ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಸಾರ್ ಸರ್ : 'ಭಾಗವತರು' ನೆನಪಿಸಿದ 80


– ರೇವಣ್ಣ ಮಾಳಿಗೆ, ಭಾಗವತರು
ನಿಸಾರ್ ಸಾರ್ ಕಳೆದ 20 ವರ್ಷಗಳಿಂದ ಪರಿಚಯ.
ಅವರ 80ನೇ ವರ್ಷದ ಒಂದು ಒಳ್ಳೆಯ ಕಾರ್ಯಕ್ರಮ ಮಾಡುವ ಅವಕಾಶ ನನಗೆ ಕೊಟ್ಟಿದ್ದರು.
ಅನಂತರ ನಾನು ಕರೆದ ಎಲ್ಲಾ ಕಾರ್ಯಕ್ರಮಗಳಿಗೆ ಬಂದಿದ್ದಾರೆ.
15/12/2019 ರಂದು ಭಾಗವತರು ನಡಿಸಿದ ‘ಯು.ಆರ್.ಅನಂತಮೂರ್ತಿ ಅವರ ಮರು ಓದಿನ ನೆಲೆಗಳು’ ಕಾರ್ಯಕ್ರಮ ಸಾರ್ವಜನಿಕವಾಗಿ ಕೊನೆಯ ಕಾರ್ಯಕ್ರಮ.
ಅಂದು ಸಂಜೆ ಫೋನ್ ಮಾಡಿ ರೇವಣ್ಣ ಹತ್ತು ಸಮಸ್ತರ ಜೊತೆ ಅನಂತಮೂರ್ತಿ ಮಾತುಕತೆ ಪುಸ್ತಕ ಬೇಕು ಅಮೆರಿಕಾದಿಂದ ಬಂದಮೇಲೆ ತಂದುಕೊಡು ಎಂದರು. ನಾನು ಖರೀದಿ ಮಾಡಿದ್ದೆ ಆದರೆ ಕೊಡುವುದಕ್ಕೆ ಆಗಲಿಲ್ಲ.
ಲಾಕ್ ಡೌನ್ ಸಮಯದಲ್ಲಿ ವಿಜಯಮ್ಮ ಮತ್ತು ವೀರಪ್ಪ ಮೊಯಿಲಿ ಅವರು ಜೀವನ ಪರಿಚಯದ ಪುಸ್ತಕಗಳ ಓದಿನ ನಂತರ ನಿಸಾರ್ ಅವರ ‘ಅಚ್ಚುಮೆಚ್ಚು’ ಪುಸ್ತಕ ಓದುತ್ತಿದ್ದೆ.
ನನ್ನ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದು, ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ ಸಂಗೀತವನ್ನು ಚೆನ್ನಾಗಿ ಮಾಡಲಿ ಒಳ್ಳೇಯದಾಗಲಿ ಎಂದು ಯಾವಾಗಲೂ ಹೇಳುತ್ತಿದ್ದರು.
ಸಿ.ಅಶ್ವಥ್ 70 ನಿಸಾರ್ 85 ಕಾರ್ಯಕ್ರಮ ಭಾಗವತರಿಂದ ಆಗುವುದಿಲ್ಲ ನಿಸಾರ್ ಸಾರ್ ನಮ್ಮ ಕುಟುಂಬದ ನಮನಗಳು.



















ತರು
 

‍ಲೇಖಕರು avadhi

4 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading