ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆ ‘ಚಂದನ’ದಲ್ಲಿ

ಪ್ರಸಾರ ಭಾರತಿಯ ಅಧ್ಯಕ್ಷರಾದ ಡಾ ಎ ಸೂರ್ಯಪ್ರಕಾಶ್ ಹಾಗೂ ನನಗೂ ಒಂದು ಹಳೆಯ ನಂಟು. ಹಲವು ವರ್ಷಗಳ ಒಡನಾಟ.

ನಾನು ಈಟಿವಿ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದಾಗ ಅವರು ಅದೇ ಸಂಸ್ಥೆಯ ಒಡೆತನದ ನ್ಯೂಸ್ ಟೈಮ್ ನ ದೆಹಲಿ ಬ್ಯೂರೊದ ಮುಖ್ಯಸ್ಥರಾಗಿದ್ದವರು. ರಾಮೋಜಿ ರಾಯರು ನಮ್ಮಿಬ್ಬರ ನಡುವಿನ ಸೇತುವೆ. ರಾಮೋಜಿ ಫಿಲಂ ಸಿಟಿಯ ಸ್ಟುಡಿಯೋದಲ್ಲಿ ಪ್ರತೀ ಚುನಾವಣೆಯ ಸಮಯದಲ್ಲಿ ಸೂರ್ಯಪ್ರಕಾಶ್ ಅವರು ರಾಜಕೀಯ ವಿಶ್ಲೇಷಕರಾಗಿ ನಮ್ಮ ಸ್ಟುಡಿಯೋದಲ್ಲಿರುತ್ತಿದ್ದರು.

ಹೀಗೆ ಶುರುವಾದ ನಂಟು ಮತ್ತೆ ಈಟಿವಿ ಮೂಲಕವೇ ಪುನರ್ ಸ್ಥಾಪಿತವಾಯಿತು. ಈಗ ಮತ್ತೆ ಅವರೊಡನೆ ಕುಪ್ಪಳ್ಳಿಯಲ್ಲಿ ನಡೆದಾಡಲು ಕಾರಣ ಮಾಡಿದ್ದು ಗೆಳತಿ ಎಚ್ ಎನ್ ಆರತಿ.

ದೂರದರ್ಶನಕ್ಕಾಗಿ ಕುಪ್ಪಳ್ಳಿಯಲ್ಲಿ ಅವರ ಜೊತೆ ನನ್ನ ಎಂದಿನ ‘ವಾಕ್ ಅಂಡ್ ಟಾಕ್’ ನಡೆಸಿಕೊಟ್ಟೆ. ಎಚ್ ಎನ್ ಆರತಿ ಎಂದರೆ ಅದು ಸದಾ ನಗುವಿನ ಬುಗ್ಗೆಯ ಜೊತೆ, ಒಂದು ಲವಲವಿಕೆಯ ಜೊತೆ ಒಡನಾಡುವ ಅವಕಾಶ. ಆ ಒಂದು ಸುಂದರ ಒಡನಾಟದ ಮೆಲುಕು ಇಲ್ಲಿದೆ.

ಈ ಕಾರ್ಯಕ್ರಮವನ್ನು ಈ

ಭಾನುವಾರ ಬೆಳಗ್ಗೆ ಹಾಗೂ ರಾತ್ರಿ ೭ ಗಂಟೆಗೆ

ದೂರದರ್ಶನ ‘ಚಂದನ’ದಲ್ಲಿ ನೋಡಬಹುದು

‍ಲೇಖಕರು admin

14 January, 2017

1 Comment

  1. Anonymous

    super sir..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading