ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನೆಗೆ ನನ್ನ ಮಾತು

muralidhara upadhya hiriyadka

ಮುರಳೀಧರ ಉಪಾಧ್ಯ, ಹಿರಿಯಡ್ಕ 

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಕುರಿತ ಸಂಪ್ರಬಂಧ  ‘ನಿನ್ನೆಗೆ ನನ್ನ ಮಾತು’ ಕೃತಿಗೆ ಬರೆದ ಬೆನ್ನುಡಿ 

 

ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕಾವ್ಯದಲ್ಲಿ ಕನ್ನಡ ನವ್ಯ ಕಾವ್ಯದ ವಿಶಿಷ್ಟ ಕವಲುಗಳಿವೆ.

‘ಪಾಂಚಾಲಿ’ಯಲ್ಲಿ (೧೯೯೬) ಅವರ ಪ್ರಾತಿನಿಧಿಕ ಕವನಗಳಿವೆ. ‘ದೆವ್ವದ ಜೊತೆ ಮಾತುಕತೆ’ ಯಂಥ ಕವನ ಗುಚ್ಛಗಳು, ‘ಚಿನ್ನದ ಹಕ್ಕಿ’ (ಯೇಟ್ಸ್ ಕವಿಯ ಕವನಗಳ ಅನುವಾದ) ಅವರ ಅಸಾಧಾರಣ ಕೊಡುಗೆಗಳು.

pragna marpalli‘ಶೇಕ್ಸ್ಪ್ ಪಿಯರ್ ನ ಸಾನೆಟ್ ಗಳನ್ನು, ಶೂದ್ರಕನ ’ ಮೃಚ್ಛಕಟಿಕ ’ ನಾಟಕವನ್ನು ಅವರು ಕನ್ನಡಕ್ಕೆ ತಂದಿದ್ದಾರೆ. ನವ್ಯದ ಏರುದಿನಗಳಲ್ಲಿ ಅನಾದರಕ್ಕೆ ಗುರಿಯಾಗಿದ್ದ ಭಾವಗೀತೆ ಮತ್ತು  ಮಕ್ಕಳಸಾಹಿತ್ಯವನ್ನು ಜವಪ್ರಿಯಗೊಳಿಸಿದ ಕವಿ ಎನ್. ಎಸ್. ಎಲ್.

ಅವರ ಕಾವ್ಯ , ಲವಲವಿಕೆ , ‘ಇದ್ದು ಜೈಸಬೇಕು’ ಎಂಬ ಜೀವನಪ್ರೀತಿ ಮತ್ತು ಮಾಧುರ್ಯ ತುಂಬಿದ ಕಾವ್ಯ. ಅವರು ‘ಹಚ್ಚಿದ ದೀಪ ಎಲ್ಲ ಗಡಿಯಾಚೆಗೂ ಬೆಳಕು ಸುರಿವಂಥದು “.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಡಾ ಪ್ರಜ್ಞಾ ಮಾರ್ಪಳ್ಳಿ  ತನ್ನ ಕಾದಂಬರಿ, ಕತೆಗಳಿಂದ ಮನ್ನಣೆ ಗಳಿಸುತ್ತಿರುವ ಲೇಖಕಿ. ಅವರ ಈ ಸಂಪ್ರಬಂಧದಲ್ಲಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ನವ್ಯ ಕಾವ್ಯ, ಭಾವಗೀತೆ, ಮಕ್ಕಳ ಸಾಹಿತ್ಯ ಪ್ರಕಾರಗಳಿಗೆ ನೀಡಿರುವ ಕೊಡುಗೆಯ ಕೂಲಂಕಷ ಅಧ್ಯಯನವಿದೆ; ವಿಮರ್ಶಾತ್ಮಕ ಒಳನೋಟಗಳಿವೆ.
ಎನ್. ಎಸ್. ಎಲ್. ಅವರ ಸಮಗ್ರ ಕಾವ್ಯವನ್ನು ಕುರಿತ ಚರ್ಚೆಯನ್ನು ಪ್ರಶಂಸನೀಯವಾಗಿ ಆರಂಭಿಸಿರುವ ಪ್ರಜ್ಞಾ ಮಾರ್ಪಳ್ಳಿ ಅವರಿಗೆ ಅಭಿನಂದನೆಗಳು. ‘ಸಹನೆ ಗೆಲ್ಲಲಿ’ ಎಂದು ಹಾಡಿದ ಕವಿಯ ಕೊಡುಗೆ ಗುರುತಿಸಿದ ಪ್ರಜ್ಞಾ ಗೆಲ್ಲಲಿ .

‍ಲೇಖಕರು Admin

5 May, 2016

6 Comments

  1. Anonymous

    ಪ್ರೊ.ಬಸವರಾಜ ಪುರಾಣಿಕ

    “ಸಹನೆ ಗೆಲ್ಲಲಿ” ಎಂದು ಹಾಡಿದ ಕವಿಯ ಕುರಿತ ಡಾ. ಪ್ರಜ್ಙಾ ಅವರ ಥೆಸಿಸ್ ಬಂದದ್ದು ಸಕಾಲಿಕ ಹಾಗು ಸಮುಚಿತ.
    ಭಟ್ಟರ ಸಾಹಿತ್ಯ ಕೃಷಿ ಅವಲೋಕಿಸಿದವರಿಗೆ “ನಿನ್ನೆಗೆ ನನ್ನ ಮಾತು” ಕೃತಿ ರಚಿಸಿ ಪ್ರಜ್ಙಾ ಬಹುಮುಖೀ ಸಾಧನೆ ಸಿದ್ಧಿಯ ಭಟ್ಟರಿಗೆ ಅಪರೂಪದ ಗೌರವ ನೀಡಿರುವರು

  2. rathabeedhi geleyaru { r } udupi

    ನಿನ್ನೆಗೆ ನನ್ನ ಮಾತು – ಪುಸ್ತಕದ ಬೆಲೆ ರೂ- 150. ಪ್ರತಿಗಳಿಗಾಗಿ ಉಡುಪಿಯ ಸೀತಾ ಬುಕ್ ಹೌಸ್ ಅವರನ್ನು ಸಂಪರ್ಕಿಸಿ-ಮೊಬೈಲ್- 9901728373 . email- prajnamarpally@gmail.com

  3. ಚಿದನಂದ ಮಾಸನಕಟ್ಟಿ

    ನಾನು ನಿಮ್ಮ ಕೃತಿಯನ್ನು ಓದಬೇಕೆಂದಿದ್ದೇನೆ ಓದಿದ ನಂತರ ಹೇಳುವೆ

    • Anonymous

      ಧನ್ಯವಾದಗಳು..

  4. ಪ್ರಜ್ಞಾ ಮಾರ್ಪಳ್ಳಿ

    ಧನ್ಯವಾದಗಳು..

  5. ಪ್ರಜ್ಞಾ ಮಾರ್ಪಳ್ಳಿ

    ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading