ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀರಾದವೋ ಮನಸು…

malli1st.jpg

ಕೋಲಾರದ ಮಿತ್ರನ ಕೆಮೆರಾ ಕಣ್ಣು ಮತ್ತೊಮ್ಮೆ ಗೆದ್ದಿದೆ.

ಈ ಮಿತ್ರನ ಹೆಸರು ಮಲ್ಲಿಕಾರ್ಜುನ ಡಿ ಜಿ. ಕೋಲಾರದ ಶಿಡ್ಲಘಟ್ಟದಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿರುವ ಇವರ ಕೈಯಲ್ಲಿನ ನಿಜವಾದ ಮದ್ದು ಕೆಮೆರಾ. ಜೊತೆಗೇ ಎಂಥವರನ್ನೂ ಸೆಳೆದುಬಿಡಬಲ್ಲಂಥ ಕ್ಷಣವನ್ನು ಅದರಲ್ಲಿ ಸೆರೆಹಿಡಿದು ಇಟ್ಟುಬಿಡಬಲ್ಲ ಪ್ರತಿಭೆ. ಕಾಡು, ಚಿಟ್ಟೆ, ನೀರು, ಸ್ಮಾರಕ ಮೊದಲಾದವುಗಳ ಸೊಗಸು ಸೂರೆಗೈಯುತ್ತಾ ಓಡಾಡಿಕೊಂಡಿರುವ ಮಲ್ಲಿಕಾರ್ಜುನ ಅವರಿಗೆ ಈಗ ಅಂತಾರಾಷ್ಟ್ರ್‍ಈಯ ಮಟ್ಟದ ಪ್ರಶಸ್ತಿಯೊಂದು ಒಲಿದುಬಂದಿದೆ.

ಅದು, ದಿ ಎವರಿಮ್ಯಾನ್ ಡಾಟ್ ಕಾಮ್ ಎಂಬ ವೆಬ್ ಸೈಟೊಂದು ನೀಡುವ ಮನ್ನಣೆ.

ಕಳೆದ ಆರೇಳು ವರ್ಷಗಳಿಂದ ಈ ವೆಬ್ ಸೈಟು ಒಂದು ವಿಶಿಷ್ಟವಾದ ಸ್ಪರ್ಧೆ ಏರ್ಪಡಿಸುತ್ತ ಬಂದಿದೆ. ಡಿಜಿಟಲ್ ಕೆಮೆರಾ ಕಣ್ಣಿಗೆ ಅಕಸ್ಮಾತ್ತಾಗಿ ಸಿಕ್ಕಿಬಿಡೋ ಅದ್ಭುತ ಕ್ಷಣಗಳ ಬಗ್ಗೆ ಆಸಕ್ತಿ ಅದಕ್ಕೆ. ಇಂಥ ಅದ್ಭುತ ಕ್ಷಣಗಳನ್ನು ಕೆಮೆರಾ ಕಣ್ಣಲ್ಲಿ ಗಳಿಸಿದ ಯಾರೇ ಆದರೂ ಈ ಸೈಟಿಗೆ ಅದನ್ನು ಕಳಿಸಬಹುದು. ಹಾಗೆ ಸ್ಪರ್ಧೆಗೆ ಬರುವ ಎಂಟ್ರಿಗಳು ಸಾವಿರಾರು. ಯಾವ್ಯಾವುದೋ ದೇಶದವು. ಅವನ್ನು ವಿವಿಧ ಕೋನಗಳಿಂದ ನೋಡಿ ಆಯ್ಕೆ ಮಾಡಲು ಎಷ್ಟು ಮಂದಿ ತೀರ್ಪುಗಾರರು ಎನ್ನುತ್ತೀರಿ? ಬಹುಶಃ ನೀವು ಊಹೆ ಕೂಡ ಮಾಡಲಾರಿರಿ. ಈ ಬಾರಿ ಸ್ಪರ್ಧೆಗೆ ಬಂದ ಛಾಯಾಚಿತ್ರಗಳನ್ನು ನೋಡಿ ಬೆಲೆ ಕಟ್ಟಿದವರು ೨೬ ಮಂದಿ ನಿಪುಣರು. ಒಬ್ಬೊಬ್ಬರೂ ತಮಗೆ ಮೆಚ್ಚುಗೆಯಾದ ಟಾಪ್ ಟೆನ್ ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಸಹಜವಾಗಿಯೇ ಉತ್ತಮ ಚಿತ್ರಗಳು ಈ ಟಾಪ್ ಟೆನ್ ಆಯ್ಕೆಗಳಲ್ಲಿ ಮತ್ತೆ ಮತ್ತೆ ಸ್ಥಾನ ಗಿಟ್ಟಿಸುತ್ತವೆ. ಮಲ್ಲಿಕಾರ್ಜುನ ಅವರ ಚಿತ್ರ ಹೀಗೆ ಕಾಣದೆ ಕೂತವರ ಕಣ್ಣಲ್ಲಿ ಹಾದು ಮೆಚ್ಚುಗೆ ಪಡೆದು ಗೆದ್ದಿದೆ. ಸ್ಪರ್ಧೆಯ ಪೋರ್ಟ್ರೇಟ್ ವಿಭಾಗದಲ್ಲಿ ಇವರ ಚಿತ್ರ ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ.

ನೀರಿನ ಚೆಲುವನ್ನು ಅದ್ಭುತವೆನ್ನಿಸುವ ಕ್ಷಣಗಳ ಫ್ರೇಮಿನಲ್ಲಿಟ್ಟು ಕಾಯ್ದ ಮಲ್ಲಿಕಾರ್ಜುನ ಅವರ ತನ್ಮಯತೆ, ಯಾವ ವಶೀಲಿಯ ಕೈಗಳಿಂದಲೂ ಕಳಂಕಿತವಾಗದ ಈ ಮನ್ನಣೆಯಿಂದಾಗಿ ಸಾರ್ಥಕವಾಗಿದೆ.

ಮಲ್ಲಿಕಾರ್ಜುನ ಚಿಕ್ಕಬಳ್ಳಾಪುರ, ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಓದಿದವರು. ಟ್ರೆಕ್ಕಿಂಗ್ ಕೂಡ ಅವರ ಮತ್ತೊಂದು ಹಾಬಿ. ಕೆಲ ಕಾಲ ಸುದ್ದಿಮನೆಯಲ್ಲೂ ಕೆಲಸ ಮಾಡಿದವರು ಮತ್ತೇಕೋ ತಮ್ಮ ಗೂಡಿಗೇ ಮರಳಿದ್ದಾರೆ. ಆದರೆ ಈಗಲೂ ಪತ್ರಿಕೆಗಳಿಗೆ ಚಿತ್ರಲೇಖನ ಬರೆಯುತ್ತಿರುತ್ತಾರೆ. ಫೋಟೋಗ್ರಫಿಗಾಗಿ ರಾಜ್ಯದ ಹಲವಾರು ಸಂಸ್ಥೆಗಳ ಪ್ರಶಸ್ತಿ ಪಡೆದಿದ್ದಾರೆ.

ಆಸಕ್ತರಿಗಾಗಿ ಮಲ್ಲಿಕಾರ್ಜುನ ಅವರ ಇ-ಮೇಲ್ ಐಡಿ: mallidg@yahoo.co.in

‍ಲೇಖಕರು avadhi

4 December, 2007

3 Comments

  1. Malathi S

    Congrats mallikarjun. :-). that is indeed a nice photograph. i think it appeared as a coverpage of some book. i cannot recall which one.

  2. Chetan

    Congratulations Mallikarjun. Had seen that photograph on Kamat.org after hearing abt it from your brother! Wishing you all the best!

  3. Ganadhalu Srikanta

    Cogratulations Mr. Mallikarjun. nanu photo nodidde. khushi pattidde. hesaroo gottittu. adare kolarada shidleghattadavaroo ennuvudu avadi yinda gottaitu. once again congrats. nimma neera preetiya photo nanage mechchuge aitu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading