ಈಗ ಗೌರಿ ಲಂಕೇಶ್ ಪ್ರಶ್ನಿಸಿದ್ದಾರೆ

ಬೆಂಗಳೂರು ಸಾಹಿತ್ಯ ಉತ್ಸವ ವಿವಾದದ ಗೂಡಾಗಿದೆ. ಟಿ ಕೆ ದಯಾನಂದ್, ಅರೀಫ್ ರಾಜ, ಓ ಎಲ್ ನಾಗಭೂಷಣ ಸ್ವಾಮಿ, ಕೆ ಸಚ್ಚಿದಾನಂದನ್ ಅವರಿಂದ ಆರಂಭವಾದ ಚರ್ಚೆ ಈಗ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಉತ್ಸವದ ಆಯೋಜಕ ವಿಕ್ರಮ್ ಸಂಪತ್ ತಾವೇ ಉತ್ಸವ ಆಯೋಜನೆಯಿಂದ ಹೊರಬಂದಿದ್ದಾರೆ. ಈಗ ಅವರನ್ನು ಸಮರ್ಥಿಸುವ ಅವರ ಮಾತನ್ನು ಇನ್ನೂ ಒರೆಗೆ ಹಚ್ಚಿ ನೋಡುವ ಕೆಲಸ ನಡೆಯುತ್ತಿದೆ. ಇಲ್ಲಿದೆ ಗೌರಿ ಲಂಕೇಶ್ ಅವರ ಬರಹದ ಒಂದು ಭಾಗ

OH PLEASE, VIKRAM, DON’T PLAY THE VICTIM

Courtesy: Bangalore Mirror Bureau | Nov 30
 gauri lankesh
ಗೌರಿ ಲಂಕೇಶ್ 

Misrepresented facts, twisted opinions creating a brouhaha over Bangalore Literature Festival with founder Vikram Sampath posing as if forced to stand at the sacrificial altar
Vikram Sampath, who recently stepped down as coordinator of the Bangalore Literature Festival 2015, has claimed that an “intolerance mafia” has made him “a target of a personalized campaign”. Sampath has said that since he did not subscribe to the ‘Award Wapsi’ campaign and because of his stance on the recent Tipu Sultan controversy he has been labeled as a ‘fascist’ and a ‘right winger.

I can’t help but feel astonished at how facts are being misrepresented, opinions twisted and victimhood appropriated. Most of the confusion has risen because many of those who are weighing in on the issue have read neither what Sampath had written earlier nor the letters written by the three writers who decided to stay away from the festival. Our English media too has given full play to the entire text of Sampath’s resignation statement (838 words) which was in English but has not bothered to give the same weightage to either the critic O L Nagabhushan Swamy’s letter (239 words) or that of the poets Arif Raja and T K Dayanand (210 and 303 words respectively and written in Kannada.)

‍ಲೇಖಕರು admin

December 1, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ನನಗೆ ಈ ವಿಷಯದಲ್ಲಿ ನಾವು ಕನ್ನಡಿಗರು ಕನ್ನಡದ ಕಿಂಚಿತ್ ವಾಸನೆಯಿಲ್ಲದೆ ಕನ್ನಡದೂರಿನಲ್ಲಿ ನಡೆಯುವ ಈ ಹಬ್ಬ ಅಲ್ಲ ಫೆಸ್ಟಿವಲ್ ಗೆ ಸುಮ್ಮಸುಮ್ಮನೆ ಪ್ರಚಾರ ಕೊಡ್ತಿದೀವಿ ಅನ್ನಿಸುತ್ತೆ. ನನ್ನನ್ನು ಕನ್ನಡ ಪದ್ಯ ಓದೋಕೆ ಇಂಗ್ಲಿಷಲ್ಲೆ ಕರೆದರು. ಸಿಟ್ಟು ಬಂತು. ಆಮೇಲೆ ಮಾತಾಡ್ತೀನಿ ಅಂದೆ. ಆಮೇಲೆ ಇದಕ್ಕೆ ಉದಾಸೀನವೇ ಮದ್ದು ಅಂತ ತೀರ್ಮಾನಿಸಿದೆ. ಎಷ್ಟೊಂದು ವಿಷಯದಲ್ಲಿ ಉಗುರಿನಲ್ಲಿ ಹೋಗೋದಕ್ಕೆ ನಾವು ಕೊಡಲಿ ಹಾಕ್ತೀವಿ. ಬಿಟ್ಟು ಬಿಡಬೇಕು. ನಿನ್ನನ್ನು ನಾವು ಲೆಕ್ಕಕ್ಕೆ ಇಟ್ಟೇ ಇಲ್ಲ ಅಂತ ತೋರಿಸಿ ಬಿಟ್ಟು ಬಿಡಬೇಕು.

    ಪ್ರತಿಕ್ರಿಯೆ
  2. Goutham

    What you have written is correct Madam. You have exposed Mr. Vikram Sampath’s mind

    ಪ್ರತಿಕ್ರಿಯೆ
  3. C. N. Ramachandran

    “KEEP IT CHATTY AND KEEP IT SHORT”
    ಬೆಂಗಳೂರು ಸಾಹಿತ್ಯೋತ್ಸವವನ್ನು ಕುರಿತ ಗೌರಿ ಲಂಕೇಶ್ ಅವರ ಪತ್ರವನ್ನು ಓದಿ ಮತ್ತು ಆ ಉತ್ಸವದ ಬಗ್ಗೆ ನಡೆಯುತ್ತಿರುವ ವಾದವಿವಾದಗಳನ್ನು ಗಮನಿಸಿ, ಎರಡು ವರ್ಷಗಳ ಹಿಂದೆ ನಾನು ಆ ಉತ್ಸವದಲ್ಲಿ ಭಾಗವಹಿಸಿದಾರ ನನಗಾದ ಅನುಭವವನ್ನು ಓದುಗರ ಮುಂದಿಡುತ್ತಿದ್ದೇನೆ. ನಾನು ವಿಕ್ರಂ ಸಂಪತ್ ಅವರನ್ನು ಇದುವರೆಗೆ ನೋಡುವ ಸಂದರ್ಭ ಬಂದಿಲ್ಲ ಮತ್ತು ನಾನು ಯಾವ ಅವಾರ್ಡನ್ನೂ ಹಿಂತಿರುಗಿಸಿಲ್ಲ. ಮೂರು ವಾರಗಳ ಹಿಂದೆ ಡಾ. ಚಂದ್ರಶೇಖರ ಕಂಬಾರರು ಈ ಉತ್ಸವದಲ್ಲಿ ಭಾಗವಹಿಸಲು ನನ್ನನ್ನು ಆಹ್ವಾನಿಸಿದಾಗ ನನಗೆ ಅದರಲ್ಲಿ ಆಸಕ್ತಿಯಿಲ್ಲವೆಂದು ಹೇಳಿದೆ. ಏಕೆಂದು ಅವರು ಕಾರಣವನ್ನು ಕೇಳಿದಾಗ ನನ್ನ ಅನುಭವವನ್ನು ಅವರಿಗೆ ತಿಳಿಸಿದೆ; ಅದನ್ನೇ ಈಗ ದಾಖಲಿಸುತ್ತಿದ್ದೇನೆ.
    ಎರಡು ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಇದೇ ಉತ್ಸವದಲ್ಲಿ ಭಾಗವಹಿಸಲು ನನ್ನ ಹಿರಿಯ ಮಿತ್ರರಾಗಿದ್ದ ಪ್ರೊ. ಶ್ರೀನಿವಾಸ ಹಾವನೂರರ ಸಹೋದರಿ ಸಂಪರ್ಕಿಸಿ, ಒಂದೆರಡು ಗೋಷ್ಠಿಗಳ ವಿಷಯಗಳನ್ನು ಪ್ರಸ್ತಾಪಿಸಿ, ನನಗೆ ಯಾವುದರಲ್ಲಿ ಭಾಗವಹಿಸಲು ಆಸಕ್ತಿಯಿದೆಯೆಂದು ಕೇಳಿದಾಗ, ಭಾಷಾಂತರ ಗೋಷ್ಠಿಯಲ್ಲಿ ಭಾಗವಹಿಸುತ್ತೇನೆಂದು ಹೇಳಿದೆ. ಆದರೆ, ನನ್ನ ಹತ್ತಿರ ಕಾರ್ ಇಲ್ಲವೆಂದು, ವಾಹನ ವ್ಯವಸ್ಥೆ ಮಾಡಲಾಗುತ್ತದೆಯೆ ಎಂದು ಕೇಳಿದಾಗ ಅವರು ಸಿಟಿ ಟ್ಯಾಕ್ಸಿ ಮಾಡಿಕೊಂಡು ಬರಲು ಹೇಳಿದರು. ಸರಿ ಎಂದು ತುಂಬಾ ಉತ್ಸಾಹದಿಂದ ಒಂದು ವಾರ ಭಾಷಾಂತರವನ್ನು ಕುರಿತು ಇಂಗ್ಲೀಷ್‍ನಲ್ಲಿ ಟಿಪ್ಪಣಿಗಳನ್ನು ಮಾಡಿಕೊಂಡೆ. ಒಂದೆರಡು ದಿನಗಳಲ್ಲಿ ಆ ಗೋಷ್ಠಿಯ ನಿರ್ವಾಹಕಿ (ಬೆಂಗಳೂರಿನವರು) ನನ್ನನ್ನು ಸಂಪರ್ಕಿಸಿ, ಆ ಗೋಷ್ಠಿಯಲ್ಲಿ ಭಾಗವಹಿಸುವ ಇತರ ವಿದ್ವಾಂಸರ ಹೆಸರುಗಳನ್ನು ಹೇಳಿದರು; ನನಗೆ ಯಾರೂ ಗೊತ್ತಿರಲಿಲ್ಲ.
    ಗೋಷ್ಠಿ ಮಧ್ಯಾಹ್ನ ಇದ್ದುದರಿಂದ ನಾನು ಎರಡು ಘಂಟೆಗೆ ಹೊರಡಲು ಸಿದ್ಧವಾಗುತ್ತಿದ್ದಾಗ ನಿರ್ವಾಹಕಿ ನನ್ನನ್ನು ಸಂಪರ್ಕಿಸಿ, ತುಂಬಾ ಸಂಕೋಚದಿಂದ ಅವರು ನನ್ನೊಡನೆ ಬರಬಹುದೆ ಎಂದು ಕೇಳಿದರು; ನಾನು ಆಗಲಿ ಎಂದು ಹೇಳಿದೆ. ದಾರಿಯಲ್ಲಿ, ಮಾತನಾಡುವಾಗ ಗೋಷ್ಠಿಯ ರೂಪುರೇಷೆ ಕೇಳಿದಾಗ ಅವರು ಹೇಳಿದ್ದು ಇಷ್ಟೇ: “ನನಗೆ ಹೇಳಿರುವುದು ಒಂದೇ ವಾಕ್ಯ: ’keep it chatty and keep it short. ತುಂಬಾ ಗಂಭೀರವಾಗಿರುವುದು ಬೇಡ'”
    ಉತ್ಸವದ ಸ್ಥಳವನ್ನು ಸೇರಿದಾಗ, ನಮ್ಮ ಗೋಷ್ಠಿಯ ಸ್ಥಳ ಎಲ್ಲಿ ಎಂದು ಹುಡುಕಿದೆವು; ಯಾರೂ ವ್ಯವಸ್ಥಾಪಕರು ಎಲ್ಲಿಯೂ ಕಾಣಲಿಲ್ಲ. ಕೊನೆಗೆ, ಹಾವನೂರರ ಸಹೋದರಿ ನಮ್ಮನ್ನು ಕಂಡು, ಗೋಷ್ಠಿಯ ಸ್ಥಳಕ್ಕೆ ಕರೆದುಕೊಂಡು ಹೋಗಿ, ’ಇಲ್ಲಿಯೇ ಇರಿ; ನಾಲ್ಕು ಘಂಟೆಗೆ ಪ್ರಾರಂಭವಾಗಬಹುದು’ ಎಂದರು. ಗೋಷ್ಠಿ ಪ್ರಾರಂಭವಾದಾಗ, ಸುಮಾರು ೨೫-೩೦ ಶ್ರೋತೃಗಳಿದ್ದಿರಬಹುದು. ಮೊದಲಿಗೆ ನಾನು ಮಾತನಾಡಿ, ಭಾಷಾಂತರದ ಸಮಸ್ಯೆಗಳನ್ನು ವಿವರಿಸಿದೆ; ಯಾರಿಗೂ ಆಸಕ್ತಿಯಿರಲಿಲ್ಲವೆಂದು ನನಗೆ ತೋರಿತು. ಅನಂತರ ಹಿಂದಿಯಲ್ಲಿ ಬರೆಯುವ ’ತುಂಬಾ ಪ್ರಸಿದ್ಧರೆಂದು ಪರಿಚಯಿಸಿದ’ ವಿದುಷಿ ತಮ್ಮಹಿಂದಿ ಅನುವಾದಗಳಿಗೆ ಎಂತಹ ಮೆಚ್ಚುಗೆ ಸಿಕ್ಕಿದೆ ಎಂದು ಮಾತನಾಡಿದರು. ಅನಂತರ ಉಳಿದ ಇಬ್ಬರು. ಅವರೆಲ್ಲರೂ ಸ್ನೇಹಿತರೊಡನೆ ಮಾತನಾಡುವಂತೆ ವೈನೋದಿಕ ಶೈಲಿಯಲ್ಲಿ ಮಾತನಾಡಿ ರಂಜಿಸಿದರು.
    ಗೋಷ್ಠಿಯ ನಂತರ, ನಾನು ಹೊರಡುತ್ತೇನೆಂದು ಹೇಳಿ ಟಾಕ್ಸಿ ಖರ್ಚಿನ ಬಗ್ಗೆ ಕೇಳಿದಾಗ ’ಇಲ್ಲಿ ಬರುವ ಎಲ್ಲರೂ ತಮ್ಮ ತಮ್ಮ ಕಾರುಗಳಲ್ಲಿ ಬರುತ್ತಾರೆ; ಆದುದರಿಂದ ಪ್ರಯಾಣದ ಖರ್ಚನ್ನು ಕೊಡಲಾಗುತ್ತದೋ ಇಲ್ಲವೋ ಗೊತ್ತಿಲ್ಲ’ ಎಂದು ಹೇಳಿ, ಸುಮಾರು ಅರ್ಧಘಂಟೆಯ ನಂತರ ’ಇದು ನಿಮಗೆ ವಿಶೇಷ’ ಎಂದು ವಾಹನದ ಖರ್ಚನ್ನು (ರೂ ೫೦೦) ಕೊಟ್ಟರು. ನಾನು ಅಲ್ಲಲ್ಲಿ ಸುತ್ತಾಡಿದೆ; ಕೆಲವರು ಬೀರ್ ಕುಡಿಯುತ್ತಾ, ಕೆಲವರು ಹರಟೆ ಹೊಡೆಯುತ್ತಾ, ಕೆಲವರು ’ಪ್ರಸಿದ್ಧ ಹಾಗೂ ಗ್ಲಾಮರಸ್’’ ಆದ ಹಿಂದಿ ಕವಿಗಳ ಮಾತು ಕೇಳುತ್ತಾ ಇದ್ದರು. ಮೂರೂ ದಿನಗಳ
    ಕಾರ್ಯಕ್ರಮಗಳಲ್ಲಿ ’ವಿಶೇಷ ಉಪನ್ಯಾಸ,’ ’ಸಂದರ್ಶನ,’ ’ಚರ್ಚೆ’ ಇತ್ಯಾದಿಗಳಲ್ಲಿ ಕಾಣಿಸಿಕೊಂಡಿದ್ದವರು (ಉತ್ಸವದ ಕೇಂದ್ರ ಬಿಂದುಗಳಾಗಿದ್ದವರು) ಇಬ್ಬರೇ ಇಬ್ಬರು –ಹಿಂದಿ ಸಾಹಿತ್ಯ-ಚಲನಚಿತ್ರ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿದ್ದ ಕವಿ-ಸಾಹಿತಿಗಳು. ಎಲ್ಲೆಲ್ಲಿಯೂ ಇಂಗ್ಲೀಷ್ / ಹಿಂದಿ ಸಂಭಾಷಣೆ. ನಾನಿಲ್ಲಿ ಕಳೆದುಹೋಗಿದ್ದೇನೆ; ಇಂತಹ ’ಗ್ಲಾಮರಸ್’ ಸಮಾವೇಶಗಳಲ್ಲಿ ಭಾಗವಹಿಸಲು ನಾನು unfit ಎನಿಸಿತು.
    ಪ್ರಾಮಾಣಿಕವಾಗಿ ಮತ್ತೂ ಒಂದು ವಿಷಯವನ್ನು ಪ್ರಸ್ತಾಪಿಸಬೇಕು. ಅಂದೇ ಪ್ರೊ. ವಿವೇಕ ರೈ ಅವರು ನಡೆಸಿಕೊಟ್ಟ ’ತುಳು ಸಾಹಿತ್ಯ-ಸಂಸ್ಕೃತಿ’ಗಳನ್ನು ಕುರಿತ ಗೋಷ್ಠಿ ತುಂಬಾ ಯಶಸ್ವಿಯಾಯಿತು. ಎಂದರೆ, ಆಸಕ್ತ ಕೇಳುಗರೂ ಗಮನೀಯವಾಗಿದ್ದರು (ಸುಮಾರು ೧೦೦?). ಆ ಗೋಷ್ಠಿಯ ಯಶಸ್ಸನ್ನು ಗಮನಿಸಿ, ಅದೇ ತಂಡವನ್ನು ಕೆಲವು ತಿಂಗಳುಗಳ ನಂತರ ನಡೆದ ’ದೆಹಲಿ ಉತ್ಸವಕ್ಕೂ ಆಹ್ವಾನಿಸಿದ್ದರು.
    ಇದರ ಅರ್ಥ, ರಾಷ್ಟ್ರೀಯ ನೆಲೆಯಲ್ಲಿ ನಡೆಯುವ ’ಉತ್ಸವ’ಗಳಲ್ಲಿ ಇಂಗ್ಲೀಷ್-ಹಿಂದಿ ಲೇಖಕರು ವಿಜೃಂಭಿಸುವುದು ಮತ್ತು ಹೆಚ್ಚಿನ ಕಾರ್ಯಕ್ರಮಗಳು ’ರಾಷ್ಟ್ರೀಯ ನೆಲೆಯಲ್ಲಿ’ ಪ್ರಖ್ಯಾತರಾದವರ ಸುತ್ತ ನಡೆಯುವುದು, ಪ್ರಾಯಃ, ಅನಿವಾರ್ಯ. ಮತ್ತು ಅಂತಹ ಉತ್ಸವಗಳಲ್ಲಿ
    ಭಾಗವಹಿಸುವುದು ಅಥವಾ ಬಿಡುವುದು ಲೇಖಕರ ಆಯ್ಕೆಗೆ ಬಿಟ್ಟದ್ದು. ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
  4. M A Sriranga

    ಅವಧಿಯ ಸಂಪಾದಿಕೀಯ ವರ್ಗಕ್ಕೆ ಒಂದು ಮನವಿ –ಗೌರಿ ಲಂಕೇಶ್ ಅವರ ಲೇಖನವನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದರೆ ಇಂಗ್ಲಿಷ್ ಅರ್ಥಮಾಡಿಕೊಳ್ಳಲಾಗದ ನಮ್ಮಂಥ ಪಾಮರರಿಗೆ ಅನುಕೂಲವಾಗುತ್ತಿತ್ತು.

    ಪ್ರತಿಕ್ರಿಯೆ
  5. shantha kumari

    ನಾನೂ ಸಹ ಎರಡು ವರುಷಗಳ ಹಿಂದೆ ಈ ಸಾಹಿತ್ಯೋತ್ಸವಕ್ಕೆ ಹೋಗಿದ್ದೆ (ಭಾಗವಹಿಸಿದ್ದಲ್ಲ!) ಹೇಗಿರಬಹುದು ಮತ್ತು ದೇಶದ ಬೇರೆ ಬೇರೆ ಭಾಗಗಳಲ್ಲಿ ಸಾಹಿತ್ಯದ ಚಟುವಟಿಕೆಗಳು ಯಾವ ರೀತಿಯಲ್ಲಿ ನಡೆಯುತ್ತಿವೆ ಎಂದು ತಿಳಿದುಕೊಳ್ಳುವ ಕುತೂಹಲಕ್ಕಾಗಿ. ಆದರೆ ಅಲ್ಲಿಗೆ ಹೋಗಿ ಆಶ್ಚರ್ಯ ಮತ್ತು ನಿರಾಸೆ ಎರಡೂ ಆಯಿತು. ಇದೊಂದು ಕನ್ನಡನಾಡಿನಲ್ಲಿ ನಡೆಯುತ್ತಿರುವ ಹಬ್ಬ ಎನ್ನುವುದಕ್ಕೆ ಯಾವ ಕುರುಹೂ ಅಲ್ಲಿರಲಿಲ್ಲ. ದೇವನೂರು ಮಹಾದೇವ ಅವರ ಹೆಸರಿತ್ತು ಆ ಗೋಷ್ಟಿಯಲ್ಲಿ ಆದರೆ ಅವರು ಬಂದಿರಲಿಲ್ಲ. ಅಲ್ಲಿದ್ದ ಆಯೋಜಕರಿಗೆ ಅವರ ಬಗ್ಗೆ ತಿಳಿದಿತ್ತು ಅನ್ನುವ ಲಕ್ಷಣಗಳೂ ಇರಲಿಲ್ಲ. ಕನ್ನಡ ನೆಲ ಜಲ ಸಂಸ್ಕೃತಿಯ ಬಗ್ಗೆ ಅರಿವೂ ಅಥವಾ ಅಭಿಮಾನ ಎರಡೂ ಅಲ್ಲಿದ್ದಂತೆ ಇರಲಿಲ್ಲ. ಎಂಥಾ ಫೇಕ್ ಅನಿಸಿತೆಂದರೆ, ಎಲ್ಲರೂ ಸೊಫೆಸ್ಟಿಕೇಶನ್ ಅನ್ನುವ ರೋಗದಲ್ಲಿ ಮುಳುಗಿ ಒದ್ದಾಡುತ್ತಿದ್ದರು. ಕಬ್ಬಿನ ಹಾಲು ಕುಡಿದು ಚಪ್ಪರಿಸುತ್ತಾ ಇನ್ನ್ಯಾವತ್ತೂ ಬರಲ್ಲಪ್ಪ ಅಂದುಕೊಂಡು ಬಂದಿದ್ದಾಯ್ತು. ಇಂತಹದೊಂದು ಹಬ್ಬ ಕನ್ನಡದ ಹೆಸರಿಟ್ಟುಕೊಂಡು ಮಾಡುವುದಕ್ಕೆ ಅವಕಾಶ ಕೊಡಬೇಕೆ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: