ಸ್ವಾತಂತ್ರ್ಯೋತ್ತರ ಭಾರತದಲ್ಲಿ, ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ, ಉಪವಾಸ ಸತ್ಯಾಗ್ರಹಕ್ಕೆ ಇಷ್ಟೊಂದು ಮಹತ್ವ ದೊರೆತಿರುವುದು ಈಗಲೇ ಇರಬೇಕು. ಅಣ್ಣಾ ಹಜಾರೆಯವರ ಸತ್ಯಾಗ್ರಹಕ್ಕೆ ಮಣಿದು ಲೋಕಪಾಲ್ ಮಸೂದೆಯನ್ನು ರೂಪಿಸಲು ಮುಂದಾಗಿರುವ ಕೇಂದ್ರ ಸಕರ್ಾರ ಈಗ ಯೋಗ ಗುರು ಬಾಬಾ ರಾಮದೇವ್ ಸತ್ಯಾಗ್ರಹವನ್ನು ಎದುರಿಸಬೇಕಿದೆ. ಕೇಂದ್ರ ಸಕರ್ಾರದ ರಾಜಕೀಯ ಅನಿವಾರ್ಯತೆಗಳು, ಒತ್ತಡಗಳು ಏನೇ ಇದ್ದರೂ ರಾಮದೇವ್ ಸತ್ಯಾಗ್ರಹದ ನಿಧರ್ಾರ ಘೋಷಿಸಿದ ಕೂಡಲೇ ಇಡೀ ಸಕರ್ಾರವೇ ಅವರಿಗೆ ಶರಣಾಗಿರುವುದು ಉಚಿತ ಎನಿಸುವುದಿಲ್ಲ. ನಿಜ, ರಾಮದೇವ್ ಅವರ ಸತ್ಯಾಗ್ರಹದ ಹಿಂದಿನ ಆಶಯಗಳು ನಾಗರಿಕ ಸಮಾಜದ ಆಶಯಗಳೂ ಆಗಿವೆ. ದೇಶದಲ್ಲಿ, ವಿದೇಶಗಳಲ್ಲಿ ಹುದುಗಿರುವ ಕಪ್ಪುಹಣವನ್ನು ಹೊರತೆಗೆಯಲು ಇದು ಸಕಾಲ. ಅಣ್ಣಾ ಹಜಾರೆಯವರ ಆಂದೋಲದಲ್ಲಿ ಇದೂ ಒಂದು ಅಂಶವಾಗಿದ್ದು, ಇಡೀ ದೇಶದ ಜನತೆ ಈ ಅಂದೋಲನಕ್ಕೆ ಬೆಂಬಲ ಸೂಚಿಸುತ್ತಿದೆ.
ಚಿತ್ರ : ಸತೀಶ್ ಆಚಾರ್ಯ
ಈ ಸನ್ನಿವೇಶದಲ್ಲಿ ರಾಮದೇವ್ ಹಜಾರೆಯವರ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ, ನಾಗರಿಕ ಸಮಾಜದ ಐಕಮತ್ಯಕ್ಕೆ ಹೊಸ ಆಯಾಮ ನೀಡಬಹುದಿತ್ತು. ಲೋಕಪಾಲ್ ಮಸೂದೆಯ ಕರಡು ಸಮಿತಿಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿ, ಸಕರ್ಾರದ ಪ್ರತಿನಿಧಿಗಳು ಭಿನ್ನರಾಗ ಹಾಡುತ್ತಿರುವ ಸಂದರ್ಭದಲ್ಲಿ ಈ ಐಕಮತ್ಯದ ಅಗತ್ಯತೆ ಹೆಚ್ಚಾಗಿತ್ತು. ಪ್ರಧಾನಮಂತ್ರಿಗಳು, ನ್ಯಾಯಾಧೀಶರುಗಳು ಮತ್ತು ಸಂಸತ್ತಿನಲ್ಲಿ ಸಂಸದರ ನಡವಳಿಕೆಗಳನ್ನು ಲೋಕಪಾಲ್ ವ್ಯಾಪ್ತಿಗೆ ಒಳಪಡಿಸಲು ನಿರಾಕರಿಸಿರುವ ಕೇಂದ್ರ ಸಕರ್ಾರ ಲೋಕಪಾಲ್ ಮಸೂದೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡಲು ಹೊರಟಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ ಈ ವಿಚಾರವೇ ಚಚರ್ೆಗೊಳಗಾಗಬೇಕಿತ್ತು. ಆದರೆ ತಮ್ಮದೇ ಆದ ರಾಜಕೀಯ ಕಾರ್ಯಸೂಚಿ ಹೊಂದಿರುವ ರಾಮದೇವ್ ತಮ್ಮ ಸತ್ಯಾಗ್ರಹ ಘೋಷಿಸುವ ಮೂಲಕ ಚಚರ್ೆಯ ದಿಕ್ಕನ್ನೇ ಬದಲಿಸಲು ಹೊರಟಿರುವುದು ರಾಜಕೀಯ ಪ್ರೇರಿತ ಉದ್ದೇಶಗಳ ಸಂಕೇತವಾಗಿಯೇ ತೋರುತ್ತದೆ.
ಕಪ್ಪುಹಣದ ನಿಯಂತ್ರಣದ ಬಗ್ಗೆ ಅಪಾರ ಕಾಳಜಿ ತೋರುವ ಯೋಗಗುರು, ಪ್ರಸ್ತುತ ಭ್ರಷ್ಟ ವ್ಯವಸ್ಥೆಗೆ ಮೂಲ ಕಾರಣವಾದ ವಿದೇಶಿ ಬಂಡವಾಳವನ್ನು ಕುರಿತು ತುಟಿ ಬಿಚ್ಚುವುದಿಲ್ಲ. ಏಕೆಂದರೆ ರಾಮದೇವರ ಸಾಮ್ರಾಜ್ಯ ಬೆಳೆದಿರುವುದೇ ಈ ವಿದೇಶಿ ಬಂಡವಾಳವನ್ನು ಆಧರಿಸಿ. ರಾಮದೇವ್ ಸಾಮ್ರಾಜ್ಯದಲ್ಲಿ ನಿಮರ್ಿತವಾಗಿರುವ ಆಶ್ರಮಗಳು, ಆಸ್ಪತ್ರೆಗಳು ಮತ್ತು ಶಿಬಿರಗಳು ಯಾವ ಬಂಡವಾಳದ ನೆರಳಿನಲ್ಲಿ ಊಜರ್ಿತವಾಗುತ್ತಿರುವುದೋ ಅದೇ ಬಂಡವಾಳವೇ ಪ್ರಸ್ತುತ ಸನ್ನಿವೇಶಕ್ಕೂ ಕಾರಣವಾಗಿರುವುದು ಗುಟ್ಟಿನ ಮಾತೇನಲ್ಲ. ರಾಮದೇವ್ ನಿಜಕ್ಕೂ ಕಪ್ಪುಹಣದ ವಿರುದ್ಧ ಹೋರಾಡುವವರಾದರೆ, ಅವರ ಭಕ್ತಾದಿಗಳಲ್ಲೇ ಇರುವ ಕರಾಳ ಮುಖವಾಡಗಳನ್ನು ಕಳಚಿ ಹಾಕುವ ಯತ್ನ ಮಾಡಬೇಕು. ಜನತೆಗೆ ಯೋಗದ ಹೊಸ ಜಗತ್ತನ್ನೇ ತೋರಿಸುವ ಬಾಬಾ ಸಾಮಾಜಿಕ ನೈತಿಕತೆ ಮತ್ತು ಮೌಲ್ಯಗಳನ್ನು ನಿರ್ಲಕ್ಷಿಸಿ ಕೋಟ್ಯಾಂತರ ರೂಗಳನ್ನು ಸಂಪಾದಿಸಿರುವ ಅಸಂಖ್ಯಾತ ಭಕ್ತರನ್ನು ಹೊಂದಿರುವುದು ನಿಜವೇ ಅಲ್ಲವೇ ? ಕೇವಲ ದೈಹಿಕ ಆರೋಗ್ಯವನ್ನು ಮಾತ್ರ ಕಾಪಾಡುವುದರಿಂದ ಸಮಾಜ ಸ್ವಸ್ಥವಾಗುವುದಿಲ್ಲ. ಮಾನಸಿಕವಾಗಿಯೂ, ನೈತಿಕವಾಗಿಯೂ ಸಮಾಜ ಸ್ವಸ್ಥವಾಗಿರಬೇಕಾದರೆ ಜನತೆಯಲ್ಲಿ, ವಿಶೇಷವಾಗಿ ದಂತದರಮನೆಗಳಲ್ಲಿ ವಾಸಿಸುವ ಐಷಾರಾಮಿ ಶ್ರೀಮಂತರಲ್ಲಿ, ನೈತಿಕ ಮೌಲ್ಯಗಳೂ ವೃದ್ಧಿಸಬೇಕು. ಈ ನಿಟ್ಟಿನಲ್ಲಿ ರಾಮದೇವ್ ಮಾತ್ರವಲ್ಲ ಯಾವ ಬಾಬಾಗಳೂ ಪ್ರಯತ್ನಿಸಿಲ್ಲ.
ಆದರೂ ದೇಶದ ವಿದ್ಯುನ್ಮಾನ ಮಾಧ್ಯಮಗಳು ರಾಮದೇವ್ ನಿರಶನಕ್ಕೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡುವ ಮೂಲಕ, ಲೋಕಪಾಲ್ ಮಸೂದೆಯ ರಚನೆಯಲ್ಲಿ ಮೂಡಿರುವ ಬಿಕ್ಕಟ್ಟನ್ನು ಜನಮಾನಸದಿಂದ ದೂರ ಮಾಡಲು ಯತ್ನಿಸುತ್ತಿರುವುದು ಮಾಧ್ಯಮಗಳ ಮೇಲೆ ರಾಮದೇವ್ ಅವರ ಹಿಡಿತವನ್ನೂ, ಮಾಧ್ಯಮಗಳ ಬೇಜವಾಬ್ದಾರಿಯನ್ನೂ ತೋರಿಸುತ್ತದೆ. ಸಂಘಪರಿವಾರದ ನೇರ ಪರಿಚಾರಕರಾಗಿ ತಮ್ಮ ರಾಜಕೀಯ ಬುನಾದಿಯನ್ನು ಭದ್ರಪಡಿಸಿಕೊಳ್ಳುತ್ತಿರುವ ರಾಮದೇವ್ಗೆ ಸಹಜವಾಗಿಯೇ ಭಾಜಪ ಪೂರ್ಣ ಬೆಂಬಲ ನೀಡಿದೆ. ತಾನು ಮಾಡಲಾಗದ್ದನ್ನು ಬಾಬಾರ ಮೂಲಕ ಮಾಡಿಸುತ್ತಿರುವ ಭಾಜಪ, ಕಾಂಗ್ರೆಸ್ ಪಕ್ಷದಂತೆಯೇ ಲೋಕಪಾಲ್ ಮಸೂದೆಯನ್ನು ಹೇಗಾದರೂ ಮಾಡಿ ಸ್ಥಗಿತಗೊಳಿಸಲು ಮಾಡುತ್ತಿರುವ ಯತ್ನಗಳಲ್ಲಿ ರಾಮದೇವ್ ಅಸ್ತ್ರವೂ ಒಂದಾಗಿದೆ. ಅಣ್ಣಾ ಹಜಾರೆ ಆಂದೋಲನಕ್ಕೆ ಪಯರ್ಾಯ ಸೃಷ್ಟಿಸುವ ಮೂಲಕ ಜನಾಂದೋಲನಗಳನ್ನೇ ದಿಕ್ಕುತಪ್ಪಿಸುವ ಆಳ್ವಿಕರ ಕುತಂತ್ರಕ್ಕೆ ಇದೊಂದು ಉತ್ತಮ ನಿದರ್ಶನವಷ್ಟೆ.
ಲೋಕಪಾಲ್ ಮಸೂದೆಯ ರಚನೆಯಲ್ಲಿ ಮೂಡಿರುವ ಭಿನ್ನಾಭಿಪ್ರಾಯಗಳು ರಾಮದೇವ್ ಪ್ರಸಂಗದ ಹಿನ್ನೆಲೆಯಲ್ಲಿ ನೇಪಥ್ಯಕ್ಕೆ ಸರಿದಿರುವುದು ಆಘಾತಕಾರಿ ವಿಚಾರವಾಗಿದೆ. ಸತ್ಯಾಗ್ರಹ ಜನಾಂದೋಲನದ ಒಂದು ಪ್ರಬಲ ಅಸ್ತ್ರ ನಿಜ, ಆದರೆ ಸಮಾಜವನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿ, ಧರ್ಮ, ಆಧ್ಯಾತ್ಮ ಮತ್ತು ಆರೋಗ್ಯ ಸಂಬಂಧಿತ ಯೋಗ ಮುಂತಾದ ವಿಚಾರಗಳನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ತಮ್ಮದೇ ಆದ ಸಾಮ್ರಾಜ್ಯವನ್ನು ನಿಮರ್ಿಸಿಕೊಳ್ಳಲೆತ್ನಿಸುವ ಬಾಬಾಗಳು, ಯೋಗಿಗಳು, ತಮ್ಮ ಭೋಗಜೀವನದ ನಡುವೆಯೇ ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಸತ್ಯಾಗ್ರಹದಂತಹ ಅಸ್ತ್ರವನ್ನು ಬಳಸಿಕೊಳ್ಳುವುದು ಅಕ್ಷಮ್ಯ. ರಾಮದೇವ್ ಸಹ ಇದನ್ನೇ ಮಾಡುತ್ತಿದ್ದಾರೆ. ಬಹುಶಃ ಮುಂಬರುವ ದಿನಗಳಲ್ಲಿ ಪಂಡಿತ್ ರವಿಶಂಕರ್ ಇವರೊಡನೆ ಸೇರಬಹುದು. ಭ್ರಷ್ಟಾಚಾರ ಎನ್ನುವ ಬೃಹತ್ ಆಲದ ಮರದ ಆಶ್ರಯದಲ್ಲೇ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವ ಈ ಜನಸೇವಕರು(?), ಈ ವ್ಯವಸ್ಥೆಯ ಮೂಲ ಬೇರನ್ನು ಗ್ರಹಿಸದೆ ಹೋದಲ್ಲಿ, ಅದು ಕೇವಲ ಸಕರ್ಾರವನ್ನು ಹೈಜಾಕ್ ಮಾಡುವ ಮೂಲಕ, ಜನಸಾಮಾನ್ಯರನ್ನು ನೈಜ ಸಮಸ್ಯೆಗಳಿಂದ ವಿಮುಖರನ್ನಾಗಿಸುವ ಕುತಂತ್ರವಾಗಿಯೇ ಕಾಣುತ್ತದೆ. ರಾಮದೇವ್ ಸ್ಪಷ್ಟವಾಗಿ ಇದನ್ನೇ ಮಾಡುತ್ತಿದ್ದಾರೆ.








” ಕಪ್ಪುಹಣದ ವಿರುದ್ಧ ಹೋರಾಡುವವರಾದರೆ, ಅವರ ಭಕ್ತಾದಿಗಳಲ್ಲೇ ಇರುವ ಕರಾಳ ಮುಖವಾಡಗಳನ್ನು ಕಳಚಿ ಹಾಕುವ ಯತ್ನ ಮಾಡಬೇಕು. ಜನತೆಗೆ ಯೋಗದ ಹೊಸ ಜಗತ್ತನ್ನೇ ತೋರಿಸುವ ಬಾಬಾ ಸಾಮಾಜಿಕ ನೈತಿಕತೆ ಮತ್ತು ಮೌಲ್ಯಗಳನ್ನು ನಿರ್ಲಕ್ಷಿಸಿ ಕೋಟ್ಯಾಂತರ ರೂಗಳನ್ನು ಸಂಪಾದಿಸಿರುವ ಅಸಂಖ್ಯಾತ ಭಕ್ತರನ್ನು ಹೊಂದಿರುವುದು ನಿಜವೇ ಅಲ್ಲವೇ ? ” ದಿವಾಕರ್ ಅವರ ಈ ಮಾತುಗಳು ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯವಾಗುತ್ತದೆ .ನಮ್ಮ ಮನೆಗಳಲ್ಲೇ , ನಮ್ಮ ಸುತ್ತಮುತ್ತಣ ನೆಂಟರು-ಗೆಳೆಯರಲ್ಲೇ ಇರುವ ಭ್ರಷ್ಟರ ಜತೆಗೂಡಿ ಅತ್ಯಂತ ಸಂತೋಷ ಮತ್ತು ಸಮಾಧಾನದಿಂದ ಬಾಳುತ್ತಿರುವ ನಾವು , ನಮ್ಮಿಂದ ದೂರದಲ್ಲಿರುವವರ ಭ್ರಷ್ಟಾಚಾರದ ಬಗ್ಗೆ ಮಾತ್ರ ಆತಂಕಗೊಳ್ಳುತ್ತೇವೆ ಮತ್ತು ಪ್ರತಿಭಟಿಸಲು ಅಣ್ಣಾ ಹಜಾರೆ ಇಲ್ಲವೇ ರಾಮದೇವ್ ಜತೆ ನಿಲ್ಲಲು ಹಾತೊರೆಯುತ್ತಿದ್ದೇವೆ .
ಧಾರ್ಮಿಕ ನೆಲೆಗಟ್ಟಿನಲ್ಲಿ ನಿಂತಿರುವ ರಾಮದೇವ್ ಅಂತಹ ವ್ಯಕ್ತಿಗಳ ಹೋರಾಟ ಮೇಲುನೋಟಕ್ಕೆ ಚೆನ್ನಾಗಿ ಕಂಡು ಬಂದರೂ , ಅದರ ಅಂತಿಮ ಪರಿಣಾಮಗಳು ಈಗಾಗಲೇ ಜನಮನದಲ್ಲಿ ಬೇರುಬಿಟ್ಟಿರುವ ಕೋಮುಭಾವನೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ . ನಮ್ಮ ಸಂವಿಧಾನದಲ್ಲಿರುವ ಭ್ರಷ್ಟಾಚಾರ ತಡೆಗಟ್ಟುವ ಕಾನೂನುಗಳನ್ನು ಸರಿಯಾಗಿ ಜಾರಿಗೆ ತಂದರೆ ಸಾಕು , ಎಷ್ಟೋ ಸುಧಾರಣೆಯಾಗುತ್ತದೆ .
Article chennagide
ಕೊಟ್ಯಾನುಕೋಟಿ ಆಸ್ತಿಗೆ ಒಡೆಯನಾಗಿರುವ ಬಾಬಾ ರಾಮದೇವರ ಸತ್ಯಾಗ್ರಹದ ಹಿಂದಣ ಆಶಯಗಳ ಮೇಲೆ ಮತ್ತು ಅದರ ಸಾರ್ಥಕತೆಯ ಮೇಲೆ ನನಗೆ ಅನುಮಾನ ಇದ್ದೇ ಇದೆ.
ಆ ನಿಟ್ಟಿನಲ್ಲಿ ನಾ. ದಿವಾಕರ್ ಅವರ ಚಿಂತನೆಗೆ ನನ್ನ ಸಹಮತವಿದೆ.
ಕೊನೆಯಲ್ಲಿ ಪಂಡಿತ್ ರವಿಶಂಕರ್ ಅವ ಮಾತು ಏಕೆ ಬಂತೆಂದೇ ಅರಿವಾಗಲಿಲ್ಲ.
(ಬಹುಶಃ ಮುಂಬರುವ ದಿನಗಳಲ್ಲಿ ಪಂಡಿತ್ ರವಿಶಂಕರ್ ಇವರೊಡನೆ ಸೇರಬಹುದು)
ಸಿತಾರ್ ವಾದಕರಿಗೂ ಸತ್ಯಾಗ್ರಹಕ್ಕೂ ಅದೆಲ್ಲಿಯ ಸಂಬಂಧವಯ್ಯಾ?!
Its not sitar vadak its Guruji Ravishankar. I have said pandit. Sorry.
Divakar
divakar avaru heliddu aksharsha chennagide….idondu dodda nataka embudu melnotakke gottaguttide…adarallu satyagraha endare asahya tarisalu horatantide …ramadev satyagraha…innondu matu..uddesha este olleyadagiddaru black mail maduva mulaka olle samajada nirmana sadyave illa….
ನಾ ದಿವಾಕರರ ನೇರ ನುಡಿ ಕೇವಲ “ಕಲ್ಲು ಹುಡುಕುವುದಕ್ಕೆ” ನಿಂತಂತಿದೆ, ಕೆನೆ ಸಿಗುವ ಒಳ್ಳೆಯ ಅಂಶದತ್ತ ಅವರ ಗಮನವೇ ಇಲ್ಲ. ನಾನು ಓದಿದ ನಾ ದಿವಾಕರರ್ ನೇರ ನುಡಿಗಳು ಒಂದು ಕಡಿಮೆ ಎಲ್ಲಾ ಲೇಖನಗಳು ಒಲ್ಲದ ಗಂಡನಿಗೆ ಮೋಸರಲ್ಲಿ ಕಲ್ಲು ಹುಡುಕುವ ಪ್ರವೃತ್ತಿಯ ಲೇಖನಗಳೆ, ಬೇಕಿದ್ದರೆ ಅವರ ಎಲ್ಲ ನೇರ ನುಡಿಗಳು ಇಲ್ಲಿವೇ ನೀವೇ ನೋಡಿ:
http://avadhimag.online/?category_name=%e0%b2%a8%e0%b2%be-%e0%b2%a6%e0%b2%bf%e0%b2%b5%e0%b2%be%e0%b2%95%e0%b2%b0%e0%b3%8d
ಇನ್ನು ಈ ಲೇಖನಕ್ಕೆ ಬರುವುದಾದರೇ, ರಾಮದೇವ ತಮ್ಮದೇ ಆದ ರಾಜಕೀಯ ಕಾರ್ಯಸೂಚಿ ಹೊಂದಿ ಸತ್ಯಾಗ್ರಹ ಘೋಷಿಸುವ ಮೂಲಕ ಚರ್ಚೆಯ ದಿಕ್ಕನ್ನೇ ಬದಲಿಸಲು ಹೊರಟಿರುವುದು ರಾಜಕೀಯ ಪ್ರೇರಿತ ಉದ್ದೇಶಗಳ ಸಂಕೇತವಾಗಿ ಲೇಖಕರಿಗೆ ತೋರುತ್ತಿದೆ ಆದರೆ ಸನ್ಯಾಸಿ ತನ್ನದೇ ರಾಜಕೀಯ ಕಾರ್ಯಸೂಚಿ ಹೋಂದಿ ಆಸ್ತಿ ಮಾಡಿ ತನ್ನ ಮಕ್ಕಳಿಗೆ ಅದನ್ನು ಕೊಡಲು ಹೋರಟಿಲ್ಲವಲ್ಲ, ಕಪ್ಪು ಹಣ ಭಾರತಕ್ಕೆ ಬರುವುದಾದರೇ ಅದು ತಪ್ಪೇ?
“ರಾಮದೇವರ ಸಾಮ್ರಾಜ್ಯ ಬೆಳೆದಿರುವುದೇ ಈ ವಿದೇಶಿ ಬಂಡವಾಳವನ್ನು ಆಧರಿಸಿ” ಈ ವಾಕ್ಯಕ್ಕೆ ಯಾವುದೇ ಉಲ್ಲೇಖ ಲೇಖಕರು ನೀಡಿರುವುದಿಲ್ಲ, ಯಾವುದಾದರೂ ಸಂಸ್ಥೆ ಅಥವಾ ವ್ಯಕ್ತಿ ತನಿಖಾ ವರದಿ ನೀಡಿದ್ದರೆ ದಯವಿಟ್ಟು ತಿಳಿಸಿ.
“ಸಾಮಾಜಿಕ ನೈತಿಕತೆ ಮತ್ತು ಮೌಲ್ಯಗಳನ್ನು ನಿರ್ಲಕ್ಷಿಸಿ ಕೋಟ್ಯಾಂತರ ರೂಗಳನ್ನು ಸಂಪಾದಿಸಿರುವ ಅಸಂಖ್ಯಾತ ಭಕ್ತರನ್ನು ಹೊಂದಿರುವುದು ನಿಜವೇ ಅಲ್ಲವೇ ?” ಯಾವುದಾದರೂ ಉದಾಹರಣೆ?
ಕೇವಲ ಇಂತಹ ತಮ್ಮ ಉಹಾಪೋಹಗಳನ್ನೆ ಈ ಲೇಖನದ ತಿರುಳನ್ನಾಗಿಸಿ ಬರೆದ ಈ ಲೇಖನ, ಕೇವಲ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತಿದೆ.
ನೇರನುಡಿ ಎಂದರೆ ಎಲ್ಲದಕ್ಕೂ ಎಲ್ಲವನ್ನು ಅವಮಾನಿಸಿ ನೋಡುವುದೆ ಅಲ್ಲ, ಅದನ್ನು ಸರಿಯಾಗಿ ಪರಾಮರ್ಷಿಸಿ, ಎರಡು ಬದಿಗಳಲ್ಲಿ ನಿಂತು ಯೋಚಿಸಿ, ಹಲವಾರು ಮಗ್ಗಲುಗಳಿಂದ ವಿಮರ್ಶಿಸುವುದು ಒಬ್ಬ ಲೇಖಕನ ಕರ್ತವ್ಯ, ಹಾಗಾಗದಿದ್ದರೆ ನಾವು ನಮಗಷ್ಟೆ ಬರೆಯುವ ಡೈರಿಗೂ, ಇದಕ್ಕೂ ವ್ಯತ್ಯಾಸಗಳು ಉಳಿಯುವುದಿಲ್ಲ.
-ಶೆಟ್ಟರು
ಮೊಸರಲ್ಲಿ ಉದ್ದೇಶಪೂರ್ವಕವಾಗಿ ಕಲ್ಲು ಹಾಕುವವರೇ ಇರುವಾಗ ಹುಡುಕುವುದರಲ್ಲಿ ತಪ್ಪೇನಿಲ್ಲ ಬಿಡಿ!
Mr. Shettaru
The way Baba Ram dev has arranged for his Satyagraha and the amount spent on it speaks a lot on his credentials. And His political ambitions is well known, open and he is ready to contest elections too if given a chance. And it is no secret he is close to RSS and BJP and its ideology. Be it Hazare or Ramdev, Without attacking global capital and its attack on our country’s socio economic fabric it is impossible to fight corruption, which fact is made clear in one of my article which is available in the link you have provided. Any way your comments are welcome.
Divakar.
I lekhana nijakku sariyaadavarannu dikku tappisuvavanthahaddu. Baba Ramdev tamma yoga shibiragalli pade pade heluva matina bagge lekhakara gamana selayalu bayasuttene. `nannau sanyasi, nanage sihmasa beda. haagu rajakiya adhikara beda’. I bagge pramanikavaagiruvudarindale istondu jana bembela galisalu Baba Ramadevge sadyavayitu. Innu avaru galisiruva `veideshi bandavala’da bagge lekhakaru dani ettiddare. Baba Ramdev galisiruva ottu astiya lekka patragalu hechchu paradashakavagive embudannu lekhakaru gamanisabeku. kaanunu, police vyvasthe, haagu Adalita yatravannu kaiyallittukondiruva kendra sarkarada virudda tode tatti nilluva badalu pratinitya ondastu yogasana kalisi biduvina veleyalli pravachana maadutta `sukha’vaagi kala kaleyuva sulabhada maargavannu Baba Ramdeva kandukonddiddare avarannu aakshepisuva naitika hakku yaarigu iruttiralilla. Badalagi desha, dharma haagu samajada olitigagi `ati kasta’da haadi tulidiruva Baba Ramadevrannu sukhasummane tikisuva badalu avarondige kai jodisuvudu deshada `hita chintane’ bayasuva ellarige tereda athuttama daari. innu avarige bembala suchisuvavara `jati, kula, raajakiya paksha’ moola hudukuvudu tikisuvava `sannatana’vallade mattenu?
2.5 lakh sq. metre of land with more than thousand tents. 1300 toilets. a reverse osmosis plant for water supply, 7800 water taps, 1000 fans, 250 coolers, 60 doctors, a medical centre with ICU and 40 bed hospital. What does all these indicate. A political convention or a birth day/wedding celebration of a rich business magnet or a politician ? No it the arrangements made for Ramdev’s satyagraha. Where has the money come or what for it is spent. Corruption is not just taking bribe it is in the way we spend. Baba’s links with corporates is no secret and one needs no research to understand the intricacies of Ramdev’s glory and bondage.
Divakar
ಪ್ರಿಯರೆ,
ಸದರಿ ಲೇಖನದ ಕೆಲವೊಂದು ತಕರಾರುಗಳೂ ಕೂಡ ಪ್ರಶ್ನಾರ್ಹವಾಗಿವೆ.
ಮಾಧ್ಯಮಗಳು ಯಾಕೆ ರಾಮದೇವ್ ಬಾಬಾಗೆ ಅಷ್ಟೊಂದು ಸ್ಕೋಪ್ ಕೊಡುತ್ತಿವೆ ಎಂದು ಪ್ರಶ್ನಿಸಿದಂತೆ ಕಾಣುತ್ತಿದೆ.
ಲೇಖನದ ಪ್ರಕಾರ, ಬಾಬಾ ಅವರಲ್ಲೇ ಸಾಕಷ್ಟು (ಕಪ್ಪು?) ಹಣ ಬಿದ್ದಿರುವಾಗ ಬಾಬಾಗ್ಯಾಕೆ ಸ್ಕೋಪು ಎಂಬಂತೆ..
ಇಲ್ಲೊಂದು ವಿಷಯದ ಸೂಕ್ಷ್ಮತೆ ಅರಿತುಕೊಳ್ಳುವದು ಸದ್ಯಕ್ಕೆ ಅಗತ್ಯವಾಗಿದೆ.
ರಾಮದೇವ್ ಬಾಬಾ ಎಂಥ ಮನುಷ್ಯ,ಅವರಲ್ಲಿ ನೈತಿಕತೆ ಇದೆಯಾ ಇಲ್ಲವಾ,ಅವರಲ್ಲಿ ಕಪ್ಪು ಹಣ ಇದೆಯಾ ಇಲ್ಲವಾ-ಇವೆಲ್ಲ ಆಮೇಲಿನ ವಿಷಯಗಳು.
ಆದರೆ ಸದ್ಯಕ್ಕೆ ಆತ ಎಂಥ ಸಾಹಸಕ್ಕೆ ಅಣಿಯಾಗುತ್ತಿದ್ದಾರೆ ಮತ್ತು ಅದು ಎಂಥ ಬದಲಾವಣೆ ತರಬಲ್ಲದು ಎಂಬುದು ಮಾತ್ರ ಮುಖ್ಯ ಸಂಗತಿ.
ಅವರ ನೈತಿಕತೆ,ಯಾವ ಮಾರ್ಗದಲ್ಲಿ ಅವರಿಗೆ ಕಪ್ಪು ಹಣ (ಒಂದು ವೇಳೆ ಬಂದಿದ್ದರೆ!) ಬರುತ್ತದೆ ಎಂಬೆಲ್ಲ ಸಂಗತಿಗಳು ನಮ್ಮ ಮಾಧ್ಯಮಗಳಿಗೆ
ಗೊತ್ತಿರದೇ ಇರಲಾರದು.ಆದರೆ ಇಂಥದೊಂದು ಸತ್ಯಾಗ್ರಹಕ್ಕೆ ಬೆಂಬಲ ಕೊಟ್ಟರೆ ಎಂಥ ಪರಿಣಾಮ ಉಂಟಾಗಬಲ್ಲದು ಎಂಬುದರ ಸ್ಪಷ್ಟ ಅರಿವು
ನಮ್ಮ ಮಾಧ್ಯಮಗಳಿಗಿದೆ ಎಂದು ಭಾವಿಸಿದ್ದೇನೆ.ಬಹುಶಃ ಅದಕ್ಕೇ ಬೆಂಬಲ ಕೊಡುತ್ತಿವೆ.ಇನ್ನುಳಿದಂತೆ,ಬಾಬಾ ರಾಮದೇವ್ ರ ಜಾಗದಲ್ಲಿ
ಇನ್ಯಾರೇ noted ವ್ಯಕ್ತಿ ಸತ್ಯಾಗ್ರಹ ಮಾಡಿದ್ದರೂ ಕೂಡ ಮಾಧ್ಯಮಗಳು ಮತ್ತು ಜನತೆಯ ಬೆಂಬಲ ಖಂಡಿತ ಸಿಗುತ್ತಿತ್ತು.
ಸದ್ಯಕ್ಕೆ ಬಾಬಾಗೆ ಬೆಂಬಲ ಕೊಡುವದು ನಮ್ಮ ಆದ್ಯತೆಯಾಗಿದೆ..
ನಂತರ ಅವರ ನೈತಿಕತೆ,ಅವರ ಕಪ್ಪು ಹಣ,ವಿದೇಶಿ ಬಂಡವಾಳ-ಇವೆಲ್ಲ ನೋಡಿಕೊಳ್ಳುವದು ಇದ್ದೇ ಇದೆ.
ಹೊಟ್ಟೆ ಹಸಿದಾಗ ಬಾಳೆಹಣ್ಣು ತಿನ್ನೋದು ನಮ್ಮ priority ಆಗಬೇಕೇ ವಿನಃ ಬಾಳೆಗಿಡ ಬೆಳೆಸೋದು ಹ್ಯಾಗೆ ಎಂದು ತಿಳಿದುಕೊಳ್ಳುವದರಲ್ಲಿ ಅಲ್ಲ!
ಜೋಶಿಯವರೇ, ನಿಮ್ಮ ಮಾತಿಗೆ ನನ್ನ ಪೂರ್ಣ ಸಹಮತವಿದೆ. ಸ್ವಾಮಿ ರಾಮದೇವ ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವವರು. ಹಿಂದೆ ಮುಂದೆ ನೋಡದೆ ಜೇನು ಗೂಡಿಗೆ ಕೈ ಹಾಕಲಾರರು. ಹಸಿವೆಯಿಂದ ನರಳುತ್ತಿದ್ದರೂ ಸಿಕ್ಕಿದ ಬಾಳೆಹಣ್ಣು ಚೂರು ಕೊಳೆತಿದೆ ಎನ್ನುವವರು ತುಂಬಾ ಇದ್ದಾರೆ.
ಅಣ್ಣಾ ಹಜಾರೆಯವರ ಮಾತಿನಲ್ಲಿದ್ದ ಸ್ಪಷ್ಟತೆ,ನೈತಿಕತೆ, ನಿಷ್ಪಕ್ಷಪಾತ ಧೋರಣೆ, ದೂರದೃಷ್ಟಿ ಬಾಬಾ ರಾಮದೇವರ ಮಾತಿನಲ್ಲಿ ಕಾಣುತ್ತಿಲ್ಲ. ಮಾತುಗಳಲ್ಲಿ ದೃಢತೆಯಿಲ್ಲ.ಅವರ ಮಾತುಗಳಲ್ಲಿ ಆಗಾಗ ರಾಜಕೀಯದ ವಾಸನೆ ಮೂಗಿಗೆ ಬಡಿಯುತ್ತಲೇ ಇರುತ್ತದೆ.
ಜಂತರ್ ಮಂತರ್ ಬಳಿ ಸರಳವಾಗಿ ಆದರೆ ಪರಿಣಾಮಕಾರಿಯಾಗಿ ಉಪವಾಸ ಸತ್ಯಾಗ್ರಹ ಮಾಡಿದ್ದಕ್ಕೆ ವ್ಯಕ್ತವಾದ ಜನಪ್ರಿಯತೆಯನ್ನು ಮೀರಿಸಬೇಕು ಎನ್ನುವಂತೆ ಈ ಹೈಟೆಕ್ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಭವ್ಯ ರಂಗಸಜ್ಜಿಕೆಯಲ್ಲಿ ನಾಟಕ ನಡೆಯುತ್ತಿರುವಂತೆ ಕಾಣುತ್ತದೆ.
ಬಹುಶಃ ರವಿಶಂಕರ ಗುರೂಜಿ ಎಂಬುದು ಪಂಡಿತ್ ರವಿಶಂಕರ್ ಆಗಿರಬಹುದು ಎಂದುಕೊಳ್ಳುತ್ತೇನೆ.
Only solution to the issue that has been raised in this Article is to shoot a question about this directly to Baba Ramdev and get an answer from him. Depending upon his answer, this issue can be further taken forward.
The UPA government should have not gone to meet this self made yoga guru. Government should have set up an inquire committee to look at how he has made so much of money in very short span of time. Baba Ramdev is the head of property worth more than 1000 crores. How come. We have to support such bloody rogues to contain corruption in this country. It is really very pity. Media is really crazy.
Democracy is in threat. The society must oust Babu Ramdev first. Then think of corruption.
Satyanarayanare Nanna prashnegalagi uttarave illave? mosarige kallu hakidavaraaru embudu gottagabekalla. keval elladakku virodhisuvude namma havyasavaadare hege. kamppu hana vapasu bandare baba ramadev taave ittukolluttaro hege? namma bembal keval kappu hana tarisuvadakke agabeku , chaluvaliya aashayakke horatu nayakatwakkalla. ramadev avar prashnegalu mattuw aashayagalu bembalakke arhavallave?
ರಾಮದೆವ್ ಅವರು ರಾಜಕೀಯ ಉದ್ದೇಶದಿಂದ ಸತ್ಯಾಗ್ರಹ ನಡಿಸ್ಟ್ರೋಡು ಅನ್ಣೊಂದು ನಿಜ, ಆದರೆ ಅದರಿಂದ ಆಗುವ ಪ್ರಯೋಜನ ಕಾಡು ನೋಡುವ
ಈ ದೇಶದಲ್ಲಿ ಒಂದು ರಾಜಕೀಯ ಪಕ್ಷರಚಿಸೋದು ಅದು ದೊಡ್ಡಾಮಟ್ಟದಲ್ಲಿ ಜಯ ಸಾಧಿಸೋದು ಅಸ್ತು ಸುಲಭ ಅಲ್ಲ ಅನ್ನೋದು ನೆನಪಿರಲಿ
ನಾವು ಸಧ್ಯಕ್ಕೆ ಬೆಂಬಲಿಸೋಣ ಮುಂದೆ ನೋಡೋಣ….
ರಾಘವೇಂದ್ರ ಜೋಶಿಯವರ ಮತ್ತು ಶೆಟ್ಟರ ಅಭಿಪ್ರಾಯ ಪ್ರಸ್ತುತಾರ್ಹ….