ನಾ ದಿವಾಕರ್ ವೀಕ್ಲಿ ರೌಂಡ್ ಅಪ್

ಕನಸು ಮಾರುವವರ ನಡುವೆ !

-ನಾ ದಿವಾಕರ

ಕನ್ನಡದ ಜನತೆ ಮತ್ತೊಮ್ಮೆ ಅಸ್ಮಿತೆ-ಅಸ್ತಿತ್ವಗಳ ತೊಳಲಾಟಕ್ಕೆ ಸಿಲುಕಿದ್ದಾರೆ. ಕನ್ನಡಿಗ ಎಂದರೆ ಯಾರು, ಕನ್ನಡ ಪ್ರಜ್ಞೆ ಎಂದರೇನು, ಕನ್ನಡ ಸಾಹಿತ್ಯ-ಸಂಸ್ಕೃತಿ ಮತ್ತು ಸಮಾಜವನ್ನು ಬೆಸೆಯುವ ಕೊಂಡಿ ಯಾವುದು ಇವೇ ಪ್ರಶ್ನೆಗಳು ಮತ್ತೊಮ್ಮೆ ಉದ್ಭವಿಸಿವೆ. ಕೆಲವೇ ದಿನಗಳ ಅಂತರದಲ್ಲಿ ಸಂಭವಿಸಿರುವ ಎರಡು ವಿದ್ಯಮಾನಗಳು ರಾಜ್ಯದ ಜನತೆಯ ಸ್ವಾಭಿಮಾನವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸಾಗಿವೆ. ಇಲ್ಲಿ ಭಾಷೆ, ಭಾಷಾಪ್ರೇಮ ಮತ್ತು ಪ್ರಾದೇಶಿಕ ಭಾವುಕತೆಗಿಂತಲೂ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಾರ್ವಭೌಮ ಪ್ರಜೆಗಳ ಅಸ್ಮಿತೆಗಳನ್ನು ಆಳ್ವಿಕರು ಹೇಗೆ ಗ್ರಹಿಸುತ್ತಾರೆ, ಹೇಗೆ ನಿರ್ಲಕ್ಷಿಸುತ್ತಾರೆ ಎಂಬ ಪ್ರಶ್ನೆ ಮಹತ್ವ ಪಡೆಯುತ್ತದೆ. ಭಾಷಾ ಕೇಂದ್ರಿತ ವಿವಾದಗಳು ಸಾಮಾನ್ಯವಾಗಿ ವಿಭಿನ್ನ ಭಾಷೆಗಳ ನಡುವೆ ಅಥವಾ ಭಾಷಿಕರ ನಡುವೆ ಉಂಟಾಗುತ್ತವೆ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ವಿವಾದ ಸೃಷ್ಟಿಯಾಗಿರುವುದು ಆಳ್ವಿಕರ ಮತ್ತು ಪ್ರಜ್ಞಾವಂತ ನಾಗರಿಕರ ನಡುವೆ, ಸಾಂಸ್ಕೃತಿಕ ಮತ್ತು ರಾಜಕೀಯ ವೇದಿಕೆಗಳ ನಡುವೆ, ಆಳುವ ಮತ್ತು ಚುನಾಯಿಸುವವರ ನಡುವೆ.

ಮೊದಲನೆಯ ಸಮಸ್ಯೆ ರಾಜ್ಯಸಭಾ ಚುನಾವಣೆಯಲ್ಲಿ ಬಾಲಿವುಡ್ನ ತಾರೆ, ಕನಸಿನ ಕನ್ಯೆ ಹೆಮಮಾಲಿನಿಯವರ ಸ್ಪಧರ್ೆ ಮತ್ತು ಗೆಲುವಿಗೆ ಸಂಬಂಧಿಸಿದ್ದು. ದಿ. ರಾಜಶೇಖರ ಮೂತರ್ಿಯವರ ಸ್ಥಾನವನ್ನು ತುಂಬಲು ನಡೆದ ಈ ಚುನಾವಣೆಯಲ್ಲಿ ಭಾಜಪದ ಅಭ್ಯಥರ್ಿ ಗೆಲ್ಲುವುದು ಶತಃಸಿದ್ಧವಾಗಿತ್ತು. ಹಾಗಾಗಿ ಯಾರೇ ಸ್ಪಧರ್ಿಸಿದ್ದರೂ ಪಕ್ಷ ಗೆಲುವು ಸಾಧಿಸಬಹುದಿತ್ತು. ಆದರೆ ರಾಜ್ಯದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುವವರು ಯಾರೇ ಆಗಿರಲಿ ಅವರಿಗೆ ರಾಜ್ಯದ ಜನತೆಯ ಬಗ್ಗೆ, ಸಂಸ್ಕೃತಿ ಮತ್ತು ಸಾಮಾಜಿಕ ಸನ್ನಿವೇಶಗಳ ಬಗ್ಗೆ ಕಿಂಚಿತ್ತಾದರೂ ಅರಿವು ಇರಬೇಕಾದ್ದು ಅಗತ್ಯ. ಈ ಕುರಿತ ಪ್ರಜ್ಞೆ ಇರಬೇಕಿಲ್ಲ, ಏಕೆಂದರೆ ಪ್ರಸ್ತುತ ರಾಜಕಾರಣಿಗಳಿಂದ ಇದನ್ನು ಅಪೇಕ್ಷಿಸುವುದೂ ತಪ್ಪಾಗುತ್ತದೆ. ಆದರೆ ಗ್ರಹಿಕೆಯಾದರೂ ಇರಬೇಕು. ಹಾಗಾಗಿ ಕನರ್ಾಟಕದ ನೆಲ, ಜಲ ಮತ್ತು ಪರಿಸರವನ್ನು ಬಲ್ಲವರಾದ ಯಾವುದೇ ವ್ಯಕ್ತಿಯನ್ನು ಭಾಜಪ ಆಯ್ಕೆ ಮಾಡಬಹುದಿತ್ತು. ಕನರ್ಾಟಕದಲ್ಲಿ ಹೇಮಮಾಲಿನಿಗಿಂತಲೂ ತಾರಾವರ್ಚಸ್ಸು ಹೊಂದಿರುವ ಅನೇಕ ಗಣ್ಯರಿದ್ದಾರೆ. ಮುತ್ಸದ್ದಿಗಳಿದ್ದಾರೆ. ರಾಜಕೀಯ ಧುರೀಣರೂ ಇದ್ದಾರೆ. ಆದರೂ ಹೈಕಮಾಂಡ್ ಆಯ್ಕೆ ಡ್ರೀಂ ಗಲರ್್ ಆಗಿದ್ದು ಪಕ್ಷಕ್ಕೆ ಅಗತ್ಯವಾದ ಗ್ಲಾಮರ್ಗಾಗಿ.

ಭಾಜಪದ ಗ್ಲಾಮರ್ ರಾಜಕಾರಣಕ್ಕೆ ಪ್ರತಿರೋಧವಾಗಿ ಕಾಂಗ್ರೆಸ್-ಜೆಡಿಎಸ್ ಕಣಕ್ಕಿಳಿಸಿದ್ದು ಡಾ. ಮರುಳಸಿದ್ಧಪ್ಪ ಅವರನ್ನು. ಸಾಹಿತಿಗಳು ರಾಜಕೀಯದಿಂದ ದೂರವಿರುವ ಅಗತ್ಯವಿಲ್ಲವಾದರೂ, ಗೆಲ್ಲುವ ಕುದುರೆಯವ ವಿರುದ್ಧ ಹರಕೆಯ ಕುರಿಯಾಗಲು ಮರುಳಸಿದ್ಧಪ್ಪನವರೇ ಬೇಕಿತ್ತೇ ? ಅಥವಾ ಸಾಹಿತಿಗಳಾದರೂ ಈ ಆಯ್ಕೆಯನ್ನು ಒಪ್ಪಿ, ಬೆಂಬಲಿಸಿ, ಒಕ್ಕೊರಲಿನಿಂದ ಸಮಥರ್ಿಸಿದ್ದೇಕೆ ? ಭಾಜಪ ಮಾಡಿದ ಅಪರಾಧವನ್ನೇ ಇವೆರಡೂ ಪಕ್ಷಗಳು ವಿಭಿನ್ನ ಸನ್ನಿವೇಶದಲ್ಲಿ ಮಾಡಿವೆಯಲ್ಲವೇ ? ಹೀಗಿರುವಾಗ ತಮ್ಮ ಭಾಜಪ ವಿರೋಧಿ ನಿಲುವು ಪ್ರದಶರ್ಿಸುವಲ್ಲಿ ಕಾಂಗ್ರೆಸ್ ಪರ ನಿಲುವನ್ನು ಬಹಿರಂಗ ಪಡಿಸುವ ಅವಶ್ಯಕತೆ ಸಾಹಿತಿಗಳಿಗೆ ಇತ್ತೇ ? ಸ್ಪಧರ್ೆ ಸಾಂಕೇತಿಕವೋ ಪ್ರಾತಿನಿಧಿಕವೋ ಎಂದು ವಾದಿಸುವುದು ಕ್ಲೀಷೆ ಎನಿಸುತ್ತದೆ. ಪ್ರಾತಿನಿಧಿಕವಾಗಿ ಸ್ಪಧರ್ಿಸಲು ಸಾಹಿತಿಗಳ ಬಳಗ ರಾಜಕೀಯ ದಾಳಗಳಲ್ಲ. ಸಾಂಕೇತಿಕವಾಗಿ ಸ್ಪಧರ್ಿಸಲು ಸಮಯದ ಕೈಗೊಂಬೆಗಳೂ ಅಲ್ಲ. ಇಲ್ಲಿ ಉದ್ಭವಿಸುವುದು ಕನರ್ಾಟಕದ ಜನತೆಯ ಅಸ್ಮಿತೆ ಮತ್ತು ಆಯ್ಕೆಯ ಪ್ರಶ್ನೆ.

ಕಾಲಕಾಲಕ್ಕೆ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ತಮ್ಮ ಕನಸುಗಳ ಸಾಕಾರವಾಗುವ ನಿರೀಕ್ಷೆಯಲ್ಲಿ ಸೋತು ಸುಣ್ಣವಾಗಿರುವ ಜನಸಾಮಾನ್ಯರಿಗೆ ಸಂಸತ್ತಿನ ಮೇಲ್ಮನೆಯನ್ನು ಪ್ರತಿನಿಧಿಸುವ ರಾಜ್ಯದ ಧುರೀಣರಿಂದ ಅಲ್ಪ ಸ್ವಲ್ಪ ನಿರೀಕ್ಷೆ ಇರುವುದು ಸುಳ್ಳಲ್ಲ. ಜನತೆಯ ಈ ಆಶೋತ್ತರಗಳಿಗೆ ಕಿಂಚಿತ್ತೂ ಬೆಲೆ ನೀಡದೆ ತಮ್ಮ ಪಕ್ಷದ ಗ್ಲಾಮರ್ಗಾಗಿ ಪ್ರಜೆಗಳ ಹಿತಾಸಕ್ತಿಗಳನ್ನೂ, ಅಸ್ತಿತ್ವವನ್ನೂ ಬಲಿ ಕೊಡುವ ರಾಜಕೀಯ ಪಕ್ಷಗಳು ಬೆಳ್ಳಿ ಪರದೆಯ ಮೇಲೆ ಕನಸುಗಳನ್ನು ಮಾರುವ ಕನಸಿನ ಕನ್ಯೆಗೆ ರಾಜ್ಯದ ಘನತೆ ಗೌರವಗಳನ್ನೂ ಮಾರಿಕೊಂಡಿರುವುದು ಉಚಿತವಲ್ಲ. ತಮ್ಮ ಕನಸುಗಳ ಮೂಲಕವೇ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಸಾಹಿತಿ ಬಳಗವೂ ಈ ಕಂದಕಕ್ಕೆ ಬಿದ್ದಿರುವುದು ಮತ್ತೂ ದುರದೃಷ್ಟಕರ.

 

ಮತ್ತೊಂದು ವಿದ್ಯಮಾನ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆ. ರಾಜ್ಯ ಸಕರ್ಾರ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತಿರುವುದು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಔನ್ನತ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದಶರ್ಿಸುವ ಉದ್ದೇಶದಿಂದ. ಇಲ್ಲಿನ ಪ್ರತಿಯೊಂದು ಕಾರ್ಯಕ್ರಮವೂ ಭಾಷೆಯನ್ನೇ ಕೇಂದ್ರೀಕರಿಸಿರುತ್ತದೆ. ವಿವಾದಾಸ್ಪದ ಬೆಳಗಾವಿಯಲ್ಲಿ ನಡೆಯುತ್ತಿರುವುದರಿಂದ ಕನ್ನಡದ ನೆಲವನ್ನು ಆಕ್ರಮಿಸಲು ಶತಾಯಗತಾಯ ಹವಣಿಸುತ್ತಿರುವ ಮರಾಠಿ ಪ್ರಾದೇಶಿಕ ಭಾವನೆಗಳ ವಿರುದ್ಧ ಸೆಟೆದು ನಿಲ್ಲುವುದೂ ಈ ಸಮ್ಮೇಳನದ ಮೂಲ ಉದ್ದೇಶಗಳಲ್ಲೊಂದು. ಸಕರ್ಾರವೇ ಸಮ್ಮೇಳನವನ್ನು ಆಯೋಜಿಸಿದರೂ ಇಲ್ಲಿ ಪ್ರಧಾನ ಭೂಮಿಕೆ ವಹಿಸಬೇಕಾದ್ದು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವ್ಯಕ್ತಿ-ಸಂಘಟನೆಗಳು. ಮತ್ತು ಸಮಸ್ತ ಕನರ್ಾಟಕ ಜನತೆಯ ಸಂವೇದನೆಗಳಿಗೆ ಸ್ಪಂದಿಸುವಂತಹ ವ್ಯಕ್ತಿ-ಸಂಸ್ಥೆಗಳು.

ಈ ದೃಷ್ಟಿಯಿಂದ ನೋಡಿದಾಗ ಸಮ್ಮೇಳನದ ಉದ್ಘಾಟನೆಗೆ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂತರ್ಿಯವರನ್ನು ಆಹ್ವಾನಿಸಿರುವುದು ಅನುಚಿತವೆಂದೇ ಹೇಳಬಹುದು. ಹೇಮಮಾಲಿನಿ ಭಾರತೀಯರಲ್ಲವೇ ಎಂದು ಕೇಳಿದಂತೆ ನಾರಾಯಣ ಮೂತರ್ಿ ಕನ್ನಡಿಗರಲ್ಲವೇ ಎಂದು ಕೇಳುವುದು ಕ್ಲೀಷೆಯಷ್ಟೇ ಅಲ್ಲ, ಹಾಸ್ಯಾಸ್ಪದವಾಗುತ್ತದೆ. ಔದ್ಯಮಿಕ ಕ್ಷೇತ್ರದಲ್ಲಿ ನಾರಾಯಣ ಮೂತರ್ಿಯವರ ಸಾಧನೆಗಳು ಇಲ್ಲಿ ಅಪ್ರಸ್ತುತ. ಇನ್ಫೋಸಿಸ್ ಎಷ್ಟೇ ಪ್ರಸಿದ್ಧಿ ಪಡೆದಿದ್ದರೂ, ಕನ್ನಡ ಭಾಷೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಸಂಸ್ಥೆಯ ಕೊಡುಗೆ ಶೂನ್ಯ. ಕನ್ನಡ ಮಾಧ್ಯಮ, ಆಂಗ್ಲ ಭಾಷಾ ಶಾಲೆಗಳ ಹಾವಳಿ, ಸ್ಥಳೀಯರಿಗೆ ಉದ್ಯೋಗ ಅಥವಾ ಕನ್ನಡ ತಂತ್ರಾಶದ ಅಭಿವೃದ್ಧಿ ಇವಾವುದೂ ಇನ್ಫೋಸಿಸ್ ಸಂಸ್ಥೆಯನ್ನು ಬಾಧಿಸುವ ಸಮಸ್ಯೆಗಳೇ ಅಲ್ಲ. ಹೀಗಿರುವಾಗ ನಾರಾಯಣ ಮೂತರ್ಿಯವರನ್ನು ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ಆಹ್ವಾನಿಸುವುದು ಉಚಿತವೇ ?

ಇಲ್ಲಿ ಬರಗೂರು ಮುಂತಾದ ಸಾಹಿತಿಗಳ ವಿರೋಧಕ್ಕಿಂತಲೂ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಸಕರ್ಾರಕ್ಕೆ ಇರುವ ಕಾಳಜಿಯ ಪ್ರಶ್ನೆ ಮುಖ್ಯವಾಗುತ್ತದೆ. ಒಂದು ಭಾಷಾ ಸಮ್ಮೇಳನಕ್ಕೂ , ಬಂಡವಾಳ ಹೂಡಿಕೆ ಸಮಾವೇಶಕ್ಕೂ ಇರುವ ವ್ಯತ್ಯಾಸವನ್ನು ಗ್ರಹಿಸದ ಸಕರ್ಾರ ಮಾತ್ರ ಈ ರೀತಿ ವತರ್ಿಸಬಲ್ಲದು. ನಾರಾಯಣ ಮೂತರ್ಿಯವರ ಕೊಡುಗೆ ಏನು ಎಂಬ ಪ್ರಶ್ನೆಯೇ ಅಪ್ರಸ್ತುತ. ಏನೇ ಕೊಡುಗೆ ಇದ್ದರೂ ಭಾಷಾ ಸಮ್ಮೇಳನವನ್ನು ಉದ್ಘಾಟಿಸಲು ಇನ್ನೂ ಹೆಚ್ಚು ಅರ್ಹವ್ಯಕ್ತಿಗಳು ರಾಜ್ಯದಲ್ಲಿ ಇದ್ದರಲ್ಲವೇ ? ನವ ಉದಾರವಾದ ಮತ್ತು ಜಾಗತೀಕರಣದ ಕನಸುಗಳನ್ನು ಮಾರಿ ಜನಸಾಮಾನ್ಯರನ್ನು ಭ್ರಮಾಲೋಕಕ್ಕೆ ಕೊಂಡೊಯ್ಯುವ ನಾರಾಯಣ ಮೂತರ್ಿಯವರು ಭಾಷಾ ಸಮ್ಮೇಳನದಲ್ಲಿ ಏನು ಸಾಧಿಸಬಲ್ಲರೋ ಹೇಮಾಮಾಲಿನಿ ರಾಜ್ಯಸಭೆಯಲ್ಲೂ ಅದನ್ನೇ ಸಾಧಿಸುತ್ತಾರೆ.

ವಿಶ್ವ ಕನ್ನಡ ಸಮ್ಮೇಳನ ಕನರ್ಾಟಕದ ಸಂಸ್ಕೃತಿ-ಸಾಹಿತ್ಯ-ಭಾಷೆ-ಸಮಾಜ ಮತ್ತು ಪರಿಸರವನ್ನು ನಿಮರ್ಿಸುವ ಕನರ್ಾಟಕದ ಸಮಸ್ತ ಶ್ರಮಜೀವಿಗಳ ಆಶೋತ್ತರಗಳಿಗೆ ಸ್ಪಂದಿಸುವ ಸಮಾವೇಶವಾಗಿ ಹೊರಹೊಮ್ಮಬೇಕು. ಇಲ್ಲಿ ಭಾಷೆ-ಸಾಹಿತ್ಯ ನಿಮಿತ್ತ ಮಾತ್ರವಾಗಿ, ಭಾವುಕತೆಗಿಂತಲೂ ಅಸ್ಮಿತೆ ಪ್ರಧಾನ ಭೂಮಿಕೆ ನಿರ್ವಹಿಸಬೇಕು. ವಿಪರ್ಯಾಸವೆಂದರೆ ವ್ಯಕ್ತಿಗತ ವೈಭವೀಕರಣಗಳ ನಡುವೆ, ಕನಸುಗಳನ್ನು ಮಾರುವವರ ನಡುವೆ ಕನರ್ಾಟಕದ ಅಸ್ತಿತ್ವವೇ ಅಪಾಯದ ಅಂಚಿಗೆ ತಲುಪಿದೆ. ಇದು ಆತಂಕಕಾರಿಯೂ ಹೌದು, ಚಿಂತನಾರ್ಹವೂ ಹೌದು.

 

 

 

 

 

 

 

 

‍ಲೇಖಕರು G

March 9, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: