ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ಚಿ೦ತನಾ ಲೋಕ

ರಾಷ್ಟ್ರಪತಿಗಳು ಮಾಡಿದ ತಪ್ಪಾದರೂ ಏನು ?

– ನಾ ದಿವಾಕರ್

ಯಾವುದೇ ಪ್ರಬುದ್ಧ , ನಾಗರೀಕ, ಪ್ರಜ್ಞಾವಂತ ಹಾಗೂ ಪ್ರಜಾಸತ್ತಾತ್ಮಕ ಧೋರಣೆಯುಳ್ಳ ಸಮಾಜದಲ್ಲಿ ಅಪರಾಧಗಳು ಸಂಭವಿಸುವುದು ಒಂದು ನಿದರ್ಿಷ್ಟ ಸಾಮಾಜಿಕ-ಆಥರ್ಿಕ ಹಾಗೂ ಸಾಂಸ್ಕೃತಿಕ ಚೌಕಟ್ಟಿನಲ್ಲಿಯೇ ಹೊರತು ಅದರಿಂದಾಚೆಗಲ್ಲ. ಅಪರಾಧಗಳಿಲ್ಲದ ಸಮಾಜ ಇಂದಿಗೂ ಇರಲಾರದು ಅಂದಿಗೂ ಇದ್ದಿರಲಾರದು. ಏಕೆಂದರೆ ಮಾನವ ಸಮಾಜ ಬದುಕುವುದೇ ಸಂಘರ್ಷದಿಂದ, ಬದುಕುವ ವಾಂಛೆಯಿಂದ. ತತ್ವ, ಸಿದ್ಧಾಂತ ಮತ್ತು ನೀತಿಗಳು ಧಾಮರ್ಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಎಷ್ಟೇ ಬೆಳೆಸಿದರೂ ಮನುಕುಲದ ಏಳಿಗೆಯ ಹೆಜ್ಜೆ ಗುರುತುಗಳಲ್ಲಿ ಅಪರಾಧಗಳು ಕಪ್ಪು ಚುಕ್ಕೆಗಳಾಗಿ ಕಾಣುತ್ತಲೆ ಬಂದಿವೆ. ಅತ್ಯಂತ ಆದರ್ಶಪ್ರಾಯ ಎನ್ನಲಾಗುವ ರಾಮರಾಜ್ಯದಲ್ಲೂ ಅಪರಾಧಗಳಿದ್ದವು, ಧರ್ಮ ಸಂರಕ್ಷಕರ ಮಹಾಭಾರತದಲ್ಲೂ ಅಪರಾಧಿಗಳಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯಗಳಾಗಲಿ, ಸಮಾಜಘಾತುಕ ಕೃತ್ಯಗಳಾಗಲೀ, ಬಡ, ಅಸಹಾಯಕ ಹಾಗೂ ಅಮಾಯಕ ಜನತೆಯ ಮೇಲಿನ ದೌರ್ಜನ್ಯವೇ ಆಗಲಿ, ಕಾಲಾತೀತವಾಗಿ ಬೆಳೆದುಬಂದ ವಿದ್ಯಮಾನಗಳು. ಹಾಗಾಗಿಯೇ ಅಪರಾಧ ಸಂಹಿತೆಗಳು ಕಾಲದಿಂದ ಕಾಲಕ್ಕೆ ಬದಲಾವಣೆ ಕಾಣುತ್ತಿವೆಯೇ ಹೊರತು, ಸಮಾಜಗಳು, ಸಮುದಾಯಗಳು ಅಪರಾಧಮುಕ್ತವಾಗಿಲ್ಲ. ಆಗುವುದೂ ಇಲ್ಲ. ಅಪರಾಧಿಗಳಾಗಿ ಯಾರೂ ಜನಿಸುವುದಿಲ್ಲ, ನಮ್ಮ ಮಾನವ ಸಮಾಜ ತನ್ನ ಒಡಲಲ್ಲೇ ಅಪರಾಧಿಗಳನ್ನು ಸೃಷ್ಟಿಸುತ್ತದೆ. ಅಸಮಾನತೆಯ ಮೂಲಕ, ಶೋಷಣೆಯ ಮೂಲಕ, ದಬ್ಬಾಳಿಕೆಯ ಮೂಲಕ. ಅಪರಾಧ ಅಥವಾ ಅಪರಾಧಿಗಳನ್ನು ಗುರುತಿಸುವ ಹಕ್ಕನ್ನು ಪ್ರಭುತ್ವವೇ ವಹಿಸಿಕೊಂಡಾಗ, ಅಪರಾಧಗಳೂ ವಿಭಿನ್ನ ಆಯಾಮಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಪ್ರಭುತ್ವಗಳ ಲಕ್ಷಣಗಳು ಬದಲಾದಂತೆಲ್ಲಾ ಅಪರಾಧಗಳ ಸ್ವರೂಪಗಳೂ, ಗ್ರಹೀತಗಳೂ ಬದಲಾಗುತ್ತಿರುತ್ತವೆ. ತುತರ್ುಪರಿಸ್ಥಿತಿಯ ಅಪರಾಧಿಗಳು ಇಂದು ದೇಶದ ಪ್ರಮುಖ ನಾಯಕರುಗಳಾಗಿ ಕಂಡುಬರುವುದು ಈ ನೆಲೆಯಲ್ಲೇ. ಪ್ರಭುತ್ವ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಅಪರಾಧ ಮತ್ತು ಅಪರಾಧಿಗಳನ್ನು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿ , ಅವುಗಳ ನಿಯಂತ್ರಣಕ್ಕಾಗಿ ತನ್ನದೇ ಆದ ಶಾಸನಗಳನ್ನು ರೂಪಿಸುತ್ತದೆ. ಇಲ್ಲಿ ಆತ್ಮರಕ್ಷಣೆ ಒಂದು ಉದ್ದೇಶವಾದರೆ ಸಮಾಜದ ಸೌಹಾರ್ದತೆಯನ್ನು ಕಾಪಾಡುವುದು ಮತ್ತೊಂದು ಉದ್ದೇಶವಾಗುತ್ತದೆ. ಹಾಗಾಗಿ ಪ್ರಭುತ್ವದ ಲಕ್ಷಣ ಏನೇ ಆಗಿದ್ದರೂ ಅಪರಾಧ ಸಂಹಿತೆಗಳು ಮತ್ತು ಅಪರಾಧ ನಿಯಂತ್ರಣ ಸಾಧನಗಳು ಪ್ರಾಧಾನ್ಯತೆ ಗಳಿಸುತ್ತವೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಭುತ್ವಗಳು ಕೆಲವು ಘೋರ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಹ ಕಾನೂನು ಕಟ್ಟಳೆಗಳನ್ನು ರೂಪಿಸುವುದುದ ಈ ನಿಟ್ಟಿನಲ್ಲಿ ಸಹಜವಾಗಿ ಕಾಣುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಇದು ಅವಶ್ಯವೂ ಹೌದು. ಪ್ರಾಚೀನ ಸಮಾಜಗಳಲ್ಲಿ ಅಪರಾಧಿಗಳನ್ನು ದೇವರ ಪ್ರತ್ಯೇಕ ಸೃಷ್ಟಿ ಎಂದೇ ಪರಿಗಣಿಸಲಾಗುತ್ತಿತ್ತು. ಹಾಗಾಗಿ ತಮ್ಮ ಜೀವನೋಪಾಯಕ್ಕಾಗಿ ಅಪರಾಧ ಎಸಗುವ ನಿರ್ಗತಿಕರೂ ಸಹ ಶಿಕ್ಷೆಗೊಳಗಾಗುತ್ತಿದ್ದರು. ರಾಜಪ್ರಭುತ್ವದ ಕಾಲಘಟ್ಟದಲ್ಲಿ ಏಕಾಧಿಪತ್ಯವೇ ಪ್ರಧಾನವಾಗಿದ್ದಾಗ, ಅಪರಾಧಿಗಳಿಗೆ ಶಿಕ್ಷೆ ನೀಡುವ ಅಧಿಕಾರ ಒಬ್ಬ ವ್ಯಕ್ತಿಯ ಕೈಯ್ಯಲ್ಲಿರುತ್ತಿತ್ತು. ರಾಜಾ ಪ್ರತ್ಯಕ್ಷ ದೇವತಾ ಎಂದೇ ನಂಬಿ ಬಾಳುತ್ತಿದ್ದ ಜನಸಾಮಾನ್ಯರಿಗೆ ರಾಜನ ನೀತಿ ಸಂಹಿತೆಗಳೇ ವೇದವಾಕ್ಯಗಳಾಗಿದ್ದವು. ಅಪರಾಧಗಳನ್ನು ನಿರ್ಧರಿಸುವ ಹಕ್ಕಿನೊಂದಿಗೇ ಅಪರಾಧಿಗೆ ತಕ್ಕ ಶಿಕ್ಷೆ ವಿಧಿಸುವ ಹಕ್ಕೂ ರಾಜನದ್ದಾಗಿರುತ್ತಿತ್ತು. ಎಷ್ಟೇ ದಯಾಳು, ಜನಾನುರಾಗಿ ರಾಜನೇ ಆದರೂ ಈ ಪ್ರಭುತ್ವದ ಹಕ್ಕನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡೇ ರಾಜ್ಯಭಾರ ಮಾಡುವುದು ಅಂದಿನ ಅನಿವಾರ್ಯತೆಯೂ ಆಗಿತ್ತು. ಈ ಚಾರಿತ್ರಿಕ ಹಿನ್ನೆಲೆಯಲ್ಲೇ ಮರಣದಂಡನೆಯ ಶಿಕ್ಷೆಯನ್ನೂ ಪರಿಗಣಿಸಬೇಕಾಗುತ್ತದೆ. ತಮ್ಮ ರಾಜ್ಯ, ತಮ್ಮ ಆಳ್ವಿಕೆ ಮತ್ತು ತಮ್ಮ ಭೌಗೋಳಿಕ ಒಡೆತನದ ವ್ಯಾಪ್ತಿ ರಾಜರ ಅಧಿಕಾರ ವ್ಯಾಪ್ತಿಯನ್ನೂ ವಿಸ್ತರಿಸುತ್ತಿತ್ತು. ಹಾಗಾಗಿ ತಮ್ಮ ಆಳ್ವಿಕೆಯನ್ನು ಪ್ರತಿರೋಧಿಸುವ ವ್ಯಕ್ತಿ-ಸಂಘಟನೆಗಳು ಸದಾ ಶಿಕ್ಷೆಗೆ ಅರ್ಹರಾಗಿರುತ್ತಿದ್ದರು. ಪ್ರಜಾಪ್ರಭುತ್ವ ಇರಲಿ, ನ್ಯಾಯಾಂಗ-ಶಾಸಕಾಂಗದ ಪರಿಕಲ್ಪನೆಯೂ ಇಲ್ಲದ ಕಾಲಘಟ್ಟದಲ್ಲಿ ರಾಜನ ತೀಮರ್ಾನವೇ ಅಂತಿಮ. ಹಾಗಾಗಿ ತನ್ನ ಎದುರಾಳಿಗಳನ್ನು ಮಟ್ಟ ಹಾಕಲು ರಾಜಮಹಾರಾಜರು, ವಸಾಹತು ಕಾಲದ ಆಳ್ವಿಕರು, ಊಳಿಗಮಾನ್ಯ ದೊರೆಗಳು ಮರಣದಂಡನೆಯನ್ನು ಸ್ವೀಕೃತವೆಂದೇ ಭಾವಿಸಿದ್ದರು. ಜೀವ ನೀಡುವ ಸಾಮಥ್ರ್ಯವಿಲ್ಲದ ಹುಲುಮಾನವನಿಗೆ ಜೀವ ಹರಣ ಮಾಡುವ ಅಧಿಕಾರವೂ ಇರುವುದಿಲ್ಲ ಎಂದು ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಳ್ಳಲು ಮಾನವ ಸಮಾಜಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬರಬೇಕಾಯಿತು. ದುರಾದೃಷ್ಟವಶಾತ್ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವದಾದ್ಯಂತ ಮಾನ್ಯತೆ ಪಡೆದು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿದ್ದರೂ ಮರಣದಂಡನೆ ಎಂಬ ಅಮಾನವೀಯ ಶಿಕ್ಷೆ ಮಾತ್ರ ಇನ್ನೂ ಶಾಸನಗಳಲ್ಲಿ ಉಳಿದುಕೊಂಡಿದೆ. ಅಷ್ಟೇ ಅಲ್ಲ ಪ್ರಜಾತಂತ್ರವನ್ನೇ ಉಸಿರಾಡುವ ಜನರಲ್ಲೂ ಮರಣದಂಡನೆಯ ಬಗ್ಗೆ ಒಲವು ಉಳಿದುಕೊಂಡಿದೆ. ದಿಟ್ಟ ನಿಧರ್ಾರ ಸ್ತುತ್ಯಾರ್ಹ ವಿಶ್ವದ ಯಾವುದೇ ರಾಷ್ಟ್ರಗಳಲ್ಲೂ ಕಾಣದಷ್ಟು ವೈವಿಧ್ಯಮಯ ಜನಪರ ಚಳುವಳಿಗಳನ್ನು ಕಂಡಿರುವ, ಪ್ರಜಾಪ್ರಭುತ್ವವನ್ನು ಪುನರ್ ಸ್ಥಾಪಿಸಲು ದಿಟ್ಟ ಹೋರಾಟಗಳನ್ನು ಕಂಡಿರುವ, ಪ್ರಜಾಪ್ರಭುತ್ವವನ್ನೇ ಉಸಿರೆಂದು ತಿಳಿದು, ತಮ್ಮ ಶತಮಾನಗಳ ಕಾಲದ ಶೋಷಣೆಯನ್ನೂ ಸಹಿಸಿಕೊಂಡು, ಶಾಂತಿಯುತ ಆಂದೋಲನದಲ್ಲೇ ನಂಬಿಕೆ ಇರಿಸಿ ಪ್ರಜಾತಂತ್ರವನ್ನು ಎತ್ತಿಹಿಡಿದಿರುವ ದಲಿತ ಚಳುವಳಿಗಳ ಆಗರವಾದ ಭಾರತದ ರಾಷ್ಟ್ರಪತಿಯೊಬ್ಬರು ಮರಣದಂಡನೆಯ ಶಿಕ್ಷೆ ಎದುರಿಸುತ್ತಿದ್ದ ಖೈದಿಗಳಿಗೆ ಕ್ಷಮಾದಾನ ಮಾಡಿರುವುದು ಎಲ್ಲೆಡೆ ಸ್ವಾಗತಿಸಬೇಕಾದ ವಿದ್ಯಮಾನವಾಗಬೇಕಿತ್ತು. ಆದರೆ ದೇಶದ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ತಮ್ಮ ಅಧಿಕಾರಾವಧಿಯ ಅಂತಿಮ ದಿನಗಳಲ್ಲಿ 35 ಖೈದಿಗಳಿಗೆ ಕ್ಷಮಾದಾನ ನೀಡಿರುವುದು ಮಾಧ್ಯಮಗಳ, ಬುದ್ಧಿಜೀವಿಗಳ, ಪ್ರಜ್ಞಾವಂತರ ಹಾಗೂ ವಿಶೇಷವೆಂದರೆ ಪ್ರಜಾತಂತ್ರವನ್ನೇ ಉಸಿರಾಡುವ ಹಲವು ವ್ಯಕ್ತಿ ಸಂಘಟನೆಗಳ ದೃಷ್ಟಿಯಲ್ಲೂ ಅಕ್ಷಮ್ಯವಾಗಿ ಕಾಣುತ್ತಿದೆ. ಪ್ರತಿಭಾ ಸಿಂಗ್ ಪಾಟೀಲ್ ಅಪರಾಧಿಗಳ ಅಪರಾಧಗಳನ್ನು ಮನ್ನಿಸಿಲ್ಲ, ಅಥವಾ ಖೈದಿಗಳ ದುಷ್ಕೃತ್ಯಗಳನ್ನಾಗಲೀ, ಘೋರ ಅಪರಾಧಗಳನ್ನಾಗಲೀ, ಅಮಾನವೀಯ ಧೋರಣೆಯನ್ನಾಗಲೀ ಸಮಥರ್ಿಸಿಲ್ಲ. ಖೈದಿಗಳನ್ನು ಆರೋಪಮುಕ್ತರನ್ನಾಗಿಯೂ ಮಾಡಿಲ್ಲ. ಎರಡು ಮೂರು ದಶಕಗಳಿಂದ ಮರಣದಂಡನೆ ಶಿಕ್ಷೆಗೊಳಗಾಗಿ ತಮ್ಮ ಬಾಳಿನ ಅಂತಿಮ ಕ್ಷಣಗಳನ್ನು ಎದುರುನೋಡುತ್ತಿರುವ ಅಪರಾಧಿಗಳಿಗೆ ಇನ್ನಷ್ಟು ದಿನ ಉಸಿರಾಡಲು ಅವಕಾಶ ನೀಡಿದ್ದಾರೆ. ತಮ್ಮ ತಪ್ಪುಗಳನ್ನು ಅರಿತು ಸತ್ಪ್ರಜೆಗಳಾಗಲು ವೇದಿಕೆ ಒದಗಿಸಿದ್ದಾರೆ. ಸಾವಿನ ಕುಣಿಕೆಗೆ ತಮ್ಮ ತಲೆಯನ್ನು ಒಡ್ಡುವ ಬದಲು, ಪಾಪಪ್ರಜ್ಞೆಯಿಂದ ತಂತಮ್ಮ ಆತ್ಮಸಾಕ್ಷಿಗೆ ತಲೆಯೊಡ್ಡುವ ಮೂಲಕ ತಮ್ಮ ತಪ್ಪನ್ನು ಅರಿತು ಬಾಳಲು ಅವಕಾಶ ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ ? ಮರಣದಂಡನೆ ಸಲ್ಲದು ಎಂದಾಕ್ಷಣ ಶಿಕ್ಷೆಯೇ ಅಮಾನ್ಯ ಎಂದಾಗುವುದಿಲ್ಲ ಅಲ್ಲವೇ ? ಎಂತಹುದೇ ಘೋರ ಅಪರಾಧವೆಸಗಿದ್ದರೂ, ಎಂತಹ ಕ್ರೂರ ಅಪರಾಧಿಯಾಗಿದ್ದರೂ ಮಾನವೀಯತೆಯ ಒಂದು ಅಂಶ ಎಲ್ಲೋ ಒಂದು ಕಡೆ ಹೃದಯಾಂತರಾಳದಲ್ಲಿ ಅಡಗಿರುತ್ತದೆ. ಅದನ್ನು ಬಡಿದೆಬ್ಬಿಸುವ ಹೊಣೆಗಾರಿಕೆ ಪ್ರಜ್ಞಾವಂತ ಸಮಾಜದ್ದೂ ಆಗಿರುತ್ತದೆ. ಮರಣದಂಡನೆಗೊಳಗಾದ ಖೈದಿಗಳಿಗೆ ಕ್ಷಮಾದಾನ ನೀಡಿದ ಮಾತ್ರಕ್ಕೆ ದೇಶದಲ್ಲಿ ಅಪರಾಧಗಳು ಹೆಚ್ಚುವುದಿಲ್ಲ. ಅಥವಾ ಎಲ್ಲ ಖೈದಿಗಳನ್ನೂ ಸಾಮೂಹಿಕವಾಗಿ, ಸಾರ್ವಜನಿಕವಾಗಿ ಕೊಂದರೂ ಅಪರಾಧಗಳು ತಗ್ಗುವುದಿಲ್ಲ. ಯಾವುದೇ ಕಾನೂನು ಶಾಸ್ತ್ರವಾಗಲಿ ಶಿಕ್ಷೆ ನೀಡಬೇಕಿರುವುದು ಅಪರಾಧಕ್ಕೇ ಹೊರತು ಅಪರಾಧಿಗಲ್ಲ. ಮರಣದಂಡನೆಯನ್ನು ಒಂದು ನಿರ್ಬಂಧಕ ಶಾಸನ ಎಂದು ಪರಿಗಣಿಸುವುದು ಆಳುವ ವರ್ಗಗಳ ಧೋರಣೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಸಾಹತು ಆಳ್ವಿಕರು ಅನುಸರಿಸುತ್ತಿದ್ದ ಇದೇ ಧೋರಣೆಯನ್ನು ಸ್ವತಂತ್ರ ಭಾರತದ ಪ್ರಭುತ್ವವೂ ಅನುಸರಿಸುತ್ತಿದೆ. ಆದರೆ ಮರಣದಂಡನೆಯನ್ನು ರದ್ದುಪಡಿಸಿರುವ 180ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಪರಾಧಗಳ ಸಂಖ್ಯೆಯೇನೂ ಏರುತ್ತಿಲ್ಲ. ಕಣ್ಣಿಗೆ ಕಣ್ಣು ಎಂಬ ಶಿಕ್ಷೆಯ ವಿಧಾನವನ್ನು ಅನುಸರಿಸಿ ಸಾರ್ವಜನಿಕರ ಸಮ್ಮುಖದಲ್ಲೇ ಅಪರಾಧಿಗಳನ್ನು ಕೊಲ್ಲುವ ಹಲವು ರಾಷ್ಟ್ರಗಳಲ್ಲಿ ಅಪರಾಧಿಗಳ ಸಂಖ್ಯೆ ಕಡಿಮೆಯಾಗಿಯೂ ಇಲ್ಲ. ಪ್ರತಿಭಾ ದೇವಿ ಪಾಟೀಲ್ ಅವರ ಈ ದಿಟ್ಟ ನಿಧರ್ಾರ ಎಷ್ಟೇ ಆಕ್ಷೇಪಾರ್ಹವಾಗಿದ್ದರೂ, ಓರ್ವ ಮಹಿಳಾ ರಾಷ್ಟ್ರಪತಿಯಾಗಿ ಅವರು ಕೈಗೊಂಡ ನಿರ್ಣಯ ಸ್ತುತ್ಯಾರ್ಹವಷ್ಟೇ ಅಲ್ಲ ಚರಿತ್ರಾರ್ಹವೂ ಹೌದು. ಅವರ ಸಾಧನೆ, ಸಾಫಲ್ಯ ವೈಫಲ್ಯಗಳೇನೇ ಇರಲಿ ಪ್ರಜಾಪ್ರಭುತ್ವದ ನಿಜವಾದ ಧೋರಣೆಯನ್ನು ಬಿಂಬಿಸುವ ಒಂದು ದಿಟ್ಟ ನಿಧರ್ಾರವನ್ನು ಪ್ರತಿಭಾ ಜೀ ಕೈಗೊಂಡಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ನಿಜಕ್ಕೂ ಬೇರು ಬಿಟ್ಟಿರುವುದೇ ಆದಲ್ಲಿ, ಭಾರತೀಯ ಸಮಾಜ ಪ್ರಬುದ್ಧತೆಯನ್ನು ಗಳಿಸಿ, ಪ್ರಜ್ಞಾವಂತವಾಗಿದೆ ಎಂದಾದಲ್ಲಿ ರಾಷ್ಟ್ರಪತಿಗಳ ಈ ನಿಧರ್ಾರ ಸ್ವಾಗತಾರ್ಹವಾಗಬೇಕು. ಗಲ್ಲಿಗೇರುವ ಪ್ರತಿಯೊಬ್ಬ ಅಪರಾಧಿಯೊಡನೆ ಪ್ರಜಾಪ್ರಭುತ್ವದ ತುಣುಕುಗಳೂ ಮರೆಯಾಗುತ್ತಿರುತ್ತವೆ ಎಂಬ ಸತ್ಯವನ್ನು ಮರೆಯಬಾರದು.]]>

‍ಲೇಖಕರು G

12 July, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading