ನಿರಾಶ್ರಿತರ ನೋವುಗಳು..

– W. H. Auden
ಭಾವಾನುವಾದ – ಶಿವಕುಮಾರ್ ಮಾವಲಿ

ಈ ನಗರದಲ್ಲಿ ಹತ್ತು ಲಕ್ಷ ಜನರಿದ್ದಾರೆ ಎನ್ನುತ್ತಾರೆ
ಕೆಲವರು ಬಂಗಲೆಗಳಲ್ಲಿದ್ದರೆ ಮತ್ತೆ ಕೆಲವರು ಗುಂಡಿ-ಗಟಾರಗಳಲ್ಲಿ ನೆಲೆಸಿದ್ದಾರೆ
ಆದರೆ ನಮಗೆ ಮಾತ್ರ ಇಲ್ಲಿ ಜಾಗವಿಲ್ಲ ಡಿಯರ್
ಆದರೆ ನಮಗೆ ಮಾತ್ರ ಇಲ್ಲಿ ಜಾಗವಿಲ್ಲ …

ಒಂದು ಕಾಲದಲ್ಲಿ ನಮಗೂ ಒಂದು ದೇಶವಿತ್ತು , ಎಲ್ಲವೂ ಸರಿಯಿತ್ತು ;
ಈಗಲೂ ನೀನಾದೇಶವನ್ನು ಅಟ್ಲಾಸ್ ನಲ್ಲಿ ಕಾಣಬಹುದು
ಆದರೆ ನಾವೀಗ ಅಲ್ಲಿಗೆ ಹೋಗುವುದು ಸಾಧ್ಯವಿಲ್ಲ ಡಿಯರ್ ,
ನಾವೀಗ ಅಲ್ಲಿಗೆ ಹೋಗುವುದು ಸಾಧ್ಯವಿಲ್ಲ .

ಊರ ಹೊರಗಿನ ಚರ್ಚ್ ನ ಆವರಣದಲ್ಲೊಂದು
ಹಳೆಯ ಮರ ಇದೆ
ಪ್ರತೀ ವಸಂತದಲ್ಲೂ ಹೊಸ ಹೂಗಳನ್ನು ಬಿಡುತ್ತದೆ
ಆದರೆ ಹಳೆಯ ಪಾಸ್ ಪೋರ್ಟ್ ಗಳೀಗ ನಡೆಯುವುದಿಲ್ಲ ಡಿಯರ್…
ಹಳೆಯ ಪಾಸ್ ಪೋರ್ಟ್ ಗಳೀಗ ನಡೆಯುವುದಿಲ್ಲ ಡಿಯರ್…

ರಾಯಭಾರ ಕಛೇರಿಯಲ್ಲಿ ಮೇಜು ಕುಟ್ಟಿ ಹೇಳಿದರು;
‘ನಿಮ್ಮ ಬಳಿ ಹೊಸ ಪಾಸ್ ಪೋರ್ಟ್
ಇಲ್ಲವಾದಲ್ಲಿ ನೀವು ಅಧೀಕೃತವಾಗಿ ಸತ್ತಿದ್ದೀರ’
ಆದರೆ ನಾವಿನ್ನೂ ಬದುಕಿದ್ದೇವೆ ಪ್ರಿಯೆ…
ಆದರೆ ನಾವಿನ್ನೂ ಬದುಕಿದ್ದೇವೆ ಡಿಯರ್…

ಒಂದು ಸಮಿತಿಯ ಮುಂದೆ ಹೋಗಿ ನಿಂತೆ…
ಕುಳಿತುಕೊಳ್ಳಲು ಕುರ್ಚಿ ಕೊಟ್ಟರು…
ಮುಂದಿನ ವರ್ಷ ಬನ್ನಿ ಎಂದು ನಯವಾಗಿ ಹೇಳಿ ಕಳಿಸಿದರು…
ಆದರೆ ಇವತ್ತು ನಾವೆಲ್ಲಿಗೆ ಹೋಗುವುದು ಡಿಯರ್ ?
ಇವತ್ತು ನಾವೆಲ್ಲಿಗೆ ಹೋಗುವುದು ?

ಒಂದು ಸಾರ್ವಜನಿಕ ಸಭೆಗೆ ಹೋಗಿದ್ದೆ ;
ಭಾಷಣಕಾರ‌ ಎದ್ದು ನಿಂತು ಏರು ಧ್ವನಿಯಲ್ಲಿ ಅರಚಿದ;
‘ ನಾವು ಅವರನ್ನು ಒಳಗೆ ಬಿಟ್ಟುಕೊಂಡರೆ,ಅವರು ನಮ್ಮ ದಿನದ ಅನ್ನವನ್ನೇ ಕಿತ್ತುಕೊಳ್ಳುತ್ತಾರೆ’
ಅವನು ಹೇಳಿದ ಆ ಅವರು , ನಾನು -ನೀನೇ ಡಿಯರ್…
ಆ ಅವರು ನಾನು -ನೀನೇ …

ಆಕಾಶದಲ್ಲಿ ಗುಡುಗಿನ ಘರ್ಜನೆ ಕೇಳಿಸಿಕೊಂಡೆ ಎಂದುಕೊಂಡರೆ,
ಅದು ಹಿಟ್ಲರ್ ಯೂರೋಪ್ ನ‌ ಕುರಿತು ‘ ಅವರು‌ ಸಾಯಲೇಬೇಕು’ ಎಂದು ಹೇಳಿದ್ದಾಗಿತ್ತು
ಅವನ ಮನಸ್ಸಲ್ಲಿದ್ದದ್ದು ನಾವೇ ಡಿಯರ್ ,
ಅದು ನಾವೇ ಡಿಯರ್…

ಜಾಕೇಟ್ ನೊಳಗೆ ನಾಯಿಯೊಂದನ್ನು ಸುತ್ತಿದ್ದು ಕಂಡೆ
ಮನೆಯೊಂದರ ಬಾಗಿಲು ತೆರೆದು ಬೆಕ್ಕನ್ನು ಒಳಗೆ ಬಿಟ್ಟುಕೊಂಡಿದ್ದನ್ನು ಕಂಡೆ
ಆದರೆ ಅವು ಜರ್ಮನ್ ಯಹೂದಿಗಳಾಗಿರಲಿಲ್ಲ ಡಿಯರ್…
ಆದರೆ ಅವು ಜರ್ಮನ್ ಯಹೂದಿಗಳಾಗಿರಲಿಲ್ಲ …

ಬಂದರಿನ ಬಳಿ ಹೋಗಿ ಹಡಗುಕಟ್ಟೆಯ ಮೇಲೆ ನಿಂತೆ
ಮೀನುಗಳು ಸ್ವತ‌ಂತ್ರವಾಗಿ ಈಜಾಡುವುದು ಕಂಡೆ
ಕೇವಲ ಹತ್ತು ಅಡಿ ದೂರದಲ್ಲಿ ಡಿಯರ್ ,
ಕೇವಲ ಹತ್ತೇ ಅಡಿ ದೂರದಲ್ಲಿ …

ಅಡವಿಯಲ್ಲಿ ನಡೆದು ಹೋಗುವಾಗ ಮರಗಳಲ್ಲಿ ಹಕ್ಕಿಗಳ ಕಂಡೆ ;
ಅವುಗಳಿಗೆ ರಾಜಕಾರಣಿಗಳಿರಲಿಲ್ಲ ಮತ್ತು ಮನಸೋಯಿಚ್ಛೆ ಹಾಡಿಕೊಂಡಿದ್ದವು;
ಸದ್ಯ, ಅವು ಮನುಷ್ಯರಾಗಿರಲಿಲ್ಲ ಡಿಯರ್
ಅವು ಮನುಷ್ಯರಾಗಿರಲಿಲ್ಲ…

ಕನಸಲ್ಲಿ ಸಾವಿರ ಅಂತಸ್ತಿನ ಕಟ್ಟಡವೊಂದನು ಕಂಡೆ
ಸಾವಿರ ಕಿಟಕಿ ಮತ್ತು ಸಾವಿರ ಬಾಗಿಲುಗಳಿದ್ದವು ;
ಅವುಗಳಲ್ಲಿ ಒಂದೂ ನಮ್ಮದಾಗಿರಲಿಲ್ಲ ಡಿಯರ್
ಅವುಗಳಲ್ಲಿ ಒಂದೂ ನಮ್ಮದಾಗಿರಲಿಲ್ಲ…

ಒಂದು ವಿಶಾಲ ಮೈದಾನದಲ್ಲಿ ಬೀಳುತ್ತಿದ್ದ ಹಿಮದಲ್ಲಿ ನಿಂತು ನೋಡಿದೆ ;
ಹತ್ತು ಸಾವಿರ ಸೈನಿಕರು ಗಸ್ತು ತಿರುಗುತ್ತಿದ್ದರು;
ನನ್ನ- ನಿನ್ನ ಹುಡುಕಿ‌ ಡಿಯರ್
ನನ್ನ – ನಿನ್ನ ಹುಡುಕಿ …

Refugee Blues

Say this city has ten million souls,
Some are living in mansions, some are living in holes:
Yet there’s no place for us, my dear, yet there’s no place for us.

Once we had a country and we thought it fair,
Look in the atlas and you’ll find it there:
We cannot go there now, my dear, we cannot go there now.

In the village churchyard there grows an old yew,
Every spring it blossoms anew:
Old passports can’t do that, my dear, old passports can’t do that.

The consul banged the table and said,
“If you’ve got no passport you’re officially dead”:
But we are still alive, my dear, but we are still alive.

Went to a committee; they offered me a chair;
Asked me politely to return next year:
But where shall we go to-day, my dear, but where shall we go to-day?

Came to a public meeting; the speaker got up and said;
“If we let them in, they will steal our daily bread”:
He was talking of you and me, my dear, he was talking of you and me.

Thought I heard the thunder rumbling in the sky;
It was Hitler over Europe, saying, “They must die”:
O we were in his mind, my dear, O we were in his mind.

Saw a poodle in a jacket fastened with a pin,
Saw a door opened and a cat let in:
But they weren’t German Jews, my dear, but they weren’t German Jews.

Went down the harbour and stood upon the quay,
Saw the fish swimming as if they were free:
Only ten feet away, my dear, only ten feet away.

Walked through a wood, saw the birds in the trees;
They had no politicians and sang at their ease:
They weren’t the human race, my dear, they weren’t the human race.

Dreamed I saw a building with a thousand floors,
A thousand windows and a thousand doors:
Not one of them was ours, my dear, not one of them was ours.

Stood on a great plain in the falling snow;
Ten thousand soldiers marched to and fro:
Looking for you and me, my dear, looking for you and me.

– W. H. Auden

‍ಲೇಖಕರು avadhi

December 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: