ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನೀಲು ಮತ್ತಷ್ಟು ಹೇಳಿದಳು…' – ವಿದ್ಯಾಶಂಕರ್ ಬರೀತಾರೆ

ವಿದ್ಯಾಶಂಕರ ಹರಪನಹಳ್ಳಿ

-೧-
ಅರೇಗತ್ತಲು
ಅವನ ಹುರಿಗೊಂಡ ತೋಳು
ಚುರುಕು ಕೈಗಳು, ಚುಟುಕು ಮಾತು
ಹಣೆ ಮೇಲೆ ಹರಳುಗಟ್ಟಿದ
ಬೆವರ ಸಾಲು….
ಇದೆಲ್ಲಾ ಸೇರಿಯೇ
ಚುರುಮುರಿ ರುಚಿಯಾಯಿತು
ಎಂಬುದು ನನ್ನ ಮುಗ್ಧ ನಂಬಿಕೆ
ನಗಬೇಡಿ! ಪ್ಲೀಸ್…
 
-೨-
ಧ್ಯಾನಸ್ಥ ಸ್ಥಿತಿಗೆ
ತಳ್ಳುವ ಪ್ರೇಮ
ಧೇನೈಸಿ ಸ್ಥಿತಿಗೂ
ಕಾರಣ ಕೂಡ ಎಂಬುದು
ಎಂತಹ ವೈಚಿತ್ರವಲ್ಲವೇ?
-೩-
ಸಹ ಮನುಷ್ಯನನು
ಪ್ರೀತಿಸಲಾಗದ ಮನುಷ್ಯ
ನಾಯಿ, ಬೆಕ್ಕು ಇತ್ಯಾದಿಗಳ
ಮುದ್ದಿಂದ ಸಾಕುವುದು…
ಆಹಾ! ಎಂತಹ ಸೊಜಿಗ!
 
-೪-
ಮಳ್ಳ ಮನುಷ್ಯನಿಗಿಂತ
ಕಳ್ಳು ಕುಡಿದ ಮನುಷ್ಯನ
ಸಹಜತೆ, ಮುಗ್ಧತೆ
ನನ್ನನು ಹೆಚ್ಚು ತಟ್ಟುವುದು..
 
-೫-
ಕ್ಷಣಕಾಲ
ಚಿಂದಿ ಆಯುವ ಹೆಂಗಸಿನ
ಕಣ್ಣಲ್ಲಿ ಕಣ್ಣಿಟ್ಟು ನೋಡಿ…
ನೀವು ಹೆಚ್ಚು ಮನುಷ್ಯರಾಗುವಿರಿ
 
-೬-
ಒಲಿಸಲು ಕವನ ಕಟ್ಟುವ
ಹುಡುಗರೇ ಇಲ್ಲಿ ಕೇಳಿ…
ನನ್ನ ಅಂತರಂಗದ
ಪಿಸುಮಾತ ದಾಖಲಿಸಿದ
ಲಂಕೇಶ್-ಗಿಂತ…
ಹೇಳದೆ ಉಳಿದ ಮಾತಗಳ
ರೇಖೆಯಲಿ ದಾಖಲಿಸಿದ
ಹಾದಿಮನಿ ನನಗೆ ಹೆಚ್ಚು ಅಪ್ತ!
 

‍ಲೇಖಕರು G

19 September, 2013

1 Comment

  1. Swarna

    ಕೊನೆಯದು ತುಂಬಾ ಇಷ್ಟವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading