ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನೀರು’ ಎಂಬುದು ಬರಿ ನೀರಲ್ಲ

ನಾವು ನಮ್ಮ ಮನೆಯ ಅಕ್ಕಪಕ್ಕದವರೊಂದಿಗೆ ಯಾಕಾಗಿ ಮುನಿಸಿಕೊಂಡಿದ್ದೇವೆ, ಬೈದಾಡಿದ್ದೇವೆ- ಯೋಚಿಸಿ. ದಶಕಗಳ ಕಾಲ ಇದ್ದ ಸುಮಧುರ ಸಂಬಂಧದ ತಂತು ಕಡಿದು ಹೋಗಿರುವುದೇ ನೀರಿಗಾಗಿ. ಮುಂದಿನ ಜಾಗತಿಕ ಯುದ್ಧ ನಡೆಯುವುದಾದರೆ ಅದು ನೀರಿಗಾಗಿ..ಈ ನೀರಿನ ಬಗ್ಗೆಯೇ ಈಗ ಒಂದು ವೆಬ್ ಪತ್ರಿಕೆ ಆರಂಭವಾಗಿದೆ. ನೀರಿನ ತುಡಿತದ ಬಗ್ಗೆ ಒಂದು ಲೇಖನ ಇಲ್ಲಿದೆ. ಈ ಪೋರ್ಟಲ್ ಬಗ್ಗೆ ಗಮನ ಸೆಳೆದ ‘ಸಂಪದ’ ದ ಹರಿಪ್ರಸಾದ್ ನಾಡಿಗ್ ಹಾಗೂ ಡಿ ಎನ್ ಶ್ರೀದೇವಿ ಅವರಿಗೆ ಥ್ಯಾಂಕ್ಸ್ .

 ಭಾರತದಲ್ಲಿ ಪ್ರತಿ ವರ್ಷ, 50.000 ಹೆಚ್ಚಿನ ಸಂಖ್ಯೆಯ ಮಕ್ಕಳು ತಮ್ಮ 5ನೆಯ ವರ್ಷವನ್ನು ನೋಡುವುದೇ ಇಲ್ಲ – ಕಾರಣ, ನೀರಿನಿಂದ ಉಂಟಾಗುವ ರೋಗಗಳಾದ ಬೇಧಿ, ಜಠರ-ಕರುಳುಗಳ ಉರಿಯೂತ, ಹೆಪಟೈಟಿಸ್ ನಂತಹ ರೋಗಗಳಿಗೆ ಅವರು ತುತ್ತಾಗುತ್ತಾರೆ.

ದೇಶದ 300 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ ಶೌಚಾಲಯದ ಸೌಲಭ್ಯ ಇಲ್ಲ. ಈಗಾಗಲೇ, ನದಿ ತಪ್ಪಲುಗಳಲ್ಲಿ ವಾಸಿಸುವ ದೇಶದ 224 ದಶಲಕ್ಷ ಜನರು ನೀರಿನ ಅಭಾವವನ್ನು ಎದುರಿಸುತ್ತಿದ್ದಾರೆ, ಅಲ್ಲದೆ, 33% ಜನಸಂಖ್ಯೆಗೆ ಸಾಲುವ ನವೀಕರಣಗೊಳ್ಳುವ ನೀರಿನ ಮೂಲಗಳು, ದೇಶದ 67% ಭಾಗದಲ್ಲಿ ಮಾತ್ರ ಕಾಣಬಹುದು.

ನೀರಾವರಿಗೆ ಬೇಕಾದ 70% ನೀರು ಹಾಗೂ ನೀರಿನ ಪೌರ ಸರಬರಾಜಿನ ಮೂಲವು ಅಂತರ್ಜಲದಿಂದ ದೊರೆಯುತ್ತದೆ. ಆದರೆ, ಬರಿದಾದ ಜಲಧರಗಳು ಹಾಗೂ ಕುಗ್ಗಿದ ಅಂತರ್ಜಲದ ಮಟ್ಟಗಳಿಂದಾಗಿ ಇದರ ಮೇಲಿನ ಅವಲಂಬನೆ ಸುಸ್ಥಿರತೆಯನ್ನು ಕಳೆದುಕೊಂಡಿದೆ. ಇಸವಿ 2020ರ ವೇಳೆಗೆ, ಸರಬರಾಜಿನ ಮೂಲಗಳಿಗಿಂತ ನೀರಿನ ಬೇಡಿಕೆ ಹೆಚ್ಚುವುದೆಂದು ಅಂದಾಜು ಮಾಡಲಾಗಿದೆ.
ಇದನ್ನು ನಾವು ಬದಲಿಸಬಹುದೇ? ಇಲ್ಲೊಬ್ಬರು ಹೌದೆಂದು ಹೇಳುತ್ತಾರೆ; ಸಂಸ್ಥೆಯೊಂದು ನೀರಿನ ಈ ದಂಡಯಾತ್ರೆಗಾಗಿ ತಮ್ಮ ಬೆಂಬಲವನ್ನು ನೀಡಿದೆ.
ಏಪ್ರಿಲ್ 26, 2008ರಂದು ಶಾರದ ಪ್ರಸಾದ್ ತಮ್ಮ 19,000 ಕಿಲೋಮೀಟರಿನ ಭಾರತ ಯಾತ್ರೆಯನ್ನು ಮೋಟರ್ ಬೈಕ್ ನ ಮೇಲೆ ಪ್ರಾರಂಭಿಸಲಿದ್ದಾರೆ. ದೇಶದಾದ್ಯಂತ, ಜನಜೀವನದಲ್ಲಿ ನೀರಿನ ಮಹತ್ವವನ್ನು ಮನಗಾಣುವುದೇ ಈ ಯಾತ್ರೆಯ ಉದ್ದೇಶ.
ಕ್ರಮಿಸುವ ದಾರಿ 75 ದಿನಗಳ ಅವರ ಪಯಣದಲ್ಲಿ, 19,000 ಕಿಲೋಮೀಟರ್ ಗಳ ದೂರವನ್ನು ಕ್ರಮಿಸಲಿದ್ದು, 28 ರಾಜ್ಯಗಳು ಹಾಗೂ 5 ಕೇಂದ್ರಾಡಳಿತ ಕ್ಷೇತ್ರಗಳ ಮೂಲಕ ಹಾದು ಹೋಗಲಿದ್ದಾರೆ. ಅಲ್ಲಿ, 7 ಪಾರಿಸಾರಿಕ ವಲಯಗಳು, 11 ರಾಷ್ಟ್ರೀಯ ವನಗಳು, 15 ಪ್ರಮುಖ ನದಿಗಳು ಹಾಗೂ ಲೆಕ್ಕವಿಲ್ಲದಷ್ಟು ನೀರಿನ ಆಗರಗಳನ್ನು ಭೇಟಿ ಮಾಡಲಿದ್ದಾರೆ.
ನೀರಿನ “ರಜಾಯಿ”
ನೀರಿನ “ರಜಾಯಿ”ಯನ್ನು ಈ ಯಾತ್ರೆಯ ಅಂತರಾಳವೆಂದು ಹೇಳಬಹುದು. ಭೇಟಿ ನೀಡಲಾದ ಎಲ್ಲ ಸಮುದಾಯಗಳ ಪ್ರತಿನಿಧಿಗಳಾದ ಚಿತ್ರಗಳನ್ನು ಒಟ್ಟುಗೂಡಿಸಿ, ರಜಾಯಿಯನ್ನು ಹೊಲಿಯಲಾಗಿದೆ.

ಈ ಯಾತ್ರೆಯು ನಿಮ್ಮ ಕುತೂಹಲವನ್ನು ಕೆರಳಿಸಿ, ನೀವೂ ಕೂಡ ಇದರಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ, ಅವರು ಕ್ರಮಿಸುವ ದಾರಿ, ನೀರಿನ “ರಜಾಯಿ”, ತಂತ್ರಜ್ಞಾನ, ಯಾತ್ರೆಯಲ್ಲಿ ನಿಮ್ಮ ಪಾತ್ರ ಏನು ಎಂಬುದನ್ನು ತಿಳಿದುಕೊಳ್ಳಲು http://www.indiawaterportal.org/k2k/ ಮೇಲೆ ಕ್ಲಿಕ್ ಮಾಡಿ.

‍ಲೇಖಕರು avadhi

22 April, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading