ಹುಲಿ

ಹರವು ಸ್ಪೂರ್ತಿ
ವೈರುಧ್ಯಗಳಲ್ಲೊಂದು ಮೋಹ
ದ್ವೇಷವ ತಿಂದು, ಕಾದಾಡಿದಾಗಲೇ
ಪ್ರೀತಿ ; ಆಸೆ

ಹರಿಣಿಯಾದರೆ ನಾನು
ಸಿಗಿ,
ನಿನ್ನೇಷ್ಟೇ ಕಚ್ಚಿ ತಿಂದರು
ತೃಪ್ತಿ ಸಿಗದು ನನಗೆ
ಆನೆಯಾದರೆ ನಾನು
ತಟ್ಟು ತೊಡೆ
ಕಾದಾಡು
ನನ್ನ ಮದಕ್ಕೆ ಅಂಕುಶವಿಲ್ಲ ನಿನ್ನಲ್ಲಿ
ಹಾರು, ಯೌವನವೆಲ್ಲ ಹಸಿದಂತೆ
ಆರ್ಭಟಿಸಿ ಮೇಲೆರಗು
ನೆಲಕುರುಳಿಸು; ಅಬ್ಬರದೊಳಗೆ ಸೇರುವೆ
ಶಾಂತೆಯಾದರೂ ಛಿದ್ರಗೊಳಲು
ಉಲ್ಕೆ ಬಡಿತವೇ ಬೇಕು!
ಹೊಂಚು ಹಾಕುವಾಗಾ ಮಾತ್ರ
ಮೆಲ್ಲನೆ.. ನಿಧಾನವಾಗಿ..
ಕಣ್ಣಲ್ಲಿ ಕಣ್ಣಿಟ್ಟು
ತಣ್ಣನೇ ರಕ್ತ ಹೀರು
ಸಾವ ಸುಖಿಸುತ್ತೇನೆ..!
ಎದೆ ಮೇಲೆ ಹೆಜ್ಜೆ
ಒಂದು.. ಎರೆಡು.. ಮೂರು
ಮೊದಲಿನವಷ್ಟೆ ಲೆಕ್ಕ
ನಂತರದಲ್ಲಿ ತುಳಿದವೆಷ್ಟೋ
ಉಬ್ಬಿ, ಪಾದವೆಲ್ಲ ಹೂ ಗಂಧ
ಬೇಟೆ ಹೊರಡಲು ಹೆಜ್ಜೆ ಇಟ್ಟಲೆಲ್ಲ ಬಣ್ಣದಚ್ಚು





ನಿನ್ನೇಷ್ಟೇ ಕಚ್ಚಿ ತಿಂದರು ತೃಪ್ತಿ ಸಿಗದು ನನಗೆ,,,,,,, ಅದ್ಭುತ ಸಾಲುಗಳು
ಚೆನ್ನಾಗಿದೆ.
super
It’s nice.