ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾವು ಸಾಯುತ್ತಿಲ್ಲವಷ್ಟೆ…

-ಕಳಕೇಶ್‌ ಎಸ್‌

ನಮ್ಮಿಚ್ಛೆಯ ಬದುಕು

1
ಸಂಕಷ್ಟದಲ್ಲಿ
ಜೊತೆ ನಿಲ್ಲದ ಬಗ್ಗೆ
ಹಾಗೆಲ್ಲ ಹಲುಬಬೇಡ,
ಹೆಗಲು ಕೊಡಲು
ತುದಿಗಾಲ ಮೇಲೆ ನಿಂತಿದೆ ದೈವ,
ನಾವು ಸಾಯುತ್ತಿಲ್ಲವಷ್ಟೆ…..

2
ನಿನ್ನೆದೆಯ
ಗಾಯಗಳ ಬಗ್ಗೆ
ಎಲ್ಲೂ ತುಟಿ ಬಿಚ್ಚಬೇಡ,
ಉಪ್ಪು ಹಿಡಿದು ನಿಂತವರ ನಡುವೆ,
ನಾವಿನ್ನೂ ಬದುಕುವುದಿದೆ
ಸಾಯುವತನಕ…

3
ನಮ್ಮ ಸಾಂಗತ್ಯ
ಸಹಿಸದ ಯಾರಾದರೂ ನಮ್ಮನ್ನು
ಕೊಂದಾರೆಂಬ ಭಯಬೇಡ
ಅವರು
ಕೊಲ್ಲದೇ ಹೋದರೂ
ನಾವು ಸಾಯಲೇಬೇಕಲ್ಲ!
ಇಂದಿಲ್ಲದಿದ್ದರೂ ನಾಳೆ..

4
ನಮ್ಮ ಪ್ರೇಮ
ಅವರ ಕುಲಗೆಡಿಸಿತೆಂದು
ನನ್ನೂರ ದೈವ,
ನಿನ್ನೂರ ಜಮಾಅತ್‌
ಬಹಿಷ್ಕರಿಸಿದ್ದಕ್ಕೆ
ಎಳ್ಳಷ್ಟೂ ನೋಯಬೇಡ,
ಬುದ್ಧನ ಕಾರುಣ್ಯದ
ಬಯಲ ಬಾಹುಗಳು ಸದಾ ನಮ್ಮ ಪಾಲಿಗಿವೆ..

5
ಇರುವಷ್ಟು ಗಳಿಗೆ
ನಮ್ಮಿಚ್ಛೆಯ ಬದುಕ ಬದುಕೋಣ…
ರೂಢಿಗಳ ಮುರಿದು
ಪತ್ವಗಳ ಹರಿದು

‍ಲೇಖಕರು Admin

14 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading