ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನೆದೆಗೆ ಒರಗಿ ಕೂರುವ ಆಸೆ..

ಶಮ ನಂದಿಬೆಟ್ಟ 

ಬಾಲ್ಕನಿಯಲ್ಲಿ ನಿನ್ನೆದೆಗೆ
ಒರಗಿ ಕೂರುವ ಆಸೆಗೆ
ಸಾಥ್ ಕೊಟ್ಟಿದ್ದು ಹೇಳದೇ
ಕೇಳದೇ ಥೇಟ್ ನಿನ್ನ ಹಾಗೇ
ಧೋ ಎಂದ ಮಳೆ !
ಗಾಜಿನ ಚಹಾ ಕಪ್
ಮೇಲೆ ಹರಡಿದ ಅಕ್ಕರೆಯ
ವಿನ್ಯಾಸಕ್ಕೆ ಮನದುಂಬಿ
ಮುತ್ತಿಡುವಾಗ ನಿನ್ನ ಬಿಸಿ
ತುಟಿಯ ಗುಂಗು !!

ಸುಳ್ಳೇ ಕಾರಣ ಕೊಟ್ಟು
ದೂರವಿಟ್ಟವನ ನೆನೆಯುತ್ತ
ಜಾರಿದ ಹನಿಗಳು
ಚಹಾವನ್ನು ಉಪ್ಪಾಗಿಸಿ
ತಮ್ಮ ಪಾಡಿಗೆ ವಿಲೀನ
ಕೆನೆಗಟ್ಟಿದ ಚಹಾದ ಜತೆ
ಭಾವನೆಗಳದೂ ಆತ್ಮ ಹತ್ಯೆ!!!

ಅವತ್ತು ಮೂರು ಗಂಟೆಗೆ
ಇದ್ದಕ್ಕಿದ್ದ ಹಾಗೆ ನೀ ಬಂದು
“ಬಿಸೀ ಚಹಾ ಸಿಗತ್ತೇನೇ”
ಕೇಳಿದಾಗ ಗೊತ್ತಿತ್ತು ಇಬ್ಬರಿಗೂ
ಬೇಕಿದ್ದದ್ದು ಚಹಾವಲ್ಲ
ಒಳಗಿನದು ಬೇರೆ ಜರೂರತ್ತು
ನನ್ನ ಪ್ರೀತಿಯ ಮೇಲೆ ನಿನ್ನ
ಹಠವೇ ಗೆಲುವು ಸಾಧಿಸಿತ್ತು!!

ಇನ್ನೂ ತಣಿಯದ ಮೈ ಮನಸಿಗೆ
ಬಲವಂತದ ಸನ್ಯಾಸ
ಉಕ್ಕಿ ಬರುವ ಚಹಾಕ್ಕೆ ತಣ್ಣೀರು
ಚಿಮುಕಿಸಿ ಸುಖಾ ಸುಮ್ಮನೇ
ನಿಟ್ಟುಸಿರಿಟ್ಟು ನಡು ಮನೆಯಲ್ಲಿ
ಕೂರವರಿಗೆ ಚಹಾ ತರುವಷ್ಟರಲ್ಲಿ
ತುಟಿ ತುಂಬಾ ಬಿರಿದ ನಗು !!
ಮೂಲೆಯ ರೇಡಿಯೋದ
ಎಫ್. ಎಂ. ನಲ್ಲಿ ತೇಲಿ ಬಂದ
“ಯಾವ ದುಃಖ ಮರೆಸಲು ಹೀಗೆ
ನಗುತ್ತೀ” ಜಗಜೀತನ ದನಿ
ಮತ್ತೆ ಮತ್ತೆ ಅಣಕಿಸುತ್ತದೆ !!

‍ಲೇಖಕರು avadhi

20 April, 2017

3 Comments

  1. ನಾಗರಾಜ್ ಹರಪನಹಳ್ಳಿ

    ಗಾಜಿನ ಚಹಾ ಕಪ್
    ಮೇಲೆ ಹರಡಿದ ಅಕ್ಕರೆಯ
    ವಿನ್ಯಾಸಕ್ಕೆ ಮನದುಂಬಿ
    ಮುತ್ತಿಡುವಾಗ ನಿನ್ನ ಬಿಸಿ
    ತುಟಿಯ ಗುಂಗು !!…..

    ಇಷ್ಟವಾದ ಪ್ಯಾರ. ಚೆಂದ ಕವಿತೆ.

    • ಕೈದಾಳ್ ಕೃಷ್ಣಮೂರ್ತಿ

      ಮನ ಮಿಡಿಸುವ ಭಾವ

  2. nadashetty

    chahaada kappu kaiyalle gunugitu: aarhoguttiddene. sappeyaaguva munna hiiribidu
    naanande: sappeyaagali bidu. adaralluu sihiyide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading