ನೊಗ ನಮ್ಮದು ನಗು ನಮ್ಮದು

ನಾ ದಿವಾಕರ


ನಾವು ಹೊರಲೆಂದೇ ಜನಿಸಿದ್ದೇವೆಯೇ ?
ಹಾಗೇನಿಲ್ಲ ಎನ್ನುವಿರಾ
ಮತ್ತೇಕೆ ಹೊರಿಸಲೆತ್ನಿಸುವಿರಿ ?
ಭೂ ಸ್ಪರ್ಶವಾದೊಡನೆ
ನಾವೇ ಹೊರೆಯಾಗಿಬಿಡುತ್ತೇವೆ
ಪಾದ ಚಲಿಸಿದರೆ ಹೊರೆ
ಹೊರುವ ಹೊರೆಯಾಗಿಬಿಡುತ್ತೇವೆ ?
ನಾವೇ ಹೊರೆಯೆಂದ ಮೇಲೆ
ನಮಗೇಕೆ ಇಲ್ಲಸಲ್ಲದ ಹೊರೆ ?

ಅರ್ಥವಾಗಲಿಲ್ಲವೇ ?
ಸಾಧ್ಯವಿಲ್ಲ ಬಿಡಿ ನೀವು
ನೋಡಬಲ್ಲಿರಿ ಕಾಣಬಯಸುವುದಿಲ್ಲ ;
ಹೆಣ್ಣಾಯಿತೇ ಅಯ್ಯೋಪಾಪ
ಹೋಗಲಿ ಮುಂದೆ ಗಂಡಾದೀತು ;
ಸಾಂತ್ವನವೋ ಶಾಪವೋ
ನಾವಂತೂ ಅಭಿಶಾಪವೇ ಅಲ್ಲವೇ ?
ಅದಕ್ಕೆಂದೇ ಹೊರಿಸಿಬಿಟ್ಟಿರಿ
ಎಲ್ಲವನ್ನೂ
ನೆಲಸ್ಪರ್ಶದ ಕ್ಷಣದಿಂದ
ಭೂತಳ ಸ್ಪರ್ಶದವರೆಗೆ !

ಪುರುಷ ಸಂಯಮದ ಹೊಣೆ
ವಂಶಗೌರವದ ಹೊರೆ
ಕುಲ ಶ್ರೇಷ್ಠತೆಯ ಭಾರ
ಆಹಾ ಏನೆಲ್ಲಾ ಹೊರಿಸಿಬಿಟ್ಟಿರಿ !
ಅಕ್ಷರವೆಂದಿರಿ ಸಂಸ್ಕೃತಿ ಎಂದಿರಿ
ಶಿರದ ಮೇಲಿನ ಕುಂಭದೊಳಗೆ
ಏನೆಲ್ಲಾ ಹೂತಿಟ್ಟುಬಿಟ್ಟಿರಿ
ಸರಸ್ವತಿ ಸುತರಲ್ಲವೇ
ಅಬ್ಬಾ ! ಚಾಣಾಕ್ಷರು !

ಅತ್ತ ಹೊತ್ತು ನಿಂತೆವು
ಲಕ್ಷಗಟ್ಟಲೆ ಗಂಟೆಗಟ್ಟಲೆ
ಹೊರಲು
ನಿಮ್ಮದಲ್ಲದ ಹೊರೆಯನ್ನು
ಬೆರಗಾಗಿಬಿಟ್ಟಿರಲ್ಲಾ ;
ಅವಳಾರೆಂದಿರಿ ಅವಳೇನೆಂದಿರಿ
ರಜಸ್ವಲೆಯರೆಂದೆಸೆದಿರಿ
ತಡೆಯಲಾಗಲಿಲ್ಲವಲ್ಲಾ
ಅಯ್ಯಪ್ಪಾ
ಯಾವ ಸ್ವಾಮಿ ಯಾರಿಗೆ ಶರಣು
ಏನೆಲ್ಲಾ ನಾಟಕ ನಿಮ್ಮದು !

ಮನುಕುಲವ ಪೊರೆವವರು
ಹೊರಲಾರೆವೇ ?
ಪೊರೆ ಕಳಚದಿರಿ
ಗಟ್ಟಿಪಿಂಡಗಳು ನಾವು
ಹೊರುತ್ತಲೇ ಇರುತ್ತೇವೆ !
ಇನ್ನೇನ ಹೊರಿಸಬಲ್ಲಿರಿ
ಉಳಿದಿರುವುದಿನ್ನೇನು
ಕಿತ್ತೊಗೆದೇವು ಸಂಕೋಲೆಗಳ
ಶಿರ ಬಾಗದೆ ;
ಉತ್ತೇವು ಬಿತ್ತೇವು
ಬೀಜ ನಮ್ಮದು ಹೆಗಲು ನಮ್ಮದು
ನೊಗ ನಿಮ್ಮದೇಕೆ
ನಮಗೆ ನಾವೇ ನಾವು ಮಾತ್ರವೇ !

‍ಲೇಖಕರು Avadhi

January 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: