಮಕ್ಕಳು, ಮೊಮ್ಮಕ್ಕಳ ಜೊತೆಕೂಡಿ, ಅನ್ಯೋನ್ಯತೆಯಿಂದ ಜೀವನಪರ್ಯಂತ ಜೊತೆಗಿರುತ್ತೇವೆ, ಅಂತಹ ಅನುಬಂಧ, ಪ್ರೀತಿ ನಮ್ಮದು.
ಅಮೆರಿಗೋ ವೆಸ್ಟ್ ಪುಸ್ಸಿ: ” ನಾವೂ ಅಷ್ಟೇ. ನಿಮಗಿಂತಲೂ ಹೆಚ್ಚಿನ ಪ್ರೀತಿಯಿಂದ ನೋಡ್ಕೋತೀವಿ ನಮ್ಮ ಪೆಟ್ ಗಳನ್ನ. ನನ್ನೇ ತಕ್ಕೊಳ್ಳಿ , ನಾನು ಈ ಜ್ಯೂಲಿಯನ್ನು  ಮನೆಗೆ ತಂದು ಎಂಟು ವರ್ಷವಾಯ್ತು. ಈ ಅವಧಿಯಲ್ಲಿ, ನನ್ನ ಬಾಳಿನಲ್ಲಿ ಇಬ್ಬರು ಹೆಂಡತಿಯರು ಬಂದು ಹೋದರೂ, ಜ್ಯೂಲಿ ಮಾತ್ರ ನನ್ನ ಬಳಿಯೇ ಇದ್ದಾಳೆ. ಸ್ವಗತ: ಅವಳ ಮರಿಗಳನ್ನು ಮಾತ್ರ ನಾ ಕೇಳಿದ ಬೆಲೆಗೆ ಮಾರಿಕೊಂಡೆ ಅಷ್ಟೇ. ಆದರೆ ಮು ಲಾಜ್ ಇಲ್ಲದೆ, ‘ಅಂಗಿ’ಗಳನ್ನು ಮಾತ್ರ ಪೂರ್ತಿ ಬದಲಿಸಿಬಿಡುತ್ತೇವೆ!”, ಅಂತಾ ಡಾಗ್ ಮ್ಯಾಟಿಕ್ ಆಗಿ ಅಂದನಾ ಪುಸ್ಸಿ.

‘ಒದ್ದು-ಕಿತ್ತು’ಕೊಂಡಾಗಲೇ….o.k ?
ಭ್ರಷ್ಟಾಚಾರ ಮಾಡಿ ಸಿಕ್ಕಿಕೊಂಡ ಮಂತ್ರಿ/ ಅಧಿಕಾರಿ, has ‘put in’ his papers ಅರ್ಥಾತ್, ರಾಜಿನಾಮೆ ಪತ್ರ ಕೊಟ್ಟ, ಅಂದಾಕ್ಷಣ o.k  ಅನ್ನಲಿಕ್ಕಾಗದು. ಅಷ್ಟು ‘ಮಾತ್ರೆ’ದಿಂದಲೇ ವ್ಯಾಪಕವಾಗಿ ಹರಡಿರುವ ‘ಮಾಮೂಲು ವ್ಯಾಧಿ’ ನಿವಾರಣೆಯಾಗದು. ಸ್ವಚ್ಹ ಆಡಳಿತದ ‘ಗೋಲು ಮುಟ್ಟು’ ವುದು, ಭ್ರಷ್ಟರ ಅಕ್ರಮ ಸಂಪತ್ತನ್ನು ತಕ್ಷಣ ‘ಮುಟ್ಟು ಗೋಲು’ ಹಾಕಿಕೊಳ್ಳುವಂತ ಸರ್ಜರಿಯಿಂದಲೇ. ಗೊತ್ತಿರುವ ಆದಾಯಕ್ಕೂ ಅಧಿಕವಾದ ದುರ್ಧನವನ್ನು o.k ಮಾಡಿ, ಐ ಮೀನ್ ‘ಒದ್ದು ಕಿತ್ತುಕೊಂಡು’ ಭ್ರಷ್ಟನನ್ನು put in ಅಂದರೆ, ಒಳಗೆ ಹಾಕಿದಾಗಲೇ ಎಲ್ಲಾ ಓಕೆ- ಮೇಕೆ ಮೂತಿಗೆ ಮೊಸರನ್ನ ಆತ ಬಳಿಯೋದು ಆಮ್ಯಾಕೆ.

ಭಾಗ್ ಗಯಾ ಜಸ್ಟ್ ‘ಲಕ್ ಮಿ’ ಅನಲು?
ಲಕ್ಷ್ಮಿಯನ್ನು ಸಾಂಕೇತಿಕವಾಗಿ ಆರಾಧಿಸುವುದು ಗುಂಡಗಿರುವ ರೂಪಾಯಿ ಮೂಲಕವೇ.
ಕಾರಣ ಆಕೆ ‘ಉರುಳುತಲೇ’ ಇರಬೇಕು, ಆಕೆಯ ರೋಲೇ ರೋಲಿಂಗ್. ಹಾಗಾಗಿ ಅಕ್ರಮವಾಗಿ ಹಿಡಿದಿಟ್ಟರೆ ‘ (stash) ‘ತಲೆ ಉರುಳಿತು’ ಅಂತಲೆ! ಲಕುಮಿಯ ಭಾಗ್ಯದಿಂದ, ಎಲ್ಲಾ ಜನರ ಬದುಕು ‘ಹಸನಾಗಲಿ’ ಅಂತಾ ಅನ್ನೋದು ಬಿಟ್ಟು, ತನಗೆ ಮಾತ್ರ ಇರಲಿ- ಲಕ್ ಮಿ, ಅಂದ ಪುಣೆಯ ದೇಶದ ನಂಬರ್ ಒನ್ ಕರವಂಚಕ ‘ಹಸನ್ ಆಲಿ’ಯ ಕರಾ ಮತ್ ಗೆ ಬೇಸತ್ತು,  ತನ್ನ ಮಾರಿಗೆ ಮಸಿ ಬಳಿದವನ, (ಕಾಳ ಲಕ್ಷ್ಮಿ?) ಅರಮನೆ ಬಿಡಿಸಿ, ತಳ್ಳಿದಳಲ್ಲ ಕತ್ತಲಿನ ಸೆರೆಮನೆಗೆ!

ಮನುಷ್ಯತ್ವದ ‘ಎಚ್’ ಗಾರಿಕೆ.
ಹ್ಯೂಮನ್ ರೇಸ್ ಅನ್ನೋ ಪದ ಶುರುವಾಗೋದೇ ಎಚ್ ಅಕ್ಷರದಿಂದ. ಅದೇ ಮನುಷ್ಯನ ಎಚ್ ಗಾರಿಕೆಗೆ ಕಾರಣವಿರಬಹುದು. ಹೀಗಾಗಿ ಅವನ ಬದುಕನ್ನು ಎಚ್ ನಿಂದ ಶುರುವಾಗುವ ಪದಗಳೇ ನಿಯಂತ್ರಿಸುತ್ತವೆ: ಹೆಡ್ ಅಂಡ್ ಹಾರ್ಟ್. ಒಮ್ಮೊಮ್ಮೆ ಹೆಡ್ ಹಾರ್ಟನ್ನು ಆಳಿದರೂ, ಹಾರ್ಟ್ ಹೆಡ್ದನ್ನು ಆಳಿದರೂ, ಈ ಎರಡರ ಸಮನ್ವದಿಂದಲೇ ಗೆದ್ದಿದೆ human- race. ಬದುಕುಳಿವ, ಬದುಕಿನ ಕುಳಿಯ ತುಂಬಿಸುವ ಓಟದಲ್ಲಿ ಹೆಡ್ ಮತ್ತು ಹಾರ್ಟ್ಗಳ ಬ್ಯಾಲೆನ್ಸ್ ಹೆಚ್ಚು ಕಮ್ಮಿ ಆದಾಗಲೇ ‘ಹ್ಯೂ’ಮನ್ ‘ಕ್ರೈ”ಸಿಸ್ ತಲೆ ಎತ್ತುವುದು. How ದಾದರಹುದೆನ್ನಿ.

end ಗುಟುಕು
ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ- ಈ ನಾಣ್ನುಡಿಗೆ ಪರ್ಯಾಯ ನುಡಿ?
ಪರ್ಯಾ ಯಾ: ಲಾಲೂ ಪರ್ಸಾದ್ ರನ್ನು ಸಿಮಿ ಗೆರೆವಾಲ್ ಇಂಟರ್ವ್ಯೂ ಮಾಡಿದ ಹಾಗೆ!


‍ಲೇಖಕರು avadhi

3 October, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading