ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆಲಕ್ಕೆ ಬಿದ್ದು ಬೂದಿಯಾದ ತಾರೆಗೆ, ಈ ನೆಲದ ಮೋಹ ಹುಟ್ಟಿದ್ದಾದರೂ ಹೇಗೆ?

ಶ್ರೀವಿಭಾವನ

೧

ನೆಲಕ್ಕೆ ಬಿದ್ದ ತಾರೆಯನ್ನು ಹುಡುಕುತ್ತಿದ್ದೆ
ಕೇಳಬೇಕಿತ್ತು ಒಂದಿಷ್ಟು ಪ್ರಶ್ನೆಗಳನ್ನು
ದೂರದ  ಅದಾವುದೋ  ಒಂದು ಲೋಕದಲ್ಲಿ,
ತನ್ನ ಪಾಡಿಗೆ ಹೊಳೆಯುತ್ತಿದ್ದ ಕ್ಷಣದಲ್ಲಿ
ಈ ನೆಲದ ಮೋಹ ಹುಟ್ಟಿದ ಅಚ್ಚರಿಯ ಬಗೆಗೆ

೨
ಬೂದಿಯಾಗುವ ಮುನ್ನ ಒಂದು ಬಾರಿ  ನಿನ್ನಲ್ಲಿ ಕೇಳಬೇಕಿತ್ತು..  
ಹೊಳೆಯುತ್ತಲೇ ಇರಬಹುದಾಗಿದ್ದ ಸುಖದ ಸಂಗತಿ ಬಿಟ್ಟು,  
ಈ ಮೋಹದ ಬಲೆಗೆ ಬಿದ್ದು,  ಸಾಯುವ  ತವಕ ಅದೇಕೆ, ಅದೇಗೆ ಹುಟ್ಟಿತು

೩
ಉರಿವ ದೀಪವ ಕಂಡು
ಕೆರಳುವ ಪತಂಗಕ್ಕೆ
ನೀನು ಸಂಬಂಧಿಯೇ ಇರಬೇಕು
ಉರಿದು ಹೋಗುವ ನೋವಿನಲ್ಲೂ
ನಿನಗೆ ಸಿಗುವ ಸುಖವೇನೋ ಗೊತ್ತಿಲ್ಲಾ

೪

ಉರಿಯುತ್ತಾ ಬಿದ್ದಾದರೂ ಎಲ್ಲಿಗೆ?
ನೆಲಕ್ಕೋ, ಸಾಗರಕ್ಕೋ  ಅಥವಾ ಯಾವುದೋ ಒಂದು ಬೆಟ್ಟ ಗುಡ್ಡಕ್ಕೋ
ಹೊರಟ ಗಮ್ಯಸ್ಥಾನಕ್ಕೆ  ನೀನು ತಲುಪಿದ ಬಗೆಗೆ   ತಿಳಿದವರಿಲ್ಲ
ನಿನ್ನೊಡನೆ ನಿನ್ನ ಮೋಹವೂ ಸತ್ತು ಬೂದಿಯಾಗಿರಬೇಕು

೫
ಗೊತ್ತು ಗುರಿಯಿಲ್ಲದೆ ಹೊರಟ  ನಿನ್ನ
ಈ  ಸಾವಿನ ವೇಗವೂ ಒಂದು ವಿಸ್ಮಯ
ನಮ್ಮೊಳಗೇ  ನಮಗೆ ತಿಳಿಯದೆ ಹುಟ್ಟಿ,
ಅದೆಲ್ಲೋ ಹಾರಾಡಿ, ಸುತ್ತಾಡಿ,  ಕೊನೆಗೊಂದು ದಿನ
ಸಾಯುವ ಒಂದಿಷ್ಟು ಕನಸುಗಳಂತೆ

‍ಲೇಖಕರು avadhi

17 September, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading