ಪತ್ರಕ್ಕೊಂದು ವಿಳಾಸದ ಹಾಗೆ ನೀನಾದೆ ನನಗೆ..

FB_IMG_1445510469660

ರೋಹಿಣಿ ನಾಗ್

 

ಆಕ್ಷರದ ಅಕ್ಕರೆಯೇ ಸಾಕು
ನುಡಿಯ ಹಂಗೇಕೇ..?
ಅಸಂಖ್ಯಾತ ಸನ್ನೆ ಚಿನ್ಹೆಗಳೇ ಸಾಕು
ಸಂಖ್ಯೆಯ ಹಂಗೇಕೆ?
ವ್ಯಕ್ತಿತ್ವದ ಪರಿಚಯವೇ ಸಾಕು
ವ್ಯಕ್ತಿಯ ವಿಳಾಸವೇಕೆ…?
ಭಾವ ಬಕುತಿಗಳೇ ಶಾಶ್ವತವು
ವಿವರಣೆಯ ಹಂಗೇಕೆ ?

fire

 

 

 

ಅದಾವ ವಿಚಾರ
ಎಚ್ಚರಿಸುವುದು ಮನವ
ನುಂಗಿದ್ದರೂ ಗುಳಿಗೆಯ
ಮುಚ್ಚಲಾಗದು ರೆಪ್ಪೆಯ
ಸಂತೈಸಲಿ ಹೇಗೆ
ರಚ್ಚೆ ಹಿಡಿದ ಎನ್ನಾತ್ಮವ.

fire

 

 

 

ಮಗುವಿಗೊಂದು ಮಡಿಲ ಹಾಗೆ
ನೆತ್ತಿಯ ಮೇಲೊಂದು ಹಸ್ತದ ಹಾಗೆ
ಜೋಳಿಗಿಗೆ ಬಿದ್ದ ಹೋಳಿಗೆಯ ಹಾಗೆ
ಹಂಬಲಕ್ಕೊಂದು ಬೆಂಬಲದ ಹಾಗೆ
ಪತ್ರಕ್ಕೊಂದು ವಿಳಾಸದ ಹಾಗೆ
ನೀನಾದೆ ನನಗೆ.

fire

 

 

 

ಮುತ್ತಿತ್ತು ಇರುವೆ ಮೊಳಕೆಕಾಳಿಗೆ
“ಕಲಿಸುವೆ ಪಾಠವ ಇವುಗಳಿಗೆ”
ಒರಗಿಸಿ ಪಾತ್ರೆಯ ಉರಿವ ಒಲೆಗೆ
ನೋಡುತ ನಿಂತೆ ಅರೆ ಫಳಿಗೆ
ಹಗೆಯ ಭಾವ ಒಳಗೊಳಗೆ.

ಹಾಕಿದ್ದೆ ಕೈಯ ಕಾದ ಪಾತ್ರೆಗೆ
ಕೆಂಪನೆಯ ಬರೆ ಬೆರಳುಗಳಿಗೆ

ಹಬೆಗೆ ಇರುವೆ ಓಡಿತ್ತು ಹೊರಗೆ
ನಗುತಿತ್ತು ನೋಡಿ ಮರೆಯಲ್ಲಿ ಮೆಲ್ಲಗೆ.

ತಿರುಗೇಟು ಕೊಟ್ಟಿತ್ತು ಗುರುವೆಂಬ ದೈವ
” ಬದುಕುವ ಹಕ್ಕು ಎಲ್ಲರಿಗೂ ಇದೆ ಅಲ್ವಾ,? ”

 

fire

 

 

 

ಕಾಡಿದ್ದೆ ಬೇಡಿದ್ದೆ
ದೇವರ ಬೈದೂ ಇದ್ದೆ
ಬದುಕಲಿ ಗುರಿ ತೋರಲು
” ಗುರು ” ಕೇಳಿದ್ದೆ.

ಹೀಗೊಬ್ಬ ಗುರು ಸಿಕ್ಕ
ಮುಸ್ಸಂಜೆಯಲಿ
“ಮಗು ಬರೆದದ್ದ ತಾ ಇಲ್ಲಿ”

ಈತನಾಗಬಹುದೇ ದೀಪ
ತೋರಬಹುದೇ ಬೆಳಕ
ಈಗ ಹಿಡಿದಿರುವೆ ” ಹಲಗೆ ಬಳಪ ”
ತಿದ್ದುವೆ ಅಕ್ಷರ ಬೆಳಕು ಹರಿಯವ ತನಕ.

‍ಲೇಖಕರು Admin

January 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. Rohininagesh

    ಸಂತಸವಾಯಿತು ಎನಗೆ
    ಸಂತೈಸುವ ಪರಿಗೆ
    ಮನಸಾವಂದಿಸುವೆ

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: