ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..

ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು . ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿದೆ. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶು ವೈದ್ಯ ಡಾ ಮಹೇಂದ್ರ ಬರೆದದ್ದು ಈಗ ಓದಿ 

ಅಷ್ಟೇ ಅಲ್ಲ, ಈ ಎರಡೂ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ ನೀವೂ ಕವಿತೆ ಮುಂದುವರೆಸಿ  

ದೀಪದ ದೂರು

mahendra s telagarahalli

ಮಹೇಂದ್ರ ಎಸ್ ತೆಲಗರಹಳ್ಳಿ -ಮಹೀ

ಮಕಾಡೆ ಮಲಗಿಕೊಂಡವನ
ಬುಡದಿಂದ
ಬಿರಡೆ ಬಿಚ್ಚಿಕೊಂಡು
ಒಂದಷ್ಟು ತೆವಲುಗಳು
ತೆವಳುತ್ತಾ ಲ್ಯಾಂಡಾಗುತ್ತಿದ್ದವು.

sheಉಗುರುಗಳಿಗೆ ಗೋರಂಟಿ
ಹಾಕಿಕೊಂಡ ಮೆತ್ತನೆಯ ಚಿರತೆಯೊಂದು
ಬೆನ್ನ ಪಾಟಿಯ ಮೇಲೆ
ಗೀರಿ ಗೀರಿ ರಕ್ತಸ್ರಾವ ಮಾಡಿ
ತಿರುಗಾಮುರುಗಾ ಒಂದೇ ಸಾಲನ್ನು
ತಿದ್ದುತ್ತಿತ್ತು.

ಬರಗೆಟ್ಟ ದರವೇಸಿ
ಅನಕ್ಷರಸ್ಥ ಅಕ್ಷಿಗಳು
ಬಾಯಿ ಬಿಟ್ಟುಕೊಂಡು
ಹೊಸ ಭಾಷೆಯೊಂದನ್ನು
ಕಲಿಯಲು ಅರ್ಜಿ ಹಿಡಿದು ನಿಂತು
ವಲಸೆಬಂದ ಪಕ್ಷಿಗಳಂತೆ
ಪಟ ಪಟ ರೆಕ್ಕೆ ಬಡಿಯುತ್ತಿದ್ದವು.

ದಿನನಿತ್ಯದ ಲೆಕ್ಕಗಳನ್ನು ಬರೆದು
ಬೇಸತ್ತು ಬೋರುಹೊಡೆಸುಕೊಂಡಿದ್ದ
ಬೆರಳುಗಳೆಲ್ಲವೂ ಗುಪ್ತಚರ ದಳದ
ತನಿಖಾಧಿಕಾರಿಗಳಂತೆ ತದೇಕಚಿತ್ತದಿಂದ
ತಡಕಾಡುತ್ತಿದ್ದವು.

ನಾಲಿಗೆಗಳಂತು
ನಾಗರಹಾವುಗಳಿಗೂ ಸೆಡ್ಡು
ಹೊಡೆಯುವಂತೆ ಸುರುಳಿ ಸುತ್ತಿ
ಸಮೂಹಗಾನದ ಹಾಡುಗಾರಂತೆ
ಮೇಳೈಸಿಕೊಂಡು ಪೋಲಿಗೀತೆಗಳನ್ನು
ಸ್ತುತಿಸುತ್ತಿದ್ದವು.

ಕಾಲಿನ ಬೆರಳುಗಳೆಲ್ಲವೂ
ಪ್ರೈಮರೀ ಶಾಲೆಯ ಪೋರರಂತೆ
ನುಣುಪಾದ ಕಾಲಿನ ಮೇಲೆ
ಜಾರೋ ಬಂಡಿಯಾಟ ಆಡುವದರಲ್ಲಿ
ತಲ್ಲೀನವಾಗಿದ್ದವು.

ಮುಂದೇನಾಗಬಹುದು
ಅಂತ ನಾನೂ ಕೂಡ ಎಣ್ಣೆ
ಕುಡಿದು ಮತ್ತಿನಿಂದ
ಪ್ರಖರವಾಗಿ ನೋಡುತ್ತಿರಲು
ಮಾನಕ್ಕಂಜಿದ ಅವಳು ಬಂದು
ನನ್ನ ಉಫ್ ಅಂತ ಆರಿಸಿಬಿಟ್ಟಳು.

ನನ್ನ ಉಪಸ್ಥಿತಿಯಲ್ಲಿ
ಉಪಹಾರ ಸೇವಿಸಿಕೊಂಡ
ಆ ಹಸಿದ ಉದರಗಳು
ರಸಗವಳ ತಿಂದು ತೇಗಿ
ಹೊಟ್ಟೆ ತುಂಬಿಸಿಕೊಳ್ಳುವ
ದೃಶ್ಯವನ್ನು ನನಗೆ ನೋಡುವ
ಅವಕಾಶ ದಕ್ಕದ್ದಿದ್ದಕ್ಕೆ
ನನಗೆ ಅವರಿಬ್ಬರ ಮೇಲೂ
ನಖಶಿಕಾಂತ ಕೋಪವಿದೆ.

‍ಲೇಖಕರು Admin

May 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sangeeta Kalmane

    ಹೌದು
    ನನಗೂ ಕೋಪ ಬರುತ್ತಿದೆ
    ಹೆಣ್ಣಿನ ಅಂಗಾಂಗಳಿಗೆ
    ಮೂರು ಕಾಸಿನ
    ಬೆಲೆ ಕೊಡದೆ
    ಮಾರಾಟದ ಸರಕಾಗಿ
    ಪರಿಗಣಿಸುವ ಒಂದೊಂದು
    ಗಂಡಿನ ಮನಸಿನ
    ಕ್ಷುದ್ರ ದಾಹಕ್ಕೆ
    ಹಡೆದವಳು ಹೆಣ್ಣು
    ಎಂಬುದ ಮರೆತಂತೆ
    ನಟಿಸುವ ನಟನಾ
    ಚಾತುಯ೯ಕ್ಕೆ
    ನುಣುಪಾದ ದೇಹದ ಮೇಲೆ
    ಕೀಚಕನ ಅಟ್ಟಹಾಸ
    ದಕ್ಕದೇ ಇರುವಾಗ
    ರೊಚ್ಚಿಗೆದ್ದು ಶಪಿಸಿ
    ಅಮಾಯಕಳ ಕೊಲೆಗೈವ
    ಇಲ್ಲ
    ಸಿಕ್ಕರೆ ಮಾನ ನುಂಗಿ
    ಗೆದ್ದೆ ಎನ್ನುವ
    ಗೆಲುವಿನ ತನ್ನೊಳಗೇ
    ಗೋರಿ ಕಟ್ಟಿ ಬೀಗುವ
    ಅಟ್ಟಹಾಸ ಸಾಕು
    ಉಫ್ ಎಂದು
    ಊದಿಬಿಟ್ಟಿದ್ದು ಸರಿ
    ಮರೆಯಾಗಿ ನಶಿಸಿ ಹೋಗಲಿ
    ಮುಖವಾಡ ಧರಿಸಿ
    ಬದುಕು ನಡೆಸಬೇಕಾದ
    ಹೆಣ್ಣಿನ ಅನಿವಾಯ೯ತೆ
    ಕಣ್ಣಿಗೆ ಕಾಣದಿರಲಿ
    ನಗ್ನತೆಯ ಚಿತ್ರ ವಿಚಿತ್ರ ಭಂಗಿ!

    ಪ್ರತಿಕ್ರಿಯೆ

Trackbacks/Pingbacks

  1. ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ.. | | Sandhyadeepa…. - […] http://avadhimag.online/2016/05/19/%e0%b2%a8%e0%b3%81%e0%b2%a3%e0%b3%81%e0%b2%aa%e0%b2%be%e0%b2%a6-%e0%… […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: