ನುಡಿಸಿರಿ – ಪುಸ್ತಕ ಮಳಿಗೆಗಳಿಗೆ ಆಹ್ವಾನ

ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿರುವ  ಎಂಟನೇ ವರುಷದ ” ಆಳ್ವಾಸ್ ನುಡಿಸಿರಿ-2011 ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.   ಪುಸ್ತಕ ಪ್ರಕಾಶಕರು, ಮಾರಾಟಗಾರರು ಸಮ್ಮೇಳನದ ಮೂರು ದಿನಗಳ ಕಾಲ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಪುಸ್ತಕ ಮಳಿಗೆ ತೆರೆಯಬಹುದಾಗಿದೆ. ಪ್ರತೀ ಮಳಿಗೆಗೆ ರು.500 ಶುಲ್ಕ ವಿಧಿಸಲಾಗುತ್ತದೆ. ರಾಜ್ಯ  – ಹೊರ ರಾಜ್ಯಗಳಿಂದ ಕನ್ನಡಾಭಿಮಾನಿಗಳು , ವಿದ್ಯಾಥರ್ಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲಿ ಭಾಗವಹಿಸಲಿರುವುದರಿಂದಾಗಿ ಮೌಲ್ಯಯುತ ಪುಸ್ತಕಗಳನ್ನೊಳಗೊಂಡ ಪುಸ್ತಕ ಪ್ರದರ್ಶನ ಮಾರಾಟ ವ್ಯವಸ್ಥೆ ಏರ್ಪಡಿಸುವುದು ಸಮ್ಮೇಳನದ ಸ್ವಾಗತ ಸಮಿತಿಯ ಚಿಂತನೆಯಾಗಿದೆ.ಎಂಟನೇ ವರುಷದ ಆಳ್ವಾಸ್ ನುಡಿಸಿರಿ ಸಮ್ಮೇಳನದ  ಸವರ್ಾಧ್ಯಕ್ಷರಾಗಿ ಸಂಶೋಧಕ ಎಂ.ಎಂ.ಕಲಬುಗರ್ಿ ಸವರ್ಾನುಮತದಿಂದ ಆಯ್ಕೆಗೊಂಡಿದ್ದು ಆಳ್ವಾಸ್ ನುಡಿಸಿರಿ ಸಮ್ಮೇಳನವನ್ನು ನಡೆಸಿಕೊಡಲಿದ್ದಾರೆ.ಪುಸ್ತಕ ಮಳಿಗೆ ತೆರೆಯಲಿಚ್ಛಿಸುವವರು ರು.500ಮುಖ ಬೆಲೆಯ ಡಿ.ಡಿ.ಯನ್ನು ಆಳ್ವಾಸ್ ನುಡಿಸಿರಿ ಹೆಸರಿನಲ್ಲಿ ಪಡೆದು ಅಧ್ಯಕ್ಷರು, ಆಳ್ವಾಸ್ ಎಜುಕೇಷನ್ ಫೌಂಡೇಷನ್, ಆಳ್ವಾಸ್ ನುಡಿಸಿರಿ ಕಚೇರಿ, ಮೂಡಬಿದಿರೆ – 574227 ಇಲ್ಲಿಗೆ ಕಳುಹಿಸಬಹುದು. ಅಥವಾ  ಆಳ್ವಾಸ್ ನುಡಿಸಿರಿ 2011ರ ಸ್ವಾಗತ ಸಮಿತಿಯ ಕಚೇರಿಯನ್ನು  (ದೂರವಾಣಿ ಸಂಖ್ಯೆ: 08258 – 261229, 238104 – 111)ಸಂಪಕರ್ಿಸಬಹುದು.

‍ಲೇಖಕರು avadhi

September 27, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: