ಭ್ರಷ್ಟತೆಯಲ್ಲಿ ಏಕತೆ ಆಳ್ವಿಕರ ಹೊಸ ಮಂತ್ರ
ಬ್ರಿಟೀಷ್ ಸಾಮ್ರಾಜ್ಯಶಾಹಿ ಹಿಡಿತದಿಂದ ಪಾರಾಗಿ ಒಂದು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡ ಭಾರತಕ್ಕೆ ಒಂದು ಹೊಸ ಕಾಯಕಲ್ಪ ಒದಗಿಸಿದ ಮಹನೀಯರು ಭಾರತೀಯ ಸಮಾಜದಲ್ಲಿ ಕಂಡಿದ್ದು ಅಖಂಡತೆಯಲ್ಲಿ ಏಕತೆ. ಈ ಮಂತ್ರವನ್ನು ಜಪಿಸುತ್ತಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಗಾಂಧಿ, ನೆಹರೂ ಮುಂತಾದವರು ಭಾರತದ ಅಖಂಡತೆಯನ್ನು ಕಾಪಾಡಿಕೊಳ್ಳಲು ಏಕತೆಯೇ ಅಸ್ತ್ರ ಎಂದು ಭಾವಿಸಿದ್ದರು. ಈ ನಿಟ್ಟಿನಲ್ಲಿ ಭಾರತೀಯ ಪ್ರಜೆಗಳೂ ಮಹಾನ್ ನಾಯಕರ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ ಎಂದೇ ಹೇಳಬಹುದು. ಆದರೆ ನಮ್ಮನ್ನಾಳುವ ವಸಾಹತು ಶಾಹಿಯ ಆಧುನಿಕ ರೂಪದ, ನವ ಉದಾರವಾದಿ ಪೋಷಕ ರಾಜಕಾರಣಿಗಳು ಸಾಂವಿಧಾನಿಕವಾಗಿ ಜನಪ್ರತಿನಿಧಿಗಳೇ ಆದರೂ ಅವರು ಪ್ರತಿನಿಧಿಸುವುದು ಜನರನ್ನಲ್ಲ ಧನವನ್ನು. ಈ ಧನಪ್ರತಿನಿಧಿಗಳೂ ಸಹ ಗಾಂಧೀ ಪ್ರಣೀತ ಅಖಂಡತೆಯಲ್ಲಿ ಏಕತೆಯ ಮಂತ್ರವನ್ನು ಜಪಿಸುತ್ತಲೇ ಅಧಿಕಾರದ ಗದ್ದುಗೆ ಏರುತ್ತಾರೆ. ಆದರೆ ಈ ಅಖಂಡ ಭಾರತದಲ್ಲಿ ಸಾರ್ವಭೌಮ ಪ್ರಜೆಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುವ ಜನಸಾಮಾನ್ಯನಿಗೆ ಸ್ಥಳಾವಕಾಶವಿರುವುದಿಲ್ಲ. ಇಲ್ಲಿ ಏನಿದ್ದರೂ ಕಾಪರ್ೋರೇಟ್ ಉದ್ಯಮಿಗಳದ್ದೇ ಕಾರುಬಾರು. ಹಾಗಾಗಿ ಅಖಂಡತೆಯಲ್ಲಿ ಏಕತೆಯ ಬದಲು ಆಳುವ ವರ್ಗಗಳು ಭ್ರಷ್ಟತೆಯಲ್ಲಿ ಏಕತೆ ಎಂಬ ಹೊಸ ಮಂತ್ರವನ್ನು ಜಪಿಸಲಾರಂಭಿಸಿದ್ದಾರೆ.
ಇನ್ನೇನು ಹೇಳಲಾದೀತು ? 2ಜಿ ಹಗರಣದಲ್ಲಿ 175000 ಕೋಟಿ ಮುಳುವಾಯಿತು. ಕೋಲ್ಗೇಟ್ ಹಗರಣದಲ್ಲಿ ಇನ್ನೂ ಹೆಚ್ಚು ಹಣ ಪೋಲಾಯಿತು. ಆದರ್ಶ ಹಗರಣದಲ್ಲಿ ದೇಶದ ಗಡಿ ಕಾಯುವ ಸೈನಿಕರ ಸ್ವತ್ತನ್ನು ಕಸಿದುಕೊಳ್ಳಲಾಯಿತು. ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡೆಗಳಲ್ಲು ಹಣ ನುಂಗಿ ನೀರು ಕುಡಿದಿದ್ದಾಯಿತು. ಈಗ ಒಬ್ಬೊಬ್ಬರಾಗಿ ರಾಜಕೀಯ ನಾಯಕರುಗಳು ತಮ್ಮ ಭ್ರಷ್ಟಾವತಾರದ ವಿರಾಟ್ ಸ್ವರೂಪವನ್ನು ಹೊರಗೆಡವುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಭಾವಿತ ರಾಜಕಾರಣಿ ಎಂದೇ ಗುರುತಿಸಲ್ಪಟ್ಟಿದ್ದ ಕೇಂದ್ರ ಕಾನೂನು ಸಚಿವ ಸ್ವತಃ ಕಾನೂನು ಉಲ್ಲಂಘನೆ ಮಾಡಿದ್ದು 71 ಲಕ್ಷ ರೂಗಳ ಅಲ್ಪ ಮೊತ್ತದ ಅಕ್ರಮದ ಆರೋಪ ಎದುರಿಸುತ್ತಿದ್ದಾರೆ. ಮತ್ತೊಬ್ಬ ಸಂಸದರ ಪ್ರಕಾರ ಇದು ಜುಜುಬಿ ಹಣ. ಹಾಗಾಗಿ ಮಹಾಪರಾಧವೇನಲ್ಲ. ಸೊನ್ನೆಗಳು ಹೆಚ್ಚಾದರೆ ಮಾತ್ರ ಹಗರಣ ಇಲ್ಲವಾದರೆ ಅದು ಆಡಳಿತ ಯಂತ್ರದ ಒಂದು ಭಾಗವಷ್ಟೆ. ಇನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಅವರ ಅಳಿಯ ರಾಬಟರ್್ ವಾದ್ರಾ ಸಕರ್ಾರದ ಮೇಲೆ ತಮ್ಮ ಪ್ರಭಾವವನ್ನು ಬಳಸಿಕೊಂಡು ಕಾಪರ್ೋರೇಟ್ ಉದ್ಯಮಿಗಳಿಗೆ ನೆರವಾಗಿ ತಾವೂ ನೆರವು ಪಡೆಯುವ ದಂಧೆಯಲ್ಲಿದ್ದಾರೆ. ಸೋನಿಯಾ ಅಳಿಯ ಎಂದ ಮಾತ್ರಕ್ಕೇ ಡಿಎಲ್ಎಫ್ ಸಂಸ್ಥೆ ಈ ಮಹಾಶಯರಿಗೆ ಸಕಲ ರೀತಿಯ ಸೌಲಭ್ಯಗಳನ್ನೂ ನೀಡುತ್ತದೆ. 65 ಕೋಟಿ ಸಾಲ ಒದಗಿಸುತ್ತದೆ. ತಮ್ಮದೇ ಆಸ್ತಿಯನ್ನು ತಾವೇ ಖರೀದಿಸಲು ಅವಕಾಶ ನೀಡುತ್ತದೆ. ಪ್ರಜಾತಂತ್ರವಲ್ಲವೇ (?) ತಮ್ಮ ಮೂಲಭೂತ ಹಕ್ಕುಗಳನ್ನು (?) ಚಲಾಯಿಸಲು ರಾಬಟರ್್ ವಾದ್ರಾ ಸಂಪೂರ್ಣ ಸ್ವತಂತ್ರರು.
ಭ್ರಷ್ಟಾಚಾರದ ವಿರುದ್ಧ ಭಾರತ (ಐಎಸಿ) ಸಂಘಟನೆಯ ಅರವಿಂದ ಕೇಜ್ರಿವಾಲ್ ಇಂತಹ ಹೈ ಪ್ರೊಫೈಲ್ ಭ್ರಷ್ಟಾಚಾರದ ಹಗರಣಗಳನ್ನು ಒಂದೊಂದಾಗಿ ಸಾರ್ವಜನಿಕರ ಮುಂದಿರಿಸುತ್ತಿದ್ದಾರೆ. ಕೇಜ್ರಿವಾಲ್ ಅವರ ಆಂದೋಲನದ ಲಾಭ ಪಡೆಯಲು ಹವಣಿಸುತ್ತಾ ಯುಪಿಎ ಸಕರ್ಾರದ ರಾಜೀನಾಮೆ ಕೇಳುತ್ತಿದ್ದ ಬಿಜೆಪಿ ಈಗ ಸ್ವತಃ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಬಿಜೆಪಿ ಅಧ್ಯಕ್ಷ ಮತ್ತು 2014ರ ಚುನಾವಣೆಯ ಪ್ರಧಾನಿ ಪಟ್ಟದ ಆಕಾಂಕ್ಷಿ ನಿತಿನ್ ಗಡ್ಕರಿ ಆತ್ಮಹತ್ಯೆ ಪೀಡಿತ ವಿದರ್ಭದಲ್ಲಿ ರೈತರಿಂದ ವಶಪಡಿಸಿಕೊಳ್ಳಲಾದ ಭೂಮಿಯನ್ನು ಮಹಾರಾಷ್ಟ್ರ ಸಕರ್ಾರದಿಂದ ಬಳುವಳಿಯಾಗಿ ಪಡೆದಿರುವ ಆರೋಪ ಎದುರಿಸುತ್ತಿದ್ದಾರೆ. 2014ರ ಚುನಾವಣೆಗಳಲ್ಲಿ ಭ್ರಷ್ಟಾಚಾರವನ್ನೇ ಪ್ರಧಾನ ಪ್ರಚಾರ ವಿಷಯವಾಗಿ ಬಳಸುವ ಆಲೋಚನೆಯಲ್ಲಿದ್ದ ಬಿಜೆಪಿ ಈಗ ತನ್ನ ಅಧ್ಯಕ್ಷರ ಸಮರ್ಥನೆಯಲ್ಲಿ ತೊಡಗಿದೆ. ಅರವಿಂದ ಕೇಜ್ರಿವಾಲ್ ಮಾಡಿರುವ ಆರೋಪಗಳ ಸತ್ಯಾಸತ್ಯತೆಗಳು ತನಿಖೆಯ ನಂತರವೇ ತಿಳಿಯುತ್ತದೆ. ಈ ಆರೋಪಗಳು ಸುಳ್ಳಾಗಿರಲಿಕ್ಕೂ ಸಾಧ್ಯ. ಅಥವಾ ಸೂಕ್ತ ವಿಚಾರಣೆ ತನಿಖೆಯ ನಂತರ ಸಾಕ್ಷ್ಯಾಧಾರಗಳಿಲ್ಲದೆ (?) ಕಸದ ಬುಟ್ಟಿ ಸೇರಿದರೂ ಹೆಚ್ಚೇನಿಲ್ಲ. ತಪ್ಪು ಒಪ್ಪುಗಳನ್ನು ನಿರ್ಧರಿಸುವ ಹೊಣೆಗಾರಿಕೆಯನ್ನು ನ್ಯಾಯಾಂಗಕ್ಕೆ ಬಿಟ್ಟುಬಿಡೋಣ. ಆದರೆ ಜನತಾ ನ್ಯಾಯಾಲಯದಲ್ಲಿ ಖುಷರ್ಿದ್, ಗಡ್ಕರಿ, ವಾದ್ರಾ, ರಾಜಾ, ಕನಿಮೊಳಿ ಇವರೆಲ್ಲರೂ ಅಪರಾಧಿ ಸ್ಥಾನದಲ್ಲೇ ನಿಲ್ಲುತ್ತಾರೆ. ಭ್ರಷ್ಟತೆಯಲ್ಲಿ ಏಕತೆಗೆ ಸ್ಪಷ್ಟ ಸಂಕೇತವಾಗಿ.
ಗಡ್ಕರಿಯ ಭೂ ದಾ(ಸ್ವಾ)ಹ
ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಮಹಾರಾಷ್ಟ್ರ ಸಕರ್ಾರದಿಂದ ಅಕ್ರಮವಾಗಿ, ಕಾನೂನುಬಾಹಿರವಾಗಿ ನೂರು ಎಕರೆ ಭೂಮಿಯನ್ನು ಬಳುವಳಿಯಾಗಿ ಪಡೆದಿದ್ದಾರೆ ಎಂದು ಭ್ರಷ್ಟಾಚಾರದ ವಿರುದ್ಧ ಭಾರತ ಸಂಘಟನೆಯ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. ಮಹಾರಾಷ್ಟ್ರ ಸಕರ್ಾರದ ನೀರಾವರಿ ಯೋಜನೆಗಳಲ್ಲಿ ನಡೆದಿರಬಹುದಾದ ಅಕ್ರಮಗಳಲ್ಲಿ ನಿತಿನ್ ಗಡ್ಕರಿಯೂ ಭಾಗಿಯಾಗಿದ್ದು ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸಕರ್ಾರದಿಂದ ಸೌಲಭ್ಯಗಳನ್ನೂ ಪಡೆದಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದು, ಬೃಹತ್ ಉದ್ದಿಮೆಯನ್ನು ಹೊಂದಿರುವ ಗಡ್ಕರಿ ವಿದರ್ಭ ಪ್ರಾಂತ್ಯದ ರೈತರ ಭೂಮಿಯನ್ನು ಕಬಳಿಸಿರುವ ಗುರುತರ ಆರೋಪ ಹೊರಿಸಲಾಗಿದೆ. ಆತ್ಮಹತ್ಯೆಗೆ ಶರಣಾಗುತ್ತಿರುವ ವಿದರ್ಭ ರೈತರ ನೆರವಿಗೆ ಧಾವಿಸದೆ ಅವರಿಗೆ ಸೇರಬೇಕಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಾರಾಷ್ಟ್ರ ಸಕರ್ಾರದ ನಿರಾವರಿ ಇಲಾಖೆ ನಾಗಪುರದಿಂದ 45 ಕಿಲೋಮೀಟರ್ ದೂರದಲ್ಲಿರುವ ಉಮ್ರೇದ್ನಲ್ಲಿ ಅಣೆಕಟ್ಟು ನಿಮರ್ಾಣಕ್ಕಾಗಿ ರೈತರಿಂದ ನೂರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ. ಅಣೆಕಟ್ಟು ಪೂರ್ಣವಾದ ನಂತರ ನೂರು ಎಕರೆ ಭೂಮಿ ಹೆಚ್ಚುವರಿಯಾಗಿ ಉಳಿದಿದ್ದು ಅಂದಿನ ನೀರಾವರಿ ಸಚಿವ, ಕೇಂದ್ರ ಕೃಷಿ ಸಚಿವರ ಅಳಿಯ ಅಜಿತ್ ಪವಾರ್ ಹೆಚ್ಚುವರಿ ಭೂಮಿಯನ್ನು ರೈತರಿಗೆ ಹಿಂದಿರುಗಿಸದೆ 2005ರ ಜೂನ್ ತಿಂಗಳಲ್ಲಿ ಒಂದು ಕಂಪನಿಗೆ ಮತ್ತು ನಿತಿನ್ ಗಡ್ಕರಿಯವರಿಗೆ ಮಾರಾಟ ಮಾಡಿದ್ದಾರೆ. ನಂತರ ಆ ಕಂಪನಿಯೂ ಭೂಮಿಯನ್ನು ಗಡ್ಕರಿಯವರಿಗೇ ಮಾರಾಟ ಮಾಡಿದೆ. ಈ ಅಕ್ರಮ ವ್ಯವಹಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದಾಗ ಗಡ್ಕರಿ ಬೆಂಬಲಿಗರು ಬೆದರಿಕೆ ಒಡ್ಡಿ ಪ್ರತಿಭಟನೆಯನ್ನು ಅಡಗಿಸಿದ್ದಾರೆ. ಗಡ್ಕರಿ ಇಂದಿಗೂ ಇದೇ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವುದೇ ಅಲ್ಲದೆ, ಅಣೆಕಟ್ಟಿನ ನೀರನ್ನು ನೀರಾವರಿಗೆ ಉಪಯೋಗಿಸದೆ ಗಡ್ಕರಿ ಮತ್ತಿತರ ಉದ್ಯಮಿಗಳ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಗಡ್ಕರಿಯವರನ್ನೂ ಸೇರಿದಂತೆ ಬಹುತೇಕ ಕಂಪನಿಗಳು ವಿದ್ಯುತ್ ಉತ್ಪಾದನೆ ಮತ್ತು ಸಕ್ಕರೆ ಕಾಖರ್ಾನೆಯ ಘಟಕಗಳಾಗಿವೆ. ಈ ಎಲ್ಲಾ ಅಕ್ರಮಗಳು ಅಜಿತ್ ಪವಾರ್ ಅವರ ಕೃಪಾಕಟಾಕ್ಷದಲ್ಲೇ ನಡೆದಿದ್ದು, ಅಜಿತ್ ಪವಾರ್ ಈಗಾಗಲೇ 70 ಸಾವಿರ ಕೋಟಿ ರೂಗಳ ನೀರಾವರಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸಿ ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಮಹಾರಾಷ್ಟ್ರ ಸಕರ್ಾರ ರಾಜ್ಯದಲ್ಲಿ 71 ಅಣೆಕಟ್ಟುಗಳನ್ನು ಮತ್ತು 71 ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು ಹಾಗೊಮ್ಮೆ ಈ ಯೋಜನೆ ಸಫಲವಾದರೆ ರಾಜ್ಯದ ರೈತರಿಗೆ ನೀರೇ ಇಲ್ಲವಾಗುತ್ತದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲೇ ಕೇಂದ್ರ ನೀರಾವರಿ ಸಂಪನ್ಮೂಲ ಸಚಿವರಿಗೆ ಪತ್ರ ಬರೆದಿರುವ ಗಡ್ಕರಿ ಗುತ್ತಿಗೆದಾರರಿಗೆ ಬಾಕಿ ಇರುವ 400 ಕೋಟಿ ರೂಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಿರುವುದೂ ವಿವಾದಕ್ಕೀಡಾಗಿದೆ. ಮಹಾರಾಷ್ಟ್ರದ ಇತರ ಪ್ರಮುಖ ರಾಜಕಾರಣಿಗಳಂತೆಯೇ ಸಕ್ಕರೆ ದೊರೆ ಎನಿಸಿಕೊಂಡಿರುವ ಪ್ರಧಾನಿ ಪಟ್ಟದ ಆಕಾಂಕ್ಷಿ ಗಡ್ಕರಿ ವಾಣಿಜ್ಯೋದ್ಯಮಿಯೋ, ರಾಜಕಾರಣಿಯೋ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಚಚರ್ೆಗೊಳಗಾಗಿದೆ. ದಿನನಿತ್ಯ ಆತ್ಮಹತ್ಯೆಗೆ ಶರಣಾಗುತ್ತಿರುವ ವಿದರ್ಭ ರೈತರ ಜೀವಕ್ಕೂ ಬೆಲೆ ನೀಡದೆ ತಮ್ಮ ಔದ್ಯಮಿಕ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುತ್ತಿರುವ ಬಿಜೆಪಿ ಅಧ್ಯಕ್ಷ ಎನ್ಸಿಪಿ ಪಕ್ಷದೊಡನೆ ಹೊಂದಾಣಿಕೆ ಹೊಂದಿರುವುದು ರಾಜಕೀಯ ನೈತಿಕತೆಯ ಪ್ರಶ್ನೆಯಾಗಿದೆ. ಗಡ್ಕರಿಯ ಅಕ್ರಮ ವ್ಯವಹಾರಗಳ ಬಗ್ಗೆ ತಮ್ಮ ಬಳಿಯೂ ಮಾಹಿತಿ ಇದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ರಾಂಜೇತ್ಮಲಾನಿ ಹೇಳಿರುವುದು ವಿವಾದಕ್ಕೆ ಮತ್ತಷ್ಟು ರಂಗು ನೀಡಿದೆ. ತಾವೊಬ್ಬ ಸಮಾಜಸೇವಾ ಉದ್ಯಮಿ ಎಂದು ಹೇಳಿಕೊಳ್ಳುವ ಗಡ್ಕರಿ ರೈತರ ಉದ್ಧಾರಕ್ಕಾಗಿ ತಾವು ಬೃಹತ್ ಔದ್ಯಮಿಕ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು ಕೇವಲ, ಕೇವಲ 400 ಕೋಟಿ ಸಾಲ ಮಾಡಿರುವುದಾಗಿ ಹೇಳಿದ್ದಾರೆ. ಪಾಪ ಎಂತಹ ಜನಪರ ಕಾಳಜಿ. ಗಡ್ಕರಿ ಜನರ ಹಿತಾಸಕ್ತಿಗಾಗಿ 70 ಕೋಟಿ ನಷ್ಟವನ್ನೂ ಅನುಭವಿಸಿದ್ದಾರಂತೆ ? ನಂಬೋಣವೇ ?
ಮಹಾರಾಷ್ಟ್ರದಲ್ಲಿ ಬಹುಪಾಲು ರಾಜಕಾರಣಿಗಳು ಗಡ್ಕರಿ ಅವರಂತೆಯೇ ಸಮಾಜಸೇವಾ ಉದ್ಯಮಿಗಳು ಎಂದು ಹೇಳುವ ಮೂಲಕ ಶರದ್ ಪವಾರ್ ಹೊಸ ವ್ಯಾಖ್ಯಾನ ಆರಂಭಿಸಿದ್ದಾರೆ. ಛತ್ತಿಸ್ಘಡದಲ್ಲಿ ಸಾವಿರಾರು ಎಕರೆ ಅರಣ್ಯವನ್ನು ಗಣಿಗಾರಿಕೆಗಾಗಿ ಕಬಳಿಸುವ ಮಿಟ್ಟಲ್, ಒರಿಸ್ಸಾದ ಅರಣ್ಯಗಳ ಮೇಲೆ ಕಬ್ಜಾ ಮಾಡುವ ವೇದಾಂತ, ಮುಂಬೈನ ಬಳಿ 30 ಸಾವಿರ ಎಕರೆ ಕಬಳಿಸುವ ರಿಲೈಯನ್ಸ್, ಕನರ್ಾಟಕದಲ್ಲಿ ಕೃಷಿ ಭೂಮಿಯ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೋಸ್ಕೋ, ಸದ್ಯದಲ್ಲಿ ಪಾಪರ್ ಆಗಿದ್ದರೂ ತಮ್ಮ ಮದ್ಯ, ಮದಿರೆ, ಕುದುರೆ ಮತ್ತು ವಿಮಾನಗಳ ಮೂಲಕ ಸಮಾಜಸೇವೆ ಸಲ್ಲಿಸುತ್ತಿರುವ ಮಲ್ಯ ಬಹುಶಃ ಇವರೆಲ್ಲರೂ ನೊಬಲ್ ಪ್ರಶಸ್ತಿಗೆ ಅರ್ಹವಾಗಬಲ್ಲ ಸಮಾಜಸೇವಾ ಉದ್ಯಮಿಗಳೇ ಆಗಿರಬಹುದು. ಹಾಗಾಗಿಯೇ ಇಂತಹ ಮಹನೀಯರನ್ನು, ಇವರ ಔದ್ಯಮಿಕ ಹಿತಾಸಕ್ತಿಗಳನ್ನು ಕಾಪಾಡಲು ಸಕರ್ಾರ ಶ್ರಮಿಸುತ್ತದೆ. ಪಕ್ಷ ಬೇಧಗಳನ್ನು ಮರೆತು ರಾಜಕಾರಣಿಗಳು ಪರಸ್ಪರ ಬೆಂಬಲಕ್ಕೆ ನಿಲ್ಲುತ್ತಾರೆ.
ಕೇಜ್ರಿವಾಲ್ ಅವರ ರಾಜಕೀಯ ಉದ್ದೇಶಗಳು ಏನೇ ಇರಲಿ, ಸಲ್ಮಾನ್ ಖುಷರ್ಿದ್, ರಾಬಟರ್್ ವಾದ್ರಾ ಮತ್ತು ನಿತಿನ್ ಗಡ್ಕರಿ ವಿರುದ್ಧ ಮಾಡಲಾಗಿರುವ ಗಂಭೀರ ಆರೋಪಗಳು ಭಾರತದ ರಾಜಕಾರಣದಲ್ಲಿನ ಪಕ್ಷಾತೀತ ಭ್ರಷ್ಟತೆ ಮತ್ತು ಜಾತ್ಯಾತೀತ ಅನೈತಿಕತೆಯನ್ನು ಬಯಲು ಮಾಡಿರುವುದಂತೂ ಸತ್ಯ. ರಾಬಟರ್್ ವಾದ್ರಾ ವಿವಾದದಲ್ಲಿ, ವ್ಯಕ್ತಿಗತ ವಿಚಾರ ಎಂದು ನೆಪ ಹೇಳಿ ಸ್ಪಷ್ಟ ನಿಲುವು ತಾಳದ ಬಿಜೆಪಿ ಈ ವಿದ್ಯಮಾನದ ಒಂದು ಆಯಾಮವನ್ನು ಪ್ರತಿನಿಧಿಸಿದರೆ, ಗಡ್ಕರಿಯನ್ನು ಸಮಥರ್ಿಸುವ ಮೂಲಕ ಶರದ್ ಪವಾರ್ ಮತ್ತು ಕೆಲವು ಕಾಂಗ್ರೆಸ್ ನಾಯಕರು ಮತ್ತೊಂದು ಆಯಾಮವನ್ನು ಪ್ರತಿನಿಧಿಸುತ್ತಾರೆ. ಈ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಗಡಿಗರೂ ಕಲಿಯಬೇಕಾದ ಪಾಠಗಳು ಬಹಳಷ್ಟಿವೆ ಎನಿಸುತ್ತದೆ. ಭಾರತದ ರಾಜಕೀಯ ಜೀವನದಲ್ಲಿ ವ್ಯವಸ್ಥಿತವಾಗಿ, ಸಾಂಸ್ಥಿಕ ರೂಪದಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರವನ್ನು ವೈಯ್ಯಕ್ತಿಕ ನೆಲೆಗಟ್ಟಿನಲ್ಲಿ ಅಥವಾ ವ್ಯಕ್ತಿಗತ ನೆಲೆಯಲ್ಲಿ ಅಥವಾ ಪಕ್ಷ ರಾಜಕಾರಣದ ಮೂಲಕ ತೊಡೆದುಹಾಕಲಾಗುವುದಿಲ್ಲ ಎಂಬ ಸತ್ಯವನ್ನು ಕೇಜ್ರಿವಾಲ್ ತಂಡ ಗ್ರಹಿಸಬೇಕಾಗಿದೆ. ನವ ಉದಾರವಾದ ಸೃಷ್ಟಿಸಿರುವ ಭೂ ದಾಹ ಮತ್ತು ಕಾಪರ್ೋರೇಟ್ ಔದ್ಯಮಿಕ ಹಿತಾಸಕ್ತಿಗಳು ದೇಶದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿವೆ. ಈ ನಿಟ್ಟಿನಲ್ಲಿ ಭ್ರಷ್ಟಾಚಾರ ಎನ್ನುವುದು ಒಂದು ಸುವ್ಯವಸ್ಥಿತ ಅಸ್ತ್ರವಷ್ಟೆ.






0 Comments