ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ 'ನೇರ ನುಡಿ': ಸಮಾನತೆ ಎಂಬ ಮರೀಚಿಕೆ

ನಾ ದಿವಾಕರ ಫೆಬ್ರವರಿ 26 2011 ರಂದು ಒಂದು ವಿಶಿಷ್ಟ ಘಟನೆ ನಡೆಯಿತು. ಮಾಧ್ಯಮಗಳಲ್ಲಿ ರಂಜನೀಯ ಸುದ್ದಿಯಾಗಿ ಬಿತ್ತರಗೊಂಡಿತ್ತು. ರಾಜಕೀಯ-ಸಾಮಾಜಿಕ ವಲಯದಲ್ಲಿ ಯಾವುದೇ ಪ್ರಭಾವ ಬೀರದೆ ಹೋದರು ದೇಶದ ಪ್ರಜ್ಞಾವಂತ ಜನತೆಯ ಸುಪ್ತ ಮನಸ್ಥಿತಿಯಲ್ಲಿ ಈ ಘಟನೆ ಪ್ರಕ್ಷುಬ್ಧತೆ ಉಂಟುಮಾಡಿತ್ತು. ಪುರುಷ ಪ್ರಾಧಾನ್ಯತೆಯ ಆರಾಧಕರಿಗೆ ಇದು ಕ್ಷುಲ್ಲಕ ಎನಿಸಿದರೂ, ದೇಶದ ಅರ್ಧದಷ್ಟು ಪ್ರಜೆಗಳಿಗೆ ಅಂದರೆ ಮಹಿಳೆಯರಿಗೆ ಈ ಘಟನೆ ಮಹತ್ವದ್ದಾಗಿತ್ತು. ನಡೆದದ್ದು ಇಷ್ಟೇ. ದೆಹಲಿಯಿಂದ ಮುಂಬೈಗೆ ಹೊರಡುವ ವಿಮಾನವನ್ನು ಒಬ್ಬ ವ್ಯಕ್ತಿ ಕೆಲವು ಗಂಟೆಗಳ ಕಾಲ ತಡೆಹಿಡಿದಿದ್ದ. ಕಾರಣ ಭಯೋತ್ಪಾದಕ ಕೃತ್ಯ ಅಥವಾ ಹುಸಿ ಬಾಂಬ್ ಕರೆ ಅಲ್ಲ. ವಿಮಾನ ಚಾಲಕಿ ಮಹಿಳೆಯಾಗಿದ್ದು ಈತನ ಆತಂಕಕ್ಕೆ ಕಾರಣವಾಗಿತ್ತು. ಈ ಮಹಾಶಯನಿಗಿಂತಲೂ ದೇಶದ ಮಹಿಳೆಯರಿಗೆ, ಪ್ರಜ್ಞಾವಂತ ಜನತೆಗೆ ಹೆಚ್ಚು ಆತಂಕವಾಗಿದ್ದು ನನಗೆ ಸಾಯಲು ಇಚ್ಚೆ ಇಲ್ಲ, ತನ್ನ ಮನೆಯನ್ನೇ ನಿರ್ವಹಿಸಲಾಗದ ಆ ಹೆಣ್ಣು ವಿಮಾನವನ್ನು ಹೇಗೆ ನಿರ್ವಹಿಸಬಲ್ಲಳು ಎಂದು ತಮ್ಮ ಸಹಪ್ರಯಾಣಿಕರಿಗೆ ಆತ ನೀಡಿದ ಹೇಳಿಕೆ. ಕೊನೆಗೂ ಆ ವ್ಯಕ್ತಿ ಮಹಿಳಾ ಪೈಲಟ್ನ ಕ್ಷಮೆ ಕೇಳಿ ವಿಮಾನ ಹಾರಿತೆನ್ನಿ. ಆತನನ್ನು ಮನೋವಿಕಲ ಎಂದು ಘೋಷಿಸಲಾಯಿತು. ಈ ಮನೋವೈಕಲ್ಯ ಒಂದು ರೀತಿಯಲ್ಲಿ ಅವ್ಯಕ್ತ ರೂಪದಲ್ಲಿ ಬಹುಪಾಲು ಪುರುಷರಲ್ಲೂ ಇರಲು ಸಾಧ್ಯ. ಮೇಲೆ ಉಲ್ಲೇಖಿಸಿದ ಪ್ರಸಂಗ ಮರೆಯುವಂತಹುದೇ ಆದರೂ ಈ ಪ್ರಸಗಂಗಗಳಿಗೆ ಪೂರಕವಾಗಿರುವ ಮನೋಭಾವವನ್ನು ಅಲಕ್ಷಿಸುವಂತಿಲ್ಲ. ಭಾರತದ ಬಹುಪಾಲು ಪುರುಷರು ಇದೇ ಮನೋಭಾವ ಹೊಂದಿರುತ್ತಾರೆ ಎಂದು ಹೇಳಲಾಗದು. ಆದರೂ ತಮ್ಮ ಮನದ ಯಾವುದೋ ಒಂದು ಮೂಲೆಯಲ್ಲಿ ಪ್ರತಿಯೊಬ್ಬ ಪುರುಷನೂ ಒಂದು ಪ್ರಶ್ನೆಯನ್ನು ಹಾಕಿಕೊಳ್ಳುತ್ತಾನೆ. ಈಕೆ ಈ ಉದ್ದಿಮೆಯನ್ನು ನಡೆಸಬಲ್ಲಳೇ, ವಿಮಾನ ನಿರ್ವಹಿಸಬಲ್ಲಳೇ, ಬಸ್ ಚಾಲಕಿಯಾಗಿ ದುಡಿಯಬಲ್ಲಳೇ, ಮುಖ್ಯಮಂತ್ರಿಯಾಗಿ ಯಶಸ್ವಿಯಾಗಬಲ್ಲಳೇ ಈ ರೀತಿ. ಆದರೆ ಈ ಆತಂಕಗಳು ಅವ್ಯಕ್ತವಾಗಿಯೇ ಉಳಿದುಬಿಡುತ್ತವೆ. ಅನಿವಾರ್ಯವಾಗಿ ಎಂದು ಹೇಳಬೇಕಿಲ್ಲ. ಸಂಸ್ಕೃತಿ ರಕ್ಷಣೆಯ ಹೊಣೆ ಕೆಲವೊಮ್ಮೆ ಸಾರ್ವಜನಿಕವಾಗಿ ಇಂತಹ ಪ್ರತಿಗಾಮಿ ಧೋರಣೆಗಳು ವ್ಯಕ್ತವಾಗುವುದುಂಟು. ಉದಾಹರಣೆಗೆ ಇತ್ತೀಚೆಗೆ ಮಹಾರಾಷ್ಟ್ರದ ಮಂತ್ರಿ ನಾರಾಯಣ ರಾಣೆ ಮಹಿಳೆಯರನ್ನು ಕುರಿತು ರಾಜಕೀಯದಲ್ಲಿ ಮೀಸಲಾತಿ ಕೇಳುವುದೇನೋ ಸರಿಯೇ ಆದರೆ ಮಹಿಳೆಯರು ಮೊದಲು ತಮ್ಮ ಕುಟುಂಬಗಳನ್ನು ನೋಡಿಕೊಳ್ಳಬೇಕು, ಅದು ನಮ್ಮ ಸಂಸ್ಕೃತಿ ಎಂದು ಹೇಳಿರುವುದು. ಭಾರತೀಯ ಸಂಸ್ಕೃತಿಯ ( ಬಹುತೇಕ ಸಂದರ್ಭಗಳಲ್ಲಿ ಹಿಂದೂ-ವೈದಿಕ ಸಂಸ್ಕೃತಿಯನ್ನೇ ಹೀಗೆ ಅಥರ್ೈಸಲಾಗುವುದು) ರಕ್ಷಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಮಹಿಳೆಯರಿಗೇ ವಹಿಸಿರುವ ಒಂದು ವರ್ಗವನ್ನು ರಾಣೆ ಪ್ರತಿನಿಧಿಸುತ್ತಾರೆ. ಆದರೆ ಈ ಸಂಸ್ಕೃತಿಯ ಪರಿಚಾರಕರ ಗ್ರಹೀತಗಳಿಗೆ ನಿಲುಕದ ಕೆಲವು ಸಂಗತಿಗಳಿವೆ. ಸಂಸ್ಕೃತಿ ರಕ್ಷಣೆಯ ಹೊಣೆ ಹೊತ್ತಿರುವ ಒಂದು ವರ್ಗದ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ. 2001ರ ಜನಗಣತಿಯಲ್ಲಿ ಮೂಡಿಬಂದ ಆಘಾತಕಾರಿ ಸಂಗತಿ ಎಂದರೆ ಪುರುಷ-ಮಹಿಳಾ ಜನಸಂಖ್ಯೆ ಅನುಪಾತ. ಸಬಲೀಕರಣ, ಆಶಾಜ್ಯೋತಿ, ಸೀರೆ ಹಂಚಿಕೆ, ಸ್ವಸಹಾಯ ಗುಂಪುಗಳು, ಆರೋಗ್ಯ ಯೋಜನೆಗಳು ಏನೆಲ್ಲಾ ಇದ್ದರೂ ಆರು ವರ್ಷದ ಮಕ್ಕಳ ಪೈಕಿ ಬಾಲಕಿಯರ ಪ್ರಮಾಣ ಮಾತ್ರ ಕಡಿಮೆಯೇ. 2011ರ ಜನಗಣತಿ ಭಿನ್ನವಾಗಿರುವ ಲಕ್ಷಣಗಳೇನೂ ಕಾಣುತ್ತಿಲ್ಲ. ಏಕೆಂದರೆ ಪರಿಹಾರ ಮಾರ್ಗಗಳನ್ನು ಅನುಸರಿಸಿಯೇ ಇಲ್ಲ. ಕ್ರೀಡೆಗಳಲ್ಲಿ, ಉದ್ದಿಮೆಗಳಲ್ಲಿ, ಅಧಿಕಾರಶಾಹಿಯಲ್ಲಿ, ರಾಜಕಾರಣದಲ್ಲಿ ಮಹಿಳೆಯರು ತಮ್ಮದೇ ಆದ ಪ್ರಭಾವಳಿಯನ್ನು ನಿಮರ್ಿಸಿಕೊಂಡಿದ್ದರೂ ಇದು ಅರ್ಧಸತ್ಯ ಮಾತ್ರ. ಯೂನಿಸೆಫ್ನ ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿನ 15-19 ವಯಸ್ಸಿನ ಹದಿಹರೆಯ ಬಾಲಕಿಯರ ಪೈಕಿ ಶೇ. 56ರಷ್ಟು ರಕ್ತಹೀನತೆ ಅನುಭವಿಸುತ್ತಿದ್ದಾರೆ. ಅವರಲ್ಲಿ ಶೇ. 30ರಷ್ಟು ವಿವಾಹಿತರಾಗಿದ್ದಾರೆ. 20-49 ವಯಸ್ಸಿನ ಮಹಿಳೆಯರಲ್ಲಿ ಶೇ. 60ರಷ್ಟು ಹದಿಹರೆಯದಲ್ಲೇ ವಿವಾಹವಾಗಿದ್ದಾರೆ. ಬಾಲ್ಯ ವಿವಾಹ ನಿಷಿದ್ಧವಾಗಿದ್ದರೂ ಸಹ ಈ ವಯೋಮಿತಿಯವರ ಪೈಕಿ ಗ್ರಾಮೀಣ ಪ್ರದೇಶಗಳ ಶೇ. 56 ಮತ್ತು ನಗರ ಪ್ರದೇಶಗಳ ಶೇ. 29 ಮಹಿಳೆಯರು 18 ವರ್ಷಕ್ಕೆ ಮುನ್ನವೇ ಮದುವೆಯಾಗಿದ್ದಾರೆ. ಶೇ. 20ರಷ್ಟು ಮಹಿಳೆಯರು 18 ವರ್ಷ ತುಂಬುವ ಮುನ್ನವೇ ತಾಯಂದಿರಾಗಿದ್ದಾರೆ. ಶತಮಾನದ ಸಂತಸದಲ್ಲಿ ! ಸಂಸ್ಕೃತಿ, ಕುಟುಂಬ ವ್ಯವಸ್ಥೆ, ಧರ್ಮ ರಕ್ಷಣೆ, ಆಚರಣೆ, ಸಂಪ್ರದಾಯ ಮತ್ತು ದೇಶಪ್ರೇಮ ಎಂಬ ಭಾವೋನ್ಮಾದಕ ಅಭಿವ್ಯಕ್ತಿಗಳ ನಡುವೆಯೇ ಭಾರತದ ಮಹಿಳೆಯರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶತಮಾನೋತ್ಸವವನ್ನು ಆಚರಿಸಬೇಕಾಗಿದೆ. ತಾರತಮ್ಯ, ದೌರ್ಜನ್ಯ, ಆಕ್ರಮಣ, ಹಲ್ಲೆ, ಅತ್ಯಾಚಾರ ಮತ್ತು ಬೇಧಭಾವಗಳನ್ನು ಎದುರಿಸುತ್ತಲೇ ತಮ್ಮ ಹಕ್ಕುಗಳ ಪ್ರತಿಪಾದನೆಗಾಗಿ ಮುನ್ನಡೆಯಬೇಕಾಗಿದೆ. 37 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ, ಅಂದಿನಿಂದಲೂ ಜೀವಂತ ಶವವಾಗಿ ನರಳಿ, ಈಗ ಜೀವನ್ಮರಣ ಸ್ಥಿತಿಯಲ್ಲಿ ದಯಾಮರಣಕ್ಕಾಗಿ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿರುವ ಅರುಣಾ ಶಾನಭೋಗ್, ದೇಶದ ಗಡಿ ರಕ್ಷಕರಿಂದ ಅತ್ಯಾಚಾರಕ್ಕೊಳಗಾಗಿ ಕಳೆದ ಒಂದು ದಶಕದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಇರೋಮ್ ಶಮರ್ಿಳಾ ಈ ಶತಮಾನೋತ್ಸವ ಸಂದರ್ಭದಲ್ಲಿ ಪ್ರತಿರೋಧದ ಸಂಕೇತಗಳಾಗಿ ಕಾಣುತ್ತಾರೆ. ನಮ್ಮ ದಿನನಿತ್ಯದ ಜೀವನದಲ್ಲಿ ಇಂತಹ ಅರುಣಾಗಳು, ಶಮರ್ಿಳಾಗಳು ಅಸಂಖ್ಯ. ರಸ್ತೆಗಳಲ್ಲಿ, ಹೋಟೆಲುಗಳಲ್ಲಿ, ರೆಸಾಟರ್ುಗಳಲ್ಲಿ, ಕಛೇರಿಗಳಲ್ಲಿ, ವಾಹನಗಳಲ್ಲಿ ಹೆಣ್ಣು ಅತ್ಯಾಚಾರಕ್ಕೊಳಗಾಗುತ್ತಲೇ ಇರುತ್ತಾಳೆ. ಇಂತಹ ಕೃತ್ಯಗಳು ಏಕೆ ಸಂಭವಿಸುತ್ತವೆ ಎಂದು ಕೇಳುತ್ತಾ ಕೂರುವ ಕಾಲ ಮುಗಿದಿದೆ. ಈಗ ದೇಶದ ಮಹಿಳಾ ಚಳುವಳಿಗಳ ಮುಂದಿರುವ ಜವಾಬ್ದಾರಿ ಎಂದರೆ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಶ್ರಮಿಸುವುದು. ಭಾರತದಲ್ಲಿ ಮಹಿಳೆಯರ ರಕ್ಷಣೆಗಾಗಿ ಎಲ್ಲ ರೀತಿಯ ಕಾನೂನುಗಳೂ ಇವೆ. ಆದರೆ ಯಾವುದೂ ಜಾರಿಗೊಳ್ಳುವುದಿಲ್ಲ. ಆಪತ್ಕಾಲದಲ್ಲಿ ಆಗದ ನೆಂಟರಂತೆ ಈ ಕಾನೂನು ಕಟ್ಟಳೆಗಳು ಅಲಂಕಾರಪ್ರಾಯವಾಗಿವೆ. ಹಾಗಾಗಿಯೇ ಮಹಿಳೆಯರು ಎಷ್ಟೇ ಅತ್ಯುನ್ನತ ಸಾಧನೆ ಮಾಡಿದ್ದರೂ ಸಮಾನತೆ ಮರೀಚಿಕೆಯಾಗೇ ಉಳಿದಿದೆ. ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಹತ್ಯೆ, ಗೌರವ ಹತ್ಯೆ, ಸಂಸ್ಕೃತಿ ರಕ್ಷಣೆಗಾಗಿ ಹತ್ಯೆ ಹೀಗೆ ಹತ್ಯೆಗಳಲ್ಲಿ ಹಲವು ವಿಧಗಳು ಏನಾದರೂ ಇದ್ದರೆ ಅದು ಮಹಿಳೆಯರ ಹತ್ಯೆಯಲ್ಲಿ ಮಾತ್ರ ಎನಿಸುತ್ತದೆ. ದೌರ್ಜನ್ಯಗಳಲ್ಲೂ ಸಹ ಕೌಟುಂಬಿಕ, ಲೈಂಗಿಕ, ಸಾಮಾಜಿಕ, ಸಾಂಸ್ಕೃತಿಕ ದೌರ್ಜನ್ಯ ಎಂದು ಹಲವು ಪ್ರಕಾರಗಳಿವೆ. ಎಷ್ಟೇ ವೈವಿಧ್ಯತೆಗಳಿದ್ದರೂ ಈ ಎಲ್ಲ ಅನಿಷ್ಟಗಳಿಗೂ ಮೂಲ ಕಾರಣ ಪುರುಷ ಪ್ರಾಧಾನ್ಯತೆ ಮತ್ತು ಪಿತೃ ಪ್ರಧಾನ ವ್ಯವಸ್ಥೆಯೇ ಆಗಿದೆ. ವಿಮಾನಯಾನ ತಡೆಗಟ್ಟಿದ ಮಹಾಶಯ ಇಂತಹ ಪ್ರವೃತ್ತಿಗೆ ಸಂಕೇತವಾಗಿ ನಿಲ್ಲುತ್ತಾರೆ. ರಾಣೆ ಅವರಂತಹ ರಾಜಕಾರಣಿಗಳು ಈ ಸಂಸ್ಕ್ಥತಿಯ ರಕ್ಷಕರಾಗಿ ನಿಲ್ಲುತ್ತಾರೆ. ಯಾವುದೇ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಪುರುಷ ಸಮಾಜದಿಂದ ರಕ್ಷಣೆ ಬಯಸುವುದು ಆ ಸಮಾಜದ ಅವನತಿಯ ಸಂಕೇತವಾಗುತ್ತದೆ. ನೈತಿಕತೆ ಮತ್ತು ಆತ್ಮಗೌರವ ಇಲ್ಲದಿರುವ ಸಮಾಜದಲ್ಲಿ ಮಾತ್ರ ಈ ರೀತಿಯ ಪ್ರವೃತ್ತಿ ವ್ಯಕ್ತವಾಗಲು ಸಾಧ್ಯ. ತಮ್ಮ ಸಹಜೀವಿಗಳನ್ನು ಸಮಾನತೆಯಿಂದ, ಗೌರವ ಘನತೆಯಿಂದ, ಅನ್ಯೋನ್ಯತೆಯಿಂದ ಕಾಣದ ಯಾವುದೇ ಸಮಾಜ ನಾಗರಿಕ ಪ್ರಜ್ಞೆಯನ್ನು ಕಳೆದುಕೊಂಡಿದೆ ಎಂದೇ ಅರ್ಥ. ಬಹುಶಃ ಭಾರತದಲ್ಲಿ ಇಂದು ಇಂತಹ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ದೇಶದ ಜನತೆಯಲ್ಲಿ ಪಿತೃ ಪ್ರಧಾನ ಪ್ರವೃತ್ತಿ ಅಳಿಸಿ ನಾಗರಿಕ ಪ್ರಜ್ಞೆ ಮೂಡುವವರೆಗೂ ಮಹಿಳೆಯರಿಗೆ ರಕ್ಷಣೆ ನೀಡುವ ಹೊಣೆಗಾರಿಕೆ ಪ್ರಭುತ್ವದ ಮೇಲಿರುತ್ತದೆ. ತಮ್ಮ ಆತ್ಮಗೌರವಕ್ಕಾಗಿ ಹೋರಾಡುವ ಹೊಣೆಗಾರಿಕೆ ಮಹಿಳೆಯರ ಮೇಲೂ ಇರುತ್ತದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶತಮಾನೋತ್ಸವ ಸಂದರ್ಭದಲ್ಲಿ ಈ ನಿಟ್ಟಿನಲ್ಲೇ ಮುನ್ನಡೆಯಲು ಮಹಿಳಾ ಚಳುವಳಿಗಳು ಸಂಕಲ್ಪ ಮಾಡಬೇಕಿದೆ.]]>

‍ಲೇಖಕರು G

8 March, 2011

3 Comments

  1. Dr. Indira hegde

    ಇತ್ತೀಚೆಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ನ್ಯಾಯಾಲಯದ ಕಟ ಕಟೆ ಹತ್ತುತ್ತಿದ್ದಾರೆ. ಆದರೆ ಮಹಿಳ ದಿನಾಚರಣೆಯ ಒಂದೆರಡು ದಿನ ಮೊದಲು ವಿದ್ಯಾವಂತ ಹೆಣ್ಣು ತನ್ನ ಗುರುಗಳೇ ನೀಡುವ ಲೈಂಗಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಯ ಮೊರೆಹೋದುದು ಈ ದೇಶದ ಪುರುಷ ಮನಸ್ಸುಗಳ ದಿವಾಳಿತನವನ್ನು ಸಂಕೇತಿಸುತ್ತದೆ. ಜೊತೆಗ ತನ್ನ ಗುರುಗಳಿಂದ ಬಿಡುಗಡೆಗೊಳ್ಳಳ್ಳು ಆ ವಿದ್ಯಾರ್ಥಿ ಆತ್ಮ ಹತ್ಯೆ ಮಾಡಿ ಕೊಳ್ಳ ಬೇಕಾಗಿರಲಿಲ್ಲ ಎಂದು ಕೊಂಡರೂ ಆಕೆ ಆತ್ಮಹತ್ಯೆಯ ಪರ್ಯತ್ನ ಮಾಡಿಕೊಳ್ಳದೆ ಇದ್ದಿದ್ದರೆ ಈ ಪ್ರಕರಣಕ್ಕೆ ಸಂಬಂಧ ಪಟ್ಟ ಪುರುಷ ಸಮಾಜ ಸ್ಪಂಧಿಸುತ್ತಲೂ ಇರಲಿಲ್ಲ.

  2. Sharadhi

    Hi Diwakar,
    Your concerns seem genuine, however, let me ask you, how sure are you about the truthfulness of the incidents quoted in your article?. I am not biased here, just wonder about reality vs. iconic views.
    Further, you totally swept the role of woman in the name of the pseydo-equality, however, the fact is, males can’t breast feed and conceive. Why don’t we respect women for that?, does she has to be a piloting a flight in order to be respected by you men?, well by saying this, you are getting the devil from the back door, instead of the front door.
    Remember, logic is bi-edged. You do have the skills, however, please think, analyze, examine, question before you publish.
    (I still hope avadhi is transparent enough to welcome differing voices, if not, I do feel sorry for those who are the computer-literates.
    Sharadhi

    • Divakar N

      I cant understand How you have understood my arguments and analysis.Respecting your critique I do request you to read the article again and re read. I have never tried to make any back door entry with male chauvinism.May be I am wrong but I feel you too. Any way thanks for response.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading