ನಾ ದಿವಾಕರ ಹೊಸ ಕವಿತೆ – ಅಂಧರ ಲೋಕದಲಿ…

ನಾ ದಿವಾಕರ

ಹೆತ್ತವರೆಲ್ಲ ಸುತ್ತ ಕುಳಿತು
ಅತ್ತರು
ಹಿತ್ತಲಲಿ ಮೆಲ್ಲನೆ ಹರಿದಿತ್ತು
ನೆತ್ತರು ;

ಹುಸೇನನ ಅಮ್ಮೀಜಾನ್
ಮಲಗಿದ್ದಾಳೆ
ಹನುಮನ ಹಿರಿತಾಯಮ್ಮ
ಸೊರಗಿದ್ದಾಳೆ ;

ಕೊಟ್ಟಿಗೆಯ ದನಗಳಿಗೆ
ಮೇವಿಲ್ಲ
ಗುಡಿಸಲಿನ ಕಂದನಿಗೆ
ಕೂಳಿಲ್ಲ ;

ಉಳುಮೆಯ ನೇಗಿಲು
ವಿರಮಿಸಿದೆ
ಬೆವರಹನಿಯ ಸಾಲು
ಜಡಗಟ್ಟಿದೆ ;

ಅಜಾನಿನ ಧ್ವನಿಯಲ್ಲಿ
ಆರ್ದ್ರತೆಯಿದೆ
ಜಾಗಟೆಯ ಸದ್ದಿನಲಿ
ವೇದನೆಯಿದೆ ;

ಹುಣ್ಣಿನೆಯ ಚಂದಿರ
ಮರೆಯಾಗಿದೆ
ಬಾನಂಗಳದ ಮಂದಿರ
ತೆರವಾಗಿದೆ ;

ಬಯಲಲ್ಲಿ ಶವಗಳು
ಮಲಗಿವೆ
ಆಲಯದಲಿ ಗಂಟೆಗಳು
ಮೊಳಗಿವೆ ;

ಮಸಣದ ಕುಳಿಗಳಲಿ
ಒಲವಿದೆ
ಮಾನವನ ಎದೆಯಲ್ಲಿ
ವಿಷವಿದೆ ;

ಪ್ರೇಮಿಗಳು ಮರ್ತ್ಯದಲಿ
ಮಿಂದಿದ್ದಾರೆ
ರಕ್ಷಕರು ಉನ್ಮಾದದಲಿ
ಗೆದ್ದಿದ್ದಾರೆ ; 

‍ಲೇಖಕರು Admin

August 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. prathibha nandakumar

    ತುಂಬಾ ಚೆನ್ನಾಗಿದೆ, ಅದ್ಭುತವಾಗಿದೆ. ಇದನ್ನು ಇಂಗ್ಲಿಷಿಗೆ ಅನುವಾದಿಸಲು ಪ್ರಯತ್ನಿಸಲೇ?

    ಪ್ರತಿಕ್ರಿಯೆ
  2. Prathibha Nandakumar

    ಕವನ ಅದ್ಭುತವಾಗಿದೆ. ಇಂಗ್ಲಿಷಿಗೆ ಅನುವಾದಿಸಲು ಯತ್ನಿಸಿದೆ

    In the land of the blind

    The parents sat around and
    Cried.
    In the backyard flowed the blood of those who
    Died.

    Hussain’s Ammi jaan is
    drowsing
    Hanuma’s Hiritayamma is
    languishing

    The cattle in the shed have no
    fodder
    Food for the child in the hut
    neither

    The tilling plough
    is put to rest
    The sweat drops on the brow
    are but rust

    The Aazaan of the mosque sounds
    poignant
    The temple gong is such a
    torment

    The full moon has
    disappeared
    The temple of the sky yard is
    dispersed

    The dead bodies in the outfield are
    lying
    The temple bells are but
    singing

    There is love still in the
    grave pits
    The man’s heart is
    poisoned to bits

    Lovers of the land are
    drowned
    The hysterical guardians have
    triumphed.

    **
    Kannada original: Na. Diwakara
    English translation: Prathibha Nandakumar

    ಪ್ರತಿಕ್ರಿಯೆ
  3. prathibha nandakumar

    In the land of the blind

    The parents sat around and
    Cried.
    In the backyard flowed the blood of those who
    Died.

    Hussain’s Ammi jaan is
    drowsing
    Hanuma’s Hiritayamma is
    languishing

    The cattle in the shed have no
    fodder
    Food for the child in the hut
    neither

    The tilling plough
    is put to rest
    The sweat drops on the brow
    are but rust

    The Aazaan of the mosque sounds
    poignant
    The temple gong is such a
    torment

    The full moon has
    disappeared
    The temple of the sky yard is
    dispersed

    Dead bodies in the outfield are
    lying
    The temple bells are but
    singing

    There is love still in the
    grave pits
    The man’s heart is poisoned
    to bits

    Lovers of the land
    drowned
    The hysterical guardians
    triumphed.

    **
    Kannada original: Na. Diwakara
    English translation: Prathibha Nandakumar

    ಪ್ರತಿಕ್ರಿಯೆ
  4. prathibha nandakumar

    ನಾ ದಿವಾಕರ ಅವರೇ ನಿಮ್ಮ ಕವನ ತುಂಬಾ ಚೆನ್ನಾಗಿದೆ. ಇಂಗ್ಲಿಷಿಗೆ ಅನುವಾದಿಸಿದ್ದೇನೆ ನೋಡಿ

    ಪ್ರತಿಕ್ರಿಯೆ
    • ನಾ ದಿವಾಕರ

      ಧನ್ಯವಾದಗಳು ಮೇಡಂ, ಇದು ನನ್ನ ಸೌಭಾಗ್ಯ ಎಂದೆಣಿಸುತ್ತೇನೆ

      ಪ್ರತಿಕ್ರಿಯೆ
  5. ನಾ ದಿವಾಕರ

    Thanks a lot Pratibha mada̧m̧ I am blessed̤ I shall share your translation to̧o if permitted̤

    ಪ್ರತಿಕ್ರಿಯೆ
    • prathibha nandakumar

      ಖಂಡಿತಾ ಬಳಸಿಕೊಳ್ಳಿ. ಎರಡನೇ ಸಲ ಹಾಕಿದ್ದು ತಗೊಳ್ಳಿ

      ಪ್ರತಿಕ್ರಿಯೆ
  6. ನಾ ದಿವಾಕರ

    ಧನ್ಯನಾದೆ ಮೇಡಂ. ನಿಮ್ಮ ಆಂಗ್ಲ ಅನುವಾದ ಇಷ್ಟವಾಯಿತು. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: