ಮಾನ್ಯರೆ
ಸರ್ಕಾರ ಮತ್ತು ಕಾನೂನುಗಳ ಮೂಲಕ ಭೋಪಾಲ್ ಅನಿಲ ದುರಂತ ಸಂತ್ರಸ್ತರಿಗೆ ನ್ಯಾಯ
ದೊರೆಯಲಾರದೆಂಬ ಪರಿಸ್ಥಿತಿಯಲ್ಲಿ ನಮ್ಮಂಥ ಸಾಮಾನ್ಯಜನರು ಎಷ್ಟೊಂದು ಅಸಹಾಯಕರೆಂದು
ಅನ್ನಿಸುವುದು ನಿಜ. ಜನತೆಯ ಪರ ಎಂದು ಮತಪಡೆದು ಸರ್ಕಾರದೊಳಗೆ ತೂರಿಕೊಂಡಿರುವ
ಉದ್ಯಮಿ, ವ್ಯಾಪಾರಿ ಮತ್ತು ಅವರ ದಲ್ಲಾಳಿಗಳು ಎಂದಿದ್ದರೂ ಜನತೆಯ ಕಷ್ಟಗಳಿಗೆ
ಸ್ಪಂದಿಸುವವರಲ್ಲ. ಆದರೆ ಇವರಿಗೆ ಬುದ್ಧಿಕಲಿಸಲು ಈಗಲೂ ಸಾಧ್ಯ. ಹೌದು. ವಿಷಾನಿಲ
ಸೋರಿಕೆಯಿಂದ ಸಾವಿರಾರು ಜನರ ಸಾವಿಗೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪೆನಿಯ ಎಲ್ಲಾ
ಉತ್ಪನ್ನಗಳ ಬಹಿಷ್ಕಾರದ ಅಸ್ತ್ರ ಜನರ ಕೈಲೇ ಇದೆ.
ಈ ಉದ್ಯಮದ ಈಚಿನ ಹೆಸರು ಏನೇ ಇರಲಿ,
ಅದರ ಮಾಲೀಕರು ಯಾರೇ ಆಗಿರಲಿ ಈ ಪ್ರಾಣಘಾತಕ ಕಂಪೆನಿ ಭಾರತದಲ್ಲಾದರೂ ಬಾಗಿಲು
ಮುಚ್ಚುವಂತೆ ಮಾಡುವುದು ಸಾಧ್ಯ. ಎಲ್ಲಾ ಜನಪರ ವ್ಯಕ್ತಿ, ಸಂಘ, ಸಂಸ್ಥೆಗಳು ಮತ್ತು
ಜನರ ಸೇವೆಯನ್ನೆ ಉದ್ಯೋಗ ಮಾಡಿಕೊಂಡಿರುವ ಎನ್ ಜಿ ಓ ಗಳು ಈ ನಿಟ್ಟಿನಲ್ಲಿ
ಕೆಲಸಮಾಡಲೆಂದು ಆಶಿಸುತ್ತೇನೆ.
-ವಿ.ಎನ್.ಲಕ್ಷ್ಮೀನಾರಾಯಣ
[caption id="attachment_17428" align="alignnone" width="570" caption="AP Prakash Hatvalne"]
[/caption]]]>
ನೋವು: ಒಂದು ಪತ್ರ, ಒಂದು ಕಾರ್ಟೂನ್, ಒಂದು ಫೋಟೋ
ನಿಮಗೆ ಇವೂ ಇಷ್ಟವಾಗಬಹುದು…





0 Comments