ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ನೇರನುಡಿ : ಕಲೆಯ ಕೈಗಳಿಗೂ ಸಂಕೋಲೆ

ಪಾಪ ಪ್ರಜ್ಞೆಯಿಲ್ಲದ ಆಳ್ವಿಕರ ಕೃತ್ಯಗಳು ಪ್ರಜಾತಂತ್ರಕ್ಕೆ ಮಾರಕ ಆರು ದಶಕಗಳ ಸ್ವಾತಂತ್ರ್ಯ ಅನುಭವಿಸಿದ್ದರೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ಪ್ರೌಢಿಮೆ ಗಳಿಸಿಲ್ಲ. ಇದು ವಿಷಾದಕರವಾದರೂ, ಕಠಿಣ ನಿಲುವು ಎನಿಸಿದರೂ ವಾಸ್ತವ, ಸತ್ಯ. ನಿಜ, ದೇಶದಲ್ಲಿ ಪ್ರಜಾತಂತ್ರ ಮೌಲ್ಯಗಳು ಇಲ್ಲದೆ ಹೋಗಿದ್ದಲ್ಲಿ ಈ ರೀತಿ ಖಂಡಿಸಲೂ ಆಗುತ್ತಿರಲಿಲ್ಲ. ಹಾಗೆಂದ ಮಾತ್ರಕ್ಕೆ ನಮ್ಮನ್ನಾಳುವ ಜನಪ್ರತಿನಿಧಿಗಳು ಸಾಂವಿಧಾನಿಕ ಹಕ್ಕುಗಳನ್ನು ಸಂಪೂರ್ಣ ಪರಿಪಾಲಿಸುತ್ತಿದ್ದಾರೆ ಎಂದರ್ಥವಲ್ಲ. ದೇಶದ ಸಾರ್ವಭೌಮ ಪ್ರಜೆಗಳ ಪ್ರತಿಯೊಂದು ಪ್ರತಿರೋಧದ ದನಿಯನ್ನೂ ರಾಜದ್ರೋಹದ ಪರಮಾವಧಿ ಎಂದು ಭಾವಿಸುವ ಆಳುವ ವರ್ಗಗಳು ಇನ್ನೂ ವಸಾಹತುಶಾಹಿ ಛಾಯೆಯಲ್ಲೇ ದೇಶವನ್ನಾಳುತ್ತಿರುವುದು ಸ್ಪಷ್ಟವಾಗುತ್ತಿದೆ. ಈ ದೇಶದ ದುರಂತವೆಂದರೆ ಮಹಾಪಾತಕಿಗಳು, ಕಳ್ಳಸಾಗಣೆ ಮಾಡುವವರು, ಮಾಫಿಯಾಗಳು, ಡಾನ್ಗಳು, ಭೂಗತ ದೊರೆಗಳು ಪ್ರತಿಷ್ಠೆಯಿಂದ ತಲೆ ಎತ್ತಿ ತಿರುಗಾಡುತ್ತಾರೆ. ಅಥವಾ ಆಳ್ವಿಕರ ಕಣ್ಣು ತಪ್ಪಿಸಿ ತಮ್ಮ ಸುರಂಗದರಮನೆಗಳಲ್ಲಿ ಸುರಕ್ಷಿತವಾಗಿರುತ್ತಾರೆ. ಇನ್ನೂ ಹೆಚ್ಚೆಂದರೆ ತಾವು ಯಾವುದೇ ಅಪರಾಧ ಮಾಡಿಲ್ಲ ಎಂಬ ಸೋಗಿನಲ್ಲಿ ಸಮಾಜಸೇವೆ, ರಾಜಕಾರಣ ಮತ್ತು ಧರ್ಮಕಾರ್ಯಗಳಲ್ಲೂ ತೊಡಗಿರುತ್ತಾರೆ. ಮತ್ತೊಂದೆಡೆ ದೇಶದ ಜನಸಾಮಾನ್ಯರ ತುಡಿತಗಳಿಗೆ ಸ್ಪಂದಿಸಿ, ಅವರ ಅಭ್ಯುದಯಕ್ಕಾಗಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಾ ಜೀವನವನ್ನೇ ಜನತೆಯ ಒಳಿತಿಗಾಗಿ ಮುಡಿಪಾಗಿರಿಸುವ ಸಾಮಾಜಿಕ ಹೋರಾಟಗಾರರು ಸದಾ ಶಿಕ್ಷೆಯ ಭೀತಿಯನ್ನು ಎದುರಿಸಿ ಬಾಳುತ್ತಿರುತ್ತಾರೆ. ಭಾರತದ ಸಂವಿಧಾನ ಸಾರ್ವಭೌಮ ಪ್ರಜೆಗಳಿಗೆ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಕೆಲವು ನಿರ್ಬಂಧಗಳೊಡನೆ ನೀಡಿದೆ. ಇದು ಮುಕ್ತ ಸ್ವಾತಂತ್ರ್ಯವಲ್ಲ ನಿಜ, ಆದರೆ ಆಳ್ವಿಕರ ನೀತಿಗಳನ್ನು, ಪ್ರಭುತ್ವದ ಪ್ರಮಾದಗಳನ್ನು, ಸಾಮಾಜಿಕ ಅನಿಷ್ಠಗಳನ್ನು ಪ್ರತಿರೋಧಿಸುವಷ್ಟು ಸ್ವಾತಂತ್ರ್ಯ ಖಂಡಿತವಾಗಿಯೂ ಇದೆ. ಭಾರತೀಯ ಸಂವಿಧಾನದ ಈ ಅಂಶವೇ ಈ ದೇಶದ ಪ್ರಜಾಸತ್ತೆಯನ್ನು ಇಷ್ಟು ದಿನವೂ ರಕ್ಷಿಸಿಕೊಂಡು ಬಂದಿದೆ. ಜನಪ್ರತಿನಿಧಿಗಳು ಎಷ್ಟೇ ಭ್ರಷ್ಟರಾಗಿದ್ದರೂ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಗಳ ಸಂದರ್ಭದಲ್ಲಿ ಮತ್ತು ಕಾಲಕಾಲಕ್ಕೆ ನಡೆಯುವ ಚಚರ್ೆಗಳ ಮೂಲಕ ಪ್ರಜೆಗಳು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಆದರೂ ಕಳೆದ ಎರಡು ದಶಕಗಳಿಂದ ಈ ದೇಶದ ಪ್ರಭುತ್ವ ತನ್ನ ಸಹನೆ, ತಾಳ್ಮೆ ಮತ್ತು ಸಂವೇದನೆಯನ್ನು ಕಳೆದುಕೊಳ್ಳುತ್ತಿದೆಯೇನೋ ಎಂದು ಭಾಸವಾಗುತ್ತಿದೆ. ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ವ್ಯಕ್ತಪಡಿಸುವ ಯಾವುದೇ ಪ್ರತಿರೋಧ ಸ್ವೀಕಾರಾರ್ಹವಾದಾಗಲೇ ಪ್ರಜಾತಂತ್ರಕ್ಕೆ ಗೌರವ ಸಲ್ಲುತ್ತದೆ. ಪ್ರತಿರೋಧದ ದನಿ ಎಷ್ಟೇ ಗಟ್ಟಿಯಾಗಿದ್ದರೂ ಅದರ ಹಿಂದಿನ ಕಾಳಜಿ ಮತ್ತು ಕಳಕಳಿ ಮುಖ್ಯವಾಗಬೇಕೇ ಹೊರತು ದನಿಯ ಏರಿಳಿತಗಳಲ್ಲ. ಆದರೆ ಭಾರತದ ಆಳುವ ವರ್ಗಗಳು ಈ ಸಂವೇದನೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ. ಪ್ರಭುತ್ವದ ವಿರುದ್ಧ ದನಿ ಎತ್ತುವುದೇ ಮಹಾಪರಾಧ ಎನ್ನುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ. 1975ರ ತುತರ್ುಪರಿಸ್ಥಿತಿಯ ಸನ್ನಿವೇಶ ಮತ್ತೊಂದು ರೂಪದಲ್ಲಿ ಸೃಷ್ಟಿಯಾಗುತ್ತಿದೆ. ಪ್ರಭುತ್ವದ ನೀತಿಗಳ ಫಲವಾಗಿ ಅವಕಾಶವಂಚಿತ ಜನಸಮುದಾಯಗಳು ತಮ್ಮ ಜೀವನೋಪಾಯಕ್ಕಾಗಿ ಹೋರಾಡುವ ಪರಿಸ್ಥಿತಿ ನಿಮರ್ಾಣವಾಗಿದೆ. ಮತ್ತೊಂದೆಡೆ ಆಳುವ ವರ್ಗಗಳಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ದಮನಕಾರಿ ಧೋರಣೆ ತೀವ್ರವಾಗುತ್ತಿದೆ. ಅಣ್ಣಾ ಹಜಾರೆ ಆಂದೋಲನದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಭುಗಿಲೆದ್ದಿದ್ದ ಆಕ್ರೋಶವನ್ನು ತಣ್ಣಗಾಗಿಸಲು ರಾಂದೇವ್ ಎಂಬ ಅಸ್ತ್ರವನ್ನು ಬಳಸಿ ಇಡೀ ಅಂದೋಲನವನ್ನೇ ಸಮಾಪ್ತಿಗೊಳಿಸಿದ ಆಳ್ವಿಕರ ಜಾಣ್ಮೆಯನ್ನು ಮತ್ತೆ ಹೇಗೆ ವಿವರಿಸಲು ಸಾಧ್ಯ. ಈಗ ಮಹಾರಾಷ್ಟ್ರ ಸಕರ್ಾರ ಖ್ಯಾತ ವ್ಯಂಗ್ಯ ಚಿತ್ರಕಾರ ಅಸೀಮ್ ತ್ರಿವೇದಿಯವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಅಡಿಯಲ್ಲಿ ರಾಜದ್ರೋಹದ ಆಪಾದನೆಯೂ ಸೇರಿದಂತೆ, 1971 ರಾಷ್ಟ್ರೀಯ ಗೌರವಕ್ಕೆ ಅಪಮಾನ (ಪ್ರತಿಬಂಧಕ)ಕಾಯ್ದೆಯ ಸೆಕ್ಷನ್ 2 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎ ಅಡಿಯಲ್ಲಿ ಮೊಕದ್ದಮೆ ದಾಖಲಿಸಿದೆ. . ಈ ಮೂರೂ ಆಪದಾನೆಗಳಿಗೆ ಕಾರಣ ಅಸೀಮ್ ತ್ರಿವೇದಿ ರಚಿಸಿದ ವ್ಯಂಗ್ಯ ಚಿತ್ರಗಳ ಸರಣಿ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಅಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ತ್ರಿವೇದಿ ಭಾರತದ ಸಾರ್ವಭೌಮ ಪ್ರಜೆಗಳನ್ನು ಕಾಡುತ್ತಿರುವ ಕೆಲವು ಜ್ವಲಂತ ಸಮಸ್ಯೆಗಳನ್ನು ಮತ್ತು ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಆಳ್ವಿಕರು ತೋರುತ್ತಿರುವ ನಿಷ್ಕಾಳಜಿಯನ್ನು ತಮ್ಮ ವ್ಯಂಗ್ಯ ಚಿತ್ರದ ಮೂಲಕ ಬಿಂಬಿಸಿದ್ದಾರೆ. ತ್ರಿವೇದಿಯವರ ಕಣ್ಣಿಗೆ ಭಾರತದ ಲಾಂಛನವಾದ ಅಶೋಕ ಸ್ತಂಭ ವಿಭಿನ್ನವಾಗಿ ಕಂಡಿದೆ. ನಾಲ್ಕು ಸಿಂಹಗಳ ಸ್ಥಾನದಲ್ಲಿ ತ್ರಿವೇದಿ ಹಸಿದ ತೋಳಗಳನ್ನು ಬಿಂಬಿಸಿದ್ದಾರೆ. ಸ್ತಂಭದ ಮೇಲಿನ ಸತ್ಯಮೇವ ಜಯತೆ ಎಂಬ ವಾಕ್ಯವನ್ನು ಭ್ರಷ್ಟಮೇವ ಜಯತೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಧರಿಸಿರುವ ಮಹಿಳೆಯ ಮೇಲೆ ಒಬ್ಬ ರಾಜಕಾರಣಿ ಮತ್ತೊಬ್ಬ ಅಧಿಕಾರಿ ಆಕ್ರಮಣ ಮಾಡುತ್ತಿರುವುದನ್ನು ಚಿತ್ರಿಸಿದ್ದಾರೆ. ಭಾರತದ ಸಂಸತ್ ಭವನವನ್ನು ಶೌಚಾಲಯದ ಮಾದರಿಯಲ್ಲಿ ಚಿತ್ರಿಸಿದ್ದು ಅಲ್ಲಿ ಅಜ್ಮಲ್ ಕಸಬ್ ಮೂತ್ರ ವಿಸರ್ಜನೆ ಮಾಡುತ್ತಿರುವಂತೆ ಚಿತ್ರಿಸಿದ್ದಾರೆ. ಇದು ಒಂದು ದೃಷ್ಟಿಯಿಂದ ನೋಡಿದಾಗ ಆಘಾತಕಾರಿಯಾಗಿ ಕಾಣಬಹುದು. ಅಥವಾ ಅತಿರಂಜಿತ ಅಭಿವ್ಯಕ್ತಿ ಎಂದೂ ಭಾವಿಸಬಹುದು. ತಮ್ಮ ಆಕ್ರೋಶ ಅಥವಾ ಹತಾಶೆಗಳನ್ನು ಒಬ್ಬ ವ್ಯಂಗ್ಯ ಚಿತ್ರಕಾರ ಇಷ್ಟು ಕ್ರೂರವಾಗಿ ಬಿಂಬಿಸುವ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದರೂ ಹೆಚ್ಚೇನಿಲ್ಲ. ಭಾವನಾತ್ಮಕ ನೆಲೆಗಟ್ಟಿನಲ್ಲಿ ನಿಂತು, ದೇಶಭಕ್ತಿ-ದೇಶಾಭಿಮಾನಗಳ ದೃಷ್ಟಿಯಿಂದ ನೋಡಿದಾಗ ಈ ವ್ಯಂಗ್ಯ ಚಿತ್ರ ಓದುಗರ ಭಾವನೆಗಳನ್ನು ಕೆರಳಿಸಲೂಬಹುದು. ಆದರೆ ಆರ್.ಕೆ. ಲಕ್ಷ್ಮಣ್ ಆಗಲಿ, ಶಂಕರ್ ಆಗಲಿ, ಅಸೀಮ್ ತ್ರಿವೇದಿಯಾಗಲಿ ತಮ್ಮ ವ್ಯಂಗ್ಯ ಚಿತ್ರಗಳ ಮೂಲಕ ವ್ಯಕ್ತಪಡಿಸುವುದು ಕೇವಲ ತಮ್ಮ ವ್ಯಕ್ತಿಗತ ಭಾವನೆಗಳನ್ನಲ್ಲ. ಈ ದೇಶದ ಒಂದು ವರ್ಗದ ಜನತೆಯ ಭಾವನೆಗಳನ್ನು ಎಂಬ ವಾಸ್ತವವನ್ನು ಆಳ್ವಿಕರು ತಿಳಿಯಬೇಕಲ್ಲವೇ ? ಈ ದೇಶದ ಚುನಾವಣೆಗಳಲ್ಲಿ ಗೆಲ್ಲುತ್ತಿರುವುದು ಭ್ರಷ್ಟರೇ, ನೌಕರಶಾಹಿಯಲ್ಲಿ ಅಧಿಪತ್ಯ ಸಾಧಿಸುತ್ತಿರುವರು ಭ್ರಷ್ಟರೆ, ಸಮಾಜದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವವರು ಭ್ರಷ್ಟರೇ ಇನ್ನು ಭ್ರಷ್ಟಮೇವ ಜಯತೇ ಎಂದರೆ ತಪ್ಪೇನಿದೆ ? ಅಶೋಕ ಸ್ತಂಭದಲ್ಲಿ ಒಬ್ಬ ವ್ಯಂಗ್ಯಚಿತ್ರಕಾರನಿಗೆ ಸಿಂಹಗಳ ಸ್ಥಾನದಲ್ಲಿ ತೋಳಗಳು ಕಂಡುಬಂದರೆ, ಅದರ ಹಿಂದೆ 2ಜಿ ತರಂಗಾಂತರ, ಆದರ್ಶ ಹಗರಣ, ಕಲ್ಲಿದ್ದಲು ಹಗರಣ, ಅಕ್ರಮ ಗಣಿಗಾರಿಕೆ, ಭೂ ಕಬಳಿಕೆ, ಒತ್ತುವರಿ ಇನ್ನೂ ಅನೇಕ ರೀತಿಯ ಭ್ರಷ್ಟತೆಯ ಪ್ರತಿರೂಪಗಳು ಅಡಗಿರುತ್ತವೆ. ಆಳುವ ವರ್ಗಗಳ ಕುತಂತ್ರದಿಂದ ಅಣ್ಣಾ ಹಜಾರೆಯ ಆಂದೋಲನ ಇತಿಹಾಸದ ಕಸದ ಬುಟ್ಟಿ ಸೇರಬಹುದು ಆದರೆ ಜನತೆಯ ಆಕ್ರೋಶ, ಹತಾಶೆಗಳು ಜೀವಂತವಾಗಿರುತ್ತವೆ. ಈ ಹತಾಶೆಗಳೇ ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ಸ್ವರೂಪದಲ್ಲಿ ವ್ಯಕ್ತವಾಗುತ್ತಿರುತ್ತವೆ. ಶಂಕರ್ ತಮ್ಮ ಕಾಟರ್ೂನಿನಲ್ಲಿ ಬಸವನಹುಳುವಿನ ಮೇಲೆ ಕುಳಿತ ಅಂಬೇಡ್ಕರ್ ಅವರ ಹಿಂದೆ ಚಾಟಿ ಹಿಡಿದ ನೆಹರೂ ಅವರನ್ನು ನಿಲ್ಲಿಸಿದ್ದರೆ, ತ್ರಿವೇದಿ ಅಶೋಕ ಚಕ್ರದಲ್ಲಿ ಸಿಂಹದ ಬದಲು ತೋಳಗಳನ್ನು ಚಿತ್ರಿಸುತ್ತಾರೆ. ಅಂದರೆ ಇದು ಆಳ್ವಿಕರ ನೀತಿಗಳ ದ್ವಂದ್ವವನ್ನು ಪ್ರಜೆಗಳ ದೃಷ್ಟಿಕೋನದಿಂದ ನೋಡುವ ಒಂದು ಪರಿ. ಆರ್.ಕೆ. ಲಕ್ಷ್ಮಣ್ ಈ ಕಲೆಯನ್ನು ಕಳೆದ ಏಳು ದಶಕಗಳಿಂದ ಕರಗತಮಾಡಿಕೊಂಡಿದ್ದಾರೆ. ಆಳ್ವಿಕರನ್ನು ಅಣಕಿಸುವ ಲಕ್ಷ್ಮಣ್ ಅವರ ವ್ಯಂಗ್ಯ ಚಿತ್ರಗಳು ಮೃದು ಧೋರಣೆ ಉಳ್ಳದ್ದಾಗಿದ್ದರೆ, ತ್ರಿವೇದಿಯವರಂತಹ ಆಧುನಿಕ ವ್ಯಂಗ್ಯಚಿತ್ರಕಾರರ ಅಭಿವ್ಯಕ್ತಿ ಕಠಿಣ ಧೋರಣೆ ತಾಳುತ್ತವೆ. ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ವ್ಯಕ್ತಪಡಿಸುವ ಯಾವುದೇ ಪ್ರತಿರೋಧ ಸ್ವೀಕಾರಾರ್ಹವಾದಾಗಲೇ ಪ್ರಜಾತಂತ್ರಕ್ಕೆ ಗೌರವ ಸಲ್ಲುತ್ತದೆ. ಪ್ರತಿರೋಧದ ದನಿ ಎಷ್ಟೇ ಗಟ್ಟಿಯಾಗಿದ್ದರೂ ಅದರ ಹಿಂದಿನ ಕಾಳಜಿ ಮತ್ತು ಕಳಕಳಿ ಮುಖ್ಯವಾಗಬೇಕೇ ಹೊರತು ದನಿಯ ಏರಿಳಿತಗಳಲ್ಲ. ಆದರೆ ಭಾರತದ ಆಳುವ ವರ್ಗಗಳು ಈ ಸಂವೇದನೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ. ಪ್ರಭುತ್ವದ ವಿರುದ್ಧ ದನಿ ಎತ್ತುವುದೇ ಮಹಾಪರಾಧ ಎನ್ನುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ. 1975ರ ತುತರ್ುಪರಿಸ್ಥಿತಿಯ ಸನ್ನಿವೇಶ ಮತ್ತೊಂದು ರೂಪದಲ್ಲಿ ಸೃಷ್ಟಿಯಾಗುತ್ತಿದೆ. ಪ್ರಭುತ್ವದ ನೀತಿಗಳ ಫಲವಾಗಿ ಅವಕಾಶವಂಚಿತ ಜನಸಮುದಾಯಗಳು ತಮ್ಮ ಜೀವನೋಪಾಯಕ್ಕಾಗಿ ಹೋರಾಡುವ ಪರಿಸ್ಥಿತಿ ನಿಮರ್ಾಣವಾಗಿದೆ. ಮತ್ತೊಂದೆಡೆ ಆಳುವ ವರ್ಗಗಳಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ದಮನಕಾರಿ ಧೋರಣೆ ತೀವ್ರವಾಗುತ್ತಿದೆ. ಅಣ್ಣಾ ಹಜಾರೆ ಆಂದೋಲನದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಭುಗಿಲೆದ್ದಿದ್ದ ಆಕ್ರೋಶವನ್ನು ತಣ್ಣಗಾಗಿಸಲು ರಾಂದೇವ್ ಎಂಬ ಅಸ್ತ್ರವನ್ನು ಬಳಸಿ ಇಡೀ ಅಂದೋಲನವನ್ನೇ ಸಮಾಪ್ತಿಗೊಳಿಸಿದ ಆಳ್ವಿಕರ ಜಾಣ್ಮೆಯನ್ನು ಮತ್ತೆ ಹೇಗೆ ವಿವರಿಸಲು ಸಾಧ್ಯ. ಯಾವುದೇ ಒಬ್ಬ ಕಲಾವಿದನ, ಲೇಖಕನ, ಕವಿಯ ಅಭಿವ್ಯಕ್ತಿಗಳು ಕೇವಲ ವ್ಯಕ್ತಿಗತ ವಿಚಾರವಾಗಿರುವುದಿಲ್ಲ. ವ್ಯಕ್ತಿಗತ ನಂಬಿಕೆಗಳ ಮತ್ತು ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ಪ್ರಕಟಗೊಳ್ಳುವ ಸಾರ್ವಜನಿಕ ಅಭಿವ್ಯಕ್ತಿಗಳಾಗಿರುತ್ತವೆ. ಸಮಾಜದ ಒಂದು ವರ್ಗದ ಜನತೆಯ ಆಕ್ರೋಶಗಳನ್ನು, ಹತಾಶೆಗಳನ್ನು, ಆಕಾಂಕ್ಷೆಗಳನ್ನು ತಮ್ಮದೇ ಆದ ಮಾಧ್ಯಮದ ಮೂಲಕ ಪ್ರಕಟಿಸಲು ಸೃಜನಶೀಲ ಮನಸ್ಸುಗಳು ಹಾತೊರೆಯುತ್ತವೆ. ಆರ್.ಕೆ. ಲಕ್ಷಣ್, ಶಂಕರ್, ಎಂ.ಎಫ್. ಹುಸೇನ್, ತ್ರಿವೇದಿ, ಸಲ್ಮಾನ್ ರಷ್ದಿ, ತಸ್ಲಿಮಾ ನಸರೀನ್, ಅರುಂಧತಿ ರಾಯ್ ಹೀಗೆ ಅನೇಕ ವೃತ್ತಿಪರರು ಇಂತಹ ಸೃಜನಶೀಲತೆಯ ಪ್ರತೀಕವಾಗಿ ಕಾಣುತ್ತಾರೆ. ಬಿನಾಯಕ್ ಸೆನ್ ಅವರಂತಹ ಸಮಾಜಸೇವಕರು ಸಂವೇದನಾಶೀಲತೆಯ ಸಂಕೇತವಾಗಿ ಕಾಣುತ್ತಾರೆ. ಪ್ರಜಾಸತ್ತಾತ್ಮಕ ಭಾರತದ ದುರಂತವೆಂದರೆ ಸೃಜನಶೀಲತೆಯ ಪ್ರತಿಪಾದಕರು ಆಳ್ವಿಕರಿಂದ, ಮೂಲಭೂತವಾದಿಗಳಿಂದ, ಫ್ಯಾಸಿಸ್ಟ್ ಶಕ್ತಿಗಳಿಂದ ಮತ್ತು ಜಾತಿ ಅಸ್ಮಿತೆಗಳಿಂದ ಸತತವಾಗಿ ದಾಳಿಗೊಳಗಾಗುತ್ತಲೇ ಇದ್ದಾರೆ.]]>

‍ಲೇಖಕರು G

19 September, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading