’ನಾವು ಕನ್ನಡಿಗರು’ ಹೀಗೊಂದು ರಾಜ್ಯೋತ್ಸವ ಸಂಭ್ರಮ

ಮಧು ಆರ್ಯ ಕೆನ್ ಕಲಾಶಾಲೆ ಮತ್ತು ಚಿತ್ರ ಕಲಾ ಪರಿಷತ್ತಿನಲ್ಲಿ ಕಲೆಯನ್ನು ಕಲಿತವರು. ಅವರು ಪ್ರೀತಿಯಿಂದ ಕಟ್ಟಿದ ಸಂಸ್ಥೆ ’ಕಲರ್ ಹ್ಯಾಂಡ್ಸ್’.

11032481_10206157710395610_7821204739226965241_nಮದು ಆರ್ಯ ಅವರಿಗೆ ಕಲೆಯ ಬಗ್ಗೆ ಪ್ರೀತಿ, ಕನ್ನಡದ ಬಗ್ಗೆ ಪ್ರೇಮ.

11539603_911410145593678_5429536848250444451_n

 

ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ಒಂದರ ಸಂಭ್ರಮವಾಗಬಾರದು, ಇಡೀ ತಿಂಗಳೂ ಆ ಸಂಭ್ರಮವನ್ನು ಆಚರಿಸಬೇಕೆಂದು ಅವರು ಕೈಗೆತ್ತಿಕೊಂಡ ಪ್ರಯತ್ನ ’ನಾವು ಕನ್ನಡಿಗರು’. ಅವರು ರಾಜ್ಯೋತ್ಸವ ಆಚರಿಸುತ್ತಿರುವುದು ಹೀಗೆ :

ರಾಜ್ಯೋತ್ಸವವೆಂದರೆ ನಮ್ಮ ಭಾಷೆಯನ್ನು ನೆನೆಯುವುದಲ್ಲ,ಭಾಷೆಯನ್ನು ಉಳಿಸುವ ಜವಾಬ್ದಾರಿಯನ್ನು ಸಾರಿ ಹೇಳುವ ದಿನವಾಗಿ, ಅದಕ್ಕೆ ನಾವು ಬದ್ಧರಾಗಿರಬೇಕು. ಉಸಿರಲ್ಲಿ ಕನ್ನಡವಿದ್ದರೂ ಬದುಕಲು ಅನ್ಯ ಭಾಷೆಗಳಲ್ಲಿ ಸೆರೆ ಸಿಕ್ಕಿರುವ ಜೀವನ ನಮ್ಮದಾಗಿದೆ. ಸಹೃದಯಿಗಳಾದ ನಾವು ಅನ್ಯ ಭಾಷೆಯವರಿಗೆ ಕಷ್ಟವಾಗದಂತೆ ಅವರದೇ ಭಾಷೆಯಲ್ಲಿ ಮಾತನಾಡುತ್ತೇವೆ. ಇದು ಬದಲಾಗಬೇಕಿದೆ.

ಈ ಬದಲಾವಣೆಯ ಅವಶ್ಯಕತೆಯ ತೀವ್ರತೆಯನ್ನು ಸಾರಲು ನಮ್ಮ ಈ ಪುಟ್ಟ ಪ್ರಯತ್ನ… ಏಕೆಂದರೆ

“ನಾವು ಕನ್ನಡಿಗರು”…

ನಮ್ಮದೇ ನೆಲ, ನಮ್ಮದೇ ಭಾಷೆ, ನಮ್ಮದೇ ಸಂಸ್ಕೃತಿ – ಇವೆಲ್ಲವು ಕನ್ನಡಾಂಬೆಯ ಬಳುವಳಿ.

ಅಸಂಖ್ಯಾತ ಕನ್ನಡಿಗರು-ಅಲ್ಲಲ್ಲಿ ಮುತ್ತು ಮಾಣಿಕ್ಯದಂತೆ ಹೊಳೆವ ಅದೆಷ್ಟೋ ಸಾಧಕರು.
ಕಲೆ, ಸಾಹಿತ್ಯ, ಕ್ರೀಡೆ,ಸಿನಿಮಾ,ತಂತ್ರಙ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕನ್ನಡತನದ ಕಂಪು.

ನಮ್ಮ ನಾಡು ನುಡಿಯ ಶ್ರೀಮಂತಿಕೆಯನ್ನು ಇನ್ನಷ್ಟು ಹೆಚ್ಚಿಸಿರುವ ಕೆಲವು ಗಣ್ಯರ ಪರಿಚಯವನ್ನು ನಿಮ್ಮ ಮಂದಿಡುವ ಪ್ರಯತ್ನ ನಮ್ಮದು.

12191717_982039368530755_4828838046049803524_n

ಜೀವನ ಎಂದರೆ, ಸುತ್ತ ಸಾವಿರಾರು ಬಣ್ಣಗಳ ನಿತ್ಯ ಪರಿಚಯ.ನಾವು ನಮ್ಮ ಜೀವನಕ್ಕಾಗಿ ಆಯ್ದುಕೊಂಡದ್ದು ಬಣ್ಣದ ಕಲೆಯನ್ನೇ…ಪೆನ್ ಹಿಡಿದರು ಬಣ್ಣ ಹಚ್ಚುವಂತೆಯೇ ಗೀಚುತ್ತೇವೆ. ನಮ್ಮ
ಕಲ್ಪನಾ ಶಕ್ತಿಗೆ ಸವಾಲಿಟ್ಟು, ಬಣ್ಣದ ಪುಟವನ್ನು ಬುದ್ದಿಗೂ-ಮನಸ್ಸಿಗೂ ತಿಳಿಸಿ, ಕಣ್ಣಿಗೆ ತುಂಬಿಕೊಂಡು, ಕುಂಚಕ್ಕೆ ಕೆಲಸ ಕೊಟ್ಟು ನಿಮ್ಮ ಮುಂದಿಡುವುದೆ ನಮ್ಮ “ಕಲರ್ ‍ಹ್ಯಾಂಡ್ಸ್”.

ಕಲರ್‍ ಹ್ಯಾಂಡ್ಸ್ ನ “ನಾವು ಕನ್ನಡಿಗರು” ಶೀರ್ಷಿಕೆ ಅಡಿಯಲ್ಲಿ ಕರ್ನಾಟಕದ ವಿವಿಧ ಕ್ರಿಯಾಶೀಲ ರಂಗಗಳಲ್ಲಿ ತೊಡಗಿಸಿಕೊಂಡ ಗಣ್ಯರ ಮೂಲಕ ಕನ್ನಡ ನಾಡಿನ ಸಂಸ್ಕೃತಿಯನ್ನು ಅನಾವರಣಗೊಳಿಸುವ ವಿಭಿನ್ನ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಹಾಗು ಬೆಂಬಲ ಕೋರುವ..
ನಾವೆಲ್ಲರೂ ಒಂದೆ….
“ನಾವು ಕನ್ನಡಿಗರು….”

‍ಲೇಖಕರು admin

November 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Dr. Prabhakar M. Nimbargi

    Good Beginning! Congrats. I wish that Kannada must be celebrated through out the year. It’s true, we depend on other languages for our livelihood. But, we must remain Kannadigas through out our life time.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: