ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಿತ್ಯವೂ ನನ್ನಂಗಳದಲಿ ಅಕ್ಷರ ಜಾತ್ರೆ’ – ಆರತಿ ಘಟಿಕಾರ್

ಕಪ್ಪು ಹಲಗೆ

ಆರತಿ ಘಟಿಕಾರ್

ಗೋಡೆಯೊಳಗಿನ ಬಂಧಿ, ಕಪ್ಪನೆಯ ಮಿರುಗು
ಖಾಲಿ ಶಿಲೆಗೆ , ಒತ್ತಿ ಬರದದ್ದೆಲ್ಲವೂ ಬೆರಗು
ಗೌಜು ಗದ್ದಲದಲ್ಲೆ ಎವೆಯಕ್ಕದ ತುಂಟ ನೋಟ ,
ಬೆತ್ತದ ಬೆದರಿಕೆಯ ಶಿಸ್ತಿನ ಪಾಠ ,ಹೇಗಾಯಿತೋ
ಬಳಪದೊಂದಿಗೆ ಸ್ನೇಹ , ಈಗ ನಿತ್ಯದ ಒಡನಾಟ

ಗೀಚಿದರೇನೋ ಗಣಿತ ,ಇತಿಹಾಸ , ಚರಿತ್ರೆ
ನಿತ್ಯವೂ ನನ್ನಂಗಳದಲಿ ಅಕ್ಷರ ಜಾತ್ರೆ
ಮಧ್ಯಂತರ ವಿಲ್ಲದ ತಪಸ್ಸಿನಂತೆ ಶಿಕ್ಷಣ
ಎರಕವಾಗಲಿ ವಿದ್ಯೆ , ಜೊತೆಗಿರಲಿ ವಿವೇಕ ಪ್ರತಿಕ್ಷಣ
ಚಾಕಿನ ಧೂಳಿಗೊಮ್ಮೆ ಕೆಮ್ಮಿ , ಅರಿತದ್ದೇನೋ ..
ಕಲಿತ ದ್ದೇನೋ, ಚಿಂತಿಸುವುದೇಕೆ ಮೂಕ ಮನ .?
 
ಅನುಭವಗಳ ಮಾಡಾದೆ,ಕಾಲ ಚಕ್ರದಲಿ
ಬರೆದು ಅಳಸಿದರೂ ನೆನಪಿನ ಗೂಡಾದೆ
ಬಿಡದಿ ಮೋಹ , ಮಕ್ಕಳ ನೆನಪಲಿ ಅತ್ತೆ
ಅರಿವಿಲ್ಲ ನನಗೆ , ಹೇಳರಾರೂ ಎಕೆನಗೆ
ಯಾರಾದರೋ ವಿಜ್ಞಾನಿ, ಯಾರು ಸಿಪಾಯಿ
ಮಾಗಿ ಹಣ್ಣಾಯಿತೇ ಎಲೆ ಮರೆ ಕಾಯಿ …?
 
ಸಾಕ್ಷರತೆಯ ಜ್ಯೋತಿಗರ್ಪಿಸೆ ಈ ಬಾಳು
ಹರಸುವೆ ಬರಲಿ ಏನೇ ಏಳು ಬೀಳು
ಅರಿವು ಬೆಳಕಾಗಲಿ ಏರುತ್ತಾ ಮಜಲು
ತುಂಬಲಿ ಜ್ಞಾನ ಸಾಗರವೇ ಹನಿ ಹನಿಯಲೂ
ಕನಸ ಚಿಗುರಿ ಗಡಿ ದಾಟಿ ಮುನ್ನುಗ್ಗಲಿ ಸಾಲು
ಸತ್ಪ್ರಜೆಗಳಾಗಲಿ
ಸಿಗಲಿ ಸತ್ಯದ ಕೂಳು ,ಸಂತಸದ ಪಾಲು .
( ನನ್ನ ಶಾಲೆಯ ಕಪ್ಪು ಹಲಗೆಗೊಂದು ನಮನ )
 

‍ಲೇಖಕರು G

8 June, 2015

10 Comments

  1. noorullathyamagondlu

    ಕಪ್ಪುಹಲಗೆಗೊಂದು ಸಲಾಂ.ಕಪ್ಪು ಹಲಗೆ,ಎದುರಿಗಿನ ನೀವು (ಮಾಸ್ತರ),ಮತ್ತು ನಿಮ್ಮ ಹಿಂದಿನ ಆ ಕನಸುಗಳನ್ನು ಬೆಸೆದುಕೊಂಡಿರುವ ನಿಮ್ಮ ಭಾವನೆ,ಆ ಅದ್ಭುತ ಆಲೋಚನೆ ಬಹಳ ಇಷ್ಟವಾಯಿತು.

  2. smitha

    Chennagide. Kappu halagege nannadoo salaam… -smitha amrithra j.

  3. bidaloti Ranganath

    ಚನ್ನಾಗಿದೆ

  4. sudha

    Kappu halageya bhaavanegala chendada anavarana .(y)

  5. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ; ಪದ್ಯ

  6. ashaSurendranath

    ಸುಂದರ ಅರ್ಥಪೂರ್ಣ ಬರಹ…ಚೆನ್ನಾಗಿದೆ..

  7. ಅಮರದೀಪ್.ಪಿ.ಎಸ್.

    ಚೆಂದಿದೆ ಕವನ.

  8. HN Pura Manjunatha

    ಅರ್ಥಪೂರ್ಣ ಬರಹ 🙂

  9. arathi ghatikar

    Kavana mecchikonda ella snehitarigoo dhanyavadagalu.

  10. ಬಾಗೂರು ಮಾರ್ಕಾಂಡೇಯ

    ನಮಸ್ತೆ
    ಕವಿತೆ ಓದಿದೆ…. ಓದುತ್ತ ನಿಮ್ಮ ಮನದ ಪುಟಗಳನಷ್ಟು ತಿಳಿದೆ…. ಭಾವಗಳು ಝರಿಯು ಸಿರಿಯಾಗಿ ಹರಿದು ಕವಿತೆಗಟ್ಟಿದ್ದೀರಿ ಬರೆದು ಹಗುರಾಗಿದ್ದೀರಿ… ಅದರಲ್ಲಿ ಸಿಗಲಿ ಸತ್ಯದ ಕೂಳು ,ಸಂತಸದ ಪಾಲು …… ಈ ಸಾಲುಗಳು ತುಂಬಾ ಇಷ್ಟವಾಗುತ್ತದೆ…..
    ಸ್ವಾಸ್ಥ್ಯ ಸಮಾಜ ಮುಖಿಯಾಗಿ ಬರೆಯುವ… ಇರಬಯಸುವ ತಮ್ಮ ಅಭಿಪ್ರಾಯಕ್ಕೆ ಅಭಿನಂದನೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading