'ನೂಪುರ ಭ್ರಮರಿ’ಯ ನಾಟ್ಯ ಚಿಂತನ

ನೂಪುರ ಭ್ರಮರಿ (ರಿ.)

ಮತ್ತು

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.)

ಸಹಭಾಗಿತ್ವದಲ್ಲಿ

ನಾಟ್ಯಚಿಂತನ

ಭರತನ ನಾಟ್ಯಶಾಸ್ತ್ರವನ್ನಾಧರಿಸಿದ ಒಂದು ವಾರದ ಶಾಸ್ತ್ರ -ಪ್ರಾಯೋಗಿಕ ಚಿಂತನೆಯ ಕಾರ್ಯಾಗಾರ/ಶಿಬಿರ

‘ನೂಪುರ ಭ್ರಮರಿ’- ನೃತ್ಯಸಂಶೋಧನ ವಿಶೇಷಾಂಕ ಅನಾವರಣ

ನೃತ್ಯ ಉಪನ್ಯಾಸ-ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ

ಸ್ಥಳ : ದರ್ಬೆ, ಪುತ್ತೂರು. ದಿನಾಂಕ 20 ಎಪ್ರಿಲ್-26 ಎಪ್ರಿಲ್ 2014

ಎಪ್ರಿಲ್ 20,2014ರಂದು ಆರಂಭಗೊಂಡು ವಾರಪರ್ಯಂತ ನೂಪುರ ಭ್ರಮರಿ ಮತ್ತು ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ನಡೆಯಲಿರುವ ‘ನಾಟ್ಯಚಿಂತನ’- ಎಂಬ ನಾಟ್ಯಶಾಸ್ತ್ರದ ಅಧ್ಯಯನಪೂರ್ಣ ಪ್ರಾಯೋಗಿಕ ಶಿಬಿರವು ಜಿಲ್ಲೆಯ ನೃತ್ಯವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಸಂಶೋಧಕರಿಗೆ, ಪೋಷಕರಿಗೆ ವರದಾಯಕವಾಗಲಿದೆ. ಇದೇ ಸಂದರ್ಭ ಭಾರತದಲ್ಲೇ ಏಕೈಕ ಮತ್ತು ಪ್ರಪ್ರಥಮ ಸಂಶೋಧನಾ ಸಂಚಿಕೆಯೆಂಬ ಮನ್ನಣೆ ಗಳಿಸಿರುವ ನೂಪುರ ಭ್ರಮರಿಯ ವಾರ್ಷಿಕ ವಿಶೇಷಾಂಕ-ಸಂಶೋಧನ ಸ್ಮರಣಸಂಚಿಕೆಯು ಅನಾವರಣಗೊಳ್ಳಲಿದೆ.
ಈ ಒಂದು ವಾರದ ಕಾರ್ಯಕ್ರಮಕ್ಕೆ ಮುನ್ನುಡಿಯಾಗಿ ಬೆಂಗಳೂರಿನ ಹೆಸರಾಂತ ಕಲಾವಿದೆ, ಸಂಶೋಧಕಿ, ಗುರು ಡಾ.ಶೋಭಾ ಶಶಿಕುಮಾರ್ ಅವರ ನೇತೃತ್ವದಲ್ಲಿ ಉಪನ್ಯಾಸ ಕಾರ್ಯಾಗಾರ ಮತ್ತು ವಿಶೇಷವಾದ ಭರತನೃತ್ಯ ಕಾರ್ಯಕ್ರಮವು ಉದ್ಘಾಟನಾದಿನದಂದು ಜರುಗಲಿದೆ. ಸಮಾರೋಪದ ದಿನದಂದು ‘ನಾಟ್ಯಚಿಂತನೆ’ಯಿಂದ ಪಡಿಮೂಡಲಿರುವ ಅಭ್ಯರ್ಥಿಗಳೇ ನಡೆಸಿಕೊಡಲಿರುವ ನೃತ್ಯಕಾರ್ಯಕ್ರಮವೂ ನಡೆಯಲಿದ್ದು; ವಿದ್ವಾನ್ ಕೂರ್ಗಿ ಶಂಕರನಾರಾಯಣ ಉಪಾಧ್ಯಾಯರ ಉಪನ್ಯಾಸ, ಚಿಂತನ-ಮಂಥನ ನಡೆಯಲಿದೆ.

‍ಲೇಖಕರು avadhi

April 6, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: