ನೃತ್ಯ ರೂಪಕ ನಿರ್ದೇಶಿಸಲು ನಾನೇಕೆ ಅಂಜಲಿ?

anjali ramannaveena bhatನೃತ್ಯ ರೂಪಕ ನಿರ್ದೇಶಿಸಲು ನಾನೇಕೆ ಅಂಜಲಿ ಎಂದು ಇನ್ನು ಸ್ವಲ್ಪ ದಿನದಲ್ಲಿ ನಮಗೆ ಎದುರಾಗಲಿರುವವರು.. ಎಸ್, ನಿಮ್ಮ ಊಹೆ ಸರಿ- ಅಂಜಲಿ ರಾಮಣ್ಣ . ವಕೀಲಿಕೆಗಾಗಿ ಮಾತ್ರ ವಾದ ಮಾಡುತ್ತಾ, ಜೀನ್ಸ್ ಟಾಕ್ ಬರೆಯುತ್ತಾ ಇದ್ದ ಅಂಜಲಿ ಈಗ ಇನ್ನೊಂದು ಹೊಸ ಮುಖದಲ್ಲಿ ಎಂದು ನಿಬ್ಬೆರಗಾಗಬೇಕಾದ ಅಗತ್ಯವೇನೂ ಇಲ್ಲ. ಯಾಕೆಂದರೆ ಅಂಜಲಿಗೆ ಇದು ಖಂಡಿತಾ ಹೊಸದಲ್ಲ.
ಇದಕ್ಕೆ ಸಾಕ್ಷಿ  ಜಯಂತ್ ಕಾಯ್ಕಿಣಿ,  ವೈಜಯಂತಿ ಕಾಶಿ, ಪತ್ರಕರ್ತ ಭಾಸ್ಕರ್ ರಾವ್, ವಿದ್ವಾನ್ ಹಾಸಣಗಿ ಗಣಪತಿ ಭಟ್, ವಿದುಷಿಗಳಾದ ರೊಮೆಲಾ ಮುಖೋಪಾದ್ಯಾಯ್, ಶಾಶ್ವತಿ ಸೇನ್, ಶೀಲಾ ಮೆಹ್ತಾ… ಹೀಗೆ.  ಇವರೆಲ್ಲಾ ಸಾಕಷ್ಟು ಕಾಲದಿಂದ ಅಂಜಲಿ ಅವರ ಪರಿಕಲ್ಪನೆ, ರಚನೆ, ನಿರೂಪಣೆ, ನಿರ್ದೇಶನದ ಈ ಮುಖದ ಪರಿಚಯ ಉಳ್ಳವರು ಬಿರ್ಜು ಮಹಾರಾಜ್ ಆಶೀರ್ವಾದ ಕೂಡಾ ಮಾಡಿ ಹರಸಿದ್ದಾರೆ
ಅಂಜಲಿ ಅವರ ಈ ಎಲ್ಲಾ ಪ್ರಯೋಗಕ್ಕೆ ರಂಗ ಒದಗಿಸಿ ಸಾಥ್ ಆಗಿ ನಿಂತಿರುವುದು ನೃತ್ಯ ದರ್ಪಣ ಹಾಗೂ ಅದನ್ನು ಕೈ ಹಿಡಿದು ನಡೆಸುತ್ತಿರುವ ವೀಣಾ ಭಟ್.  ಸದಾ ಪ್ರಚಾರದಿಂದ ಮಾರು ದೂರವೇ ಉಳಿಯುವ ವೀಣಾ ಭಟ್ ಅಂಜಲಿ ಅವರ ಹೊಸ ಕಲ್ಪನೆಗಳಿಗೆ ನೆಲೆಯಾಗಿದ್ದಾರೆ. ಸಾಹಿತ್ಯ- ನೃತ್ಯ, ಮಾತು- ಮೌನ, ಜಾನಪದ- ಕುಣಿತ ಹೀಗೆ ಅನೇಕ ಸಂಗತಿಗಳನ್ನು ಕಸಿ ಮಾಡಿ ಅಂಜಲಿ ಈಗಾಗಲೇ ಹಲವು ಪ್ರಯೋಗಗಳನ್ನು ರಂಗವೆರಿಸಿದ್ದಾರೆ.
anjali3ಹಲವರ ಪ್ರಶಂಸೆ ಗಳಿಸಿದ ‘ನೃತ್ಯ ನುಡಿ ‘ – ಮೌನಕ್ಕೆ ಮತ್ತು ಕನ್ನಡ ಪಠ್ಯಕ್ಕೆ, ಗೆಜ್ಜೆಯಿಲ್ಲದೆ ಮೊದಲ ಬಾರಿಗೆ ಕಥಕ್ ನೃತ್ಯ ಪ್ರಸ್ತುತ ಪಡಿಸಿದ್ದು ‘ಸಾಸಿವೆ ತೆರೆದಿಟ್ಟ ಸತ್ಯ’ – ಕನ್ನಡದ ಜಾನಪದ ತ್ರಿಪದಿಗಳನ್ನು ಬಳಸಿಕೊಂಡು ಜಾನಪದ ಶೈಲಿ ಮತ್ತು ಕಥಕ್ ಶೈಲಿಯ ಸಂಯೋಜನೆಯಿದ್ದ ನೃತ್ಯ ರೂಪಕ ಶೇಕ್ಸ್ಪಿಯರ್ ಸಾನೆಟ್-೨೦ – ಯಕ್ಷಗಾನ, ಕಥಕ್ ಮತ್ತು ಪ್ಲೆಮಿಂಕೋ ಸಂಯೋಜನೆಯ ಅನಿಕೇತನ – ಕನ್ನಡ ಜಾನಪದ ಗೀತೆಗಳಿಗೆ ಕಥಕ್ ಶೈಲಿಯ ನೃತ್ಯ ಪ್ರಸ್ತುತಿ.  ‘ನೃತ್ಯದರ್ಪಣ’ದ ಮುಂದಿನ ಯೋಜನೆಗಳು; ನಮ್ಮೊಳಗಿರುವ ಅಪರಿಚಿತ ಗಾಂಧಿ ಮತ್ತು ನಾಚೇ ನಾಚಿಯಾರ್
ನೃತ್ಯ ದರ್ಪಣ ಒಂದು  ಕಲಾ ಶಾಲೆ ಮಾತ್ರವಲ್ಲ ನೃತ್ಯ , ನಾಟಕ ಮತ್ತು ಸಂಗೀತ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯಾ ಜೊತೆಗೆ ಹಲವು ಪ್ರಯೋಗತಾಣ.
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಬರಹಗಾರರು ಮತ್ತು ಕಲಾವಿದರ ಬಳಗ ಸಂಯೋಗದಲ್ಲಿ ‘ನೃತ್ಯದರ್ಪಣ’ ಈಗ ಪ್ರಸ್ತುತ ಪಡಿಸಲು ಮುಂದಾಗಿರುವುದು  ‘ಮೌನದಿಂದ ನೃತ್ಯಕ್ಕೆ’. ಕಥಕ್ ಶೈಲಿಯ ನೃತ್ಯ ರೂಪಕ.
ಬ್ರಹ್ಮಾಂಡದ ಪಂಚಭೂತಗಳಲ್ಲೂ ಮೌನವಿದೆ ಆ ಮೌನದಲ್ಲಿ ನೃತ್ಯವಿದೆ ಎನ್ನುವ ಪರಿಕಲ್ಪನೆ.
ಅಂಜಲಿ ರಾಮಣ್ಣ ಹಾಗೂ ವೀಣಾ ಭಟ್ ಜೋಡಿಯ ಹೊಸ ಪ್ರಯೋಗ ನಡೆಯಲಿರುವುದು  ಈ
ಶುಕ್ರವಾರ  ೦೪ ರಂದು. ಸಂಜೆ ೬.೩೦ ಕ್ಕೆ  ಯವನಿಕ ಸಭಾಂಗಣದಲ್ಲಿ
anjali4
anjali
anjali2
anjali6

‍ಲೇಖಕರು admin

December 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: