ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನು ಪ್ರೀತಿಸುವುದಾದರೆ..

ನಾಗರಾಜ್ ಕಾಂಬಳೆ

ನೀನು ಪ್ರೀತಿಸುವುದಾದರೆ
ಹೂದೋಟವನ್ನು ಪ್ರೀತಿಸು;
ಬಣ್ಣ-ಬಣ್ಣದ ಹೂಗಳು
ನಿನ್ನ ಮುಡಿ ಏರಿ ನಿನಗೆ ಮೆರಗು ಕೊಡಬಹುದು

ನೀನು ಪ್ರೀತಿಸುವುದಾದರೆ
ಕಾಡಿಗೆಯನ್ನು ಪ್ರೀತಿಸು;
ನಿನ್ನ ಕಣ್ಣ ಸೇರಿ ಕಾಂತಿ ಹೆಚ್ಚಿಸಬಹುದು

ನೀನು ಪ್ರೀತಿಸುವುದಾದರೆ
ನಿನ್ನ ಮುಗುಳುನಗೆಯನ್ನು ಪ್ರೀತಿಸು;
ನಿನ್ನ ಮುಗುಳುನಗೆ ನಿನ್ನ ಸೌಂದರ್ಯ ಇಮ್ಮಡಿಗೊಳಿಸಬಹುದು

ನೀನು ಪ್ರೀತಿಸುವುದಾದರೆ
ನಿನ್ನ ಗೆಜ್ಜೆಯನ್ನು ಪ್ರೀತಿಸು;
ನಿನ್ನ ಹೆಜ್ಜೆ ಸೇರಿ ನಡಿಗೆಗೆ ನಾಟ್ಯದ ಲಯ ಬರಬಹುದು

ನೀನು ಪ್ರೀತಿಸುವುದಾರೆ
ನಿನ್ನ ಸೀರೆಯ ನೆರಿಗೆಯನ್ನು, ಕೈಬಳೆಯನ್ನು ಪ್ರೀತಿಸು;
ನಿನ್ನ ದೇಹಕ್ಕೆ ಲಾವಣ್ಯದ ಲೇಪ ಅಂಟಿಸಬಹುದು

ನೀನು ಹುಚ್ಚು ಹುಡುಗಿ
ಇವೆಲ್ಲವನ್ನು ನನ್ನೊಬ್ಬನಲ್ಲಿಯೇ ಹುಡುಕಿ
ಯಾಕೆ ಕೊರಗುವೆ?
ನನಗಾಗಿಯೇ ಯಾಕೆ ಕಾಯುವೆ?

ಅವಳು ಹೇಳಿದಳು;
ನೀನು ಇದೆಲ್ಲವನ್ನು ಕೇವಲ ಒಂದೇ ಮುತ್ತಿನಿಂದ ತುಂಬಬಹುದು
ಆ ಮುತ್ತಿನ ಹೆಸರೇ ‘ಪ್ರೇಮ’

‍ಲೇಖಕರು Avadhi

10 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading