ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನಾವಿಬ್ಬರೇ ಗುಬ್ಬಿ’ ಬಿಡುಗಡೆ ಫೋಟೋ ಆಲ್ಬಂ…

ಕವಿ ವಿಕ್ರಮ ಬಿ ಕೆ ಅವರ ಮೊದಲ ಕವನ ಸಂಕಲನ ‘ನಾವಿಬ್ಬರೇ ಗುಬ್ಬಿ’ ಬಿಡುಗಡೆ ಮಾಡಲಾಯಿತು.

ಸುಚಿತ್ರ ಫಿಲ್ಮ್‌ ಸೊಸೈಟಿಯಲ್ಲಿ ಹಮ್ಮಿಕೊಳ್ಳಲಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬಹಳ ವಿಶೇಷವಾಗಿತ್ತು. ಪಂಜರದೊಳಗಿಂದ ಪುಸ್ತಕಗಳ ಕಟ್ಟನ್ನು ಹೊರ ತೆಗೆಯುವುದರ ಮೂಲಕ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಯವರು ಬಿಡುಗಡೆ ಮಾಡಿದರು.

‘ನಾವಿಬ್ಬರೇ ಗುಬ್ಬಿ’ಯನ್ನು ಪ್ರಕಟಿಸಿದ ತ್ರಿಲೋಕ ಬರಹ ಪ್ರಕಾಶನ ಸಂಸ್ಥೆಯ ಲಾಂಛನವನ್ನು ಲೇಖಕ ವಸುಧೇಂದ್ರ ಅವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ನಾವಿಬ್ಬರೇ ಗುಬ್ಬಿ ಸಂಕಲನದ ಎರಡು ಪದ್ಯಗಳಿಗೆ ಅಖಿಲೇಶ್‌ ಮತ್ತು ಅನಿಂದಿತ ಘೋಶ್‌ ತಂಡಗಳು ಕಂಟೆಂಪರರಿ ಡ್ಯಾನ್ಸ್‌ ಮಾಡಿದರು.

ಕವಯಿತ್ರಿ ಎಂ.ಆರ್‌ ಕಮಲ, ನಟಿ ಚೈತ್ರಾ ಕೋಟೂರ್‌, ಪ್ರದೀಪ್‌ ಕುಮಾರ್‌ ಜಿ ಹಾಗೂ ಓದುಗ ನಯಾಜ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು avadhi

13 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading