-ಸೂತ್ರಧಾರ ರಾಮಯ್ಯ
ಗುಹೆಗಳಿಂದ ಕೋಟೆಗಳಿಗೆ.
ಪುರ್ವಾಭಾದ್ರ : ಜಾತಿ ಮತಗಳನ್ನು ಗುಹೆಗಳಿಗೆ ಹೋಲಿಸಿ ಕಂಡೆಮ್ ಮಾಡುತ್ತಿದ್ದರು ಹಿಂದೆ. ಆದರೆ ಈಗ ಆ ಬಗ್ಗೆ ಚಕಾರವೇ ಇಲ್ಲ. ಹೀಗಾದ್ರೆ ಜಾತಿ ಮತದ ಅನಿಷ್ಟಗಳು ತೊಲಗುವುದು ಯಾವಾಗಲೋ?
ಉತ್ತರಾಭಾದ್ರ: ನಿನಗೆಲ್ಲೋ ಕನಸು. ಜಾತಿ ಮತಗಳು ಈಗಿನವರಿಗೆ ಗುಹೆಗಳಲ್ಲವೋ ಮಂಕೇ? ಬದಲಿಗೆ, ತಂತಮ್ಮ ಜಾತಿಯ ‘ಮತ’ ಗಳನ್ನು ರಕ್ಷಿಸಿಕೊಳ್ಳುವ ಕೋಟೆಗಳೋ. ಹೊರಗೆ ಜಾತಿ ಮತಗಳ ವಿರುದ್ಧ ತೌಡು ಕುಟ್ಟುವವರೂ, ಕ್ರಮೇಣ ಎಡೆ ಕೊಟ್ಟ ಕಡೇ, ನೋ ತಡೆ. ಅದರಲ್ಲೂ ಜಾಗತೀಕರಣವನ್ನು, ಅನ್ಯ ಜಾತಿಗಳ ಒತ್ತಡವನ್ನು ತಡಿಬೇಕಾದರೆ ‘ಜಾತಿಕರಣ’ ಮದ್ದು, ಅನ್ನೋ ಕಲ್ಪನೇಲಿ, ಜಾತಿಗೊಂದು ಮಠ, ಮತ್ತದರ ಜಾಗ್ರತಿಕರಣಕ್ಕೊಬ್ಬ ಜಗದ್ಗುರು, ಏನು ತಮಾಷೆ ಅಂದುಕೊಂಡ್ಯೋ ಹ್ಯಾಗೆ? ಗುಹೆಯ ಮೂಡ್ನಂಬಿಕೆ (?) ಬಿಟ್ಟು, ಕೋಟೆಯ ರಾಜಕಾರಣದ ಟಚ್ ನೀಡಲಾಗಿದೆಯೋ ಬೆಪ್ಪೆ! ರಾಜಕಾರಣ ಅನ್ನೋ ‘ ಟಚ್ ಸ್ಟೋನ್’ ಇದ್ರೆ, ಎಲ್ಲವೂ ಸುಲಭದಲ್ಲಿ ಸಿಕ್ಕಿ ಬಿಡುತ್ತೆ; ನ್ಯಾಯವಾಗಿ, ಧರ್ಮವಾಗಿ., ass ಯು ಲೈಕ್ ಇಟ್. ಆದರೆ ಹೊರಗೆ ಮಾತ್ರ, ಜಾತ್ಯಾತೀತ ಮಂತ್ರವನ್ನು ಜಪಿಸುತಿರಬೇಕು, ಬಿಕಾಸ್ ‘ಆಲ್ ದ ವರ್ಲ್ದ್ಸ್ ಎ ಸ್ಟೇಜ್- ಜಗವೇನಾ ಠಕ್ಕ ರಂಗ! ಹೋದ್ಯಾ ಪಿಶಾಚಿ ಅಂದ್ರೆ ” ಓ-ಜಾತಿ ನಹೀ ಸಾಬ್” ಅನ್ನೋ ಅಭಿ-ಮತವೆ ಎಲ್ಲಾ ಕಡೆ, ತಿಳಕೋ. ಸದ್ಯಕ್ಕೆ ಇದೇ: ಕರೆಯೋ ಎಮ್ಮೆ ಹಾಲು ಕೊಳ್ಳೋ ವರ್ತನೆ- ಯುಗ ಪರಿ ವರ್ತನೆ!
ಬೇಲೆಕೇರಿ ‘ಬಂದರ್'( ಕ್ರಿಮಿ ನಲ್)ಮಿಸ್ಚೀಫ್!
ಬಾಲಕೃಷ್ಣ: ಬೆಟ್ಟದ ಕಳ್ಳರು ಅಂದರೆ ಯಾರೋ ಅಪ್ಪಾ ನರಸಿಂಹ?
ನರಸಿಂಹ ರಾಜು: ಅದೇ ಊರುಗಳನ್ನು ಕೊಳ್ಳೆ ಹೊಡೆದು, ಬೆಟ್ಟಗಳಲ್ಲಿ ವಾಸ ಮಾಡ್ತಿದ್ರಲ್ಲ ಖದೀಮರು, ಅವರೆ. ಯಾಕೆ ಮರೆತೆಯಾ, ‘ಬೆಟ್ಟದ ಕಳ್ಳ’ ಪಿಚ್ಚರ್ರು , ನಮ್ ಕಲ್ಯಾಣ್ ಕುಮಾರ್ ಹೀರೋನ ಪಾತ್ರ ಮಾಡಿದ್ರಲ್ಲಾ?
ಬಾಲಕೃಷ್ಣ: ತಪ್ಪು ತಪ್ಪು.ಅದಲ್ವೋ ಬೆಪ್ಪೆ,ಈಗಿನ ಸಂದರ್ಭದಲ್ಲಿ ಬೆಟ್ಟದಕಳ್ಳರು ಅಂದ್ರೆ,
ಬೆಟ್ಟವನ್ನೇ ಕದಿಯೋರು ಅಂತ. ದಿನ ಒಪ್ಪತ್ತರಲ್ಲಿ ಅದಿರಿನ, ಗ್ರಾನೈಟಿನ ಬೆಟ್ಟಗಳನ್ನು ಮಂಗ ಮಾಯ ಮಾಡಿ, ಬಂದರ್ ಮೂಲಕ ವಿದೇಶಗಳಿಗೆ ಕದ್ದೊಯ್ದು, ಬಂದ ದುರ್ಧನದಲ್ಲಿ ಸುವರ್ಣಸೌಧಗಳನ್ನು ಕಟ್ಟಿ ಕೊಂಡು, ಊರುಗಳಲ್ಲಿ ರಾಜಾರೋಷವಾಗಿ ಮೆರೆವವರು ಅಂತಾ. “ಮನೆಯೊಡೆಯ ಮನೆಯಲ್ಲೇ ( ಆತ್ಮ ಸಾಕ್ಷಿ) ಇದ್ದರೂ, ‘ಬೆಲೆ’ ಇಲ್ಲ ಅಂದಮೇಲೆ ‘ಕೇರಿ’ಯಲ್ಲಿ ಅದಿರುತ್ತದೆಯೇ? ಅಂದನಂತೆ ಪನ್ನೇಶ್ವರ ರಾಮ; ಬೇಲಿ(?)ಕೇರಿಯ ಪವಾರ್ ಫುಲ್ ಬಂದರ್ ಪ್ರಸಂಗ ಕುರಿತು.
ಉಪ ಮಾನ ಮೂರುಕಾಸಿಗೆ?
ಸ್ವರ್ಗದ ಪಕ್ಕದಲ್ಲಿ ನರಕದ ನದಿ (ವೈತರಣಿ) ಹರಿದರೆ ಎಷ್ಟು ಅಸಹ್ಯವೋ, ಸರ್ವ
ಸಂಗ ಪರಿತ್ಯಾಗಿಗಳು ಎಂದು ಕರೆಸಿಕೊಳ್ಳುವ, ಸಾಧು ಸನ್ಯಾಸಿಗಳ ಜೀವನದಲ್ಲಿ ಅನಗತ್ಯವಾದ ಹಣ, ಶ್ರೀಮಂತಿಕೆ, ವೈ-ಭವಗಳು ಹರಿದರೆ ಅಷ್ಟೇ ಭೀಭತ್ಸ? ಹೀಗಿರುವಾಗ, ಚಿನ್ನ ಸ್ವಾಮಿಗಳ, ಬೆಳ್ಳಿ ಬಾಬಾಗಳ, ಸಾಹುಕಾರ ಸಾಧುಗಳ ಅರ್ಥ ಪೂರ್ಣ ಸಂದೆಶವೇನೋ ಸಮಾಜಕ್ಕೆ? ಅನ್ನುವುದೇ ಅರ್ಥ ಗರ್ಭಿತ !
end ಗುಟುಕು
ಅಧಿಕಾರ ಇದ್ದಾಗ ತನಗೇನೂ ಸೇವ್ ಮಾಡ್ಕೊಳ್ದೆ, ಸರ್ವರಿಗು ಸೇವೆ ಮಾಡೋವರ್ಗು ನೋ ಪ್ರಾಬ್ಲಮ್. ಆದರೆ ಅಧಿಕಾರ ತಲೆಗೆ ಏರಿದಂತೆ, ಇದ್ದ ‘ಬದ್ಧ’ ಬುದ್ದಿ ದಂಡವಾಗಿ,
‘ಸರ್ವ್’ ಮಾಡೋ ಅಧಿಕಾರ ಕೇವಲ ತನ್ನದು’ ಅನ್ನೋ ಸನ್ನದು ಹೊರಡಿಸುತ್ತಾರಲ್ಲಾ, ಆಗ ಶುರುವಾಗುತ್ತೆ ನೋಡಿ, ಸರ್ ವಾಧಿ( ವ್ಯಾಧಿ)ಕಾರ; ಫಾಲೋವ್ದ್ ಬೈಬೈ.. ತಲೆ ದಂಡ? ವಿಷಾದ ಅಂದರೆ; ಸಾಮಾಜಿಕ ಕ್ರಾಂತಿಗೆ ‘ಅಣ್ಣ’ ಕಾಯಿನ್ ಮಾಡಿದ ತಲೆದಂಡ ಅನ್ನೋ ಪದವನ್ನು, ಈಗಿನ ಅಸಾಮಾಜಿಕ ಭ್ರಾಂತಿಗೆ ಇಡುತ್ತಿರುವುದು!






nice sir…. ಭವಿಷ್ಯದಲ್ಲಿರುವ ಯುವ ಜನತೆಗೆ ಗಿಫ್ಟ್ ಅಂದ್ರ ಮೊಸ್ಟ್ಲಿ ಜಾತಿ ಅಂತಾ ಕಾಣುತ್ತೆ