-ಕೆ ಎಸ್ ಎಸ್ ಕೆ ಕೊಪ್ಪ
ಅನ್ನದಾತ
ಜಗದ ಹಸಿವ ನೀಗಿಸುವ
ಮಣ್ಣ ಸೊಗಡ ಬಲ್ಲವ
ಭೂತಾಯಿಯ ಪ್ರೀತಿಯ ಕಂದ
ನಿನಗೆ ಕೋಟಿ ನಮನ….
ಜೋಡೆತ್ತುಗಳು ಮಾತನಾಡುವಂತಿದ್ದರೆ
ಹೇಳುತ್ತಿತ್ತೇನೋ ನಿನ್ನ ಪರಿಶ್ರಮವ
ನೇಗಿಲೊಂದು ಬಲ್ಲದು
ನಿನ್ನ ಮನದ ನೋವ….
ಮೋಡಗಳು ಮಳೆ ಹನಿಗಳ
ಸುರಿಸುತ್ತವೇನು ಸಮಯಕ್ಕೆ ಇಳೆಗೆ?
ನಿನ್ನ ಬೆವರಿನ ಹನಿಗಳಂತೂ
ಸೇರುತ್ತವೆ ಭೂತಾಯ ಒಡಲಿಗೆ….
ದೇಶಕ್ಕೆ ನೀನೇ ಬೆನ್ನೆಲುಬಂತೆ
ಹೆಮ್ಮೆಯಲ್ಲವೇ ನಿನಗೆ
ಪ್ರಕೃತಿ ಮುನಿದರೆ ಕಣ್ಣೀರಿಡಬೇಡ
ಕಾಯಕವೇ ಕೈಲಾಸವಲ್ಲವೇ….






0 Comments