ನಿಮಗೆ ಹ್ಯಾಟ್ಸ್ ಆಫ್ ಸುರೇಶ್ ಸರ್..

lakshmi devi kuppam uni

ಲಕ್ಷ್ಮಿ ದೇವಿ 

ನಾವು ಬೆವರನು ಸುರಿಸಿ ದುಡಿಯುವ ಜನ ನಮ್ಮ ಬೆವರಿನ ಪಾಲನು ಕೇಳುವೆವು..’

ಈ ಹಾಡು ಬೀದಿ ನಾಟಕಗಳಲ್ಲಿ ಹಾಗೂ ಜನಾಂದೋಲನ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅರಿವನ್ನು ಮೂಡಿಸುವ ಸಲುವಾಗಿ ಸುಮಾರು 90ರ ದಶಕದಲ್ಲಿ ಹಾಡಲಾಗುತ್ತಿತ್ತು. ರಂಗತಂಡಗಳು ಸಾಮಾಜಿಕ ಕಳಕಳಿಯನ್ನು ಹೊತ್ತು ರಾಜ್ಯದಾದ್ಯಂತ ಸಂಚರಿಸಿತ್ತು. ಅದೇ ರಂಗಭೂಮಿಯ ಸೊಗಡನ್ನು ಬಿ.ಸುರೇಶ್ ರವರ ‘ದೇವರ ನಾಡಲ್ಲಿ’…..ಕಂಡಂತಾಯಿತು.

devara nadalliಅತ್ಯಂತ ಸೂಕ್ಷ್ಮ ಪ್ರಜ್ಞೆಯುಳ್ಳ ನಿರ್ದೇಶಕರ ಸಂಶೋಧನಾ ಸಾಮರ್ಥ್ಯ ಇಡೀ ಚಲನಚಿತ್ರದಲ್ಲಿ ಎದ್ದು ಕಾಣುತ್ತದೆ. ತಮಿಳು, ಮಳೆಯಾಳಂ, ತುಳು, ಮರಾಠಿ, ತೆಲುಗು, ಉರ್ಧು ಭಾಷೆಗಳ ಸಂಗಮ ಸಹಜತೆಯ ಮಿಳಿತದೊಂದಿಗೆ ರೂಪುಗೊಂಡಿದೆ. ಚಿತ್ರದ ಪ್ರತಿ ಹಂತದಲ್ಲೂ ಜತನವಹಿಸಿ ಮಾಡಿರುವ ಕಾರ್ಯ ನಿರ್ದೇಶಕರ ಶ್ರಮವನ್ನು ಬಿಂಬಿಸುತ್ತದೆ. ಪ್ರತಿ ಪಾತ್ರದಲ್ಲೂ ಸಹಜತೆಯ ತುಡಿತ ಎದ್ದು ಕಾಣುತ್ತದೆ.

ರಂಗಭೂಮಿಯ ನೇಪಥ್ಯವನ್ನು ಹೊಂದಿರುವ ನಾಯಕಿ, ಪ್ರಸಾಧನವಿಲ್ಲದೇ ತನ್ನ ಪಾತ್ರಕ್ಕೆ ಜೀವತುಂಬಿದ ಪ್ರಕಾಶ್ ರೈ, ನಯವಂಚನೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ ಸಿಹಿ ಕಹಿ ಚಂದ್ರು, ರಾಜಕಾರಣಿಯಾಗಿ ಅಚ್ಚುತ, ಉಪನ್ಯಾಸಕರಾಗಿ ಮಂಡ್ಯ ರಮೇಶ್, ಕನ್ನಡದ ಉಪನ್ಯಾಸಕ ಹಾಗೂ ನಾಯಕ ನಟನ ಪಾತ್ರಗಳು ಅತ್ಯಂತ ಮನೋಜ್ಞವಾಗಿ ಮೂಡಿಬಂದಿವೆ.

ಒಂದು ಘಟನೆ ವಸ್ತುಸ್ಥಿತಿಯನ್ನು ಹೊರತು ಪಡಿಸಿ ಅದೆಷ್ಟು ಆಯಾಮಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಬೀಡಾ ಹಾಗೂ ಚಹಾದ ಅಂಗಡಿಯ ಸನ್ನಿವೇಶಗಳಲ್ಲಿ ಮಾರ್ಮಿಕವಾಗಿ ಹೊರಹೊಮ್ಮಿಸುತ್ತದೆ. ಗಡಿ ಪ್ರಾಂತ್ಯದಲ್ಲಿರುವ ವರ್ಗ-ವರ್ಣ ಸಂಘರ್ಷಗಳನ್ನು ಕಾಲೇಜಿನ ಉಪನ್ಯಾಸಕರ ಪಾತ್ರಗಳ ಮೂಲಕ ಹೇಳಿಸುತ್ತಾ, ಬಂಡವಾಳ ಶಾಹಿಗಳ ಹಿಡಿತದಲ್ಲಿರುವ ರಾಜಕಾರಣದ ವಿಡಂಬನೆಯೊಂದಿಗೆ ತಳಿಕೆಯನ್ನು ಹಾಕಿಕೊಳ್ಳುವ ಕಥಾಹಂದರ ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ.

ಸಾಮಾಜಿಕ ಸ್ವಾಸ್ಥ್ಯ , ಕೋಮು ಸೌಹಾರ್ಧದ ಹಿನ್ನೆಲೆಯ ಆಶಯವನ್ನು ಇಡೀ ಚಲನ ಚಿತ್ರ ಧ್ವನಿಸುತ್ತದೆ. ….. ಇಂತಹ ಸದಭಿರುಚಿಯ ಚಿತ್ರವನ್ನು ನೀಡಿದ ನಿಮಗೆ ಹ್ಯಾಟ್ಸ್ ಆಫ್ ಸುರೇಶ್ ಸರ್..

‍ಲೇಖಕರು Admin

February 21, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: